ಯಾಕ್ಮಗಾ?? ಯಾವ್ದಾದ್ರೂ ಹುಡುಗಿ ಆಗಿದ್ರೆ ಹಂಗೆ ಕಣ್ಬಿಟ್ಕೊಂಡು ನೋಡ್ತಿದ್ದೆ

4
ಎಂದಿನಂತೆ ಅವನು ಬಿ ಎಂ ಟಿ ಸಿ ಬಸ್ಸು ಹತ್ತಿ ಸೀಟಿನಲ್ಲಿ ಕುಳಿತನು, ಅವನ ಮುಂದಿನ ಸೀಟಿನಲ್ಲಿ ಒಂದು ಅಜ್ಜಿ ಬಂದು ಕುಳಿತುಕೊಂಡಿತು. ಬಸ್ಸು ಹೊರಟಿತು, ಕಿಟಕಿಯ ಹತ್ತಿರ ಕುಳಿತಿದ್ದ ಅಜ್ಜಿ ಸ್ವಲ್ಪ ಸಮಯದ ನಂತರ ಹಾಗೇ ಸಿಕ್ಕಿಸಿಕೊಂಡ ಜುಟ್ಟಿನ ಗಂಟನ್ನು ಬಿಚ್ಚಿ ಹೊರಗಡೆಯಿಂದ ಬಂದ ಗಾಳಿಗೆ ತನ್ನ ಕೂದಲನ್ನು ಒಡ್ಡುತ್ತಿತ್ತು. ಎಲ್ಲ ನೋಡಿ ಸುಮ್ಮನಿದ್ದ ಅವನು, ಯಾವಾಗ ಅಜ್ಜಿ ಕೂದಲನ್ನು ತುಂಬಾ ಸಮಯ ತನ್ನ ಕೈನಿಂದ ಅತ್ತ ಇತ್ತ ಆಡಿಕೊಳ್ಳುತ್ತಿತ್ತೋ ಇವನು ತಡೆಯಲಾರದೆ 'ಅಜ್ಜಿ, ಆಗ್ಲಿಂದ ನೋಡ್ತಿದ್ದೇನೆ, ಜುಟ್ಟು ಕಟ್ಕೊಳದಲ್ವ ನಮಗೆ ತೊಂದ್ರೆ ಆಗ್ತಿದೆ'. ಅಜ್ಜಿ ತಿರುಗಿ ಇವನನ್ನೊಮ್ಮೆ ನೋಡಿ.. . . . . . . . . . . . . . . 'ಯಾಕ್ಮಗಾ?? ಯಾವ್ದಾದ್ರೂ ಹುಡುಗಿ ಆಗಿದ್ರೆ ಹಂಗೆ ಕಣ್ಬಿಟ್ಕೊಂಡು ನೋಡ್ತಿದ್ದೆ, ಮುದ್ಕಿ ನಾನು, ನನ್ನ ಕೆಲಸ ನಾನು ಮಾಡ್ಕೊಂಡ್ರೆ ನಿಂಗೇನಪ್ಪ ತೊಂದ್ರೆ??'
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

:) ಉತ್ತರ: ಹುಡ್ಗೀ ಕೂದ್ಲಾದ್ರೆ ಶ್ಯಾಂಪೂ ಪರಿಮಳ ಇರತ್ತೆ, ಅದನ್ನ ಕಂಡೀಶನ್ ಮಾಡಿರ್ತಾರೆ, ಕಪ್ಪಗೋ ಅಥ್ವಾ ಕೆಂಚು ಕೆಂಚಾಗಿರತ್ತೆ. ಆದ್ರಿಂದ ಅವು ಮುಖದ ಮೇಲೆ ಅಡ್ಡಾಡಿದ್ರೆ ಖುಷಿಯಾಗತ್ತೆ. ನಿಂದು ನೋಡಿದ್ರೆ ಬಿಳಿ ಬಿಳಿ ಬಣ್ಣ, ಸೀಗೇಕಾಯಿ ಹಾಕಿರ್ತೀಯ ಮೇಲೆ ಸಿಕ್ಕಾಪಟ್ಟೆ ತೆಂಗಿನೆಣ್ಣೆ ಸುರ್ದಿರ್ತಿಯಾ.. ಇಷ್ಟ ಆಗೋದು ಹೆಂಗೆ!!! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಹ ಹ್ಹ ಹ್ಹ ಹ್ಹ :) :) ಅದ್ನೇ ಆ ಅಜ್ಜಿ ಶಾರ್ಟಾಗಿ ಹೇಳಿದೆ ಆಚಾರ್ಯರೇ!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ತಾಪತ್ರಯ ಅರ್ಥವಾಯ್ತು ಚಿಕ್ಕುರವರೆ, ಕ0ಡಕ್ಟರ್ ಗೆ ಹೇಳಿ ನಿಮ್ಮ ಮು0ದಿನ ಸೀಟು ಹುಡುಗಿಯರಿಗೇ ಕಾಯ್ದಿರುಸುವ0ತೆ ಮಾಡೋಣ! ;))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+೧
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದ ಗಣೇಶಣ್ಣ, ಕಾಮತವ್ರಿಗೆ ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೇಡ ಗುರುಗಳೇ ಆ ತಾಪತ್ರಯ ಬೇಡ!!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಹ..ಹ್ಹಾ.. ಚೆನ್ನಾಗಿದೆ.. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಪ್ರಸನ್ನವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆ 'ಅವನು' ಚಿಕ್ಕೂ ಆಗಿರಬಹುದೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾಧ್ಯವಿಲ್ಲ ಸರ್... ನಮ್ ಚಿಕ್ಕೂ ಹಾಗೆಲ್ಲ ಮುದುಕಿಯರ ಹಿ0ದೆ ಕೂಡುವುದಿಲ್ಲ... ಹುಡುಗಿ ಇದ್ರೆ ಬೇರೆ ಮಾತು... :‍) ಸಕತ್ ಜೊಕು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ಸಾಧ್ಯವಿಲ್ಲ ಸರ್... ನಮ್ ಚಿಕ್ಕೂ ಹಾಗೆಲ್ಲ ಮುದುಕಿಯರ ಹಿ0ದೆ ಕೂಡುವುದಿಲ್ಲ... ಹುಡುಗಿ ಇದ್ರೆ ಬೇರೆ ಮಾತು... :‍) > ಹಾಗೋ?? :) :) ಧನ್ಯವಾದ ಪ್ರಸನ್ನವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನರವರೆ ಚಿಕ್ಕು ಮುದುಕಿ ಹಿ0ದೆ ಕುಳಿತುಕೊಳ್ಳಲ್ಲ ಅನ್ನೋದು ಅಪ್ಪಟ ನಿಜ‌ ಆದರೆ ಮುದುಕಿ ಚಿಕ್ಕು ಮು0ದೆ ಬ0ದು ಕುಳಿತರೆ !!!! ಪಾಪ ಚಿಕ್ಕುಗೆ ಕೋಪ ಬರದೆ ಏನಾಗುತ್ತೆ ! ಹಾಗಾಗಿ ಈ ಘಟನೆ ಅಲ್ವ ಚಿಕ್ಕು ! ... ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) ಪಾರ್ಥವ್ರೆ ಏನೋ ಕಥೆ ಅಂತ ಹೇಳಿದ್ರೆ ರಿಯಲ್ಲಿಗೆ ತರ್ತಿದೀರಾ!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಹ ಹ್ಹ ಹ್ಹ ಇಲ್ಲ ಸಾರ್, ಬೇರೆಯವರ ಕೂದಲು ನಮಗ್ಯಾಕೆ ಅದ್ರ ವಿಷ್ಯ!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಎಲ್ಲಿ ಕೂತಿದ್ರಿ ಅಂತ ತಿಳಿಸಿಲ್ಲ......!!!! ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ನನ್ನ ಲ್ಯಾಪ್ಟಾಪ್ನಲ್ಲಿ ಟೈಪ್ ಮಾಡ್ತಿದ್ದೆ!!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ್ ಅವ್ರೆ 'ಮುದುಕಿ' ಕೂದಲಿಗೆ ಕಲರ್ ಹಾಕಿರ್ಲಿಲ್ಲವೇ? (ಹಾಕಿದ್ದರೂ ನಿಮ್ಮ ಬರಹದಲ್ಲಿ ವ್ಯತ್ಯಾಸವೇನು!!) ಪಾಪ!! ಮುದುಕಿಗೆ ಎದುರುತ್ತರ ಕೊಡಲೂ ಆಗದೆ-ಕೊಟ್ಟಿದ್ದರೆ!! ಮುಂದೇನಾಯ್ತು? ಇನ್ನೊಮ್ಮೆ ಆದಷ್ಟು ಹಿಂದಿನ ಸೀಟಿಗೆ ಹೋಗಿ... ನಾಲ್ಕೇ ಸಾಲಿನ ಬರಹವಾದರೂ ನಗೆ ಉಕ್ಕಿಸಿತು.. ಧನ್ಯವಾದಗಳು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) :) ಧನ್ಯವಾದ ಸಪ್ತಗಿರಿಯವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.