ಲಾಂಗ್‌ಮನ್- ಸಿಐಐಎಲ್ ಇಂಗ್ಲಿಷ್-ಇಂಗ್ಲಿಷ್- ಕನ್ನಡ ನಿಘಂಟು

0

ಕನ್ನಡ ನಿಘಂಟು ಲೋಕಕ್ಕೆ ಸಾವಿರಾರು ವರುಶಗಳ ಇತಿಹಾಸವಿದೆ. ಇಲ್ಲಿಯವರೆಗೆ ನೂರಾರು ಬಗೆಯ ನಿಘಂಟುಗಳು ಬಂದಿವೆ. ಇವುಗಳಲ್ಲಿ ಕಿಟೆಲ್ ಮಹಾಶಯ ಅಂದಿನ ಕಾಲಕ್ಕೆ ರಚಿಸಿದ ಕನ್ನಡ- ಇಂಗ್ಲಿಶ್ ನಿಘಂಟುವನ್ನು ಮೀರಿಸುವ ಮತ್ತೊಂದು ನಿಘಂಟು ಇನ್ನೂ ಕನ್ನಡದಲ್ಲಿ ಬಂದಿಲ್ಲ ಎಂಬುದು ತಿಳಿದವರ ಅಭಿಪ್ರಾಯ. ಸದ್ಯಕ್ಕೆ ಮೈಸೂರು ವಿಶ್ವವಿದ್ಯಾಲಯದವರು ಪ್ರಕಟಿಸಿರುವ ಇಂಗ್ಲಿಶ್-ಇಂಗ್ಲಿಶ್-ಕನ್ನಡ ನಿಘಂಟು ಅತ್ಯಂತ ಜನಪ್ರಿಯ ನಿಘಂಟು ಎನ್ನಿಸಿಕೊಂಡಿದೆ. ಹೆಚ್ಚೂ ಕಡಿಮೆ ಎಲ್ಲ ಪ್ರಕಾಶಕರು ಒಂದಲ್ಲ ಒಂದು ರೀತಿಯ ನಿಘಂಟನ್ನು ಹೊರತಂದಿರುತ್ತಾರೆ. ಇದಕ್ಕೆ ಅಂತಾರಾಶ್ಟ್ರೀಯ ಮಟ್ಟದ ಪ್ರಕಾಶಕರಾದ ಆಕ್ಸ್ಫರ್ಡ್ನಂತಹವರೂ ಹೊರತಲ್ಲ.  ಈ ಸಾಲಿಗೆ ಹೊಸ ಸೇರ್ಪಡೆ ಮೈಸೂರಿನಲ್ಲಿರುವ ಭಾರತೀಯ ಭಾಶೆಗಳ ಕೇಂದ್ರ ಸಂಸ್ಥೆ(ಸಿಐಐಎಲ್) ಹಾಗೂ ಪಿಯರ್ಸನ್ ಎಜುಕೇಶನ್ರವರ ಲಾಂಗ್ಮನ್- ಸಿಐಐಎಲ್ ಇಂಗ್ಲಿಷ್-ಇಂಗ್ಲಿಷ್- ಕನ್ನಡ ನಿಘಂಟು.

ಲಾಂಗ್ಮನ್- ಸಿಐಐಎಲ್ ಇಂಗ್ಲಿಷ್-ಇಂಗ್ಲಿಷ್- ಕನ್ನಡ ನಿಘಂಟಿಗೆ ಸಹಾಯಕ ಸಂಪಾದಕನಾಗಿ ಕೆಲಸ ಮಾಡಿದ ಭಾಗ್ಯ ನನ್ನದು. ಆಸಕ್ತರು ಇದನ್ನು ಕೊಂಡು, ಓದಿ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು. ಎಲ್ಲ ನಿಫಂಟಿಗೆ ಅದರದೇ ಆದ ಮಿತಿಗಳಿರುತ್ತವೆ. ಆ ಮಿತಿಗಳ ನಡುವೆಯೂ ಒಂದು ನಿಫಂಟು ಹೆಚ್ಚು ಜನರ ಪ್ರಯೋಜನಕ್ಕೆ ಬಂದಲ್ಲಿ ಅದುವೇ ಆ ನಿಫಂಟಿನ ಯಶಸ್ಸು! ಮುಂದೆ, ಜನಸಾಮಾನ್ಯರಿಗೆಂದೇ ಒಂದು ನಿಘಂಟನ್ನು ರಚಿಸಬೇಕೆಂಬ ಆಸೆಯಿದೆ. ಅದಾವಾಗ ಈಡೇರುತ್ತದೋ ಕಾದು ನೋಡಬೇಕು.

ಲಾಂಗ್ಮನ್- ಸಿಐಐಎಲ್ ಇಂಗ್ಲಿಷ್-ಇಂಗ್ಲಿಷ್- ಕನ್ನಡ ನಿಘಂಟು ವಿಶೇಶತೆಗಳು ಹೀಗಿವೆ:

 
ಈ ನಿಘಂಟು ಲಾಂಗ್ಮನ್ನ ಉತ್ಕೃಷ್ಟ ಗುಣಮಟ್ಟ ಹಾಗೂ ಭಾರತೀಯ ಭಾಷೆಗಳ ಅಧ್ಯಯನದಲ್ಲಿ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ಪಡೆದಿರುವ ಅಗಾಧ ಅನುಭವವನ್ನು ಬಳಸಿಕೊಂಡಿದ್ದು, ಇಂಗ್ಲಿಷ್ ಭಾಷೆ ಭಾರತದಲ್ಲಿರುವ ಎಲ್ಲರನ್ನೂ ತಲುಪುವಂತೆ ಮಾಡಿದೆ.

ಹೊಚ್ಚಹೊಸತು ಹಾಗೂ ಬಳಸಲು ಸುಲಭ

·         ಬ್ರಿಟಿಷ್ ರಾಷ್ಟ್ರೀಯ ಭಾಷಾಪ್ರಯೋಗ ಸಂಗ್ರಹ(British National Corpus)ದಿಂದ ಆಯ್ದಕೊಂಡಿರುವ ಲಾಂಗ್ಮನ್ ಬೇಸಿಕ್ ಇಂಗ್ಲಿಷ್ ನಿಘಂಟಿನಲ್ಲಿ ಬಳಸಲಾಗಿರುವ 12,000ಕ್ಕೂ ಹೆಚ್ಚು        ಪದಗಳು ಹಾಗೂ ನುಡಿಗಟ್ಟುಗಳು

·          ಸರಳ, ಮೂಲ ಪದಸಮೂಹಗಳನ್ನು ಮಾತ್ರ ಬಳಸಿಕೊಂಡಿರುವ ಇಂಗ್ಲಿಷ್ನ ಸುಲಭ ಪರಿಭಾಷೆಗಳು

        ಮೂಲ ಮತ್ತು ಉದ್ದಿಷ್ಟ ಭಾಷೆಗಳೆರಡರಲ್ಲಿಯೂ ಬಳಕೆಯ ನುಡಿ ಮತ್ತು ಆಡುನುಡಿಯೆಡೆಗೆ ಹೆಚ್ಚಿನ ಗಮನ

        ಕಲಿಕೆಯನ್ನು ಸುಲಭಗೊಳಿಸಲು ಇಂಗ್ಲಿಷ್ ಪದಗಳಿಗೆ ಕನ್ನಡ ಸಂವಾದಿ ಪದಗಳ ಬಳಕೆಗೆ ಒತ್ತು

mi·gra·tion /maIÈgreISn/ n. moving to another place: ವಲಸೆ, ಗುಳೆ

ಈ ಪದಗಳ ಬಳಕೆಯನ್ನು ತೋರಿಸಿಕೊಡಲು ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಸಾವಿರಾರು ಪ್ರಮಾಣೀಕೃತ ಉದಾಹರಣೆಗಳು

            set·tle /Èsetl/ v. (present participle settling, past settled)

     1 to decide something, especially after an argument or talk: ಇತ್ಯರ್ಥಮಾಡು, ನಿರ್ಧರಿಸು, ನಿಶ್ಚಿತಗೊಳಿಸು -- We finally settled who should pay for the accident. ಅಪಘಾತದ ಪರಿಹಾರ ಯಾರು ಕೊಡಬೇಕೆಂದು ನಾವು ಅಂತಿಮವಾಗಿ ಇತ್ಯರ್ಥಮಾಡಿ ಕೊಂಡೆವು.

     2 to move into a comfortable position: ಒರಗಿ ಕುಳಿತುಕೊ, ಆರಾಮವಾಗಿ ಕುಳಿತುಕೊ -- He settled back and turned on the TV. ಅವನು ಒರಗಿ ಕುಳಿತು ಟಿ.ವಿ. ಹಾಕಿದನು.

     3 to go and live in a place where you plan to stay: ನೆಲೆಸು, ವಾಸ್ತವ್ಯಮಾಡು -- My son has settled happily in France. ನನ್ನ ಮಗ ಫ್ರಾನ್ಸ್ ದೇಶದಲ್ಲಿ ಸಂತೋಷವಾಗಿ ನೆಲೆಸಿದ್ದಾನೆ.

     4 settle a bill to pay a bill: ಸಂದಾಯಮಾಡು, ಪಾವತಿಮಾಡು

     5 settle down to become calmer and more comfortable: ಶಾಂತವಾಗು, ಸಮಾಧಾನಹೊಂದು, ನೆಮ್ಮದಿಯಾಗಿರು -- It took the children a while to settle down. ಮಕ್ಕಳು ಶಾಂತರಾಗಿ ಕುಳಿತುಕೊಳ್ಳಲು ಸ್ವಲ್ಪ ಕಾಲ ಹಿಡಿಯಿತು.

     6 settle in to get used to a new place or job: (ಹೊಸ ಜಾಗ, ಉದ್ಯೋಗ, ಶಾಲೆ ಮುಂತಾದವುಗಳಿಗೆ) ಹೊಂದಿಕೊಳ್ಳು -- How are you settling in? ನೀನು ಹೊಸ ಜಾಗಕ್ಕೆ ಹೇಗೆ ಹೊಂದಿಕೊಳ್ಳುತ್ತಿಯೆ?

ಕನ್ನಡದಲ್ಲಿ ಬರಹದವರ ಆನ್ಲೈನ್ ನಿಘಂಟು ಇದ್ದರೂ. ಆನ್ಲೈನ್ ನಿಫಂಟುಗಳ ಸಂಖ್ಯೆ ಹೆಚ್ಚಾಗಬೇಕು. ಅಥವಾ ಈಗಿರುವ ನಿಘಂಟುಗಳನ್ನೇ ಇನ್ನೂ ದೊಡ್ಡದಾಗಿ ಮಾಡಬೇಕು. ಆಗಶ್ಟೇ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ತಂತ್ರಜ್ಞಾನದಲ್ಲಿ ನಮಗಿಂತ ಸಾಕಶ್ಟು ಮುಂದಿರುವಂತಹ ಭಾರತೀಯ ಭಾಶೆಗಳ ಹಾಗೂ ವಿಶ್ವಭಾಶೆಗಳ ಮಟ್ಟಕ್ಕೆ ನಮ್ಮ ಕನ್ನಡವನ್ನು ಬೆಳೆಸಲು ಸಾಧ್ಯ. ಇವು ಎಲ್ಲರಿಗೂ ದೊರಕುವಂತಾಗಬೇಕು. ಬಳಕೆದಾರರಿಗೆ ಹೆಚ್ಚು ಉಪಯುಕ್ತವಾಗಿರುವಂತಿರಬೇಕು ಹಾಗೂ ಬಳಸಲು ಸುಲಭವಾಗಿಯೂ ಇರಬೇಕು. ಎಲ್ಲದಕ್ಕೂ ಭಾಶೆ ತುಂಬ ಮುಖ್ಯ. ಯಾಕೆಂದರೆ, ಭಾಶೆಯೇ ನಮ್ಮ ಅಸ್ತಿತ್ವ. ಅದಿಲ್ಲದೆ ಪ್ರಾಪಂಚಿಕ ಜೀವನದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ. ಇನ್ನು ನಮ್ಮ ನಮ್ಮ ಭಾಶೆಗಳನ್ನು ನಾವು ಬೆಳೆಸದೆ ಮತ್ತಾರು ಬೆಳೆಸಲು ಸಾಧ್ಯ?! ನಮ್ಮ ತಾಯಿಯನ್ನು ನಾವು ಪ್ರೀತಿಸದೆ, ಮತ್ತಾರು ಪ್ರೀತಿಸಲು ಸಾಧ್ಯ?! ನಮ್ಮ ಭಾಶೆ ನಮಗೆ ನಮ್ಮ ತಾಯಿ ಇದ್ದ ಹಾಗೆ. ಬನ್ನಿ, ನಮ್ಮ ತಾಯಿಯನ್ನು ನಾವು ಚೆನ್ನಾಗಿ ನೋಡಿಕೊಳ್ಳೋಣ. ನಮ್ಮ ಭಾಶೆಯ ಏಳ್ಗೆಗಾಗಿ ಏನಾದರೂ ಸೇವೆ ಸಲ್ಲಿಸೋಣ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಯಾವುದಕ್ಕೆ?:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಶಿಕುಮಾರ್, ಹೀಗೊಂದು ನಿಘಂಟು ಇದೆ ಎನ್ನುವದನ್ನು ಪರಿಚಯಸಿದ್ದಕ್ಕೆ ಧನ್ಯವಾದಗಳು ಮತ್ತು ಅದರನ್ನು ಅಭಿವೃದ್ಧಿ ಪಡಿಸುವಲ್ಲಿ ನಿಮ್ಮ ಪಾತ್ರವೂ ಇರುವುದು ನಿಜಕ್ಕೂ ನಿಮ್ಮ ಸೌಭಾಗ್ಯವೇ ಸರಿ. ಕಡೆಯಲ್ಲಿ ನೀವು ಬರೆದ ನಮ್ಮ 'ತಾಯಿ -ಭಾಷೆಯನ್ನು' ನಾವೇ ಪ್ರೀತಿಸಿ ನಾವೇ ಉಳಿಸಿ ಬೆಳಸಬೇಕು ಎಂಬ ಮಾತುಗಳು ಎಲ್ಲರಿಗೂ ಅನುಕರಣೀಯ. ಕುವೆಂಪುರವರ ಆಶಯ ಕೂಡ ಇದೇ ಆಗಿತ್ತು. "ಕನ್ನಡಕೆ ಹೋರಾಡು ಕನ್ನಡದ ಕಂದ, ಕನ್ನಡವ ಮರೆತೆಯಾದರೆ ಅಯ್ಯೋ ಮರೆತಂತೆ ನನ್ನ"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

'ತಾಯಿ -ಭಾಷೆಯನ್ನು' ನಾವೇ ಪ್ರೀತಿಸಿ ನಾವೇ ಉಳಿಸಿ ಬೆಳಸಬೇಕು ಎಂಬ ಮಾತುಗಳಿಗೆ ನನ್ನ ಬೆ0ಬಲ ಸೂಚಿಸಿದ್ದೇನೆ ಶಶಿಕುಮಾರವರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮ್ಮ ಪ್ರತಿಕ್ರಿಯೆಗೆ, ಬೆಂಬಲಕ್ಕೆ ನನ್ನಿ ಸುಮಂಗಲಾರವರೇ. ಬಹಳಶ್ಟು ಮಂದಿ "ಮಾತೃಭಾಷೆ" ಎಂದು ಕರೆಯುತ್ತಾರೆ. ಆದರದು "ತಾಯ್ನುಡಿ" ಆಗಬೇಕು. ಇನ್ನು ನಾವು ಇಂಗ್ಲಿಶ್ ನ "mother tongue" ಗೆ ಸಂವಾದಿಯಾಗಿ ಬಳಸುವ "ಮಾತೃಭಾಷೆ" ನಿಜವಾದ ಅರ್ಥದಲ್ಲಿ "ಮನೆಮಾತು" ಆಗಬೇಕು. ಅದು ಹೇಗೆ ಎಂದು ಯೋಚಿಸಿದರೆ ಯಾರಿಗೇ ಆದರೂ ತಿಳಿಯುತ್ತದೆ. ನೀವೂ ಯೋಚಿಸಿ ನೋಡಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯರೇ, ತಮ್ಮ ಪ್ರತಿಕ್ರಿಯೆಗೆ ನನ್ನಿ. ಕವಿರಾಜಮಾರ್ಗಕಾರನಿಂದ ಆರಂಭಗೊಂಡು ಇಲ್ಲಿಯವರೆಗೂ "ಕನ್ನಡ ಚಿಂತನೆ" ನಡೆಸಿದವರೆಲ್ಲ ಹೆಚ್ಚೂ ಕಮ್ಮಿ ಒಂದೇ ಮಾತನ್ನು ಹೇಳಿದ್ದಾರೆ. ನಾವೆಲ್ಲರೂ "ನಮ್ಮ ಕನ್ನಡ"ವನ್ನು ಪ್ರತಿದಿನ ಸಾಧ್ಯವಾದಲ್ಲೆಲ್ಲ ಬಳಸಿದಲ್ಲಿ ಕನ್ನಡ ಇನ್ನೂ ಬೆಳೆಯುತ್ತಾ ಹೋಗುತ್ತದೆ... ಕನ್ನಡದ ಬಳಕೆ ಬರೀ ಮಾತಿನಲ್ಲಿದ್ದರೆ ಸಾಲದು, ಎಲ್ಲವೂ ಕನ್ನಡವಾಗಬೇಕು... ಕುವೆಂಪುರವರೇ ಹೇಳಿದ ಹಾಗೆ, "ಕನ್ನಡವೇ ಸತ್ಯ, ಕನ್ನಡವೇ ನಿತ್ಯ" ಆಗಬೇಕು. ನಮ್ಮ ಮುಂದಿನ ಪೀಳಿಗೆಯವರು ನಮ್ಮ ಹಾಗೆ "ಎಡಬಿಡಂಗಿ"ಗಳಾಗದೆ, ಪ್ರಪಂಚದ ಎಲ್ಲ ಜ್ಞಾನವನ್ನು ಕನ್ನಡದಲ್ಲಿ ಪಡೆಯುವಂತಾಗಬೇಕು. ಆ ನಿಟ್ಟಿನಲ್ಲಿ ನನ್ನ ಕೈಲಾದ ಮಟ್ಟಿಗೆ ನಾನು ಪ್ರಯತ್ನಿಸುತ್ತಿದ್ದೇನೆ. '
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಶಿಕುಮಾರ್ ಅತ್ಯತ್ತಮ ಕಾರ್ಯ ನಿಮ್ಮದು..:) ಖಂಡಿತ ಇದರ ಪ್ರತಿ ನನ್ನದಾಗಲಿ ಆದಷ್ಟು ಬೇಗ ಅಂದುಕೊಳ್ಳುತ್ತಾ.. ನಿಮಗೆ ಶುಭ ಹಾರೈಸುವ, ನಿಮ್ಮೊಲವಿನ, ಸತ್ಯ.. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ, ಸತ್ಯ(ಒಂದು ಕನ್ನಡ, ಇನ್ನೊಂದು ಸಂಸ್ಕೃತ). ಇದೊಂದು ಅಳಿಲು ಸೇವೆಯಶ್ಟೆ!:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.