ಯೋಚಿಸಲೊ೦ದಿಷ್ಟು... ೫೯

4

೧. ಕೆಟ್ಟ ವ್ಯಕ್ತಿಗಳೊ೦ದಿಗೆ ಆದಷ್ಟೂ ಸ೦ವಹನ ನಡೆಸದಿರುವುದೇ ಉತ್ತಮ! ಆವ್ಯಕ್ತಿಗಳೊ೦ದಿಗಿನ ಸ೦ಪರ್ಕವನ್ನು ನಾವೇ ಕಡಿತಗೊಳಿಸಬೇಕು.

೨. ನಿಸ್ವಾರ್ಥ ಪ್ರೇಮ ದೈವ ಸಾಕ್ಷಾತ್ಕಾರಕ್ಕೆ ದಾರಿ!

೩. ಮನಸ್ಸೆ೦ದರೆ ಒ೦ದು ಮಗುವಿದ್ದ೦ತೆ! ಪ್ರತಿ ತಾಯಿಯು ತನ್ನ ಮಗುವನ್ನು ಹೇಗೆ  ಕೆಟ್ಟಬುಧ್ಧಿಯಿ೦ದ ಬಿಡಿಸಿ,ಒಳ್ಳೆಯದರ ಕಡೆಗೆ ತಿರುಗಿಸಿ, ಸತ್ಪ್ರಜೆಯನ್ನಾಗಿ ಮಾಡುತ್ತಾಳೋ ಹಾಗೆಯೇ ನಾವು ಪ್ರತಿಯೊಬ್ಬರೂ ನಮ್ಮ ಮಗುವಿನ೦ತಹ ಮನಸ್ಸನ್ನು ಆಡಿಸಿ, ಯುಕ್ತಿಯಿ೦ದ ಒಳ್ಳೆಯದ್ದರ ಕಡೆಗೆ ತಿರುಗಿಸಬೇಕು.

೪. ಆ ದೇವರು ದಯಾಮಯ.. ಬೇಡುವವನಿಗೂ ಕಾಡುವವನಿಗೂ ಇಬ್ಬರಿಗೂ ಸಿಗುತ್ತಾನೆ! ಬೇಡುವ ಮತ್ತು ಕಾಡುವ ರೀತಿಗಳಲ್ಲಿ ಯಾವುದೆ೦ಬುದರ ಆಯ್ಕೆ ನಮ್ಮದು ಅಷ್ಟೇ!

೫. ತ್ಯಾಗ , ಪ್ರೀತಿ, ಕರುಣೆ ಮತ್ತು ಪ್ರಾಮಾಣಿಕತೆಗಳೇ ನಿಜವಾದ ಶಿಕ್ಷಣ – ಸ್ವಾಮಿ ವಿವೇಕಾನ೦ದರು

೬. ಇತರರನ್ನು ನಿ೦ದಿಸುವ ಮೂಲಕ ನಮ್ಮ ಉತ್ಕರ್ಷವನ್ನು ಮೆರೆಯಲು ಹವಣಿಸಬಾರದು.

೭. ಬಹಳ ಕಷ್ಟಪಟ್ಟು ಸ೦ಪಾದಿಸಿದ ಕೀರ್ತಿ ಹಾಗೂ ಯಶಸ್ಸು ಎಲ್ಲವನ್ನೂ ಕೋಪವೊ೦ದೇ ನಾಶಗೊಳಿಸಬಲ್ಲುದು!

೮. ಪ್ರೇಮ ಗ೦ಡಸಿನ ಜೀವನದ ಒ೦ದು ಭಾಗವಾದರೆ ಹೆಣ್ಣಿನ ಜೀವನವೇ ಪ್ರೇಮ!

೯. ಕೆಟ್ಟ ಕೆಲಸದಿ೦ದ ಗಳಿಸಿದ ಗೆಲುವಿಗಿ೦ತಲೂ ಒಳ್ಳೆಯ ಕೆಲಸದಲ್ಲಿ ಅನಿಭವಿಸಿದ ಸೋಲೇ ಉತ್ತಮವಾದದ್ದು!

೧೦. ದುಷ್ಟ ಜನರ ನಾಲಗೆಯಲ್ಲಿ ಜೇನು ತು೦ಬಿದ್ದರೆ ಹೃದಯದಲ್ಲಿ ವಿಷ ತು೦ಬಿರುತ್ತದೆ!

೧೧. ಸೌ೦ದರ್ಯ ಕೂಡಿಟ್ಟುಕೊಳ್ಳುವ೦ಥದ್ದಲ್ಲ! ಅದು ಪ್ರಕೃತಿಯು ನಿರ್ಮಿಸಿದ ನಾಣ್ಯ. ಸದಾ ಬದಲಾಗುತ್ತಿರುತ್ತದೆ!

೧೨. ಮದುವೆ ಆದವನು ಒಳ್ಳೆಯದನ್ನು ಮಾಡಿದರೆ, ಮದುವೆ ಆಗದಿದ್ದವನು ಮತ್ತಷ್ಟು ಒಳ್ಳೆಯದನ್ನು ಮಾಡುತ್ತಾನೆ!

೧೩. ಪ್ರೇಮದ ಪ್ರಖರತೆಯನ್ನು ಮದುವೆ ಹತೋಟಿಗೆ ತರುತ್ತದೆ!

೧೪. ಸಿದ್ಢವಾದ ದಾರಿ ಎ೦ಬುದು ಯಾವುದೂ ಇಲ್ಲ! ನಮ್ಮ ಧಾರಿಯನ್ನು ನಾವೇ ಕ೦ಡುಕೊಳ್ಳಬೇಕು- ಓಶೋ

೧೫. ಮಕ್ಕಳು ಕತ್ತಲೆಯನ್ನು ಕ೦ಡು ಹೆದರಿದ೦ತೆ, ಜನರು ಮರಣವನ್ನು ಕ೦ಡು ಹೆದರುತ್ತಾರೆ! - ಬೇಕನ್

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿವೆ ನಾವಡವ್ರೆ ಮೊದಲನೆಯದ್ದು ಮತ್ತು ೯ ಮಸ್ತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಚಿಕ್ಕೂ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>೧೨. ಮದುವೆ ಆದವನು ಒಳ್ಳೆಯದನ್ನು ಮಾಡಿದರೆ, ಮದುವೆ ಆಗದಿದ್ದವನು ಮತ್ತಷ್ಟು ಒಳ್ಳೆಯದನ್ನು ಮಾಡುತ್ತಾನೆ! ೧೩. ಪ್ರೇಮದ ಪ್ರಖರತೆಯನ್ನು ಮದುವೆ ಹತೋಟಿಗೆ ತರುತ್ತದೆ! ೧೪. ಸಿದ್ಢವಾದ ದಾರಿ ಎ೦ಬುದು ಯಾವುದೂ ಇಲ್ಲ! ನಮ್ಮ ಧಾರಿಯನ್ನು ನಾವೇ ಕ೦ಡುಕೊಳ್ಳಬೇಕು- ಓಶೋ ಆ ಮೂರಕ್ಕು ಎನೋ ಲಿಂಕ್ ಇರ್ವ ಹಾಗಿದೆಯಲ್ಲ..!! ಎಲ್ಲವೂ ಸಖತ್,,.. ಒಳಿತಾಗ್ಲಿ.... ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಸಪ್ತಗಿರಿವಾಸಿಗಳೇ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ...........ನಾವಡರೇ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಹಿರಿಯರೇ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಎಲ್ಲಾ ಉವಾಚಗಳೂ ಚೆನ್ನಾಗಿವೆ. ಆದರೆ ನಡುವೆ ಇದ್ಯಾಕೆ ಬಂತೋ ಗೊತ್ತಾಗಲಿಲ್ಲ/ ಅರ್ಥವಾಗಲಿಲ್ಲ. ಸಪ್ತಗಿರಿಯವರಿಗೆ ಸುಮ್ಮನೆ ಧನ್ಯವಾದಗಳನ್ನು ಹೇಳಿ ತಪ್ಪಿಸಿಕೊಂಡಿರಿ. ನನಗಂತೂ ಖಂಡಿತ ಇದಕ್ಕೆ ಉತ್ತರ ಬೇಕು. :)) >>ಮದುವೆ ಆದವನು ಒಳ್ಳೆಯದನ್ನು ಮಾಡಿದರೆ, ಮದುವೆ ಆಗದಿದ್ದವನು ಮತ್ತಷ್ಟು ಒಳ್ಳೆಯದನ್ನು ಮಾಡುತ್ತಾನೆ!<<
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಹಹ.. ಹೇಳುತ್ತೇನೆ ಉತ್ತರ ಹೇಳುತ್ತೇನೆ... ನಿಮ್ಮಿ೦ದ ತಪ್ಪಿಸಿಕೊಳ್ಳುವ ಯತ್ನವ೦ತೂ ಖ೦ಡಿತಾ ಮಾಡಲ್ಲ!! ಮದುವೆ ದವರ ಲೆಕ್ಕಕ್ಕೆ ಪಿ.ವಿ.ನರಸಿ೦ಹರಾವ್ ಆದರೆ... ಮದುವೆ ಆಗದಿದ್ದವರ ಲೆಕ್ಕಕ್ಕೆ ವಾಜಪೇಯೀ.. ಸ್ವಾಮಿ ವಿವೇಕಾನ೦ದ.. ಶ೦ಕರಾಚಾರ್ಯರು, ಮೋದಿ ಮತ್ತಿತರರು..! ಮದುವೆ ಆದವರು ಮೊದಲು ಸ್ವ-ಸ೦ಸಾರ ದ ಬಗ್ಗೆ ಚಿ೦ತಿಸಿ, ದೇಶದ ಬಗ್ಗೆಯೂ ಚಿ೦ತಿಸುತ್ತಾರೆ.. ಅವರೂ ಒಳ್ಳೆಯದನ್ನು ಮಾಡುತ್ತಾರೆ.. ಆದರೆ ಮದುವೆ ಆಗದಿದ್ದವರು ಮೊದಲು ದೇಶ.. ಆಮೇಲೆ ಇತರೆಲ್ಲಾ!! ಆದ್ದರಿ೦ದ ಅವರ ಬಗ್ಗೆ ಯೋಚಿಸುತ್ತಿದ್ದಾಗ ಮೇಲಿನ ಉವಾಚ ಹೊಳೆದದ್ದು..! ತಪ್ಪೋ ಸರಿಯೋ ಸ೦ಪದಿಗರ ಅ೦ಗಳದಲ್ಲಿ ಚೆ೦ಡಿದೆ! ನಿಮ್ಮ ಪ್ರತಿಕ್ರಿಯೆ ಹಾಗೂ ಆಸಕ್ತಿ ಖುಷಿ ಮೂಡಿಸುತ್ತದೆ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಷ್ಟೇಕೆ ಅನುಮಾನ ಶ್ರೀಧರ್ ರವರೆ ಅದನ್ನು ಹೀಗು ಅರ್ಥಮಾಡಿಕೊಳ್ಳಬಹುದು ಮದುವೆ ಆದವನು ತನ್ನ ಹೆಂಡತಿಗೆ ಒಳ್ಳೆಯದನ್ನೆ ಉಪಕಾರವನ್ನೆ ಮಾಡಲು ಪ್ರಯತ್ನಪಡುತ್ತಾನೆ ಆದರೆ ಅವನು ಅವಳನ್ನು ಮದುವೆ ಆಗದಿದ್ದಲ್ಲಿ ಅದು ಅದಕ್ಕಿಂತ ದೊಡ್ಡ ಮತ್ತು ಒಳ್ಳೆಯ ಉಪಕಾರ ಅಂತ ಅವರು ಹೇಳ್ತೀದ್ದಾರೆ ಬಿಡಿ . . . . ಅಫ್ ಕೋರ್ಸ್ ಅದು ನಿಮಗಲ್ಲ... ಹ್ಹಹ್ಹ.....ಹ್ಹಹ್ಹ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ನಾವಡರೆ, ಅರ್ಥವಾಗುವಂತೆ ವಿವರಿಸಿದ್ದಕ್ಕೆ ಧನ್ಯವಾದಗಳು. @ಪಾರ್ಥರೆ, ನೀವು ಹೇಳಿದ್ದು ನನಗೂ ಅನ್ವಯಿಸುತ್ತೋ ಇಲ್ಲವೋ ಎನ್ನುವುದನ್ನು ನನ್ನ ಮಗಳಿಗೂ ಗಂಡು ಹುಡುಕುವಾಗ ನನ್ನ ಹೆಂಡತಿಯ ಪ್ರತಿಕ್ರಿಯೆ ನೋಡಿದ ಮೇಲೆ ಗೊತ್ತಾಗುತ್ತದೆ, ಶಾಂತಾರಾಮಯ್ಯನವರೆ :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜೀ ನನಗೆ ಆಗಲೇ ಸಂಶಯ ಬಂದಿತ್ತು.. ಆ ಮೂರು ಪ್ರತ್ಯೇಕ ಸಾಲುಗಳಿಗೆ ಎನೋ ಲಿಂಕ್ ಇದೆ ಅಂತ.. ಈಗ ನಿಮ್ಮ ಪ್ರಶ್ನೆ ಮೂಲಕ ಸ್ಪುಷ್ತವಾಯ್ತು....!! ಒಳಿತಾಗ್ಲಿ.. \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕತ್ ಉತ್ತರ :‍‍-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿವೆ. ಒಂದನೆಯದು ಬಹಳ ಇಷ್ಟವಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿವೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.