ವಿಶ್ವ ಪ್ರಿಯಂ ರವರ ಬ್ಲಾಗ್

ಕಿರುಗತೆ: ಶೋಕ ಮತ್ತು ನಾಲ್ಕು ಮರಿಕುರಿಗಳು.

ಅಧ್ಯಾಯ ೧:

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (5 votes)
To prevent automated spam submissions leave this field empty.

ಕನ್ನಡದ ಅವಸಾನ, ಇದು ಭ್ರಮೆಯೇ?

ತನ್ನ ಅನುಪಮ ದ್ರಾವಿಡ ಭಾಷಾಶೈಲಿಯಿಂದ ನಾಡಿನವರಿಗೆ ಅತಿ ಪ್ರಿಯವಾಗಿ ಹತ್ತಿರವಾಗುವ ಕನ್ನಡ ಭಾಷೆಯ ಹುಟ್ಟು  ಚರಿತ್ರಾಕಾರರ ಬುದ್ಧಿಗೆ ನಿಲುಕದ ಕಗ್ಗಂಟು.  ಎಂದು ನಮ್ಮ ನೆಚ್ಚಿನ ಕನ್ನಡ ಹುಟ್ಟಿತು? ಎಂಬ ಪ್ರಶ್ನೆ ನಮ್ಮನ್ನು ಒಮ್ಮೆಯಾದರೂ ಕಾಡದೇ ಇಲ್ಲ. ಭಾಷೆಯೆಂಬ ನದಿಯ ಗತಿ ಬದಲಾವಣೆ ನಿರಂತರವಾದುದು. ಕೇವಲ ಕಯ್ಯಿಬಾಯಿ ಸಂಜ್ಞೆಯಿಂದ ಶುರುವಾದ ಸಂವಹನವು ಮೌಖಿಕವಾಗಿ ವಿವಿಧ ಪ್ರದೇಶಗಳಲ್ಲಿ ತನ್ನದೆ ಆದ ಸ್ವರೂಪವನ್ನು ಗಳಿಸಿಕೊಂಡದ್ದು ಅದ್ಭುತವೇ ಸರಿ. ಭಾಷೆಯೆಂಬುದು ನಾಗರೀಕತೆಗಿಂತಲೂ ಮುನ್ನವೇ ಮನುಷ್ಯನಿಂದಾದ ಅದ್ಭುತ ಆವಿಷ್ಕಾರವೆಂದರೂ ತಪ್ಪಾಗದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (5 votes)
To prevent automated spam submissions leave this field empty.

ಕಿರುಗತೆ: ‘Sea’; the ‘Sky’......

ನಡುಮಧ್ಯಾಹ್ನದ ಸೂರ್ಯನ ಬೆಳಕಿಗೆ ಮಯ್ಯೊಡ್ಡಿ ಒಡತಿಯಿಂದ ನೀರೆರೆಸಿಕೊಳ್ಳುತ್ತಿದ್ದ ಹಸಿರುಗಿಡಗಳು ಆಲ್ಫ್ರೆಡ್ ಕ್ರೈಗ್ ನನ್ನು ನಸುನಕ್ಕು ಸ್ವಾಗತಿಸಿದವು. ಆಕೆಗೆ ಅವನು ಅವಳ ಹಿಂದೆ ಬರುತ್ತಿದ್ದುದು ಕಾಣಲಿಲ್ಲ. ಆಕೆಯ ಮನದೊಳಗಿನ ಚಿಂತನೆಯ ಕಣ್ಣುಗಳು ತನ್ನ ಗಂಡನನ್ನು ಗುರುತಿಸಲಿಲ್ಲ.  ಆತನ ಮೈ ಸೋಕಲು ಹವಣಿಸಿ ಕೈದೋಟದ ಗಿಡಗಳು ಅವನ ಕಾಲಿಗೆ ಬೇಕುಬೇಕಂತಲೇ ತೊಡಕಾಗುತ್ತಿದ್ದವು.  ಹತ್ತಿರ ಬಂದವನೇ ತನ್ನ ಹೆಂಡತಿಯ ಹೆಸರಿಡಿದು “ಅಬೆಲ್” ಎಂದು  ಸಣ್ಣದನಿಯಲ್ಲಿಯೇ ಕರೆದನು.  ಆಕೆ ಗಾಬರಿಗೊಂಡವಳಂತೆ  "ಹಾಂಞ್.." ಎಂದು ತಿರುಗಿ ನೋಡಿದಳು.  ಗಾಬರಿಯಿಂದುಂಟಾದ ಉಸಿರಿನ ವೇಗವನ್ನು ಕಡಿಮೆಮಾಡಿ "ಓಹ್ ನೀನಾ?" ಎಂದಳು. ಆತನ ಮುಖವನ್ನು ನೋಡಿ ಬಹಳ ದಿನಗಳಾಗಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಿರುಗತೆ : ಗೌಡ್ನಳ್ಳಿ ಸನ್ಮಾ ದೇವ್ರು.

ಪ್ರಕೃತಿಯ ರೂಪನ್ನು ಕಾಣುತ್ತ ಅದರಲ್ಲಿ ನಮ್ಮನ್ನು ತೊಡಗಿಸಿ ಆನಂದ ಪಡೋದು ನಮ್ಮೂರಿಗರಿಗೆ ಹೊಸತೇನಲ್ಲ. ಅಂದು ಕೂಡ ಹಾಗೆಯೇ ಮನೆಯ ಮಹಡಿಗೆ ತೆರೆದಂತೆ ಕಾಣುವ ಮುಳ್ಳಯ್ಯನಗಿರಿ ನೋಡುತ್ತಾ.. “ಇಂತಹ ಜಾಗ್ ದಲ್ಲಿ ನಮ್ ಗೊಂದ್ ಐದ್ ಎಕ್ರೆ ಜಮೀನಿದ್ದಿದ್ರೆ ಎಷ್ಟ್ ಚೆನ್ನಾಗಿರೋದು” ಅಂತ ಅವಿ ವಿಶ್ವನಿಗೆ ಹೇಳ್ದ.
 "ಕನ್ಸ್ ಕಾಣೋದಕ್ಕೆ ದುಡ್ಡ್ ಕೊಡೋ ಹಾಗೇನಿಲ್ಲ.  ಹಂಗಂತ ಇಂಥ ಕನ್ಸ್ ಕಾಣೋದ?" ವಿಶ್ವ ಮರು ಉತ್ತರಿಸಿದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅವಧೇಶ್ವರಿ : ಇಣುಕು ನೋಟ

ಅವಧೇಶ್ವರಿ : ಇಣುಕುನೋಟ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

Pages

Subscribe to RSS - ವಿಶ್ವ ಪ್ರಿಯಂ ರವರ ಬ್ಲಾಗ್