ಮನಸಿದು ಹಕ್ಕಿಯ ಗೂಡು!

3.666665

ಮನಸ್ಸೊಂದು ಮಂಗನಂತೆ, ಭಾವಗಳು ರೆಂಬೆಯಂತೆ!


ಹೊನ್ನನ್ನು ಮಣ್ಣೆಂದು ಜರಿಯುವದು, ಮತ್ತೊಮ್ಮೆ


ಪೊಗಳುವದು ಮಣ್ಣನ್ನೇ ಹೊನ್ನೆಂದು!


 


ಹೊರಗಿನದು ನೆಪ ಮಾತ್ರ, ಮನದ ಸ್ತಿತಿಯೇ ಸೂತ್ರ.


ಸಂತಸದಿಂದಿದ್ದರೆ ಮಳೆಯದು ಅಮ್ರುತ ಸಿಂಚನ,


ಮನ ಮುದುಡಿದ್ದರದುವೇ ಆಗಸದ ಆಕ್ರಂದನ!


 


ಎಲ್ಲಿ ನೋಡಿದರಲ್ಲಿ ಮನಗಳ ನರ್ತನ,


ಬಯಕೆಗಳ ಹಿಂದೆ ಬೆಂಬಿಡದ ಪಯಣ.


ಓ ಸೂತ್ರಧಾರ ಪ್ರಭುವೇ ಬಂದು ಸಲಹು,


ಮೂಡಲಿ ನಿನ್ನೆಡೆ ಒಲವು ಎಲ್ಲರಲೂ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮನಸ್ಸಿನ ಬಗ್ಗೆ ನಿಮ್ಮ ಈ ಕವಿತೆ ತುಂಬಾ ಚೆನ್ನಾಗಿದೆ ! ನಿಜ ಮನಸ್ಸೊಂದು ಮಂಗನಂತೆ !!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಥ್ಯಾಂಕ್ಸ್ ಪ್ರಸಾದ್...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.