ವರ್ಷ ೨೦೧೭ ದ ಸಾಲಿನ ಶ್ರೀಪುರುಂದರದಾಸರ ಆರಾಧನಾ ಮಹೋತ್ಸವ ಮುಂಬಯಿ ಮಹಾನಗರದಲ್ಲಿ ವಿಜೃಂಭಣೆಯಿಂದ ನೆರವೇರಿತು.

2.666665

ಆಯೋಜಕರು : ಮುಂಬಯಿ ಕನ್ನಡ ಸಂಘ, ಮಾಟುಂಗ, ಮುಂಬಯಿ-೧೯,
ಸಹಪ್ರಾಯೋಜಕರು : 
* ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಬೆಂಗಳೂರು,
* ಭಾರತ್ ಕೋ.ಆಪ್.ಬ್ಯಾಂಕ್,
* ಸಾರಸ್ವತ್ ಕೊ.ಆಪ್.ಬ್ಯಾಂಕ್,
* ಎಚ್.ಎಸ್.ಆಡೂರ್, ಪುರುಶೋತ್ತಮ ವಿ.ಎಸ್.ಜಿ.ಎಮ್,ವೆಂಕಟಮುನಿ, ಪ್ರಫುಲ್ಲ ಊರ್ವಾಲ್ ಮತ್ತು ಪರಿವಾರದ ಸಹಕಾರ.
ಸ್ಥಳ :ಮೈಸೂರ್ ಅಸೋಸಿಯೇಷನ್, ಮುಂಬಯಿಯ ಗಣಪತಿ ದರ್ಬಾರ್ ಹಾಲಿನಲ್ಲಿ 
ಸಮಯ : ಮಧ್ಯಾನ್ಹ ೨-೩೦ ರ ನಂತರ.
ಕಾರ್ಯಕ್ರಮ ನಿರ್ವಹಣೆ:  ರಜನಿ ವೈ.ಪೈ
ಕರ್ನಾಟಕ ಸಂಗೀತ ಪಿತಾಮಹ ಶ್ರೀ. ಪುರುಂದರದಾಸರ ಸಂಗೀತ ಸ್ಪರ್ಧಾ ಕಾರ್ಯಕ್ರಮ, ಫೆಬ್ರವರಿ, ೧೯, ೨೦೧೭ ರಂದು, ಮುಂಬಯಿ ಮಹಾನಗರದ  ಮೈಸೂರು ಅಸೋಸಿಯೇಷನ್ ನ ಗಾಯಕ, ಶ್ರೀ  ಎಸ್.ಕೆ.ಪದ್ಮನಾಭರವರ ದೇವತಾ  ಪ್ರಾರ್ಥನೆಯೊಂದಿಗೆ  ಆರಂಭವಾಯಿತು  ಕನ್ನಡ  ಸಂಘದ ಅಧ್ಯಕ್ಷ ಜಿ.ಎಸ್.ನಾಯಕರು ಎಲ್ಲಾ ಸಭಿಕರನ್ನೂ  ಸ್ವಾಗತಿಸಿದರು. ಕನ್ನಡ ಸಂಘದ ೮ ದಶಕಗಳ ಕಾಲ  ಕ್ರಮಬದ್ಧವಾಗಿ   ಕಲೆ, ಸಾಹಿತ್ಯ, ಮೊದಲಾದ ಸಾಂಸ್ಕೃತಿಕ  ಕಾರ್ಯಕ್ರಮಗಳನ್ನು ನೆಡೆಸುತ್ತಾ ಬಂದಿರುವ ಬಗ್ಗೆ ಸಂಘದ ಕಿರು ಪರಿಚಯ ಮಾಡಿದರು. ಪುರುಂದರ ದಾಸವರೇಣ್ಯರ ಆರಾಧನಾ ಮೊಹೋತ್ಸವ ಕನ್ನಡ ಸಂಘದ  ಪ್ರಮುಖ ಕಾರ್ಯಕ್ರಮಗಳಲ್ಲೊಂದು. ಸಮಾರಂಭದ  ಅಧ್ಯಕ್ಷೆಯಾಗಿ ಥಾಣೆ ಬಂಟ್ಸ್ ಅಸೋಸಿಯೇಷನ್ ನ ಮಹಿಳಾವಿಭಾಗದ ಅಧ್ಯಕ್ಷೆ, ಶ್ರೀಮತಿ ರೇವತಿ ಎಸ್.ಶೆಟ್ಟಿ ಉಪಸ್ಥಿತರಿದ್ದರು. ಅವರು ಶ್ರೀ ಪುರುಂದರ ದಾಸರ ಕೃತಿಗಳನ್ನು  ಪ್ರಸಂಶೆಮಾಡಿ, ಅವರು ರಚಿಸಿದ್ದ ಸಾವಿರಾರು ದೇವರನಾಮಗಳ ಮೌಲಿಕ ತತ್ವ ಮತ್ತು ಸಾಮಾಜಿಕ ಚಿಂತನೆ,ಬಹಳ ಮಹತ್ವದ್ದೆಂದು  ಶ್ಲಾಘಿಸಿದರು. 
ಭಕ್ತಿಗೀತೆಗಳ ಸಂಗೀತ ಕಾರ್ಯಕ್ರಮವನ್ನು  'ನಾದ ಲಹರಿ ಮುಂಬೈ' ನ ಶ್ರೀ ಎರ್ಮಾಳು ಹೇಮಚಂದ್ರ ಮತ್ತು ಸಂಗಡಿಗರು ನಡೆಸಿಕೊಟ್ಟರು.ಶ್ರೀ ಹೇಮಚಂದ್ರ ಯರಮಲ್  ಜೊತೆಯಲ್ಲಿ  ಹಾರ್ಮೋನಿಯಂ ವಾದ್ಯವನ್ನು  ಶ್ರೀ. ಶೋಬತ್ ಕೋಟ್ಯಾನ್, ಹಾಗು  ತಬಲಾವಾದ್ಯವನ್ನು  ಶ್ರೀ. ಶುಭ ಕೋಟ್ಯಾನ್, ನುಡಿಸಿದರು  ಶ್ರೀಮತಿ ಶಾರದಾ ಅಂಚನ್ ದಾಸರ  ಒಂದು ಕೃತಿ ಹಾಡಿದರು.  ಶ್ರೀ. ಎ. ಹೇಮಚಂದ್ರರು ಹಾಡಿದ ಕೀರ್ತನೆಗಳು ಹೀಗಿವೆ :
೧ . ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ 
೨. ನಿನ್ನ ಒಲುಮೆಗೆ ನಾನು, 
೩. ಆಡಿಸಿದಳು ಮಗನ ಯಶೋದೆ 
೪. ಗಿಳಿಯು ಪಂಜರದೊಳಿಲ್ಲ 
೫. ಪವಮಾನ (ಶ್ರೀಮತಿ ಶಾರದಾ ಅಂಚನ್ ) 
೬. ಹಾಲು ಉಕ್ಕಿತೋ ರಂಗ, ಹಾದಿಯ ಬಿಡೋ 
೭. ಭಾಗ್ಯದಾ ಲಕ್ಷ್ಮೀ ಬಾರಮ್ಮ
೮. ಕೇಳನೋ ಹರಿ ತಾಳನೊ 
೯. ಯಾರಿಗೆ ದುರುವನೋ 
೧೦.  ಏನಾಗೂ ಆಣೆ ರಂಗ  ನಿನಗೂ ಆಣೆ
೧೧, ಕುಣಿದಾಡೊ ಕೃಷ್ಣಾ ಕುಣಿದಾಡೊ.   
ಪಾರಿತೋಷಕಗಳ ವಿತರಣೆ  :
೧. ಪ್ರವೀಣಿ ಡಿ.ಸಾಲ್ಯಾನ್-  ಕಳೆದ ವರ್ಷ  ಕನ್ನಡ ಎಂ.ಎ.ಪರೀಕ್ಷೆಯಲ್ಲಿ ಪ್ರಥಮಸ್ಥಾನಗಳಿಸಿದ್ದರು.  
೨. ಮಹೇಶ್ ಎಂ ದೇವಾಡಿಗ ಮುಂಬಯಿ ಬೋರ್ಡ್ ನ ಎಚ್.ಎಸ್. ಸಿ  ಪರೀಕ್ಷೆಯಲ್ಲಿ  ಕನ್ನಡ  ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ್ದನು 
೩. ಪ್ರೀತಿ.ಎ.ಶೆಟ್ಟಿ, ಸುನಿಲ್ ಬಿ.ದಂಗಾಪುರ,ರವಿಚಂದ್ರ ಆರ್.ಪೂಜಾರಿ,ಪುನೀತ್ ಶಿವಪ್ಪ, ಇವರುಗಳು  ಮುಂಬಯಿ ಬೋರ್ಡ್ ಕನ್ನಡ ಮಾಧ್ಯಮದ ಎಸ್ .ಎಸ್. ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು. ಇವರಿಗೆ ನಗದು  ಬಹುಮಾನ ನೀಡಿ ಗೌರವಿಸಲಾಯಿತು.
ದೇವರನಾಮ ಸ್ಪರ್ಧೆ :
ದೇವರನಾಮ ಸ್ಪರ್ಧೆಯ ತೀರ್ಪುಗಾರರಾಗಿ  ವಿದ್ವಾನ್ ಟಿ.ಎನ್.ಅಶೋಕ್, ಗೋವಿಂದ್ ಬಾಲಕೃಷ್ಣ, ಭಾನುಮತಿ ಶರ್ಮ,ನಡೆಸಿಕೊಟ್ಟರು 
ತೀರ್ಪುಗಾರರನ್ನು ಶ್ರೀ.ಎಸ್.ಕೆ.ಪದ್ಮನಾಭ ಮತ್ತು,ಸುಧಾಕರ್ ಸಿ.ಪೂಜಾರಿ,ಶಾರದಾ ಅಂಬೆಸಂಗೆ ಪುಷ್ಪ ಗುಚ್ಚ ನೀಡಿ ಗೌರವಿಸಿದರು.
ದೇವರನಾಮ ಪ್ರತಿಯೋಗಿತೆಯ ಫಲಿತಾಂಷಗಳು ಹೀಗಿವೆ :
(೮-೧೨ ವರ್ಷ ವಯಸ್ಸಿನವರು)
ಮೊದಲ ಪ್ರಶಸ್ತಿ : ಕುಮಾರ್ ಗಗನ್ 
ದ್ವಿತೀಯ  ಪ್ರಶಸ್ತಿ : ಮಹತಿ ರಾಧೇಶ್
ತೃತಿಯ ಪ್ರಶಸ್ತಿ : ಆದಿತ್ಯದೇವಾಡಿಗ, 
ಪ್ರೋತ್ಸಾಹಕರ: ಪ್ರಥಮ್ ಬಲ್ಲಾಳ್,
(೧೩ ವರ್ಷದಿಂದ ೧೮ ರವರೆಗೆ)
ಪ್ರಥಮ: ಬಾಲಾಜಿ ನಟೇಶ್, 
ದ್ವಿತಿಯ ಶ್ರೀಕೃಷ್ಣ ಕೆದ್ಲಾಯ,
ತೃತಿಯ ಸಿದ್ಧಿ ನಾಯಕ್, 
ಪ್ರೋತ್ಸಾಹಕರ, ಗೀತಿಕಾ  ಪ್ರೇಮನ್,
(ವಯಸ್ಸು ೧೯ ಮತ್ತು ಮೇಲ್ಪಟ್ಟವರು, ಗೆದ್ದವರಿಗೆ ನಗದು ಬಹುಮಾನ ಕೊಡಲಾಯಿತು)
ಪ್ರಥಮ :  ಸುರಭಿ ಶೇಶಾದ್ರಿ 
ದ್ವಿತೀಯ : ಕೃತಿಕಾ ರಂಗನಾಥನ್, 
ತೃತೀಯ:  ಜಯಾಶೆಟ್ಟಿ, 
ಪ್ರೋತ್ಸಾಹಕರ :ಕೆ.ವೆಂಕಪ್ಪ ಕಿಣಿ,
ಕಾರ್ಯಕ್ರದಲ್ಲಿ ಹಾಜರಿದ್ದವರು  :  
ಡಾ,ಎಸ್,ಕೆ,ಭವಾನಿ,(ಉಪಾಧ್ಯಕ್ಷರು, ಮುಂಬಯಿ ಕನ್ನಡ ಸಂಘ)  ಸಂಧ್ಯಾ ವಿ.ಪ್ರಭು,ಶಾರದಾ ಅಂಬೆಸಂ, ನಾರಾಯಣರಾವ್.  
ಮೈಸೂರ್ ಅಸೋಸಿಯೇಷನ್ ಪ್ರತಿನಿಧಿಗಳು : ಎಸ್.ಕೆ.ಪದ್ಮನಾಭ, ಮತ್ತು ರವಿ,
ಜಿ.ಎಸ್.ಬಿ.ಸಯಾಂ ಮಂಡಲಿ,ಪ್ರತಿನಿಧಿಗಳು,
ಶಿಮಂತೂರು ಚಂದ್ರಹಾಸ ಸುವರ್ಣ,ಶಾರದಾ ಅಂಚನ್,
ವಂದನಾರ್ಪಣೆ,
ಸುಧಾಕರ್ ಸಿ.ಪೂಜಾರಿ,
ಉಪಹಾರ ವ್ಯವಸ್ಥೆ :  ಬಾಬುರಾವ್ ಎಂ.ಪ್ರಭು
 
ಮೈಸೂರು ಅಸೋಸಿಯೇಷನ್ನಿನ ಮಹಾಗಣಪತಿಗೆ ಮಂಗಳಾರತಿಮಾಡಿದ  ಬಳಿಕ ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
 
-ಸಚಿತ್ರ ವರದಿ :  ಎಚ್. ಆರ್. ಎಲ್ 
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.7 (3 votes)
To prevent automated spam submissions leave this field empty.