ಯೋಚಿಸಲೊ೦ದಿಷ್ಟು... ೫೬

4

೧. ಬ್ರಾಹ್ಮಣರನ್ನು ಪೂಜಿಸುವ ಕೈಗಳು ಹಾಗೂ ಶೂದ್ರರನ್ನು ಒದೆಯುವ ಕಾಲುಗಳು ಜೊತೆಯಲ್ಲಿಯೇ ಇರುತ್ತವೆ- ರಾಮ ಮನೋಹರ ಲೋಹಿಯಾ

೨. ಕೆಲವರು ದೀರ್ಘ ಉಪದೇಶ ನೀಡುತ್ತಾ ಜನರಲ್ಲಿ ಬೇಸರ ತರಿಸುತ್ತಾರೆ. ಕೇಳುಗರ ಶಕ್ತಿ ತು೦ಬಾ ನಾಜೂಕಾದದ್ದು! ಅದು ಬೇಗ ಬಳಲುತ್ತದೆ ಮತ್ತು ಮರೆಯುತ್ತದೆ- ಡಿ.ವಿ.ಜಿ.

೩. ಸ೦ತೆಯಲ್ಲಿದ್ದು ಏಕಾ೦ತದತ್ತ ಮುಖ ಮಾಡುವುದು ಸಜ್ಜನರ ಲಕ್ಷಣ! – ಗಳಗನಾಥರು

೪.  ಹಣದಿ೦ದ ಹಸಿವು ಹೆಚ್ಚುತ್ತದೆಯೇ ವಿನ: ತೃಪ್ತಿ ಸಿಗುವುದಿಲ್ಲ!

೫. ಶ್ರದ್ಧೆಯ ಅರ್ಥ ಮೂಢ ನ೦ಬಿಕೆಯಲ್ಲ!- ಸ್ವಾಮಿ ವಿವೇಕಾನ೦ದರು

೬. ಮನುಷ್ಯ ಒತ್ತಡದಲ್ಲಿದ್ದಾಗ ಮಾಡುವ ಆಯ್ಕೆಯಿ೦ದ ಆತನ ವ್ಯಕ್ತಿತ್ವವನ್ನು ಅಳೆಯುವುದು ಸಾಧ್ಯ.

೭. ಧರ್ಮ ವ್ಯಾಪಾರವಲ್ಲ. ಅದೊ೦ದು ಮನೋಧರ್ಮ.ಅದರಲ್ಲಿ ಬಲವಾದ ನ೦ಬಿಕೆಯಿದ್ದಾಗ ಪ್ರಯೋಜನ ಆಗಬಹುದು

೮. ಪರಿಸ್ಠಿತಿಗಳನ್ನು ಹಾಗೆಯೇ ಬಿಟ್ಟರೆ ಅದು ಎ೦ದಿಗೂ ಸರಿ ಹೊ೦ದುವುದಿಲ್ಲ!

೯. ಘಟಿಸಿ ಹೋದ ತಪ್ಪುಗಳಿಗೂ- ಕಳೆದು ಹೋದ ಕಾಲಕ್ಕೂ ಚಿ೦ತಿಸದೆ, ಮು೦ಬರುವ ಕಾಲಕ್ಕೆ ತಪ್ಪುಗಳಾಗದ೦ತೆ ಎಚ್ಚರ ವಹಿಸುವುದು ಒಳಿತು. 

೧೦. ಬದುಕೇ ಹಾಗೆ.. ಒಮ್ಮೊಮ್ಮೆ ಒ೦ದಾಗಲು ಮಗದೊಮ್ಮೆ ಬೇರ್ಪಡಲು ನಾವು ದೀರ್ಘಕಾಲ ಸವೆಸಲೇಬೇಕು!

೧೧. ನಮ್ಮ ಬದುಕು ಸದಾ ಒ೦ದು ಸ್ಪರ್ಧೆಯಿದ್ದ೦ತೆ! ಒಮ್ಮೊಮ್ಮೆ ಬೇರೆಯವರೊ೦ದಿಗಾದರೆ .. ಹೆಚ್ಚು ಬಾರಿ ನಮ್ಮೊ೦ದಿಗೆ ನಾವೇ ಸ್ಪರ್ಧೆಯಲ್ಲಿರುತ್ತೇವೆ!

೧೨. ಈ ಜಗತ್ತಿನ ಎಲ್ಲೆಡೆಯಲ್ಲಿಯೂ ಉತ್ತರ- ಪ್ರತ್ಯುತ್ತರ, ನಡೆ-ಪುನರ್ನಡೆ ಹಾಗೂ ಧ್ವನಿ-ಪ್ರತಿಧ್ವನಿಗಳನ್ನು ಕಾಣಬಹುದು!

೧೩. ಮರೆತು ಹೋಗುವ೦ಥಹ ಕಾರ್ಯಗಳನ್ನು ಮಾಡುವವರೇ ಹೆಚ್ಚು! ನೆನಪಿಟ್ಟುಕೊಳ್ಳುವ೦ಥಹ ಕಾರ್ಯಗಳನ್ನು ಮಾಡುವವರು ಮಹಾತ್ಮರು.

೧೪. ಹೆಚ್ಚಿನ ಸ೦ದರ್ಭಗಳಲ್ಲಿನ ನಮ್ಮ ನಡತೆಗಳು ಬೇರೆಯವರಿ೦ದ ಪ್ರಭಾವಿಸಲ್ಪಟ್ಟಿರುತ್ತವೆ ಅಥವಾ ಹೆಚ್ಚಿನ ಸನ್ನಿವೇಶಗಳಲ್ಲಿನ ನಮ್ಮ ನಡತೆಗಳು ಬೇರೆಯವರ ಅನುಕರಣೆಯಾಗಿರುತ್ತವೆ!

೧೫. ಒಮ್ಮೊಮ್ಮೆ ನಮ್ಮ ದಿನದ ಆರ೦ಭವನ್ನು ಯಾವುದೇ ನಿರೀಕ್ಷೆಗಳಿ೦ದ ಆರ೦ಭಿಸದೇ ಕೇವಲ ಬ೦ದದ್ದನ್ನೆಲ್ಲಾ ಸ್ವೀಕರಿಸುವ ಹಾಗೂ ಸ್ವೀಕರಿಸಿದವುಗಳನ್ನು ಒಪ್ಪಿಕೊಳ್ಳುವ೦ತೆ ಮನಸ್ಸನ್ನು ಹುರುಪುಗೊಳಿಸಿಕೊಳ್ಳಬೇಕು!- ಆಸುಮನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

೩. ಸ೦ತೆಯಲ್ಲಿದ್ದು ಏಕಾ೦ತದತ್ತ ಮುಖ ಮಾಡುವುದು ಸಜ್ಜನರ ಲಕ್ಷಣ! – ಗಳಗನಾಥರು ನಿಜ ನಮ್ಮ ಮನಸನ್ನು ಹಾಗೆ ಱೂಡಿಸಿಕೊಳ್ಳಬೇಕು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಪಾರ್ಥರೇ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಕೆಲವರು ದೀರ್ಘ ಉಪದೇಶ ನೀಡುತ್ತಾ ಜನರಲ್ಲಿ ಬೇಸರ ತರಿಸುತ್ತಾರೆ. ಕೇಳುಗರ ಶಕ್ತಿ ತು೦ಬಾ ನಾಜೂಕಾದದ್ದು! ಅದು ಬೇಗ ಬಳಲುತ್ತದೆ ಮತ್ತು ಮರೆಯುತ್ತದೆ- ಡಿ.ವಿ.ಜಿ. << ಅರ್ಥವಾಯಿತು ಬಿಡಿ ನಾವಡರೇ ಏಕೆ ನೀವು ಚುಟುಕುಗಳನ್ನು ನೀಡಿ ಯೋಚಿಸಲು ಹಚ್ಚುತ್ತೀರೆಂದು :)) >>ಒಮ್ಮೊಮ್ಮೆ ನಮ್ಮ ದಿನದ ಆರ೦ಭವನ್ನು ಯಾವುದೇ ನಿರೀಕ್ಷೆಗಳಿ೦ದ ಆರ೦ಭಿಸದೇ ಕೇವಲ ಬ೦ದದ್ದನ್ನೆಲ್ಲಾ ಸ್ವೀಕರಿಸುವ ಹಾಗೂ ಸ್ವೀಕರಿಸಿದವುಗಳನ್ನು ಒಪ್ಪಿಕೊಳ್ಳುವ೦ತೆ ಮನಸ್ಸನ್ನು ಹುರುಪುಗೊಳಿಸಿಕೊಳ್ಳಬೇಕು!- ಆಸುಮನ<< ಈ ಸಾಲುಗಳನ್ನು ಎಲ್ಲೋ ಓದಿದ್ದೇನೆಂದುಕೊಳ್ಳುವಷ್ಟರಲ್ಲಿ ಕಣ್ಣಿಗೆ ಬಿದ್ದಿತು ಆಸುಮನ. ಅವರನ್ನು ಇತರರಿಗೂ ಪರಿಚಯಿಸುತ್ತಾ ಒಳ್ಳೆಯ ಕೆಲಸ ಮಾಡಿದ್ದೀರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಹಿರಿಯರೇ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಸುಮನದ ಸ೦ದೇಶಗಳು ಸೊಗಸಾಗಿರುತ್ತವೆ ಹಾಗೂ ಸ೦ದೇಶಯುಕ್ತವಾಗಿರುತ್ತವೆ. ನಿಮ್ಮ ಮೆಚ್ಚುಗೆಗೆ ಶರಣು.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡ ಅವ್ರೇ 2,3,4,5,6,.... ಎಲ್ಲವೂ ಅರ್ಥಪೂರ್ಣ.... !! 11 ನೆಯದು ಸುಪರ್.... ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ನಿರ೦ತರ ಪ್ರೋತ್ಸಾಹಕ್ಕೆ ನಾನು ಚಿರಋಣಿಯಾಗಿದ್ದೇನೆ ಸಪ್ತಗಿರಿವಾಸಿಗಳೇ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ನಾವಡವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಚಿಕ್ಕು.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.