ರಸ್ತೆಗಿಂತ platform ಚೆಂದ

0

ಅಕ್ಕಪಕ್ಕದ ಬಸ್ಸು ಕಾರು ಮೋಟರ್ ಸೈಕಲ್ಲುಗಳ ಹೊಗೆ ಕುಡಿಯುತ್ತ ಫ್ಲೈ ಓವರ್ ಹತ್ತಿದ ಮೋಟರ್ ಸೈಕಲ್ ಸವಾರನಿಗೆ ಕಂಡದ್ದು ಸ್ನೇಹಿತರೊಬ್ಬರು ನೆನಪಿಸಿದ್ದ 8th wonder. ಸರಿಯಾಗಿ ಫ್ಲೈ ಓವರ್ ಮಧ್ಯದಲ್ಲೊಂದು ಸಿಗ್ನಲ್ - ಎಲ್ಲುಂಟು ಎಲ್ಲಿಲ್ಲ?
ಆಗಲೇ ಸಿಗ್ನಲ್ಲಿಗೆ ಮತ್ತೊಂದು ಹೆಸರಿಡಬೇಕಾಗಿತ್ತು ಅನ್ನಿಸಿದ್ದು - ಹೊಗೆ ಕುಡಿಸುವ ಕೇಂದ್ರ ಎಂಬುದಾಗಿ. ಸಿಗ್ನಲ್ ಬಂದರೆ ಸಾಕು ನಿಂತ ಜಾಗದಿಂದ ಕದಲಲು ಆಗದೆ ಬಲವಂತವಾಗಿ ಹೊಗೆ ಕುಡಿಯಬೇಕು ಎಂದು ಗೊಣಗಿಕೊಂಡ.

ಅಲ್ಲಿಂದ ಮುಂದೆ ಹೋಗುವಾಗ ಅಡ್ಡಾದಿಡ್ಡಿ ಓಡಿಸಿಕೊಂಡು ಹೋಗುತ್ತಿರುವ ಆಟೋದವನಿಗೆ ಶಪಿಸಿದ. ಭರ್ರೋ ಎಂದರೂ ಜಟಕಾಗಾಡಿಯಂತೆ ರೋಡು ತುಂಬ ಆಕ್ರಮಿಸಿ ನಡೆಯುವ ಬಿಎಂಟಿಸಿ ಬಸ್ಸಿಗೆ ಬೈಗುಳಗಳ ಸುರಿಮಳೆಗೈದ. ಬಸ್ಸು ಮಾತ್ರ ತನಗೇನೂ ಕೇಳಿಸದಂತೆ ಮತ್ತೆ ಭರ್ರೋ ಎಂದು ಅಡ್ಡಾದಿಡ್ಡಿ ತೆವಳುತ್ತ ಕಪ್ಪು ಹೊಗೆ ಬುಸುಗುಡುತ್ತ ಯಾರಿಗೂ ಜಾಗ ಕೊಡದೆ ನಡೆಯಿತು. ಮೋಟರ್ ಸೈಕಲ್ ಸವಾರನಿಗೆ ಸುಮ್ಮನಿರಲಾದೀತೆ?

"ರಸ್ತೆಗಿಂತ platform ಚೆಂದ" ಎಂದು ಸೈಡಿನಿಂದಲೇ overtake ಮಾಡಿ ಮುಂದೆ ನಡೆದ.

ಸ್ವಲ್ಪ ದೂರ ಹೋದ ನಂತರ ರಸ್ತೆ ಯಾವುದು ಎಂಬುದೂ ಕಾಣದಾಯಿತು. ಎದುರಿಗೆ ಬಂದ ಕಾರು ಬಸ್ಸುಗಳ ಲೈಟು ಕಣ್ಣು ಕುಟುಕಿದವು. ಹೆಲ್ಮೆಟ್ ವೈಪರ್ ತೆಗೆದು ಕಣ್ಣು ಪಿಳುಕಿಸಿದ. ಕಾಣಿಸಿದ್ದು ರಸ್ತೆಯಾಗಿರಲಿಲ್ಲ. ಗುಂಡಿ ತೋಡಿದ ಬಯಲಿನಂತಿತ್ತು.

"ರಸ್ತೆಗಿಂತ platform ಚೆಂದ" ಎಂದು ಸೈಡಿನಿಂದಲೇ ರೋಡು ಮಾಡಿಕೊಂಡು ಕರ್ನಾಟಕ ಸರಕಾರಕ್ಕೆ "ಜೈ" ಎಂದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹರಿ,
ಈ ವಿಶಿಷ್ಟ ಸಂಗತಿಯ ಬಗ್ಗೆ ಕೇಳಿದ್ದೆ ನೋಡಿಲ್ಲ. ಅದು ಹೇಗೆ ಆಗಿರಬಹುದು, ಅದರ ಹಿಂದಿನ ಮನಸ್ಸು ಎಂತದು ಎಂದು ಯೋಚಿಸುತ್ತಿದ್ದೆ. ಇವೆಲ್ಲಾ ಪ್ರೈವೆಟ್ ಪರಿಣಿತರ ಕೆಲಸವಲ್ಲವೆ?

ಇರಲಿ, ಈ "8th wonder" ಫೋಟೋಗಳೇನಾದರೂ ಇದ್ದರೆ ಹಂಚಿಕೊಳ್ಳುವಿರ?

third person ಬಳಕೆ ಈ ರೀತಿಯ ಬರಹಕ್ಕೆ ಒಗ್ಗುತ್ತದೆ ಅನಿಸಿತು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಿವಾಸಿಗಳೆ,

ಇದು ರಿಚ್ಮಂಡ್ ಮೇಲ್ದಾರಿ. ಸದ್ಯ ಅದನ್ನ ಏರಿ ಇಳಿದು ಬರೋದ್ರೊಳಗೆ ಸಾಕಾಗುತ್ತೆ. ಇನ್ನು ಫೋಟೋ ಬೇರೆ. :)
ನನ್ನ ಗೆಳೆಯ ಅಲ್ಲಿನ ಕಂಬವೊಂದಕ್ಕೆ ಡಿಕ್ಕಿ ಹೊಡೆದು ಸೊಲ್ಪದ್ರಲ್ಲಿ ಉಳ್ಕೊಂಡಿದ್ದ. ಹೆಲ್ಮೆಟ್ ಚೂರಾಗಿತ್ತು.

ಇನ್ನು
first person - ಆಡುಗ
second person - ಕೇಳುಗ
third person - ತೋರುಗ
( ಇವು ನಂದಲ್ಲ, ಶಂಕರಬಟ್ರುದು)
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೩ ವರ್ಷದಿಂದ ದಿನಾ ಈ "8th wonder"ನ ಎರಡೆಡು ಸಲ ದಾಟಿ ಹೋಗ್ತಾ ಇದ್ದೀನಿ. ಮೊದಮೊದಲು ತಲೆ ಕೆಡ್ತಾ ಇತ್ತು, ಅದರಲ್ಲೂ ರಸ್ತೆ ಬಲಗಡೆ ಗಾಡಿ ಓಡಿಸೋದು ಸ್ವಲ್ಪ confusion ಆಗ್ತಾ ಇತ್ತು. ಈಗ ಅಭ್ಯಾಸ ಆಗಿ ಹೋಗಿದೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಸ್ತೆಗಿಂತ ಪ್ಲಾಟ್ ಫಾರಂ ಚೆಂದ
ಎನ್ನುತ್ತಾರೆ ನಾಡಿಗರು
ಮಟ್ಟಸವಾದ ಪ್ಲಾಟ್ ಫಾರಮ್ಮಿಗಿಂತ
ಉಬ್ಬು ತಗ್ಗುಗಳಿರುವ ರಸ್ತೆಯೆ ಚೆಂದ
ಅನ್ತೀನಿ ನಾನು
ನೀವೇನಂತೀರಿ ನೀವು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರಿಯವರ ಅನುಭವ ವಾಣಿಯಲ್ಲಿ ಸತ್ಯವಿದೆ. ಇಲ್ಲಿ ನಮ್ಮ ಮುಂಬೈನಲ್ಲಿ ಫುಟ್ ಪಾತ್ ಅಂದ್ರೆ , " ಕಹಾ ಹೈ " ಅಂತಾರೆ. ಅದು ಎಷ್ಟೋ ಯುವಕರಿಗೂ ಗೊತ್ತಿಲ್ಲ. ಕಾಂಪೌಡ್ ಇರೊ ಮನೆನೂ ಕಡಿಮೆನೆ. ಎಲ್ಲೋ ತೀರ ಹಳೆ ಮುಂಬೈ, ಮತ್ತೆ, ಹೊಸ ಮುಂಬೈ ನಲ್ಲಿ ಈಗಲೂ ನೋಡಬಹುದು. ಆದರೆ ಕಲ್ಬಾದೇವಿ, ಪ್ರಿನ್ಸೆಸ್ ಸ್ಟ್ರೀಟ್ ಮತ್ತೆ, ಝವೇರಿ ಬಝಾರ್ ,ಲೋಯರ್ ಪರೇಲ್, ಚಿಂಚ್ ಪೊಕ್ಲಿ, ಇಲ್ಲೆಲ್ಲಾ ಫುಟ್ ಪಾತ್ ಎಲ್ಲಿದೆ ರೋಡ್ ಇದೆಯ ಎರಡು ಗೊತ್ತಾಗಲ್ಲ. ಎಲ್ಲ್ ನೋಡಿದ್ರು ಗಿಜಿ-ಗಿಜಿ, ಜನ- ಜನ- ಜನಗಳೇ ; ಇರುವೆ ತರಹ ಕಾಣಿಸ್ತಾರೆ.

ಅದಕ್ಕೆ ಝವೇರಿ ಬಝಾರ್ ನಲ್ಲಿ ಈಗ, ಒಂದು ೧೩ (?) ಅಂತಸಿನ ಇಮಾರತ್ ಕಟ್ಟಿ, ಅದನ್ನು ಪೂರ್ತಿಯಾಗಿ ಕಾರ್ ಪಾರ್ಕಿಂಗಿಗೆ ಉಪಯೋಗಿಸುವ ಯೋಜನೆ ಅಲ್ಲಿನ ಮಹಾಕೋಟಾಧೀಶರಿಗೆ. ಅದನ್ನು ಬಿ. ಎಮ್. ಸಿ. ಒಪ್ಪಲೂ ಬಹುದು.

-ಪೇಪರ್ ಸುದ್ದಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ಲಾಟ್ ಫಾರಂ !

ಬಹುಶಃ ರೈಲ್ವೆ ಸ್ಟೇಷನ್ ಒಂದ್ರಲ್ ಕಾಣಿಸ್ಭಹುದೇನೋ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ಲಾಟ್ ಫಾರಂ !

ಬೆಂಗಳೂರಲ್ಲಿ ಇದಕ್ಕೇನು ಕೊರತೆ ಇಲ್ಲ. ಎಲ್ಲ software engineers ಇದರ ಮೇಲೆನೇ ಕೆಲ್ಸ ಮಾಡೋದು ;-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.