ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

5

ಬೇಂದ್ರೆಯವರ ಈ ಕವನದ  ಗುನುಗು  ನಿಮ್ಮೆಲ್ಲರಿಗು ಯುಗಾದಿಯ ಹುರುಪು ತರಲಿ 

ಯುಗಾದಿಯ ಶುಭ ಹಾರೈಕೆಗಳೊಡನೆ 

------------------------------------------------------------------

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
 
ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಳಿ
 ಮತ್ತೆ ಕೇಳ ಬರುತಿದೆ
 ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ
 
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ... !
 
ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆನೆಯು
 ಅಖಿಲ ಜೀವ ಜಾತಕೆ
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೋ..
 
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ....!
 
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ಹೊಸತು ಹೊಸತು ತರುತಿದೆ
 
 ಯೂ_ಟ್ಯೂಬಿನ ಹಾಡನೊಮ್ಮೆ ಕೇಳಲು ಇಲ್ಲಿ ಕ್ಲಿಕ್ ಮಾಡಿ
 
ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪಾರ್ಥ ಸಾರಥಿ ಯವರಿಗೆ ವಂದನೆಗಳು ಯುಗಾದಿಯ ಶುಭ ಹಾರೈಕೆಗಳೊಂದಿಗೆ ಬೇಂದ್ರೆಯವರ ಪೂರ್ತಿ ಕವನವನ್ನೆ ನೀಡಿದ್ದೀರಿ, ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಸಾರ್ .ಶುಭವಾಗಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮಗೆ ಹಾಗೂ ನಿಮ್ಮ ಮನೆಯವರೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು, ಪಾರ್ಥರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಮತ್ತು ತಮಗೂ ಸಹ ಯುಗಾದಿ ಶುಭ ತರಲಿ ಶ್ರೀನಾಥರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುಗಳೆ- ಪ್ರತಿ ಯುಗಾದಿಗೂ ಈ ಹಾಡಿನ ಮೊದಲ ಮೂರು ನಾಲ್ಕು ಸಾಲುಗಳಸ್ಟೆ ಶೀರ್ಷಿಕೆಯಾಗಿಸಿ ಬರುವ ಬರಹಗಳನ್ನ ಓದಿದ್ದೆ, ಆದರೆ ಇಡೀ ಕವನವನ್ ನೀವ್ ಇಲ್ಲಿ ಛಾಪಿಸುವ ಮೂಲಕ ವರಕವಿ ಬೇಂದ್ರೆ ಅವ್ರ ಇಡೀ ಕವನವನ್ ಓದುವ ಹಾಗೆ ಮಾಡಿದ್ದೀರ.. ವಂದನೆಗಳು.. ನಿಮಗೂ- ನಿಮ್ಮ ಕುಟುಂಬಕ್ಕೂ *********ಯುಗಾದಿಯ ಶುಭಾಶಯಗಳು************
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿ ಕಡೆಯಲ್ಲಿ ಹಾಡಿನ ಲಿಂಕ್ ನೋಡಿದಿರ ಲೀಲಾವತಿಯವರ ಅಭಿನಯದ ಹಾಡನ್ನು ಗಮನಿಸಿ **ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.