ಮಂಗಳೂರು ಪಬ್ ದಾಳಿ ಮತ್ತು ಮಾಧ್ಯಮ

0

ಮಂಗಳೂರಿನ ಪಬ್ ಮೇಲೆ ದಾಳಿ, ಯುವತಿಯರ ಮೇಲೆ ಥಳಿತ ಎಲ್ಲ ಖಂಡನೀಯ. ಆದರೆ ಮಾಧ್ಯಮಗಳು ಅದಕ್ಕೆ ಕೊಟ್ಟ ಪ್ರಾಮುಖ್ಯತೆ ಮಾತ್ರ ಅತಿಯಾಯಿತೆಂದು ಅನ್ನಿಸುವುದಿಲ್ಲವೇ?
- ಈ ಹಿಂದೆ ರಕ್ಷಾಣಾ ವೇದಿಕೆಯವರು ನಡೆಸಿದ ಇದೇ ರೀತಿಯ ದಾಳಿಗಳನ್ನು ಟಿವಿ೯ ಪ್ರಸಾರ ಮಾಡಿರುವುದನ್ನು ನಾನು ನೋಡಿದ್ದೇನೆ. ಅದು ಟಿವಿ೯ ಬಿಟ್ಟು ಇನ್ನೆಲ್ಲೂ ಪ್ರಸಾರವಾದಂತಿಲ್ಲ. ಎನ್ ಡಿ ಟಿ ವಿ, ಸಿ ಎನ್ ಎನ್ ಐಬಿಎನ್ ಗಳು ಅದನ್ನು ತಾಲಿಬಾನೀಕರಣವೆಂದು ಪರಿಗಣಿಸಿಲ್ಲ, (ಯಾಕೆಂದರೆ ಅವರ ಕ್ಯಾಮರಾ ಮೆನ್ ಅಲ್ಲಿರಲಿಲ್ಲ?) http://thatskannada.oneindia.in/news/2007/05/07/pub_culture_protest.html
http://kannada.webdunia.com/newsworld/news/regional/0811/01/1081101017_1...
- ಅಷ್ಟೊಂದು ವೀಡಿಯೋ ತೆಗೆದ ಮಾಧ್ಯಮದವರ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಪ್ರಸ್ನಿಸಿದ್ದಕ್ಕೆ ಸಿಕ್ಕಾಪಟ್ಟೆ ಉಗೀತಿದ್ರು ಅವರು.
- ತಡೆಯಲು ಸಾದ್ಯವಾಗದಿದ್ದರೆ ಇರಲಿ, ಕಡೇ ಪಕ್ಷ ಪೋಲಿಸಿಗೆ ತಿಳಿಸುವುದು ಮಾಧ್ಯಮದ ಕರ್ತವ್ಯವಲ್ಲವೇ?
- ರಾಮಸೇನೆ ಸಂಘಪರಿವಾರದ್ದೇ ಎಂಬ ಥರ ಎಲ್ಲಾ ಮಾಧ್ಯಮದವರೂ ಬಿಂಬಿಸುತ್ತಿದ್ದಾರೆ. ಭಜರಂಗದಳದ ’ಮೃದುತ್ವ!’ವನ್ನು ವಿರೋಧಿಸಿ ಮುತಾಲಿಕ್ ಹೊಸ ಪಕ್ಷ, ಸಂಘಟನೆ ಕಟ್ಟಿರುವುದು ಮಾಧಮದವರಿಗೆ ತಿಳಿಯುವಷ್ಟು ಅವರ ನೆಟ್-ವರ್ಕ್ ಇಲ್ಲವೇ?
- ಸರಕಾರ ಘಟನೆಗೆ ಕಾರಣವಾದವರನ್ನು ಬಂಧಿಸಲು ತಿಳಿಸಿದೆ, ಪೋಲಿಸರೂ ಸಾಕಷ್ಟು ಜನರನ್ನು ಬಂಧಿಸಿದ್ದಾರೆ. ಸರಕಾರ ಇನ್ನೇನು ಮಾಡಬೇಕಿತ್ತು? ಕುಮಾರ ಮುಖ್ಯಮಂತ್ರಿಯಾಗಿದ್ದರೆ ಈಗ ರಾಜೀನಾಮೆ ಕೊಡುತ್ತಿದ್ದರೇ?
- ಕುಡಿದು ವಾಹನ ಚಲಾಯಿಸಿ ನಾಲ್ಕು ಜನರನ್ನು ಕೊಂದ ಘಟನೆ ಎಷ್ಟು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ರಮ್ಯ

ರಾಮಸೇನೆಯವರು ಮಾಡಿದ ಕೃತ್ಯ ಖಂಡನೀಯ.ಆದರೆ ನಮ್ಮ ಮಾಧ್ಯಮಗಳು ಅರ್ಧ ನಿದ್ದೆಯಲ್ಲಿ ಎದ್ದವರಂತೆ ಬಡ ಬಡಿಸುತ್ತಿರುವುದು ತಮ್ಮ TRP ಹೆಚ್ಚಿಸಿಕೊಳ್ಳುವುದಕ್ಕೊಸ್ಕರ ಮಾತ್ರ, ಈ ಕೆಟ್ಟ ಸುದ್ದಿಯ ಅತಿಯಾದ ವೈಭವಿಕರಣದಿಂದ ಸಮಾಜದ ಸ್ವಾಸ್ಥ್ಯ ಹಾಳಗುವುದೆಂಬ ಹಾಗು ರಾಷ್ಟ್ರಕ್ಕೆ ಅಪಕೀರ್ತಿ ಬರುತ್ತದೆಯೆಂಬ ಕಳಕಳಿ ಕಾಣಿಸುತ್ತಿಲ್ಲ. ಎಲ್ಲ ಪಕ್ಷಗಳು ಈ ಕೃತ್ಯವನ್ನು ರಾಜಕೀಯ ದಾಳವನ್ನಾಗಿ ಪರಿವರ್ತಿಸಿಕೊಳ್ಳುತಿದ್ದಾರೆ ಅಷ್ಟೆ. ಕುಮ್ಮಿ,ರೇಣುಕ,ಖರ್ಗೆ ಸುಮ್ಮನೆ ಬೊಬ್ಬೆ ಹಾಕುವುದು ಬಿಟ್ಟು ಸರ್ಕಾರದ ಜೊತೆ ನಿಂತು ಕಾನೂನು ಉಲ್ಲಂಘಿಸಿದವರಿಗೆ ಶಿಕ್ಷೆ ಕೊಡಿಸಬಹುದಲ್ಲವೇ?

ರಾಕೇಶ್ ಶೆಟ್ಟಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ. ಇದು ಮಾಧ್ಯಮಗಳ ಸುದ್ಧಿ ಹಾದರ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು..... ನನಗೂ ಹಾಗೇ ಅನ್ನಿಸ್ತು..... :( ಯಾವುದೇ ವಿಷಯವನ್ನು ವೈಭವಿಕರಿಸುವುದೇ ಇತ್ತೀಚಿನ ಮಾಧ್ಯಮದ ಗುರಿಯಾಗಿಬಿಟ್ಟಿದೆ.....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

TRPಗಾಗಿಯೇ ರೆಪ್ಪೆ ತೆರೆದಿರುತ್ತದೆ ಮಾಧ್ಯಮಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುತಾಲಿಕ್ ಸಾಹೇಬ್ರಿಗೆ ಇದು ಬಹಳ ಅವಶ್ಯ ಇತ್ತು ಈ ndtv, cnnibn, aajtak ದಲ್ಲಿ ಅವರ
ಛಾಪು ಈಗೀಗ ಬಹಳ ಅದ. ೨೬/೧೧ ಆಗಿಂದ ಮೀಡಿಯಾ ಮತ್ತ ಭೂರಿ ಭೋಜನ ಸಿಕ್ಕೇದ ಹೊಟ್ಟಿ ತುಂಬುವ ತನಾ ಉಣ್ಣಲಿ ಬಿಡ್ರಿ.....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote]- ಕುಡಿದು ವಾಹನ ಚಲಾಯಿಸಿ ನಾಲ್ಕು ಜನರನ್ನು ಕೊಂದ ಘಟನೆ ಎಷ್ಟು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ?[/quote]
ಮುಖ್ಯ ವಿಷಯ ಗಮನಿಸಿದ್ದೀರಿ ! ಆರೋಪಿ ಶ್ರೀಮಂತ ..... ಪ್ರಚಾರ ಕಡಿಮೆ !!!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಕುಡಿದು ವಾಹನ ಚಲಾಯಿಸಿ ನಾಲ್ಕು ಜನರನ್ನು ಕೊಂದ ಘಟನೆ ಎಷ್ಟು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ?
ಮಂಗಳೂರು ಘಟನೆಗೆ ಪ್ರಚಾರ ಅತಿಯಾಯ್ತು ಒಪ್ಪೋಣ.
ಆದರೆ ಅಪಘಾತ ಘಟನೆಗೂ, ಮಂಗಳೂರು ಘಟನೆಗೂ ಹೇಗೆ ಹೋಲಿಕೆಯಿದೆಯೋ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೋಲಿಕೆ ಏನೆಂದರೆ ಎರಡೂ ಅತ್ಯಾಚಾರಗಳೇ. ನಮ್ಮಲ್ಲಿ ವಾರ್ಷಿಕವಾಗಿ ಸುಮಾರು ೮೦೦೦೦ ಸಾವುಗಳಾಗುತ್ತಿವೆ ಅಪಘಾತಗಳಲ್ಲಿ. ಇವುಗಳಲ್ಲಿ ಹೆಚ್ಚಿನವು ಚಾಲಕನ ಅಜಾಗರೂಕತೆಯವು. ಈ ಎರಡು ಅತ್ಯಾಚಾರಕ್ಕೆ ಮಾಧ್ಯಮದವರದು ವ್ಯತಿರಿಕ್ತ ಧೋರಣೆ ಎನ್ನುವುದು ವಿಷಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ,,
ಮಾಧ್ಯಮಗಳು ಸೆಲೆಕ್ಟೀವ್ ಆಗಿದ್ದಾರೆ.. ಇಲ್ಲಿ ಒಂದು ಕೊಂಡಿ ಕೊಟ್ಟಿದ್ದೇನೆ ನೋಡಿ..
http://www.haindavakeralam.com/HKPage.aspx?PageID=8105&SKIN=B

ಇ ರೀತಿ ಘಟನೆಗಳು ಎಲ್ಲೂ ಬರುವುದೆ ಇಲ್ಲ.. ಇ ಮಾಧ್ಯಮಗಳಿಗೆ ತಮ್ಮ ಪ್ರಸಾರ ಹೆಚ್ಚಿಸಿಕೊಳ್ಳುವುದೊಂದೇ ಗುರಿ.. ಸೈನಿಕರ ಕಾರ್ಯಾಚರಣೆಯನ್ನೂ ನೇರವಾಗಿ ಪ್ರಸಾರ ಮಾಡಲು ಹೇಸದ ಇವರು. ಮಂಗಳೂರಿನ ಘಟನೆಯನ್ನು ಈ ರೀತಿ ಪ್ರಚಾರ ನೀಡುತ್ತಿರುವುದು ಅತಿಶಯೋಕ್ತಿ ಅಲ್ಲ..

ಮಂಗಳೂರಿನಲ್ಲಿ ನಡೆದಿದ್ದು ಅನ್ಯಾಯ ನಿಜ.. ಎಲ್ಲರೂ ಅದನ್ನು ಖಂಡಿಸಬೇಕು.. ಆದರೆ ಅದನ್ನೇ ಈ ರೀತಿ ಮನಸ್ಸಿಗೆ ಬಂದಂತೆ ಪ್ರಚಾರ ನೀಡುತ್ತಿರುವುದು ಹೇಯಕರ..
ನಮ್ಮ ರಾಜಕೀಯ ಪಕ್ಷಗಳು ಕಮ್ಮಿ ಇಲ್ಲ.. ಘಟನೆಯಿಂದ ಎಷ್ಟು ಸಾಧ್ಯವೋ ಅಷ್ಟು ಬೇಳೆ ಬೇಯಿಸಿಕೊಳ್ಳಲು ನೋಡುತ್ತಾ ಇದ್ದಾರೆ,

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.