ರಿಟೈಲ್ ಮಾರ್ಕೆಟಿಂಗ್ ಮತ್ತು ಕೇಂದ್ರ ಸರ್ಕಾರದ ನೀತಿ

3.833335

ಬೆಳಗಿನ ಪತ್ರಿಕೆ ಸುದ್ದಿಯ ಪ್ರಕಾರ ರಿಟೈಲ್ ಮಾರ್ಕೆಟ್ (ಚಿಲ್ಲರೆ ಮಾರಟ) ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಸ್ಥಾಪಕ್ಕೆ ಮನಮೋಹನ ಸಿಂಗ್ ನಾಯಕತ್ವದ (?) ಸರ್ಕಾರ ಒಪ್ಪಿಗೆ ನೀಡಿದೆ.  ಈ ವಿಷಯವನ್ನು ವಿರೋದಿಪಕ್ಷಗಳು ಅದರಲ್ಲು ಬಾಜಪ ದೊಡ್ಡಧ್ವನಿಯಿಂದ ವಿರೋದಿಸಿದೆ !!!.   ಹೆಚ್ಚು  ಆಶ್ಚರ್ಯವೇನು ಬೇಡ , ಒಮ್ಮೆ  ಬಾಜಪದ ನೇತೃತ್ವದ ಕೇಂದ್ರ ಸರ್ಕಾರವಿದ್ದಲ್ಲಿ    ಈ ನಿರ್ಣಯವನ್ನು ಎಂದೊ ಮಾಡಿ ಮುಗಿಸುತ್ತಿತ್ತು ಮತ್ತು ಅದನ್ನು ಕಾಂಗ್ರೆಸ್ ವಿರೋಧ ಮಾಡುತ್ತಿತ್ತು.
ಭಾರತದಂತಹ ಬೃಹುತ್ ದೇಶಕ್ಕೆ ಶಾಶ್ವತ  ಹಾಗು ದೀರ್ಘಾವಧಿಯ ನೀತಿಗಳೆ ಇಲ್ಲ .  ಸರ್ಕಾರದ ನೇತಾರರ ಮರ್ಜಿಯ ಮೇಲೆ ನಮ್ಮ ಆಡಳಿತಾತ್ಮಕ  ಶೈಕ್ಷಣೀಕ  ಹಾಗು ಹಣಕಾಸಿನ  ಸಾಮಾಜಿಕ ನೀತಿಗಳೆಲ್ಲ ಬದಲಾಗುತ್ತ ಹೋಗುತ್ತವೆ ಪ್ರತಿ ಹತ್ತು ಇಪ್ಪತ್ತು ವರ್ಷಗಳಿಗೊಮ್ಮೆ.  ಹೀಗಾಗಿ ಭಾರತದ ಸಾಮನ್ಯ ಪ್ರಜೆ ಸದಾ ಗೊಂದಲ ಹಾಗು ಕಸಿವಿಸಿಯಲ್ಲಿದ್ದಾನೆ.  ತನ್ನ ಜೀವನದ ಉದ್ಯೋಗವನ್ನು  ಆರ್ಥೀಕ ಸ್ಥಿಥಿಯನ್ನು ನಿರ್ದರಿಸುವಲ್ಲಿ ಸದಾ ಗೊಂದಲ.

ಸ್ವತಂತ್ರ ನಂತರದ  ಜವಹರಲಾಲ್ ನೆಹರು ನೇತೃತ್ವದ ಕಾಂಗ್ರೆಸ್ ಸರ್ಕಾರ ಸೋವಿಯತ್ ರಷ್ಯಯದ ಸೋಶಿಯಲಿಸಮ್ ನಿಂದ ಪ್ರಭಾವಿತಗೊಂಡು ಬೃಹುತ್ ಕೈಗಾರಿಕೆಗಳನ್ನು  ಸ್ಥಾಪಿಸುವುದು , ಹಸಿರು ಕ್ರಾಂತಿಯಂತ ರೈತ ಪರ ಯೋಜನೆಗಳನ್ನು ಕೈಗೊಂಡಿತು.  ಜನ ಜೀವನವೆಲ್ಲರ ಬದುಕು ಅದರಿಂದ ಪ್ರಭಾವಿತಗೊಂಡು ನಗರಪ್ರಧೇಶಗಳಲ್ಲಿ   ಸರ್ಕಾರಿ ಉದ್ಯೋಗಗಳಲ್ಲಿ ಸೇರುವುದು, ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಕೆಲಸ ಹುಡುಕುವುದು ಮಾಡಿದರೆ, ಗ್ರಾಮೀಣ ಪ್ರದೇಶಗಳಲ್ಲಿ ವ್ಯವಸಾಯ ಹೈನುಗಾರಿಕೆ ಹಾಲು ಉತ್ಪನ್ನ ಮುಂತಾದವುಗಳಲ್ಲಿ ತಮ್ಮ ಜೀವನ ಮಾರ್ಗಗಳನ್ನು ಕಂಡುಕೊಂಡರು.
  ಇಂದಿರಾಗಾಂಧಿಯವರ ಕಾಲದಲ್ಲಿ  ಈ ನೀತಿ ಇನ್ನು ತಾರಕಕ್ಕೆ ಹೋಯಿತು. ಅವರು ಖಾಸಗಿ ಬ್ಯಾಂಕುಗಳನ್ನು ಸಾರ್ವಜನಿಕ  ಬ್ಯಾಂಕುಗಳಾಗಿ ವಿಲೀನಗೊಳಿಸಿದರು, ರಸ್ತೆಯಲ್ಲಿ ಓಡಾಡುವ ಖಾಸಗಿ ಬಸ್ಸುಗಳನ್ನು ಸರ್ಕಾರಕ್ಕೆ ಸೇರಿಸಿಬಿಟ್ಟರು. ಜಯಪ್ರಕಾಶ, ವಿನೋಭ ರಂತ  ಸುಧಾರರಕರು ಉಳುವವನು  ಭೂಮಿಗೆ ಒಡೆಯನೆಂದು ಘೋಶಿಸಿ ರೈತರನ್ನು ಭೂಮಿಗೆ ಒಡೆಯನನ್ನಾಗಿಸಿದರು.


ಕಾಲ ಕಳೆಯಿತು ಇಂದಿರಾ ಕಾಲ ಕಳೆದು ಅವರ ಮಗ ರಾಜೀವನ ಕಾಲ ಬಂದಿತು. ಯುರೋಪಿನಲ್ಲಿ ವಿಧ್ಯಾಬ್ಯಾಸ ಮಾಡಿ ಅಲ್ಲಿಯೆ ಬೆಳೆದಿದ್ದ ಅವರ ಮೇಲೆ  ಪಾಶ್ಚಿಮಾತ್ಯ ಸಮಾಜದ ಪ್ರಭಾವ ಸಾಕಷ್ಟಿತ್ತು. ಅವರಿಗೆ ಸಾಮ್ ಪೆಟ್ರೋಡರಂತವರು ಜೊತೆಯಾದರು. ದೂರದರ್ಶನ ತಮ್ಮ ಬಾಹುಗಳನ್ನು ಪಸರಿಸಿತು. ಹಾಗೆಯೆ ವಿವಿದ ಚಾನಲ್ ಗಳು ದಾಂಗುಡಿಯಿಟ್ಟು ಸಮಾಜದ ಮೇಲೆ ತಮ್ಮ ಪ್ರಭಾವ ಹಿಡಿತ ಸಾಧಿಸಿದವು. ಇದು ಸಾಮ್ರಾಜ್ಯ ಶಾಹಿಗಳ ಮೊದಲ ಹೆಜ್ಜೆ.
  ಹಾಗೆಯೆ ದೂರಸಂಪರ್ಕದಲ್ಲಿ  ಸಹ ಭಾರತ ತನ್ನ ದೊಡ್ಡ ಹೆಜ್ಜೆಗಳನ್ನಿಟ್ಟಿತ್ತು. ಅದಕ್ಕೆ  ಭಾರತ ಸರ್ಕಾರದ ನಿರ್ಧಾರವೇನು ಕಾರಣವಲ್ಲ , ಬದಲಿಗೆ ಹೊರದೇಶದಿಂದ ಮಾಡಿದ್ದ  ದೊಡ್ಡಪ್ರಮಾಣದ ಸಾಲ ಹಾಗು ವಿಶ್ವಬ್ಯಾಂಕಿನ ಅಣತಿ, ದೊಡ್ಡಣ್ಣ ಅಮೇರಿಕದ ಒತ್ತಡ ಇಂತಹುದೆಲ್ಲ ಹಿನ್ನಲೆಯಲ್ಲಿ ಮಾಡಿದ ಪ್ರಭಾವಗಳಷ್ಟೆ. ಅದು ಯಾವ ಪ್ರಮಾಣವೆಂದರೆ. ವಾಜಪೇಯಿಯವರಂತ ಭಾರತದ ಪ್ರಧಾನಿ ಅಮೇರಿಕ ಪ್ರವಾಸಕ್ಕೆ ಹೊರಡುವ ಮುನ್ನ ಅಮೇರಿಕವನ್ನು ಮೆಚ್ಚಿಸಲು ಸರ್ಕಾರದ  ಸಂಪರ್ಕ ಇಲಾಖೆಯನ್ನು  ಪ್ರತ್ಯೇಕ ಸರ್ಕಾರಿ ಕಂಪನಿಯನ್ನಾಗಿ ಪರಿವರ್ತಿಸಿತು. ಹಾಗೆಯೆ,  ತಾನೆ ಒಮ್ಮೆ ಬ್ಯಾಂಕುಗಳನ್ನು ಸರ್ಕಾರಿಕರಣಗೊಳಿಸಿದ್ದನ್ನು ಮರೆತು ಖಾಸಗಿ ಬ್ಯಾಂಕುಗಳನ್ನು ಸ್ಥಾಪಿಸಲು ಉತ್ತೇಜಿಸಿ ರೈತರಿಗೆ ಸಾಲಕೊಡುತ್ತಿದ್ದ  ಗ್ರಾಮೀಣ ಬ್ಯಾಂಕುಗಳನ್ನು ಬುಡಮೇಲುಗೊಳಿಸಿತು. ತಾನೆ ಸ್ಥಾಪಿಸಿದ ಕೈಗಾರಿಕೆಗಳನ್ನು ಸ್ವಹಿತಾಸಕ್ತಿಯಿಂದ ಮುಚ್ಚುತ್ತ ಹೊರಟಿತು. ಸರ್ಕಾರದ ನೀತಿಯ ಪರಿಣಾಮ ಕಾರ್ಮಿಕರೆಲ್ಲ ಅಕ್ಷರಷಃ ಬೀದಿಗೆ ಬಿದ್ದರೆ ರೈತರು ಆತ್ಮೆಹತ್ಯೆಗಾಗಿ ಹಗ್ಗ , ಮತ್ತು ವಿಷದ ಬಾಟಲುಗಳನ್ನು ಕೈಗೆ ತೆಗೆದುಕೊಂಡರು. ಸರ್ಕಾರ ಮಾತ್ರ ನಿರಾತಂಕವಾಗಿ ರೈತರ ಜಮೀನುಗಳನ್ನು ವಶಮಾಡಿಕೊಂಡು ದೇಶದ ಬಂಡವಾಳಶಾಯಿಗಳಿಗೆ ವಶಮಾಡಿ ತನ್ನ ಪೌರುಷ ಮೆರೆಸಿತು. ಬಂಡವಾಳ ಶಾಯಿಯಗಳ ಪ್ರತಿನಿಧಿಗಳೊ ಎಂಬಂತೆ ಬಳ್ಳಾರಿಯ  ಗಣಿದೊರೆಗಳಂತವರು ಸರ್ಕಾರದ ಮೇಲೆ ಹಿಡಿತ ಸಾಧಿಸಿದರು.

  ಈಗ ಇದರ ಮುಂದಿನ ಹೆಜ್ಜೆ ರಿಟೈಲ್ ಮಾರ್ಕೆಟಿಂಗ್ ನೀತಿ , ಬೀದಿಬದಿಯ ವ್ಯಾಪಾರಿಗಳು, ಕೈಗಾಡಿಯ ಸಾಹುಕಾರರು! . ನಿಮ್ಮ ರಸ್ತೆಯ ಕಡೆಯಲ್ಲಿರಬಹುದಾದ ಶೆಟ್ಟರ ಅಂಗಡಿಗಳಂತ ಗುಬ್ಬಿಗಳನ್ನು  ಮಟ್ಟಹಾಕಲು ವಿದೇಶದಿಂದ ವಾಲ್ ಮಾರ್ಟ್ ನಂತ ದೈತ್ಯಶಕ್ತಿಗಳನ್ನು  ಅಹ್ವಾನಿಸಲಾಗಿದೆ ಸರ್ಕಾರದ ಪರವಾಗಿ.

 ಸರ್ಕಾರವೆಂದರೆ ಈಗ ನಮ್ಮನ್ನು ಕಾಪಾಡಲು ಇರುವಂತ ವ್ಯವಸ್ಥೆಯಲ್ಲ ಬದಲಾಗಿ ಲಾಭ ಮಾಡಲು ನಿಂತಿರುವ ’ಈಸ್ಟ್  ಇಂಡಿಯ’ ಕಂಪನಿ ರೀತಿಯ ಮತ್ತೊಂದು ಲಾಭಕೋರ ಸಂಸ್ಥೆಯಷ್ಟೆ.

 ಏನು ಉಪಯೋಗವಿಲ್ಲ,  ಇದನ್ನೆಲ್ಲ ಚಿಂತಿಸಬೇಕಾದ ಯುವಜನತೆ ಅಮೋಧಪ್ರಮೋಧದಲ್ಲಿ ಮುಳುಗಿದ್ದಾರೆ , ಏಕೆಂದರೆ ಅವರಿಗೆ ಏನು ಕೇಳದಂತೆ ಕಿವಿಗೆ ಐ-ಪಾಡ್ ಕೊಡಿಸಲಾಗಿದೆ , ಏನು ಕಾಣದಂತೆ ಕಣ್ಣೆದುರು ಫೇಸ್ಬುಕು ಹಾಗು ಯೂ-ಟ್ಯೂಬ್ ಗಳನ್ನು ಇಡಲಾಗಿದೆ.
ಭಾರತ ಮಾತೆಗೆ ಜಯವಾಗಲಿ.

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪಾರ್ಥ ಸಾರಥಿ ಅವ್ರೆ ಸದಾ 'ಸಂಪದಿಗರನ್ನು' ರಂಜಿಸುವ ಅದೆಸ್ಟೋ ವಿಧ-ವಿಧವಾದ್ ಬರಹಗಳನ್ನ ಬರೆಯುತ್ತಿದ್ದ ನೀವು ಅದ್ಯಾಕೆ 'ಗಂಭೀರ ಬರಹ' ಬರೆದಿಲ್ಲ ಅಂತ ಒಂದು ಭಾವನೆ ನನ್ನ ಮನದಾಳದಲ್ಲಿ ಇತ್ತು. ಕಾದು ನೋಡಿದರಾಯ್ತು ಅನ್ಕೊಲ್ತಿರ್ವಾಗ್ಲೆ ಬಂತು ನೋಡಿ ನಿಮ್ಮ ಈ ಬರಹ. ದೇಶೀ ಮಾರುಕಟ್ಟೆಗೆ ವಿದೇಶಿಗರ 'ಸಂಪೂರ್ಣ ಶರಣಾಗತಿಯ' ಮುಕ್ತ ಆಹ್ವಾನ ನಮ್ಮ ದೇಶದ ರೈತರ -ಅವರನೇ ನಂಬಿಕೊಂಡ ವ್ಯಾಪಾರಿಗಳ ನಿರ್ನಾಮ, ಅವರನೇ ನೆಚ್ಚಿರುವ ನಾವೆಲ್ಲಾ ಶ್ರೀ ಸಾಮಾನ್ಯರ ಪಜೀತಿ-ಪರದಾಟಕ್ಕೆ ಮುನ್ನುಡಿ. ಚಿಕ್ಕ ಬರಹವಾದರೂ ಸಮಸ್ಯೆ ಮೂಲವನ್ನ ಸರಳವಾಗಿ ಹೇಳಿದ್ದೀರ ಉದಾಹರಣೆ ಸಮೇತ 'ಯಾರ್ಯಾರು ಏನೆಲ್ಲಾ ಹೇಗೆಲ್ಲ ಶುರು ಮಾಡಿದ್ರು ಅಂತ' (ನೆಹರೂ-ಇಂದಿರಾ -ರಾಜೀವ ಮತ್ತವರ ಹಿಂಬಾಲಕ-ಬಾಲಬುಡುಕರ ಯೋಜನೆಗಳು ಅವುಗಳ ಪರಿಣಾಮದ ಸಮೇತ) ... ಇನ್ನು ನಿಮ್ಮ ಬರಹದ ಕೊನೆಯಲ್ಲಿ ಹೇಳಿದ ವಿಷಯಕ್ಕೆ ಬಂದರೆ >>>(ಯುವಕರು ಯೂಟೂಬ್ ಫೇಸ್ಬುಕ್ ನಲ್ಲಿ ಕಿವಿಗ್ ಐ- ಪಾಡ್ ಹಾಕೊಂಡ್ ಕುಳಿತ್ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಯೋಚಿಸ್ತಿಲ್ಲ ಅನ್ನುವುದರ ಬಗ್ಗೆ) 'ನನಗೆ ಅಸಮಧಾನ' ಇದೆ.>>>>> (ಕೆಲವರ್ಗೆ ದೇಶದ ಹಲವಾರು ಜ್ವಲಂತ ಗಂಭೀರ ವಿಷಯಗಳ ಬಗ್ಗೆ ಆಸಕ್ತಿಯೂ, ಕಾಳಜಿಯೂ ಅದ್ನ ತೊಡೆದು ಹಾಕುವ ಇಚ್ಚ ಶಕ್ತಿ ಇಲ್ಲದಿರಬಹುದು, ಆದರೂ ನನಗ್ಗೊತ್ತಿರುವ ಹಾಗೆ ನಾ ನೋಡಿದ ನನ್ನ ಒಡನಾಡಿಯಾಗಿರ್ವ ಹಲ ಯುವಕರು ಇನ್ನು 'ದೇಶದ ಸಮಸ್ಯೆ' ಬಗ್ಗೆ ಯೋಚಿಸ್ತಾರೆ ಮತ್ತು ಅದ್ನ ನಿವಾರಿಸುವ ಹಲ ಬಗೆಯನ್ನ ಹಂಚಿಕೊಳ್ತಾರೆ. >>ಇಸ್ಟಕೂ ಈ ದೇಶ ಚೆನ್ನಾಗಿದ್ದರಲ್ಲವೇ ನಾವು ಚೆನ್ನಾಗಿರುವುದು? ನಿಮ್ಮ ಈ ನಮ್ ದೇಶದ -ಶ್ರೀ ಸಾಮಾನ್ಯನ ಬಗೆಗಿನ ಕಾಳಜಿ- ಕಳಕಳಿ ಮೆಚ್ಚಬೇಕಾದ್ದೆ, ಹಲವರು ಇದನ ಮನಸಲ್ಲೇ ಅಂದುಕೊಂಡು ಮರೆತದ್ದನ್ನ ನೀವ್ ಸಹ 'ಯೋಚಿಸಿ ಮರೆಯದೆ' ಅಕ್ಷರ ರೂಪಕ್ಕಿಲಿಸಿ ನನ್ನಂತ ಹಲ ಯುವಕರ 'ಕಣ್ಣು ಪೂರ್ತಿ ತೆರದು' ದೇಶದ ಬ ಹವಿಶ್ಯದ ಬಗ್ಗೆ ಯೋಚಿಸುವಂತೆ ಮಾಡಿದ್ದೀರ. ಈ ಸಮಸ್ಯೆ ನಿವಾರಣೆಗೆ ನನ್ನದೂ ಒಂದು 'ಅಳಿಲು ಪಾಲಿರುತ್ತೆ'. >> ಆ ತರಹದ ಸಂದರ್ಭ ಬಂದರೆ.. ನನಗೆ ಬರಹ ಹಿಡಿಸಿತು. ಧನ್ಯವಾದಗಳು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿಯವರೆ ನಿಮ್ಮ ಕಾಳಜಿ ಸಂತಸ ತರುವಂತದು ಮತ್ತೆ ನಿಮ್ಮ ಅಸಮದಾನ ಬೇಡ ಮತ್ತೊಮ್ಮೆ ನೋಡಿ ನಾನು ಹೇಳಿರುವುದು ಯುವಕರ ಕಣ್ಣು ಕಿವಿಗಳನ್ನು ಮುಚ್ಚಲಾಗಿದೆ ಎಂದು ಆದರೆ ಅವರು ಅದರಲ್ಲಿ ಎಷ್ಟು ಕಾಲ ಮುಳಗಿ ಮೈಮರೆಯಲು ಸಾದ್ಯ ? ಜ್ವಲಂತ ಸಮಸ್ಯೆಗಳು ಎದುರಾದಗ ನಿಮ್ಮಂತೆ ಘರ್ಜಿಸುತ್ತಾರೆ ಉದಾಹರಣ: ಮಂಜುರವರ ಲೇಖನ ಶರದ್ ಪಾವರ್ ಗೆ ಮೋಕ್ಷ ನೀವು ಪ್ರತಿಕ್ರಿಯೆ ನೀಡಿದ್ದೀರ, ಅದು ಈಗ ಕೇವಲ ಸಾಂಕೆತಿಕ ನಿಜವಾದ ಕಪಾಳ ಮೋಕ್ಷ ಮುಂದೆ ಕಾದಿದೆ ಅನ್ನಿಸುತ್ತೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒ0ದು ಚಪ್ಪಲಿ ಕ0ಪನಿ ಲಕ್ಷಾ0ತರ ಮ0ದಿ ಮೋಚಿಗಳ (ಸಮಗಾರರ) ಕೆಲಸವನ್ನು ಕಿತ್ತುಕೊಳ್ಳುವ0ತೆ ಈ ಷಾಪಿ0ಗ್ ಮಾಲ್ ಗಳು ಸಣ್ಣ ಪುಟ್ಟ ವ್ಯಾಪರಿಗಳ ಬದುಕನ್ನು ಕಿತ್ತುಕೊಳ್ಳುತ್ತವೆ. ನೆಹರೂರವರ ಜಗತ್ಕಥಾವಲ್ಲರಿಯಲ್ಲಿ ಹಿ0ದೆ ಗ್ರೀಕ್ ಮತ್ತು ರೋಮನ್ ಸಾಮ್ರಾಜ್ಯಗಳು ಆಳ್ವಿಕೆಯಲ್ಲಿದ್ದಾಗ ಜನ ತಮ್ಮ ಕಷ್ಟಗಳ ಬಗ್ಗೆ ಮರೆಯುವ0ತೆ ಜಟ್ಟಿಗಳಿ0ದ ಕಾಳಗಗಳನ್ನು ಏರ್ಪಡಿಸುತ್ತಿದ್ದರ0ತೆ. ಈಗಿನ ಕಾಲದಲ್ಲಿ ನೀವೆ0ದ0ತೆ ಅವನ್ನು ಟೀವಿ ಮತ್ತು ಮೊಬೈಲುಗಳು ಮಾಡುತ್ತಿವೆ. ಎಲ್ಲೋ ಅಪರೂಪವಾಗಿ ಸಪ್ತಗಿರಿಯ0ತಹ ಪ್ರಗ್ನೆಯುಳ್ಳವರು ನಮಗೆ ಸಿಗಬಹುದು ಅಷ್ಟೇ :((
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ್ ಸರ್ >>ಎಲ್ಲರಲ್ಲೂ ದೇಶದ ಬಗೆಗೆ ಕಾಳಜಿ ಕಳಕಳಿ ಇದ್ದೇ ಇರುತ್ತೆ, ಆದರೆ >>> ಹಲವ್ರ್ಗೆ ಅದ್ನ ಮನದಟ್ಟು ಮಾಡಿಸಬೇಕಾಗುತ್ತೆ, >>ಕೆಲವರ್ಗೆ ತಾನಾಗೆ ಅರ್ಥವಗ್ತೆ,.. ಆದರೆ ಇದೆಲ್ಲವನ್ನು ತೊಡೆದುಹಾಕಲು ವಿರೋಧಿಸಲು ಹೊರಡುವರು ಮೊದ್ಲು ತಾವು ಸಂಪೂರ್ಣ ಶುದ್ಧರಾಗಿ ಆಶೆ ಲೋಭ ಮದ ಮತ್ಸರ ಸಮೇತ ಎಲ್ಲ ಅರಿ ಶದ್ವರ್ಗಗಳನ್ನು ಜಯಿಸಿ ನಿಗ್ರಹಿಸಿಕೊಂಡು ಉದ್ಧಾರಕ್ಕೆ ಹೊರಟರೂ ಅವರ ಹಿಂಬಾಲಕರಿಂದ ಮತ್ತು ವಿರೋಧಿಗಳಿಂದ ಪರಿಣಾಮ ಎದುರಿಸಬೇಕಾಗುತ್ತೆ, ಹೀಗಾಗಿ ಇಂತ ಕೆಲಸಕ್ಕೆ ಯಾರು ತಾನೆ ತಮ್ಮ ಪ್ರಾಣ ಪಣ ಇಟ್ಟು ಮುಂದೆ ಬರುತ್ತಾರೆ? ಈಗಾಗಲೇ ಪ್ರಾಮಾಣಿಕ 'ಹಣ್ಣ ' ಅವ್ರ ಹೋರಾಟ ಕಾವು ಕಳೆದುಕೊಂಡದ್ದು ಗೊತ್ತಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೆಹರೂರವರ ಜಗತ್ಕಥಾವಲ್ಲರಿಯಲ್ಲಿ ಹಿ0ದೆ ಗ್ರೀಕ್ ಮತ್ತು ರೋಮನ್ ಸಾಮ್ರಾಜ್ಯಗಳು ಆಳ್ವಿಕೆಯಲ್ಲಿದ್ದಾಗ ಜನ ತಮ್ಮ ಕಷ್ಟಗಳ ಬಗ್ಗೆ ಮರೆಯುವ0ತೆ ಜಟ್ಟಿಗಳಿ0ದ ಕಾಳಗಗಳನ್ನು ಏರ್ಪಡಿಸುತ್ತಿದ್ದರ0ತೆ. ಈಗಿನ ಕಾಲದಲ್ಲಿ ನೀವೆ0ದ0ತೆ ಅವನ್ನು ಟೀವಿ ಮತ್ತು ಮೊಬೈಲುಗಳು ಮಾಡುತ್ತಿವೆ. ... ನಿಜ ಶ್ರೀದರ್ ಆದರೆ ಎಲ್ಲ ಸಾಮ್ರಾಜ್ಯಗಳು ಮಣ್ಣು ಸೇರಿದವು ಅನ್ನುವದನ್ನು ಈ ರಾಜಕೀಯ ನಾಯಕರು ಏಕೊ ಅರಿಯುತ್ತಿಲ್ಲ ಇತಿಹಾಸ ಇವರ ಮೇಲೆ ಏನು ಪರಿಣಾಮ ಮಾಡುತ್ತಿಲ್ಲ !!!!!!!! ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಆಸಕ್ತಿಯ ಕಾಲಮಾನ ರಾಜೀವ್ ಗಾಂಧಿಯ ನಂತರದ ಸಮಯವಾದ್ದರಿಂದ ಅದರ ನಂತರದಿಂದ ನನ್ನ ಅನಿಸಿಕೆಯನ್ನು ತಿಳಿಸಲು ಯತ್ನಿಸುತ್ತೇನೆ - ರಾಜೀವ್ ಗಾಂಧಿ ಒಬ್ಬ ಕನಸುಗಾರ, ಅವರ ಕ್ಯಾಬಿನೆಟ್ ಮಂತ್ರಿಗಳನ್ನು ಹೊರತುಪಡಿಸಿ ಅವರೊಬ್ಬ ಭಾರತವನ್ನು ವಿಶ್ವಮಟ್ಟಕ್ಕೆ ಏರಿಸುವ ಮಟ್ಟಿಗೆ ಯೋಚಿಸಿದ ಪ್ರಥಮ ಪ್ರಧಾನಿ. ನಂತರದ ಹತ್ತು ಹದಿನೈದು ವರ್ಷಗಳಲ್ಲಿ ರೂಪುಗೊಂಡ ಅಭಿವೃದ್ಧಿಯ ಮಂತ್ರಗಳೆನಿಸಿದ ಜಾಗತೀಕರಣ, ಖಾಸಗೀಕರಣಗಳ ಬೆಳವಣಿಗೆಯ ಕನಸು ಕಂಡವರು. ಅವರ ಕನಸಿನ ಪ್ರಭಾವವೇ ಮಾಸ್ ಕಮ್ಯೂನಿಕೇಶನ್ಸ್, ಮಾಹಿತಿ ತಂತ್ರಜ್ಞಾನಗಳು ಭಾರತಕ್ಕೆ ಲಗ್ಗೆಯಿರಿಸಿದ್ದು ಅದಕ್ಕಿಂತಲೂ ಮುಖ್ಯವಾಗಿ ತಂತ್ರಜ್ಞಾನಕ್ಕಾಗಿ ಹೊರರಾಷ್ಟ್ರಗಳನ್ನು ಅವಲಂಬಿಸುವಂತಾಗಿದ್ದು. ಇದಕ್ಕೆ ತನ್ನದೇ ಆದ ಪ್ಲಸ್ಸುಗಳೂ ಮೈನಸ್ಸುಗಳೂ ಇವೆ. ಇನ್ನು ಭಾರತದ ಇನ್ಫ಼್ರಾಸ್ಟ್ರಕ್ಚರ್ (infrastructure)ಗೆ ಅಮೇರಿಕಾದ ಒತ್ತಡಕ್ಕಿಂತಲೂ ವ್ಯಾವಹಾರಿಕ ಪ್ರಜ್ಞೆಯುಳ್ಳ ಬಿಸಿನೆಸ್ ಮ್ಯಾನುಗಳು ಕಾರಣರಾದರೆನ್ನಬಹುದು. ಈ ನಿಟ್ಟಿನಲ್ಲಿ ಖಾಸಗೀಕರಣ ಸಾಧಿಸುವಂತ ಮುಖ್ಯ ಅಂಶ ಏನಿತ್ತೆಂದರೆ ಸರ್ಕಾರದ ಮೇಲೆ ಒತ್ತಡವನ್ನು ಕಡಿಮೆ ಮಾಡಿ ಸಮರ್ಥವಾಗಿ ವ್ಯವಹಾರ ನಡೆಸಬಹುದಾದ ವ್ಯಾಪಾರಿವರ್ಗಕ್ಕೆ ಈ ಅಧಿಕಾರವನ್ನು ವಹಿಸುವುದು. ಈ ಮಾದರಿಯನ್ನು ಹೊರರಾಷ್ಟ್ರಗಳ ನೀತಿಯಿಂದ ಅಳವಡಿಸಲಾಯಿತು. ಈ ಸಂಸ್ಥೆಗಳು ಕೊಡಲಿದ್ದ ತೆರಿಗೆಯಿಂದ ಸರ್ಕಾರದ ಬೊಕ್ಕಸಕ್ಕೆ ಲಾಭವಿತ್ತು. ಇದರಿಂದ ಉಂಟಾದ ಪರಿಣಾಮವೆಂದರೆ ಹೆಚ್ಚಿನ ಸಂಸ್ಥೆಗಳನ್ನು ಸರ್ಕಾರದ ಕೈಯಿಂದ ಹೊರಪಡಿಸಿ ಖಾಸಗೀಕರಿಸಿದ್ದು. ಇನ್ನು ಹೊರರಾಷ್ಟ್ರಗಳ ಬಂಡವಾಳ ಹೂಡಿಕೆಯ ಮಾತು - ರಿಟೈಲಿಂಗ್ ಬಿಟ್ಟು ಹೆಚ್ಚಿನ ವ್ಯವಹಾರಗಳಲ್ಲಿ ಈಗಾಗಲೇ ವಿದೇಶಿ ಬಂಡವಾಳ ನಡೆಯುತ್ತಿದೆ. ನಾವು ಬಳಸುವ ಹೆಚ್ಚಿನ ವಸ್ತುಗಳು ವಿದೇಶಿ ಕಂಪನಿಗಳದ್ದೆ. ಕೋಲ್ಗೇಟಿನಿಂದ ಹಿಡಿದು ಬಳಸುವ ಮೊಬೈಲಿನವರೆಗೂ. ಈಗ ಪರಿಸ್ಥಿತಿ ನಮ್ಮದು ಎನ್ನುವಂತದ್ದು ಏನೂ ಇಲ್ಲದಂತಾಗಿದೆ. ಇಂಜಿನೀರಿಂಗಿನಲ್ಲೂ ಸಣ್ಣ ಪುಟ್ಟ ಸ್ಪೇರ್ ಪಾರ್ಟ್ಸುಗಳನ್ನು ಬಿಟ್ಟರೆ ಮುಖ್ಯವಾಗಿ ಬೇಕಾಗಿರುವ ಬ್ಯಾಟರಿ, ಇಂಜಿನುಗಳಿಗೆ ನಾವು ಹೊರರಾಷ್ಟ್ರದ ತಂತ್ರಜ್ಞಾನವನ್ನೇ ಅವಲಂಬಿಸಿದ್ದೇವೆ. ಇಲ್ಲಿ ಮುಖ್ಯವಾದ ಇನ್ನೊಂದು ಅಂಶವೇನೆಂದರೆ ಈ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಿದವರಲ್ಲಿ ಭಾರತೀಯರ ಪಾಲೂ ಅಧಿಕ. ಆದರೆ ಅದು ವಿದೇಶಿ ಕಂಪನಿಗಳಾಗಿ. ಮುಖ್ಯವಾಗಿ ಏನು ಹೇಳಬೇಕಿದ್ದೇನೆಂದರೆ ಈಗ ಸ್ವಂತಿಕೆಯ ವ್ಯಾಖ್ಯಾನ ಬದಲಾಗಿದೆ. ವ್ಯಾಪಾರಿಗಳಿಗೆ ಈಗ ಜಗತ್ತೊಂದು ಮಾರ್ಕೆಟ್ ಆಗಿ ಕಾಣುತ್ತಿದೆ, ಆದ್ದರಿಂದ ಎಲ್ಲಿ ಅವಕಾಶವಿರುವುದೋ ಅಲ್ಲಿ ತಮ್ಮ ಬಿಸಿನೆಸ್ ನಡೆಸಲು ಮುಂದುವರಿಯುತ್ತಾರೆ. ಇದು ಟಾಟಾ ಯುಕೆಯಲ್ಲಿ ಹೇಗೆ ತನ್ನ ಬಲವಾದ ಬೇರೂರುತ್ತಿದೆಯೋ ಹಾಗೆಯೇ ಯುರೋಪಿಯನ್ ಕಂಪನಿಗಳು ಭಾರತದಲ್ಲಿ ಇನ್ವೆಸ್ಟ್ ಮಾಡುತ್ತಿರುವುದಕ್ಕೆ ಕಾರಣವಾಗಿದೆ. ಸದ್ಯಕ್ಕಂತೂ ವಾಲ್ ಮಾರ್ಟ್ ನಂತಹ ವಿದೇಶಿ ಸಂಸ್ಥೆಗೆ ಆಹ್ವಾನ ಹೋಗಿದೆ. ಆದರೆ ಬಂಡವಾಳ ಹೂಡಲು ಮಹಾನಗರಗಳಲ್ಲೇ ಅನುಮತಿಯನ್ನು ನೀಡಲಾಗಿದೆ. ಬೆಳೆಯುತ್ತಿರುವ ಪ್ರತಿಭಟನೆಯನ್ನು ಗಮನಿಸಿದರೆ ದಿಲ್ಲಿ, ಮುಂಬೈ ಮತ್ತು ಪುಣೆ(ಸಂಭಾವ್ಯ)ಗಳಲ್ಲಿ ಮಾತ್ರ ಅವು ಬರುವ ಸೂಚನೆಯಿದೆ(ಇಲ್ಲಿ ಕಾಂಗ್ರೆಸ್ ಅಧಿಕಾರವಿರುವುದರಿಂದ). ಈ ರಿಟೈಲ್ ಅಂಗಡಿಗಳು ಬಿಗ್ ಬಜಾರ್, ರಿಲಾಯನ್ಸ್ ಮಾರ್ಟ್ ಗಳಂತೆಯೇ! ಶಾಪಿಂಗ್ ಮಾಲುಗಳು ನಮ್ಮಲ್ಲಿ ಮೊದಲೇ ಕಡಿಮೆಯಿಲ್ಲ ಆದ್ದರಿಂದ ಇದು ಬಂದು ಸಣ್ಣ ವ್ಯಾಪಾರಿಗಳಿಗೆ ತೀರಾ ನಷ್ಟವೇನೂ ಇಲ್ಲವೆಂದು ಹೇಳಬಹುದು. ಇದರ ಮೇಲೆ ಹೆಚ್ಚಿನ ಉದ್ಯೋಗ, ಕೃಷಿ ಬೆಳೆಗಳಿಗೆ ಉತ್ತಮ ಮಾರುಕಟ್ಟೆಯ ಭರವಸೆ ನೀಡಲಾಗುತ್ತಿದೆ. ವ್ಯವಹಾರ ಪೀಡಿತವಾದ ಸಮಾಜಕ್ಕೆ ವ್ಯಾಪಾರಿ ಯಾರಾದರೇನು? ವಿದೇಶಿ ಕಂಪನಿಗಳು ತಾವು ಹಣ ಮಾಡಿಕೊಳ್ಳುತ್ತವೆ. ಇಲ್ಲಿಯ ಕಂಪನಿಗಳು ತಮ್ಮ ವ್ಯಾಪಾರ ವಿಸ್ತರಿಸುತ್ತಾ ಮತ್ತಷ್ಟು ಕೊಳ್ಳೆ ಹೊಡೆಯುತ್ತವೆ. ಅಲ್ವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಚಾರ್ಯರೆ ನಾನು ನಿಮಗೆ ಎರಡು ಉತ್ತರಗಳನ್ನು ಸ್ವಷ್ಟ ಪಡಿಸಬೇಕಾಗಿದೆ >> ನನ್ನ ಆಸಕ್ತಿಯ ಕಾಲಮಾನ ರಾಜೀವ್ ಗಾಂಧಿಯ ನಂತರದ ಸಮಯವಾದ್ದರಿಂದ ಅದರ ನಂತರದಿಂದ ನನ್ನ ಅನಿಸಿಕೆಯನ್ನು ತಿಳಿಸಲು ಯತ್ನಿಸುತ್ತೇನೆ ನಾನು ಇಲ್ಲಿ ಹೇಳಲು ಪ್ರಯತ್ನ ಪಟ್ಟಿರುವುದು ದೀರ್ಘಕಾಲದ ಆರ್ಥಿಕ ನೀತಿಗಳಿಲ್ಲದೆ ಪ್ರತಿ ಆಡಳಿತಗಾರರು ಇರುವ ನಾಯಕರ ಮರ್ಜಿಯನ್ನು ಅನುಸರಿಸುತ್ತ ಹೋದರೆ ದೇಶದೆ ಜನಗೆ ಅತಂತ್ರರಾಗುತ್ತಾರೆ ಎಂದು. ಒಂದು ಸಂದರ್ಭ ಊಹೆ ಮಾಡಿ, ನಾಳೆ ಮತ್ತೊಂದು ಸರ್ಕಾರ ಬರುತ್ತದೆ ಕಾಂಗ್ರೆಸನದೆ ಇರಲಿ ಅವರು ಈಗನ ಪರಿಸ್ಥಿಥಿಯನ್ನೆಲ್ಲ ತಿರುವುಮುರುವು ಮಾಡಿ ನೀತಿಗಳನ್ನೆಲ್ಲ ಬದಲಾಯಿಸುತ್ತಾರೆ, ಈಗಿನ ಸಾಫ್ಟ್ ವೇರ ಆಗಲಿ ಕಂಪೂಟರ್ ಆಗಲಿ ಆಟೋಮೊಬೈಲ್ ಆಗಲಿ ಬ್ಯಾಕಿಂಗ್ ವ್ಯವಸ್ಥೆಯಾಗಲಿ ಯಾವುದು ಪ್ರಸ್ಥುತ್ವ ಅಲ್ಲ ಎನ್ನುವ ಪರಿಸ್ಥಿಥಿ ನಿರ್ಮಾಣವಾದಲ್ಲಿ,- ಅದು ಅಸಾದ್ಯವೇನು ಅಲ್ಲ ಹಿಂದೆ ಇದೇ ಬಂಡವಾಳಶಾಯಿ ವಿರುದ್ದ ರಷ್ಯದಲ್ಲಿ ಕಾರ್ಲ್ ಮಾರ್ಕ್ಸ್ ನಂತವರು ಕಮ್ಯೂನಿಸಂ ಬೆಳೆಸಿದರು ನೆನೆಪಿಸಿಕೊಳ್ಳಿ,- ಈಗ ಇರುವ ಯುವಜನಾಂಗ ಮತ್ತೆ ಗೊಂದಲದಲ್ಲಿ ಬೀಳುತ್ತಾರೆ ಅವರ ಜೀವನ ಶೈಲಿ ಗೊಂದಲದಲ್ಲಿ ಸಿಕ್ಕಿಬೀಳುತ್ತದೆ, ಈಗಿರುವ ಕಂಪುಟರ್ ಫೇಸ್ಬುಕ್ ಎಲ್ಲ ಮೂಲೆಗುಂಪಾಗಿ ಮತ್ತೇನೊ ವ್ಯವಸ್ಥೆ ಬಂದಾಗ ಪ್ರರಿಸ್ಥಿತಿ ಊಹೆ ಮಾಡಿ, ಅದೇ ಪರಿಸ್ಥಿತಿಯನ್ನು ಇಂದಿನ ನಡುವಯಸಿನ ಕಾರ್ಮಿಕ, ರೈತರು ಎದುರಿಸುತ್ತಿದ್ದಾರೆ, ಬದುಕಿರುವಾಗರೆ ಅವರ ಜೀವನ ಶೈಲಿ ಪಳಿಯುಳಿಕೆಯಂತಾಗಿದೆ. ಅದಕ್ಕಾಗಿ ನಾನು ಯೋಚಿಸಿದ್ದು, ಸರ್ಕಾರಗಳು ಚಿಂತನಶೀಲವಾಗಿರಬೇಕು ದೀರ್ಘಕಾಲಿಕ ನೀತಿಗಳಿರಬೇಕು ಎಂದು. ನಾನು ಎರಡು ಜನರೇಶನನ್ನು ಹೋಲಿಸಲು ಪ್ರಯತ್ನಪಟ್ಟಿದ್ದೇನೆ > ಇನ್ನು ಹೊರರಾಷ್ಟ್ರಗಳ ಬಂಡವಾಳ ಹೂಡಿಕೆಯ ಮಾತು - ರಿಟೈಲಿಂಗ್ ಬಿಟ್ಟು ಹೆಚ್ಚಿನ ವ್ಯವಹಾರಗಳಲ್ಲಿ ಈಗಾಗಲೇ ವಿದೇಶಿ ಬಂಡವಾಳ ನಡೆಯುತ್ತಿದೆ. ನಾವು ಬಳಸುವ ಹೆಚ್ಚಿನ ವಸ್ತುಗಳು ವಿದೇಶಿ ಕಂಪನಿಗಳದ್ದೆ. ಕೋಲ್ಗೇಟಿನಿಂದ ಹಿಡಿದು ಬಳಸುವ ಮೊಬೈಲಿನವರೆಗೂ. ಈಗ ಪರಿಸ್ಥಿತಿ ನಮ್ಮದು ಎನ್ನುವಂತದ್ದು ಏನೂ ಇಲ್ಲದಂತಾಗಿದೆ. ಇಂಜಿನೀರಿಂಗಿನಲ್ಲೂ ಸಣ್ಣ ಪುಟ್ಟ ಸ್ಪೇರ್ ಪಾರ್ಟ್ಸುಗಳನ್ನು ಬಿಟ್ಟರೆ ಮುಖ್ಯವಾಗಿ ಬೇಕಾಗಿರುವ ಬ್ಯಾಟರಿ, ಇಂಜಿನುಗಳಿಗೆ ನಾವು ಹೊರರಾ ಇದೆ ಮಾತು ನಮ್ಮ ಮನೆಯಲ್ಲಿ ಒಬ್ಬರು ವಾದಿಸಿದರು, ಈಗ ಇರುವ ಪರಿಸ್ಥಿತಿ ಹೀಗೆ ಇದೆ, ನಮ್ಮದು ಏನು ಇಲ್ಲ ಅಂತ ನಾವು ಯೋಚಿಸಬಾರದು (ನಮಗೆ ಸೂಜಿ ಬೇಕೆಂದರೆ ಚೀನದವರು ಕೊಡಬೇಕು , ನೈಲ್ ಕಟರ್ ಬೇಕೆಂದರೆ : ಕೊರಿಯಾದಿಂದ ಬರಬೇಕು, ಹಾಗೆ ಗೋದಿ ಸಹ ಅಮದು ಮಾಡುತಾರೆ !!!!!! ಗೋದಿಯ ಖಣಜದ ನಾಡಿನಲ್ಲಿ) ಗ್ಲೋಬಲಿಕರಣಾವಾದಾಗ ಇವೆಲ್ಲ ಸಾಮನ್ಯ ನಮ್ಮ ಯೋಚನ ದಾಟಿ ಬದಲಾಗಬೇಕಂತೆ, ಅಕ್ಕಿ ಇಲ್ಲಿ ಬೆಳೆಯದಿದ್ದರು ಪರವಾಗಿಲ್ಲವಂತೆ ಆರ್ಥಿಕ ಬೆಳವಣಿಗೆಯೆ ಮುಖ್ಯವಂತೆ ಇದು ಈಗಿನ ಮನಮೋಹನ್ ಸಿಂಗ್ ಯೋಚನ ದಾಟಿ. ನಮ್ಮಲ್ಲಿ ಏನು ಇಲ್ಲ ಬರಿ ಕಾಗದದ ಹಣ ಇದೆ ಎಂದರೆ ಮುಂದಿನ ಭವಿಷ್ಯವೇನು ? ಎಲ್ಲದಕ್ಕು ಯಾರನ್ನೊ ಅವಲಂಬಿಸಿದರೆ ವಿಷೇಸ ಸಂದರ್ಬವೊಂದು (ಯುದ್ದ) ನೀತಿಗಳು ಬದಲಾಗಿ ಅವರು ಏನನ್ನು ಕೊಡಲ್ಲ ಎಂದಾಗ ನಮ್ಮ ಪಾಡೇನು ? ದೊಡ್ಡಣ್ಣ ಅಮೇರಿಕವೆ ತನ್ನ ಮಾತಿನ ದಾಟಿ ಬದಲಾಗಿದೆ - ಔಟ್ ಸೋರ್ಸಿಂಗ್ ಕೊಡಲ್ಲ ಅನ್ನುತ್ತಾರೆ ಬೆಂಗಳೂರಿಗಿಂತ ಬಫೆಲೊ ಪಟ್ಟಣವೆ ತನಗೆ ಮುಖ್ಯವೆನ್ನುತ್ತಾರೆ ನಮ್ಮಲ್ಲಿ ರೈತನ ಗೊಬ್ಬರಕ್ಕೆ ಸಬ್ಸಿಡಿ ಕೊಟ್ಟಾಗ ತಪ್ಪು ಅಂತ ನೀತಿ ಹೇಳುವ , ದಿನನಿತ್ಯದ ಉಪಯೋಗಿ ಗ್ಯಾಸಿನ ಮೇಲೆ ಸಬ್ಸಿಡಿ ತೆಗೆಯಬೇಕೆನ್ನುವ ಅಮೇರಿಕ ಹಿಡಿತದ ವ್ಯವಸ್ಥೆ ಅದೇ ಅಮೇರಿಕದಲ್ಲಿ ಬ್ಯಾಂಕ್ಗಳು ದಿವಾಳಿಯಾದರು ಪ್ಯಾಕೇಜ್ ಘೋಶಿಸಿ ಸಹಾಯಕ್ಕೆ ಹೋಗುತ್ತಾರೆ, ತಮ್ಮವರಿಗೆ ಕೆಲಸ ಸಿಗುತ್ತಿಲ್ಲ ಭಾರತದವರು ಬರುವುದು ಬೇಡ ಎನ್ನುತ್ತಾರೆ ಆಷ್ಟೇಲಿಯದಲ್ಲಿ ಬಾರತೀಯರನ್ನು ಹೊಡೆದು ಅಟ್ಟುತ್ತಾರೆ , ನಮ್ಮ ನಾಯಕರು ಗ್ಲೋಬಲಿಕರಣ ಅನ್ನುತ್ತ ಅದೇ ಹಳೆಯ ರಾಗ ಹಾಡುತ್ತಿದ್ದಾರೆ ಇರಲಿ ಬಿಡಿ ಆಚಾರ್ಯರೆ ಚಕ್ರ ಸದಾ ತಿರುಗುತ್ತದೆ , ಕಾರ್ಮಿಕ ದಿನಕ್ಕೆ ಎಂಟುಗಂಟೆಗಿಂತ ಜಾಸ್ತಿ ಕೆಲಸ ಮಾಡುತ್ತಾರೆ ಅಂತ ವಿರೋದಿಸಿ, ಕಮ್ಯೂನಿಸಂ ಪ್ರಾರಂಬವಾಯಿತು, ಈಗ ಪುನಃ ಅದೇ ಬಂಡವಾಳಿಶಾಯಿಗಳ ಹಿಡಿತಕ್ಕೆ ಸಿಕ್ಕಿ ಕಾರ್ಮಿಕರು (ನೀವು ಅವರನ್ನು IT/BT ಅನ್ನುತೀರೆನೊ) ಇಪ್ಪತ್ತುನಾಲಕ್ಕು ಗಂಟೆ ದುಡಿಯುತ್ತಾರೆ ಕಾಲ್ ಸೆಂಟರ್ ನಂತ ಜಾಗಗಳಲ್ಲಿ ಪುನ ಕಮ್ಯೂನಿಸಂನ ಹೋರಾಟ ಪ್ರಾರಂಬವಾಗಬಾರದು ಅಂತ ಏನಿಲ್ಲವಲ್ಲ :)) -ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬದಲಾಗುತ್ತಿರುವ ಜಾಗತಿಕ ಸನ್ನಿವೇಶಗಳಲ್ಲಿ ದೀರ್ಘಕಾಲೀನ ಯೋಜನೆಗಳನ್ನು ಹಾಕುವುದು ಅಷ್ಟು ಸುಲಭವಲ್ಲ. ಇಲ್ಲಿ ದೀರ್ಘಕಾಲೀನವೆಂದರೆ ಹೆಚ್ಚೆಂದರೆ ಹತ್ತು ವರ್ಷಗಳ ವ್ಯಾಪ್ತಿಯಲ್ಲಿ ಹಾಕಬಹುದಷ್ಟೇ. ಈಗಿನ ಯುವಜನತೆ(ನನ್ನನ್ನೂ ಸೇರಿಸಿ)ಯನ್ನು ಕಾಡುವ ಗೊಂದಲವೇ ಅದು. ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಾ ತನ್ನದನ್ನು ಕಳೆದುಕೊಳ್ಳುವುದು ಸರಿಯೋ ತಪ್ಪೋ ಎಂಬ ಗೊಂದಲ. ಇಂದಿನ ರೈತರಿಗಿರುವ ಅತಿ ದೊಡ್ಡ ಸವಾಲೆಂದರೆ ರಾಜಕೀಯ ವ್ಯವಸ್ಥೆಗೆ ಒಳಪಡದಂತೆ ಕೃಷಿ ಮಾಡುವುದು. ಕೃಷಿಕರ ಎಲ್ಲಾ ಸಮಸ್ಯೆಗೆ ಕಾರಣ ಅವರನ್ನು ಬಳಸಿಕೊಂಡ ಅಧಿಕಾರಶಾಹಿಯೇ. ಉತ್ಪಾದಕತೆ ಕಡಿಮೆಯಾಗುತ್ತಿರುವ ಅಂಶದ ಕುರಿತು ನಿಜಕ್ಕೂ ಗಂಭೀರವಾಗಿ ಯೋಚಿಸುವ ಅಗತ್ಯವಿದೆ. ಕೃಷಿ ಆಧಾರಿಕ ಉತ್ಪನ್ನಗಳು, ಅದಿರುಗಳು, ಉಳಿದ ಖನಿಜಗಳೆಲ್ಲಾ ವಿದೇಶಿ ರಾಷ್ಟ್ರಗಳಿಗೆ ಇಲ್ಲಿಂದಲೇ ರಫ್ತಾಗುತ್ತದೆ. ಅವೇ ರಾಷ್ಟ್ರಗಳು ಅದರಿಂದಲೇ ತಯಾರಾಗುವ ವಸ್ತುಗಳಲ್ಲು ಇಲ್ಲಿ ತಂದು ಮಾರುತ್ತಾರೆ. ಆದ್ದರಿಂದ ಯುದ್ಧ ನೀತಿಗಳು ಬದಲಾಗಿ ಅವು ಸಾಮಾಗ್ರಿಗಳನ್ನು ಕೊಡುವುದಿಲ್ಲ ಎನ್ನಲು ಅಷ್ಟು ಸುಲಭವಿಲ್ಲ. ಇದು ಹೊರಗುತ್ತಿಗೆಗೂ ಅನ್ವಯಿಸುತ್ತದೆ. ಚಕ್ರ ಇರುವುದೇ ತಿರುಗಲು ಅಲ್ಲವೇ... ಹಿಂದೆ ನಡೆದ ಪಾಲಿಸಿಗಳು ಇಂದು ನಡೆಯುವುದಿಲ್ಲ, ಹಿಂದೆ ನಡೆದ ತಂತ್ರಜ್ನಾನಗಳು ಈಗ ನಡೆಯುವುದಿಲ್ಲ. ದೇಶ ದೇಶಗಳ ನಡುವೆ ಸ್ನೇಹಪರತೆ ಕೂಡ ಬದಲಾಗುತ್ತಾ ಮಿತ್ರರು ಶತ್ರುಗಳಾಗಿ, ಶತ್ರುಗಳು ಮಿತ್ರರಾಗಿ ಬದಲಾಗುತ್ತಿರುವುದೇ ನಾಗರೀಕತೆಯ ಪ್ರಮುಖ ಅಂಶವಲ್ಲವೇ..!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥರೆ, ಉತ್ತಮ ಸಮಯೋಚಿತ ಲೇಖನ, ಇತ್ತೀಚಿನ ವರದಿಗಳ ಪ್ರಕಾರ ವಾಲ್ ಮಾರ್ಟ್ ಕ೦ಪನಿಯಲ್ಲಿರುವ ರಾಹುಲನ ಗೆಳೆಯನೊಬ್ಬನನ್ನು ಮೆಚ್ಚಿಸಲು ಈ ಪ್ರಕ್ರಿಯೆ ನಡೆಯುತ್ತಿದೆ. ಈ ಮಾನಗೆಟ್ಟ ನೆಹರೂ ಕುಟು೦ಬ ಈ ದೇಶವನ್ನೇ ಅವರ ತಾತನ ಜಹಗೀರು ಎನ್ನುವ೦ಗ್ತೆ ನಡೆದುಕೊಳ್ಳುತ್ತಿದೆ. ಇನ್ನಾದರೂ ಈ ದುರಾಡಳಿತ ಕೊನೆಯಾಗಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಮ0ಜುನಾಥ್ ಜನತೆ ಈಗ ಎಲ್ಲವನ್ನು ಬೇಗ ಅರ್ಥಮಾಡಿಕೊಳ್ಳುತ್ತಾರೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ಭಾರತದಂತಹ...... ಶಾಶ್ವತ ಹಾಗೂ ದೀರ್ಘಾವಧಿಯ ನೀತಿಗಳೇ ಇಲ್ಲ> ಯಾವುದೇ ದೇಶಕ್ಕೂ ಶಾಶ್ವತ ನೀತಿ ಎಂಬುದು ಇರುವುದಿಲ್ಲ. ಕಾಲಕಾಲಕ್ಕೆ ನೀತಿಗಳು (ಪಾಲಿಸಿಗಳು ಎಂಬರ್ಥದಲ್ಲಿ) ಬದಲಾಗಬೇಕಾದದ್ದು ಅನಿವಾರ್ಯ. ರಶಿಯಾ, ಚೀನಾ, ಬ್ರಿಟನ್ ಸೇರಿದಂತೆ ಅನೇಕ ರಾಷ್ಟ್ರಗಳು ಕಳೆದ ಕೆಲವು ದಶಕಗಳಲ್ಲಿ ತಮ್ಮ ಪಾಲಿಸಿಗಳನ್ನು ಬದಲಾಯಿಸಿವೆ. ಭಾರತದಲ್ಲಿಯೂ ಕೂಡಾ ಪಾಲಿಸಿಗಳು ಬದಲಾಗಿವೆ. ಆದರೆ ಮೂಲಭೂತ ಬದಲಾವಣೆ ನನ್ನ ಅಭಿಪ್ರಾಯದಲ್ಲಿ ಎರಡು ಬಾರಿ ಮಾತ್ರಾ (ಕಳೆದ ೬೪ ವರ್ಷಗಳಲ್ಲಿ) ಮೊದಲನೆಯದು ನೆಹರೂ ಪ್ರಣೀತ ಸರಕಾರೀ ನೇತೃತ್ವದ ಕೈಗಾರಿಕೀಕರಣ ಮತ್ತು ಖಾಸಗೀ ಉದ್ಯಮದ ನಿಯಂತ್ರಣ. ಇಂದಿರಾಗಾಂಧಿಯವರ ಪಾಲಿಸಿ ಇದನ್ನೇ ಮುಂದುವರಿಸಿ ಸರಕಾರೀಕರಣವನ್ನು ಹೆಚ್ಚು ಮಾಡಿತು. ಎರಡನೆಯದು ರಾಜೀವ ಗಾಂಧಿ ಪ್ರತಿಪಾದಿಸಿದ ಆದರೆ ನರಸಿಂಹರಾಯರ ಕಾಲದಲ್ಲಿ ೧೯೯೧ರಲ್ಲಿ ನಡೆದ ಉದಾರೀಕರಣ ಹಾಗೂ ಜಾಗತೀಕರಣ. ಈಗ ನಾವು ಚರ್ಚಿಸುತ್ತಿರುವ ರಿಟೈಲ್ ಪಾಲಿಸಿ ಬದಲಾವಣೆ ಈ ಮಹತ್ತರ ಬದಲಾವಣೆಯ ಮುಂದುವರಿದ ಅಂಗವೇ. ಇದರಿಂದ ನಮ್ಮ ಕಿರಾಣಿ ಅಂಗಡಿಗಳು ಮುಚ್ಚಿ ಹೋಗುತ್ತವೆ ಅನ್ನುವ ವಾದದ ವಿರುದ್ಧವಾಗಿ ಇದರಿಂದ ಮಿಲಿಯನ್ ಗಟ್ಟಲೆ ಹೊಸ ಕೆಲಸಗಳು ಸೃಷ್ಟಿಯಾಗುತ್ತದೆ, ಗ್ರಾಹಕರಿಗೆ ಕಡಿಮೆಬೆಲೆಯಲ್ಲಿ ವಸ್ತುಗಳು ಸಿಗುತ್ತವೆ ಎಂಬ ವಾದವಿದೆ. ನನ್ನ ಅಭಿಪ್ರಾಯದಲ್ಲಿ ಇವು ವಾದದ‌ ಎರಡು ತುದಿಗಳು ಮಾತ್ರಾ. ತಥ್ಯ ಇನ್ನೂ ಹೆಚ್ಚು ಸಂಕೀರ್ಣವಾದದ್ದು – ಬಹುಷಃ ಇದೆರಡು ಅತಿರೇಕಗಳ ಮಧ್ಯೆ ಎಲ್ಲಿಯೋ ಇರಬಹುದು. ವಾಲ್ ಮಾರ್ಟ್ ಬರುವುದರಿಂದ ಶೆಟ್ಟರ ಅಂಗಡಿ ಮುಚ್ಚುತ್ತದೆ ಎಂಬುದನ್ನು ನಂಬುವುದು ಕಷ್ಟ. ಅಮೆರಿಕಾದಲ್ಲಿ ಕೂಡಾ ಎಲ್ಲಾ ವ್ಯಾಪಾರ ಮಾಲ್ ಗಳಲ್ಲಿಯೇ ಆಗುವುದಿಲ್ಲ. ಅಲ್ಲಿಯೇ ಸಣ್ಣ mom and pop stores ಮಾಲ್ ಗಳ ಜೊತೆಜೊತೆಯಾಗಿಯೇ ಕಣದಲ್ಲಿವೆ. ಭಾರತದಲ್ಲಿಯೂ ಕೂಡಾ ಕೋಕಾ ಕೋಲಾ, ಪೆಪ್ಸಿ ಜೊತೆಜೊತೆಯಾಗಿಯೇ ನಮ್ಮವೇ ಪ್ರಾದೇಶಿಕ ತಂಪು ಪಾನೀಯಗಳಲ್ಲದೇ ಎಳನೀರು, ಕೈಗಾಡಿ ಚಾಯ್ ಅಂಗಡಿಗಳು ಇನ್ನೂ ಇವೆ, ಬೆಳೆಯುತ್ತಿವೆ. ಮೆಕ್ಡೊನಾಲ್ಡ್ ಜೊತೆಜೊತೆಯಾಗಿಯಾಗಿಯೇ ಉಡುಪಿ ಮತ್ತಿತರ ದೇಶೀ ಹೋಟೆಲುಗಳೂ ವ್ಯಾಪಾರ ಮಾಡುತ್ತಿವೆ. ಒಂದಂತೂ ಸತ್ಯ – ಈ ರೀತಿಯ ದೊಡ್ದ ಪಾಲಿಸಿ ಬದಲಾವಣೆಗಳನ್ನು ತರುವ ಮುನ್ನ ಸಾಧಕ ಬಾಧಕಗಳನ್ನು ಯೋಚಿಸಿ ತರಬೇಕಾದದ್ದು ಮುಖ್ಯ. ಅದಕ್ಕೇ ಅದರ ಪರ ವಿರೋಧದ ಅಭಿಪ್ರಾಯಗಳು ಕೂಡಾ ಮುಖ್ಯ. ಯಾವುದೇ ಪ್ರಜಾಪ್ರಭುತ್ವದ ಲಕ್ಷಣವೇ ಅದು. < ಏನೂ ಉಪಯೋಗವಿಲ್ಲ...ಯೂ-ಟ್ಯೂಬ್ ಗಳನ್ನು ಇಡಲಾಗಿದೆ> ಈ ಚರಮವಾಕ್ಯ ನನ್ನ ಪ್ರಕಾರ ಸರಿಯಲ್ಲ. ಭಾರತ ರಾಜಕೀಯ ಪರಿಸ್ಥಿತಿ ಬದಲಾಗಲಿದೆ ಹಾಗೂ ನಮ್ಮ ಯುವಪೀಳಿಗೆ ಅದರಲ್ಲಿ ಮಹತ್ವದ ಭಾಗ ವಹಿಸಲಿದ್ದಾರೆ ಎಂಬ ಆಶಾವಾದ ನನಗಿದೆ. ಅಣ್ಣಾಹಜಾರೆ ಚಳುವಳಿಗೆ ಸಿಕ್ಕ ಜನಬೆಂಬಲ, ಶರದ್ ಪವಾರಗೆ ಬಿದ್ದ ಕೆನ್ನೆಯೇಟಿನ ಬಗ್ಯೆ ಜನ ಸಾಮಾನ್ಯರ ಪ್ರತಿಕ್ರಿಯೆ ಇವೆಲ್ಲಾ ತೋರಿಸುವುದು ಜನ ರೋಸಿದ್ದಾರೆ ಎಂಬುದನ್ನು. ಶಿಶುಪಾಲನ ಪಾಪದ ಸಂಖ್ಯೆ ನೂರರ ಹತ್ತಿರ ಬಂದಿದೆ. ಕೃಷ್ಣ ಕಾಯುತ್ತಿದ್ದಾನೆ..... ನಾರಾಯಣ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾರಯಣರವರೆ ನೀವು ಹೇಳಿದ ಚೀನ, ಹಾಗು ರಶಿಯ ಸರಿ ಅಲ್ಲಿಯು ಇದೆ ಸ್ಥಿತ್ಯ0ತರವೆ ನಡೆಯುತ್ತಿದ್ದೆ ನಿಮ್ಮ ವಾದ ಒಪ್ಪತಕ್ಕದೆ ಯಾವಗಳು ನೀತಿ ಬದಲಾಗುತ್ತಲೆ ಸಾಗುತ್ತದೆ ಆದರೆ ಅದಕ್ಕೆ ಬಲಿಪಶು ಮಾತ್ರ ಸಾಮಾನ್ಯ ಪ್ರಜೆಗಳು , ಬ0ಡವಾಳಗಾರರು ಮಸ್ತಿಯಲ್ಲಿಯೆ ಇರುತ್ತಾರೆ ಅಮೇರಿಕದಲ್ಲಿ ಸಣ್ಣಪುಟ್ಟ ಬದಲಾವಣೆ ಹೊರತುಪಡಿಸಿ ಸದಾ ಒ0ದೆ ವೇಗದಲ್ಲಿ ಸಾಗಿದ್ದಾರೆ ಬಾರತದಲ್ಲಿ ಯಾವಾಗಲು ಗೊ0ದಲದಲ್ಲಿಯೆ ಸಾಗುತ್ತದೆ ಗಾಬರಿಹುಟ್ಟಿಸುವ ಒ0ದೆ ಅಭಿಪ್ರಾಯವೆ0ದೆರೆ ಇಲ್ಲಿ ಯಾವುದೆ ಉತ್ಪನ್ನ ವ್ಯವಸಾಯ ಇಲ್ಲದಿದ್ದರು ಪರವಾಗಿಲ್ಲ ಎಲ್ಲ ಹೊರಗಿನಿ0ದ ಬರುತ್ತದೆ ಎನ್ನುವುದು. ನೀವೆ ಕಡೆಯಲ್ಲಿ ಹೇಳಿರುವ0ತೆ ಯುವಜನತೆ ರೊಚ್ಚುಗೆದ್ದಿದ್ದಾರೆ ... ಅ0ದರೆ ... ಬಾರತದ ಆರ್ಥಿಕ ನೀತಿಗಳಲ್ಲಿ ವ್ಯವಸ್ಥೆಯಲ್ಲಿ ಎಲ್ಲಿಯೊ ದೋಷವಿದೆ, ಲಕ್ಷ0ತರ ಉಧ್ಯೋಗ ಸ್ಱುಷ್ಟಿಯ ಮಾತು ಹೇಳಿದ್ದೀರಿ ಅದಾಗಿದ್ದಲ್ಲಿ ಅಸಮಾದಾನ ಎಲ್ಲಿರುತ್ತಿತ್ತು ಎಲ್ಲರು ಸ0ತೋಷವಾಗಿರುತ್ತಿದ್ದರು ಅಲ್ಲವೆ ಅದೆ ಯುವಕ ಕಪಾಳ ಮೋಕ್ಷದ ಬದಲಿಗೆ ಹೂವಿನ ಹಾರ ಹಾಕುತ್ತಿದ್ದ ಅಲ್ಲವೆ ವಿಚಾರ ವಿನಿಮಯ ಮಾಡಿಕೊ0ಡಿದ್ದಕ್ಕೆ ಅಭಿನ0ದನೆಗಳು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿಯವರೆ, >>>ಈ ವಿಷಯವನ್ನು ವಿರೋದಿಪಕ್ಷಗಳು ಅದರಲ್ಲು ಬಾಜಪ ದೊಡ್ಡದ್ವನಿಯಿಂದ ವಿರೋದಿಸಿದೆ !!!. ಹೆಚ್ಚು ಆಶ್ಚರ್ಯವೇನು ಬೇಡ , ಒಮ್ಮೆ ಬಾಜಪದ ನೇತೃತ್ವದ ಕೇಂದ್ರ ಸರ್ಕಾರವಿದ್ದಲ್ಲಿ ಈ ನಿರ್ಣಯವನ್ನು ಎಂದೊ ಮಾಡಿ ಮುಗಿಸುತ್ತಿತ್ತು.. -ಕರ್ನಾಟಕದಲ್ಲಿ ಮಾಡುತ್ತಾ ಇದೆಯಲ್ಲಾ.. ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ ಅಂತ ಮಾಡಿ ..ಲಕ್ಷ ಕೋಟಿ!! ಹಣ ಕರ್ನಾಟಕದ "ಇಂಡಸ್ಟ್ರೀ"ಗೆ ಹರಿದು ಬಂತು!!! ಈಗ ಕರ್ನಾಟಕದ ಕೃಷಿ,ಮೀನು ಮಾರುಕಟ್ಟೆಗೂ "ಜಾಗತಿಕ ಕೃಷಿ ವಾಣಿಜ್ಯ ಹಾಗೂ ಆಹಾರ ಸಂಸ್ಕರಣ ಶೃಂಗ ಸಭೆ" ಎಂದು ಡಿಸೆಂಬರ್ ೧-೨ಕ್ಕೆ ಕರೆದಿದ್ದಾರೆ. "ಸಮೃದ್ಧ ಕರ್ನಾಟಕವೂ ರೂ.೫೦೦೦೦ಕೋಟಿಯ(!!!) ಅವಕಾಶವಾಗಿದೆ.ಮೀನುಗಾರಿಕೆ ಕ್ಷೇತ್ರವು ಬಂಡವಾಳ ಹೂಡಿಕೆಗೆ ಸಾಧ್ಯತೆಗಳ ಮಹಾಸಾಗರವಾಗಿದೆ" ಇದು ಕರ್ನಾಟಕ ಸರಕಾರದ ಜಾಹಿರಾತು! >>>ಸರ್ಕಾರವೆಂದರೆ ಈಗ ನಮ್ಮನ್ನು ಕಾಪಾಡಲು ಇರುವಂತ ವ್ಯವಸ್ಥೆಯಲ್ಲ ಬದಲಾಗಿ ಲಾಭ ಮಾಡಲು ನಿಂತಿರುವ ’ಈಷ್ಟ್ ಇಂಡಿಯ’ ಕಂಪನಿ ರೀತಿಯ ಮತ್ತೊಂದು ಲಾಭಕೋರ ಸಂಸ್ಥೆಯಷ್ಟೆ. +೧ -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶರೆ ತಮ್ಮ ಸಹಮತದ ಅಭಿಪ್ರಾಯಕ್ಕಾಗಿ ವ0ದನೆಗಳು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಸರ್ಕಾರದ ಈ ನಿರ್ಧಾರವನ್ನ ವೀರೊದಿಸುತ್ತೇನೆ. ಎಕೆಂದರೆ ಚಿಲ್ಲರೆ ವ್ಯಾಪಾರದಲ್ಲಿ FDI ಗೆ ದಾರಿ ಮಾಡಿಕೊಟ್ರೆ ನಮ್ಮ ಸಣ್ಣ ಚಿಲ್ಲರೆ ವ್ಯಾಪಾರಿಗಳಿಗೆ ತೊಂದರೆ ಆಗುತ್ತದೆ. ನಾವು ಸ್ಥಳಿಯ ಜನಕ್ಕೆ ತೊಂದರೆ ಆಗದಾಗೆ ನಿರ್ಧಾರಗಳನ್ನುತೆಗೆದುಕೊಳ್ಳಬೇಕು. ಈಗ ನಮ್ಮ ಯುವಜನತೆಯ ಕಡೆಗೆ ಬಂದರೆ ಬಹುತೇಕ ಜನ ಇಂತ ವಿಷಯಗಳ ಬಗ್ಗೆ ತಲೆನೆ ಕೆಡಿಸಿಕೊಳ್ಳೊಲ್ಲ. ಇಂತ ವಿಷಯಗಳ ಬಗ್ಗೆ ಎಷ್ಟು ಜನ ಚರ್ಚೆಮಾಡ್ತಾರೆ???
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನ0ದನ್ ನಿಮ್ಮ ವಿರೋದ ಈಗ ಪಾರ್ಲಿಮೆ0ಟನ್ನು ಮೊದಲುಗೊ0ಡು ಎಲ್ಲ ಕಡೆ ದಾಖಲೆಯಾಗುತ್ತಿದೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿದೇಶೀ ಪ್ರಭಾವವನ್ನು ನಮ್ಮ ಮೇಲೆ ಹೇರುವ ಬೀಜ ನೆಹರೂ ಕಾಲದಿಂದ ಆರಂಭಗೊಮಡಿತೆನ್ನಬಹುದು. ನಿಮ್ಮ ವಿಚಾರ ಸರಿ. 'ನಮ್ಮತನ' ಉಳಿಸಿಕೊಳ್ಳುವ, ನಮ್ಮವರಿಗೆ ಅನುಕೂಲವಾಗುವ ಸಂಗತಿಗಳನ್ನು ವಿದೇಶಿಯರಿಂದ ಪಡೆಯಬಹುದು.ಆದರೆ, 'ನಮ್ಮದನ್ನೇ' ನಮಗೆ ಮಾರುವ ಸಂಸ್ಕೃತಿ ವಿರೋಧಿಸಬೇಕಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ ಸರ್ ನಮ್ಮದನ್ನೆ ನಮಗೆ ಮಾರುವ ಸ0ಸ್ಕ್ಱುತಿ ನಿಜವೆ ಅದು ಬದಲಾಗಬೇಕಾದಲ್ಲಿ ನಾವು ಬದಲಾಗಬೇಕು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿಯವರೆ ನಮಸ್ಕಾರಗಳು. ನಿಮ್ಮ ಲೇಖನ ಓದಿದೆ, ಅರ್ಥಪೂರ್ಣವಾಗಿದೆ ಮತ್ತು ಸಕಾಲಿಕವಾಗಿದೆ. ಮತ್ತೆ ನಾವು ದಾಸ್ಯದ ಸಂಕೋಲೆಗೆ ಒಳಪಡಲಿದ್ದೇವೆ. ಇದೊಂದು ಬಿಡಿಸಲಾಗದ ಪ್ರಶ್ನೆ, ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹನುಮ0ತ ಪಾಟಿಲರೆ ಈಗ ಇದು ಬೆಕ್ಕಿನ ಕೊರಳಿಗೆ ಗ0ಟೆ ಕಟ್ಟುವ ಸಮಸ್ಯೆಯಾಗಿ ಉಳಿದಿಲ್ಲ ಹತ್ತಿರುವ ಹುಲಿಯ ಬೆನ್ನಮೇಲಿ0ದ ಇಳಿಯುವುದು ಹೇಗೆ ? ಎನ್ನುವ ಸಮಸ್ಯೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>> ಮತ್ತೆ ನಾವು ದಾಸ್ಯದ ಸಂಕೋಲೆಗೆ ಒಳಪಡಲಿದ್ದೇವೆ.<< ಹನುಮ0ತ ಪಾಟೀಲರೆ ಒಳಪಡಲಿದ್ದೇವೆ ಎ0ಬ ಅನುಮಾನವೇಕೆ ...? ಈಗಾಗಲೆ ನಾವಿರುವುದು ದಾಸ್ಯದಲ್ಲೆ ಸ್ವಲ್ಪ ನಿಧಾನವಾಗಿ ಯೋಚಿಸಿ ಅರ್ಥವಾಗುತ್ತದೆ. ಉತ್ತಮ ವಿಚಾರ ಪಾರ್ಥಸಾರಥಿಗಳೆ, ಇನ್ನಾದರೂ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು ದನ್ಯವಾದಗಳು... ರಾಮಮೋಹನ‌
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.