ರಾಜ್ ನಾರಾಯಣ್‍ _ ಇಂದಿರಾ_ ತುರ್ತುಪರಿಸ್ಥಿತಿ

3.5

ರಾಜ್ ನಾರಾಯಣ್‍ _ ಇಂದಿರಾ_ ತುರ್ತುಪರಿಸ್ಥಿತಿ

ರಾಜ್ ನಾರಯಣ್  ಭಾರತದ ರಾಜಕೀಯ ಇತಿಹಾಸದಲ್ಲಿ ಸರ್ವಕಾಲಕ್ಕು ದಾಖಲಾದ ಹೆಸರು.  ಭಾರತದಲ್ಲಿ 1975 ರಲ್ಲಿ  ಹೇರಲ್ಪಟ್ಟ  ತುರ್ತುಪರಿಸ್ಥಿತಿ ಗೆ ಮೂವರು ಪ್ರತ್ಯಕ್ಷ ಹಾಗು ಪರೋಕ್ಷ ಕಾರಣರು. ಅವರೆಂದರೆ ಶ್ರೀಮತಿ ಇಂದಿರಾಗಾಂಧಿ, ನ್ಯಾಯಮೂರ್ತಿ ಜಗಮೋಹನ್ ಲಾಲ್ ಸಿನ್ಹಾ ಹಾಗು ರಾಜ್ ನಾರಯಣ್ .

ರಾಜನಾರಯಣ್ ಇಂದಿರಾ ವಿರುದ್ದ ಚುನಾವಣೆಯಲ್ಲಿ ನಿಂತು ಗೆದ್ದ ಏಕೈಕ ವ್ಯಕ್ತಿ  1977 ರ ಲೋಕಸಭಾ ಚುನಾವಣೆಯಲ್ಲಿ. ಅದಕ್ಕೆ ಮೊದಲು ಅವರು 1971 ರಲ್ಲಿ ರಾಯ ಬರೇಲಿಯಲ್ಲಿ ಆಕೆಯನ್ನು ಎದುರಿಸಿ ಚುನಾವಣೆಯಲ್ಲಿ ಸೋತು ನಂತರ , ತಾವು ಸೋಲಲು ಇಂದಿರಾರವರು ಚುನಾವಣೆಯಲ್ಲಿ ನಡೆಸಿದ ಅಕ್ರಮಗಳೆ ಕಾರಣಾವೆಂದು ಅಲಹಾಬಾದ್ ಹೈಕೋರ್ಟಿನಲ್ಲಿ ಧಾವೆ ಹೂಡಿ ಗೆದ್ದರು, ಹಾಗು ನಂತರದ ತುರ್ತುಪರಿಸ್ಥಿಗೆ ಕಾರಣರೆನಿಸಿದರು. 

ರಾಜ್ ನಾರಯಣ್ ರವರನ್ನು ಎಲ್ಲರೂ ಲೋಕಬಂಧು ಎಂದು ಕರೆಯುತ್ತಿದ್ದರು. ವಾರಣಾಸಿ ಸಮೀಪದ ಮೋಠಿಕೋಟ್ ಗಂಗಾಪುರ ಎನ್ನುವಲ್ಲಿ 1917 ರಲ್ಲಿ ಜನಿಸಿದವರು. ತಮ್ಮ MA ಹಾಗು LLB ವಿಧ್ಯಾಭ್ಯಾಸವನ್ನು ಮುಗಿಸಿ ನಂತರ ರಾಜಕೀಯದಲ್ಲಿ ತೊಡಗಿಕೊಂಡವರು. ಭಾರತದ ಸೋಶಿಯಲಿಷ್ಟ್ ಪಾರ್ಟಿ ಯಲ್ಲಿ ಸಕ್ರಿಯ ಸದಸ್ಯರಾಗಿದ್ದವರು, ರಾಮ್  ಮಹೋಹರ್ ಲೋಹಿಯರವರ ಜೊತೆ ಅತ್ಯಂತ ನಿಕಟ ಸಂಪರ್ಕ ಹೊಂದಿದ್ದವರು ಇವರು. ಲೋಹಿಯರನ್ನು ’ಸಿಂಹದ ಹೃದಯ ಹಾಗು ಗಾಂಧಿಯ ನಡೆನುಡಿಗಳ ಮನುಷ್ಯ’ ಎಂದು ವರ್ಣಿಸಿದವರು ಇವರು, ಲೋಹಿಯಾಗೆ ಬಹಳ ಆಪ್ತರಾಗಿದ್ದವರು. 1942 ರ ಕ್ವಿಟ್ ಇಂಡಿಯಾ ಹೋರಾಟದಲ್ಲಿ ಬ್ರೀಟೀಶರಿಗೆ ತಲೆನೋವಾಗಿದ್ದವರು, ಇವರನ್ನು ಹಿಡಿದುಕೊಟ್ಟವರಿಗೆ  5000 ರೂಪಾಯಿ ಕೊಡುವದಾಗಿ ಆ ಕಾಲಕ್ಕೆ ಬ್ರೀಟೀಷರು ಘೋಷಿಸಿದ್ದರು. 

ತಮ್ಮ ಜೀವಿತಾವದಿಯ 69 ವರ್ಷಗಳಲ್ಲಿ 17 ವರ್ಷಗಳನ್ನು ಜೈಲಿನಲ್ಲೆ ಕಳೆದಿದ್ದ ಇವರು ಬ್ರೀಟಿಶರ ಕಾಲದಲ್ಲಿ 3 ವರ್ಷ ಜೈಲಿನಲ್ಲಿದ್ದರೆ ಸುಮಾರು 14  ವರ್ಷಗಳ ಕಾಲ ಕಾಂಗ್ರೆಸ್ ಅವದಿಯಲ್ಲಿ ಸರ್ಕಾರಿ ವಿರೋದಿ ಎನ್ನುವ ಹಣೆಪಟ್ಟಿ  ಹೊತ್ತು  ಜೈಲಿನಲ್ಲಿದ್ದರು.  ಸುಮಾರು ೮೦ ಸಲ ಅರೆಷ್ಟ್ ಆಗಿದ್ದರು ಅನ್ನುವುದು ಇವರ ದಾಖಲೆ ! 

ಎರಡು ಅವದಿಗೆ ರಾಜ್ಯಸಭೆಗೆ ಸದಸ್ಯರಾಗಿ ಆರಿಸಲ್ಪಟ್ಟಿದ್ದ ಇವರು. ಮೊರಾರ್ಜಿ ದೇಸಾಯಿಯವರ ಸರ್ಕಾರದಲ್ಲಿ ಆರೋಗ್ಯಮಂತ್ರಿಯಾಗೆ ಸೇವೆ ಸಲ್ಲಿಸಿದರು.

1917 ರಲ್ಲಿ ಜನಿಸಿದ ಇವರು , ತಮ್ಮ  69 ನೇ ವಯಸ್ಸಿನಲ್ಲಿ ಡಿಸೆಂಬರ್ 31 , 1986 ರಂದು ದೆಹಲಿಯ ರಾಮ್ ಮೋಹನ್ ಲೋಹಿಯ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನಹೊಂದಿದರು. 

ಆದಾರ : http://en.wikipedia.org/wiki/Raj_Narain

ಚಿತ್ರ : http://upload.wikimedia.org/wikipedia/commons/thumb/7/7c/Lok-bandhu_raj_...

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಒಬ್ಬ ಉತ್ತಮ ಹೋರಾಟಗಾರರೆಂಬುದರಲ್ಲಿ ಸಂಶಯವೇ ಇಲ್ಲ. ರಾಜಕೀಯ ಸ್ಥಿತ್ಯಂತರಕ್ಕೆ ಅವರದು ದೊಡ್ಡ ಕಾಣಿಕೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದಿರಾ ಎಂದರೆ ಇಂಡಿಯಾ- ಇಂದಿರಾ ಸಂಪುಟದಲಿ ಏಕೈಕ ಪುರುಷ ಇಂದಿರಾ ಎಂದೆಲ್ಲ ಅತಿಶಯೋಕ್ತಿಯ ಹೇಳಿಕೆ ನೀಡಿದವ್ರು -- ಸಂಕೋಚಗೊಳ್ಳುವ ಹಾಗೆ ಬಿರುದು ದಯಪಾಲಿಸಿದ ಆಸ್ಥಾನ ವಿದೂಷಕರು -ಭಟ್ಟಂಗಿಗಳು...:((
ಇಂದಿರಾ ಅವರಿಗೆ ಎದುರಿಲ್ಲ ಎಂಬಂತ ಸನ್ನಿವೇಷ್ಡಲ್ಲಿ -ಅವರ ವಿರುದ್ಧ ಕೆಲವರಾದರೂ ಸೆಡ್ಡು ಹೊಡೆದು ನಿಂತು ಸೋತು ಗೆದ್ದದ್ದು ಒಂದು ಐತಿಹಾಸಿಕ ಮಹತ್ವದ ವಿಷ್ಯ..
ಆದರೆ ಬೇಜಾರಿನ ಸಂಗತಿ ಎಂದರೆ ಈಗಲೂ ಪರಿಸ್ಥಿತಿ ದಾರುಣವಾಗಿದೆ ...
ಈಗಲೂ ಒಬ್ಬ ಸಾಮಾನ್ಯ ಪ್ರಜೆ ಚುನಾವಣೆಗೆ ನಿಂತು ಗೆಲ್ಲೋದು ಕಸ್ಟಕರ ...:((
ನಿಲ್ಲುವವರು -ಗೆಲ್ಲೋರು ಶಕ್ತಿವಂತರೆ ... ಅದ್ಕೆ ಅಪ್ವಾದ ಆಗಿದ್ದು ಆಪ್ ಆದರೆ ಅದು ಸಹ ವಿಶ್ವಾಸ ಕಳೆದುಕೊಂತು..:(((
ಮಾಹಿತಿ ಬರಹಕ್ಕೆ ಧನ್ಯವಾದಗಳು ಗುರುಗಳೇ
ಶುಭವಾಗಲಿ
\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.