ಯೋಚಿಸಲೊ೦ದಿಷ್ಟು...೪೮

4

೧. “ ಸೋಹ೦ ಎ೦ದೆನಿಸದೇ ದಾಸೋಹ ಎ೦ದೆನಿಸಯ್ಯಾ..“- ಬಸವಣ್ಣ

೨. ಓದಿ ಮರುಳಾಗಬಾರದು, ಓದದೆಯೂ ಮರುಳಾಗಬಾರದು.. ಓದಿ ಓದಿ ಹುರುಳಾಗಬೇಕು!!- ವಿ.ಕೃ.ಗೋಕಾಕ್

೩. ಎಲ್ಲರೂ ತಮ್ಮದೇ ಅತಿ ದೊಡ್ಡ “ಕಷ್ಟ“ ವೆ೦ದುಕೊಳ್ಳುತ್ತಾರೆ!! ೪.

“ ನಮಗೆ ಅವಶ್ಯಕತೆ ಇಲ್ಲದ್ದನ್ನು ಪಡೆದರೂ ಕಳ್ಳತನ ಮಾಡಿದ೦ತೆಯೇ “ – ಗಾ೦ಧೀಜಿ

೫. ಕಾನೂನುಗಳಿ೦ದಾಗುವ ಅನ್ಯಾಯಗಳ ಪಾಲುದಾರರಾಗದಿದ್ದಲ್ಲಿ ನಾವೇ ಅನ್ಯಾಯಕ್ಕೆ ಗುರಿಯಾಗಬೇಕಾಗುತ್ತದೆ!!

೬. ಯಾವುದೇ ಕ್ಷಣಗಳಾಗಲಿ ನಮ್ಮ ಜೊತೆಯಲ್ಲಿದ್ದಷ್ಟು ಹಾಗೂ ನಾವು ಅನುಭವಿಸುವಷ್ಟು ಹೊತ್ತು ಮಾತ್ರವೇ ನಮ್ಮೊ೦ದಿಗಿರುತ್ತವೆ. ಅಲ್ಲಿವರೆಗೂ ಅವು ನಮ್ಮದಾಗಿರುತ್ತವೆ!!

೭. ನಮ್ಮ ಬದುಕಿನ ಮೌಲ್ಯದ ಉತ್ತಮೀಕರಣಕ್ಕೆ ಬದುಕಿಗೆ ಅಗತ್ಯವಾದ ಮೌಲ್ಯಗಳನ್ನು ಪಾಲಿಸಲೇಬೇಕು!!

೮. ರಸ್ತೆಯಲ್ಲಿನ ವಾಹನ ನಿಲುಗಡೆಗಾಗಿ ತೋರಿಸುವ ಕೆ೦ಪು ದೀಪದ ಸೂಚನೆಯ೦ತೆ ನಮ್ಮ ಬದುಕೆ೦ಬ ಪ್ರಯಾಣದಲ್ಲಿ ಎದುರಾಗುವ ಕಷ್ಟಗಳು.. ನಾವು ಸ್ವಲ್ಪ ಹೊತ್ತು ತಾಳ್ಮೆಯಿ೦ದ ಕಾಯ್ದರೆ.. ತಾನಾಗಿಯೇ ಸರಾಗ ಪ್ರಯಾಣದ ಹಸಿರು ದೀಪ ಹೊತ್ತಿಕೊಳ್ಳುತ್ತದೆ!!

೯. ನಮ್ಮವರಿಗಾಗಿ “ನಮ್ಮದು“ ಎ೦ಬುದನ್ನು ನೀಡೋಣ.

೧೦. “ಸಿಟ್ಟುಗೊಳ್ಳುವುದು“ ಎ೦ದರೆ ಬೇರೆಯವರ “ ತಪ್ಪು “ ಗಳಿಗಾಗಿ “ನಮ್ಮನ್ನು ಶಿಕ್ಷಿಸಿಕೊಳ್ಳುವುದು“!!

೧೧. ಯಾರೂ ಪರಿಪೂರ್ಣರಲ್ಲ. ನಾವು “ ಪರಿಪೂರ್ಣರು “ ಎ೦ಬ ನಮ್ಮ ಸ್ವಯ೦ ನಿರ್ಧಾರವೇ ನಮ್ಮ “ ಪತನ “ ವೆ೦ಬ ಗೋರಿಯ ಮೊದಲ ಕಲ್ಲು!

೧೨. ನಮಗೆ ಗೊತ್ತಿಲ್ಲದ ವಿಷಯಗಳನ್ನು ಇತರರಿ೦ಧ ತಿಳಿದುಕೊಳ್ಳಲು ಪ್ರತಿಷ್ಠೆ ಅಡ್ಡಿಯಾಗಬಾರದು. ಎಲ್ಲರಿ೦ದಲೂ ತಿಳಿದುಕೊಳ್ಳಬೇಕೆ೦ಬ ಮುಕ್ತ ಮನಸ್ಸನ್ನು ಹೊ೦ದಿರಬೇಕು.

೧೩. ಧನವನ್ನು ಹೊ೦ದಿರದ ವ್ಯಕ್ತಿಯೊಬ್ಬನು ಬಡವನಲ್ಲ.. ಕನಸನ್ನು ಕಾಣದ ಮತ್ತು ಯಾವುದೇ ಗುರಿಯನ್ನು ಹೊ೦ದಿರದ ವ್ಯಕ್ತಿಯೊಬ್ಬನು ನಿಜವಾಗಿಯೂ ಬಡವ!- ಸ್ವಾಮಿ ವಿವೇಕಾನ೦ದ

೧೪. ಪತಿ-ಪತ್ನಿಯರ ನಡುವಿನ ಅವಿಚ್ಛಿನ್ನವಾದ ನ೦ಬಿಕೆಯೇ ಸು೦ದರ ಸ೦ಸಾರದ ಅಡಿಪಾಯ.

೧೫. ನಮ್ಮ ಹೃದಯದಲ್ಲಿ ಪ್ರಾಮಾಣಿಕತೆ ತು೦ಬಿದ್ದರೆ, ಒಬ್ಬ ಶತ್ರು ಮಾತ್ರವಲ್ಲ, ಇಡೀ ಪ್ರಪ೦ಚವೇ ನಮ್ಮೆದುರು ಮ೦ಡಿಯೂರುತ್ತದೆ!- ಸ್ವಾಮಿ ವಿವೇಕಾನ೦ದರು

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸೋಹ೦ ಎ೦ದೆನಿಸದೇ ದಾಸೋಹ ಎ೦ದೆನಿಸಯ್ಯಾ ಇದನ್ನು ಬಿಡಿಸಿ ಹೇಳುವಿರ? **ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿಯವರೆ, >>>ಇದನ್ನು ಬಿಡಿಸಿ ಹೇಳುವಿರ? -ಬಿಡಿಸಲೇನಿಲ್ಲ.. ಸೋ ಹ೦ ಎ೦ ದೆ ನಿ ಸ ದೇ ದಾ ಸೋ ಹಂ ಎ೦ ದೆ ನಿ ಸ ಯ್ಯಾ :) ನಾವಡರೆ, ಯೋ..೪೮ ಚೆನ್ನಾಗಿದೆ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಿಡಿಸಲೇನಿಲ್ಲ.. ಸೋ ಹ೦ ಎ೦ ದೆ ನಿ ಸ ದೇ ದಾ ಸೋ ಹಂ ಎ೦ ದೆ ನಿ ಸ ಯ್ಯಾ :) ======================================= ವಾಹ್ವ್!! ಹೀಗೂ ಉಂಟು :())) ಗಣೇಶ್ ಅಣ್ಣ -ಅವ್ರ 'ಪಂಚ್' ಭರಿತ ಉತ್ತರ:())) @ ಗಣೇಶ್ ಅಣ್ಣ ನೀವು ಬರಹವನ್ ಪ್ರತಿಕ್ರಿಯೆಗಳನ್ನ ವಿಭಿನ್ ಧ್ರುಸ್ತಿ ಯಿಂದ ನೋಡುವುದಕ್ಕೆ -ಓದುವುದಕ್ಕೆ -ಪ್ರತಿಕ್ರಿಯಿಸುವುದಕ್ಕೆ ಇದು 'ಎರಡನೇ' ಉದಾಹರಣೆ(ಇನ್ನೊಂದು - ಅಸು ಹೆಗ್ಡೆ ಅವರ- ನಾವು ಏಣಿ ಆಗೋಣ!!) >>> ಹತ್ತಿದ ಮೇಲೆ ಹತ್ತಿದವರು ಏಣಿ ಒದ್ದರೆ ಆಗ ಗೊತ್ತಾಗುತ್ತೆ !! :(೯ ( >> ಅದು ಎನಗೆ ನಮ್ ಕಡೆಯ ಗಾದೆ ಮಾತು ದಾಟೋವರೆಗ್ ಗಂಗಮ್ಮ - ದಾಟಿದ ಮೇಲೆ ಪಿಂಗಮ್ಮ!! ನೆನಪಿಸಿತು....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿವಾಸಿಯವರೆ, ಪಂಚೂ ಇಲ್ಲ, ಪಿಂಚೂ ಇಲ್ಲ.. ಅಲ್ಲಿ- ಒದಿಸಿಕೊಂಡ ಅನುಭವದ ಮಾತದು. :) ಇಲ್ಲೂ.. ಬಿಡಿಸಿ ಎಂದಾಗ ನೀವೆಲ್ಲಾ ಬುದ್ಧಿವಂತರು ಅದರ ಅರ್ಥ,ಗೂಡಾರ್ಥದ ಬಗ್ಗೆ ಯೋಚಿಸುವಿರಿ. ದಡ್ಡರು ಬಿ ಡಿ ಸಿ ಬರೆಯುವರು. ಇಷ್ಟೇ.. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಯ೦ಕರ ಮಾರಾಯ್ರೇ ನೀವು...!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶನ್ನ ನಿಮ್ಮ ಮೆಚ್ಚುಗೆಗೆ ನಾನು ಅಭಾರಿಯಾಗಿದ್ದೇನೆ. ನಿಮ್ಮ ಪ್ರೋತ್ಸಾಹ ನಿರ೦ತರವಾಗಿರಲಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರಗಳು ಪಾರ್ಥರೇ.. ಸಮರ್ಪಕ ನೆಟ್ ನ ಅಲಭ್ಯತೆ ನಿಮ್ಮ ಪ್ರಶ್ನೆಗೆ ಉತ್ತರಿಸುವುದರಲ್ಲಿ ತಡವನ್ನು೦ಟು ಮಾಡಿತು. ವಿಳ೦ಬಕ್ಕೆ ಕ್ಷಮೆ ಇರಲಿ. ಸ + ಅಹ೦ = ಸೋಹ೦ ದಾಸ+ಅಹ೦ = ದಾಸೋಹ೦ ಅ೦ದರೆ “ಅವನೇ ನಾನು“ ಎ೦ದು ಕೊಳ್ಳುವುದಕ್ಕಿ೦ತಲೂ ಮೊದಲು ( ಸೋಹ೦) “ಎಲ್ಲರ ದಾಸ ನಾನು“ ( ದಾಸೋಹ೦) ಎ೦ಬ ತಿಳುವಳಿಕೆ ಬಹಳ ಮುಖ್ಯವೆ೦ದು ಬಸವಣ್ಣ ಹೇಳಿದ್ದಾರೆ. ಮೊದಲು ಎಲ್ಲರ ದಾಸ ನಾನೆ೦ದು ತಿಳಿದುಕೊ೦ಡ ನ೦ತರ ಅವನೇ ( ದೇವರು, ಬ್ರಹ್ಮ, ಇತ್ಯಾದಿ,) ನಾನೆ೦ಬ ತಿಳುವಳಿಕೆ ತರವಾದುದು. ದಾಸೋಹ೦ ಎನಿಸದೇ ಸೋಹ೦ ಎ೦ಬ ನಮ್ಮ ತಿಳುವಳಿಕೆ ನಮ್ಮ ಅಹ೦ಕಾರವನ್ನು ಬಿ೦ಬಿಸುತ್ತದೆ ಎ೦ಬುದು ಬಸವಣ್ಣನವರ ವಾಕ್ಯಾರ್ಥ. ಅಣ್ಣನ ಈ ಮಾತು ಶ೦ಕರಾಚಾರ್ಯರ “ ಅಹ೦ ಬ್ರಹ್ಮಾಸ್ಮಿ“ ( ನಾನೇ ಬ್ರಹ್ಮ) ಎ೦ಬ ತತ್ವಕ್ಕೆ ವಿರುಧ್ಧವಾದುದು. ಹಾಗ೦ತ ಶ೦ಕರಾಚಾರ್ಯರನ್ನ್ಜು ಬಸವಣ್ಣನವರು ಟೀಕಿಸಿದ್ದಾರೆ೦ಬ ಅರ್ಥವಲ್ಲ. ಸ೦ಸ್ಕೃತದಲ್ಲಿ ಈ ತರಹದ ಪದಗಳ ಬಳಕೆ ಯಥೇಛ್ಚವಾಗಿವೆ. ಉದಾಹರಣೆಗೆ “ ಮೇಘೇ ಗತ೦ ವಯಹ “ - ಸ೦ಸ್ಕೃತದಲ್ಲಿ ವಯಹ ಎ೦ಬ ಪದವನ್ನು “ಆಯುಷ್ಯ“ ಎ೦ಬರ್ಥದಲ್ಲಿಯೂ ಹಾಗೂ “ಹಕ್ಕಿ“ ಎ೦ಬ ಇನ್ನೊ೦ದರ್ಥದಲ್ಲಿಯೂ ಬಳಸುತ್ತಾರೆ . ಆಗ ಈ ವಾಕ್ಯದ ಅರ್ಥವು “ಮೋಡಗಳ ನಡುವೆ ಹಕ್ಕಿ ಕಳೆದುಹೋಯಿತು ? ಕಾಣೆಯಾಯಿತು “ಎ೦ಬ ಅರ್ಥದ ಜೊತೆಗೆ “ಮೇಘಗಗಳನ್ನು ಗುರುತಿಸುವುದರಲ್ಲಿ ಆಯುಷ್ಯವು ಕಳೆದು ಹೋಯಿತು “ ಎ೦ಬ ಅರ್ಥವೂ ಉ೦ಟಾಗುತ್ತದೆ. ಎರಡು ಅರ್ಥವನ್ನು ಕೊಡುವ ಪದಗಳ ಬಳಕೆಯನ್ನು ಸಾಲೀಮಠರು ಶ್ಲೇಷಾಲ೦ಕಾರವೆ೦ದು ಹೇಳಿದ್ದ ನೆನಪು! ಹಾಗೆಯೇ ಇನ್ನೂ ಹಲವಾರು ರೀತಿಯ ಬಳಕೆಗಳಿವೆ. ಬಲ್ಲವರು ಇಲ್ಲಿ ಉಲ್ಲೇಖಿಸಬಹುದು.. ಒ೦ದೊಳ್ಳೆಯ ಚರ್ಚೆಗೆ ನಾ೦ದೀಯಾದೀತು. ನಿಮ್ಮ ಆಸಕ್ತಿ ನನ್ನಗೆ ಸ೦ತಸ ತ೦ದಿತು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ನಿಮ್ಮ ದೀರ್ಘ ವಿವರಣೆಗೆ ನನ್ನ ಕೃತಜ್ಞತೆಗಳು ನಾನು ಏಕೊ ದಾಸೋಹ ವೆಂದರೆ ಹಸಿದವರಿಗೆ ಊಟ ಹಾಕುವುದು ಅಂತ ಯೋಚಿಸಿ ಕನ್ಪೂಸ್ ಮಾಡಿಕೊಂಡೆ ಹಾಗಾಗಿ ಅಹ೦ ಬ್ರಹ್ಮಾಸ್ಮಿ ಎಂಬ ಜ್ಞಾನಕ್ಕಿಂತ ಹಸಿದವನಿಗೆ ಊಟಹಾಕುವ ಕಾಯಕವೆ ದೊಡ್ಡದು ಅಂತ ಅರ್ಥಮಾಡಿಕೊಂಡು ನಿಮ್ಮನ್ನು ಕೇಳಿದೆ. ಈಗ ಸಂದೇಹ ನಿವಾರಣೆಯಾಯಿತು! :)) ನಿಮಗೆ ಹಾಗು ಶ್ರೀದರರಿಗೆ ವಂದನೆಗಳು =ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ನಿಮ್ಮ ಉಕ್ತಿಗಳಲ್ಲಿ ನನಗೆ ಬಹಳ ಮೆಚ್ಚುಗೆಯಾದದ್ದು ಇದು <<ನಮಗೆ ಅವಶ್ಯಕತೆ ಇಲ್ಲದ್ದನ್ನು ಪಡೆದರೂ ಕಳ್ಳತನ ಮಾಡಿದ೦ತೆಯೇ “ – ಗಾ೦ಧೀಜಿ>> @ಪಾರ್ಥಸಾರಥಿಗಳೆ, ಸೋಹಂ=ಅದು ನಾನೇ ಎನ್ನುವ ಬದಲು ದಾಸೋಹಂ= ದಾಸ ನಾನು. ಇದು ನಾನು ಅದನ್ನು ತಿಳಿದುಕೊಂಡ ಬಗೆ, ಇದಕ್ಕೆ ಇನ್ನೂ ವಿಶಿಷ್ಟ ಅರ್ಥವನ್ನು ನಾಡಿಗರು ಕೊಡಬಹುದು, ಖಂಡಿತಾ ಗಣೇಶರಂತೆ ಬಿಡಿಸಿ ಅಲ್ಲ :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮೆಚ್ಚುಗೆಗೆ ನಾನು ಅಭಾರಿಯಾಗಿದ್ದೇನೆ ಶ್ರೀಧರರೇ, ನಿಮ್ಮ ತಿಳುವಳಿಕೆ ಸರಿಯಾಗಿಯೇ ಇದೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.