ಮೌನದ ಕೂಗು

3

ಥುರಾ ನಗರದ ಧೂಳಿನ ಅಡಿಯಲಿ

ರಾಧೆಯ ನೆನಪನು ಹುಡುಕುವ ತವಕದಿ

ಮಾಧವ ಮನದಲಿ ಮೌನದ ವೇದನೆ

 

ಮೋಹನ ಮುರಳಿಯ ನೀರವ ಮೌನದಿ

ಎದೆಯನು ಬಿರಿಯುವ ವಿರಹದ ನೋವಲಿ

ನಲುಗಿದ ಮಾಧವ ರಾಧೆಯ ನೆನೆಪಲಿ  

 

ಯಮುನಾ ತೀರದಿ ತಿರುಗಿದ ದಿನಗಳು

ಮುನಿಸಿನ ಮೌನವ ಮುರಿಯುವ ಬಯಕೆಯ

ತೀರದ ತುಡಿತದ ಪ್ರೀತಿಯ ಬಂಧನ

 

ತಮಾಲ ತರುಗಳ ನೆರಳಿನ ಬೆಳಕಲಿ

ಬಳುಕುವ ಲತೆಗಳು ನಾಚುವ ಪರಿಯಲಿ

ಅರಳಿದ ಪ್ರೇಮದ ರಾಧೆಯ ನರ್ತನ

 

ನೆನಪಿನ ಭಾರದಿ ಮುದುಡಿದ ಮನದಲಿ

ಮಾಧವ ಕೂಗಿದ ಮೌನದಿ ರಾಧೆಯ

ಕನಸಲಿ ಬಾರೆಯ ಕಾದಿಹೆ ನಿನ್ನನೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.