ಮೋತಿ, ಮೋಹನ ಮತ್ತು ಸಾರಾಯಿ ಪುರಾಣ

2
ಬೆಳಗ್ಗೆ ಎದ್ದು ಹಲ್ಲುಜ್ಜಿ, ಮುಖ ತೊಳೆದು ಚಾವಡಿಯಲ್ಲಿ ಬಂದು ಪೇಪರ್ ಓದುತ್ತಾ ಕುಳಿತೆ. ಭಯಂಕರ ಚಳಿ, ಮಲೆನಾಡಿನ ನವೆಂಬರ್ ಚಳಿಯನ್ನ ಮುಂಜಾನೆ ತಡ್ಕೊಳ್ಳೋದಕ್ಕೂ ಸ್ವಲ್ಪ ಗುಂಡಿಗೆ ಬೇಕು. ಅಡಿಗೆಮನೆಯಲ್ಲಿದ್ದ ಅಮ್ಮನಿಗೆ ಕಾಫೀ ಅಂತ ಕೂಗಿ ಹೇಳಿ ಮತ್ತೆ ಪೇಪರ್ ಹತ್ತಿರ ಕಣ್ಣುಹಾಯಿಸಿದೆ. ಸ್ವಲ್ಪ ಹೊತ್ತಾದ್ಮೇಲೆ ಅಮ್ಮ ಕಾಫೀ ಹಿಡ್ಕೊಂಡು ಬಂದ್ರು ಜೊತೆಗೆ ಕೈನಲ್ಲಿ ೨ ಇಡ್ಲಿ ಇತ್ತು. 'ಇದೇನಮ್ಮ ಒಳಗೆ ತಿಂತಿದ್ದೆ ಒಳ್ಳೆ ಭಿಕ್ಷುಕರಿಗೆ ತಂದ್ಕೊಡೋ ಹಾಗೆ ತರ್ತಿದೀಯಲ್ಲಾ?'. 'ನಿಂಗಲ್ಲ ಕಣೋ ನಾಯಿಗೆ (ಆಹಾ ಬೆಳಗ್ಬೆಳ್ಗೆನೆ ಮುಖಕ್ಕೆ ಮಹಾಮಂಗಳಾರತಿ)' ಅಂದು 'ಮೋತಿ, ಮೋತಿ' ಅಂತ ಕೂಗಿದ್ರು, ಮೂಲೆಯಲ್ಲಿ ಚಳಿಗೆ ಮುದುರಿ ಮಲಗಿದ್ದ ಮೋತಿ ಅಮ್ಮ ಕೂಗಿದ್ದು ಕೇಳಿ ಓಡಿಬಂತು. ನಮ್ಮಮ್ಮ ಕೈಲಿದ್ದ ಇಡ್ಲಿಯನ್ನ ಕಣಕ್ಕೆ ಎಸೆಯಿತು, ಎರಡು ಇಡ್ಲಿ ಬೇರೆ ಬೇರೆ ಕಡೆ ಬಿತ್ತು. ಮೋತಿ ಓಡಿಹೋಗಿ ಎರಡನ್ನೂ ಎತ್ಕೊಂಡು ತಾನು ಮಲಗಿದ್ದಲ್ಲಿಗೆ ಹೋಗಿ ತಿನ್ತಾಕೂರ್ತು. 'ಅಲ್ಲಮ್ಮ ಹಾಗೆ ಹಾಕಿದ್ರೆ ಅದ್ಕೆ ಬೇಜಾರಾಗಲ್ವ?', ಅದ್ಕೆ ಅಂತಾನೇ ಸಣ್ಣ ರೂಂ ಬೇರೆ ಇದೆ, ಅಲ್ಲೇ ಹಾಕಿದ್ರೆ ಆಗ್ತಿತ್ತು'. 'ಅದ್ಕೆ ಆ ತರ ಹಾಕಿದ್ರೆನೇ ಚೆಂದ. ನೀನು ಅಲ್ಲಿಗೆ ಹೋಗಿ ಹಾಕಿ ನೋಡು ಗೊತ್ತಾಗತ್ತೆ'. 'ಸರಿ ಬಿಡು ಈಗ ಹಾಕಿ ಆಯ್ತಲ್ಲ'. 'ಇವತ್ತು ತಿಂಡಿ ತಿಂದ್ಕೊಂಡು ಮೋಹನ ಮತ್ತೆ ಅವೆರಡು ಹುಡುಗ್ರನ್ನ ಕರ್ಕೊಂಡು ಹೋಗಿ ರಸ್ತೆಲಿರೋ ೨ ಹಲಸಿನಮರದಿಂದ ಸೊಪ್ಪು ಕತ್ತರಿಸಿ ಹೊಸ ತೋಟಕ್ಕೆ ಹಾಕಿಸ್ಬೇಕು'. 'ಆಯ್ತು' ಅಂದು ತಿಂಡಿ ತಿನ್ನೋದಕ್ಕೆ ಹೋದೆ. ............................ ಲೈನಲ್ಲಿದ್ದ ಮೋಹನ ಮತ್ತೆ ಇನ್ನೆರಡು ಸಣ್ಣ ಹುಡುಗ್ರನ್ನ ಕರ್ಕೊಂಡು ರಸ್ತೆ ಕಡೆ ಹೊರಟೆ. ರಸ್ತೆಗೆ ತಾಗಿಕೊಂಡಿದ್ದ ತೋಟದಲ್ಲಿಯ ಒಂದು ಹಲಸಿನಮರಕ್ಕೆ ಹತ್ತಿ ಸೊಪ್ಪು ಕಡಿ ಅಂತ ಹೇಳಿ ಉಳಿದಿಬ್ಬರಿಗೆ ಕೊನೆಯೇನಾದ್ರೂ ರಸ್ತೆಕಡೆ ಬಿದ್ರೆ ಸೈಡಿಗೆ ಹಾಕಿ ಎಂದು ಹೇಳಿ ನಾನು ಗದ್ದೆ ಕಡೆ ಹೋದೆ. ಸ್ವಲ್ಪ ಹೊತ್ತು ಅಲ್ಲಿದ್ದು ವಾಪಸ್ ಬಂದೆ. ಮೋಹನ ಮರವನ್ನ ಬೋಳಿಸಿ ಕೆಳಗಿಳಿದು ಉಳಿದವರಿಗೆ ಹೊತ್ಕೊಂಡ್ಹೋಗೋಕೆ ಅನುಕೂಲ ಆಗೋ ಹಾಗೆ ಕೊನೆಗಳನ್ನ ಕತ್ತ್ರಸ್ತಿದ್ದ. ನಾನು ಅಲ್ಲೇ ಕೂತ್ಕೊಂಡು ಪೇಪರ್ ಓದ್ತಿದ್ದೆ, ಒಂದು ೫ ನಿಮ್ಷ ಆಗಿರ್ಬೇಕು, ಗೌಡ್ರೆ ಬೆಂಗಳೂರ್ಕಡೆ ಏನ್ಸಮಾಚಾರ?? ಶುರು ಮಾಡಿದ ಮೋಹನ, ನನಗೂ ಆಶ್ಚರ್ಯ ಆಗಿತ್ತು ಅದ್ಹೇಗೆ ಇವ್ನು ಇಷ್ಟೊತ್ತು ಸುಮ್ನಿದ್ದಾನಲ್ಲ ಅಂತ. ಇನ್ನು ಪೇಪರ್ ಓದೋಕಾಗದಿಲ್ಲ ಎಂದರಿತು ಪೇಪರ್ ಅಲ್ಲೇ ಮಡಿಸಿ ಅಲ್ಲೇನು ಸಮಾಚಾರನೋ, ಯಾವಾಗ್ಲೂ ಸಮಾಚಾರಾನೇ, ಅದ್ಬಿಡು ಕೂದಲಿಗೆ ಅದೇನು ಕೆಮ್ಮಣ್ಣು ಬಳ್ಕೊಂಡಿದೀಯಲ್ಲ? ಯಾವ ಮಣ್ಣೂ ಅಲ್ಲ ಗೌಡ್ರೆ, ಲೂಸ್ ಮಾದನ ಫಿಲಂ ನೋಡಿ ಕಲರ್ ಹಾಕಿಸ್ಕೊಂಡಿದ್ದು. ಸರಿ ಬಿಡು ಹಂಗಾದ್ರೂ ಪೈಂಟ್ ಕಂಪನಿಯವ್ನು ಉದ್ಧಾರ ಆಗ್ಲಿ!! ಸ್ವಲ್ಪ ದಿನ ದರ್ಶನ್ ತರ ಹೇರ್ ಸ್ಟೈಲ್ ಮಾಡ್ಕೊಂಡಿದ್ದೆ, ಹಾಗಂತ ಸಾರಥಿ ಫಿಲಂ ನೋಡಿದ್ರಾ? ಇಲ್ಲ ಕಣಪ್ಪ. ನೀನು? ೬ ಸಲ. ೬ ಸಲ????? ಸರಿಹೋಯ್ತು ಬಿಡು, ೨ ದಿನದ ಸಂಬಳನ ಎಷ್ಟು ಸುಲಭವಾಗಿ ಖರ್ಚು ಮಾಡ್ತೀರಲ್ಲೋ... ಅದೂ ಒಂದೇ ಫಿಲ್ಮಿಗೆ. ಹೋಗ್ಲಿ ಬಿಡಿ ಗೌಡ್ರೆ. ಬಿಟ್ಟೆ ತಗೋ ನಂದೇನು ಹೋಗ್ಬೇಕಾಗಿರೋದು!!. ಹೀಗೆ ಅದೂ ಇದೂ ಮಾತು ಜೊತೆಗೆ ಕೆಲಸ ಸಾಗಿತ್ತು, ಉಳಿದ ಇಬ್ಬರು ಹುಡುಗ್ರು ಸೊಪ್ಪನ್ನ ಹೊತ್ಕೊಂಡು ಹೋಗಿ ಹಾಕಿ ಬರ್ತಿದ್ರು. ರಸ್ತೆಯ ಕೆಳಗಡೆಯಿಂದ ಒಬ್ರು ಎತ್ತುಗಳನ್ನ ಗದ್ದೆ ಕಡೆ ಹೊಡ್ಕೊಂಡು ಹೋಗ್ತಿದ್ರು. ಬೇಲಿ ದಾಟಿ ಎತ್ತುಗಳೂ ಹೋದ್ವು ಜೊತೆಗೆ ಅವ್ರೂ ಹಾಗೇ ಹೋದ್ರು. ಅವರನ್ನ ನೋಡಿದ ಮೋಹನ, ಅವರು ಅಲ್ಲಿಂದ ದೂರವಾದ್ಮೇಲೆ, ಗೌಡ್ರೆ ಇವರ ಮನೆಗೆ ಸಾರಾಯಿ ಕುಡಿಯೋಕೆ ಒಂದಿನ ಹೋದಾಗ..... ಅವನ ಮಾತನ್ನ ಅರ್ಧಕ್ಕೆ ನಿಲ್ಸಿ, ನಿಂಗೇನು ಆಗಿರೋದೋ ಇನ್ನೂ ಹುಟ್ಟಿಲ್ಲ ಬೆಳ್ದಿಲ್ಲ ಆಗ್ಲೇ ಸಾರಾಯಿ ಕುಡಿತಿದೀಯಾ?? ಅಯ್ಯೋ ಗೌಡ್ರೆ ಪೂರ್ತಿ ಹೇಳೋದು ಕೇಳಿ, ನಾನೇನು ಕುಡಿಯೋಕೆ ಹೋಗ್ಲಿಲ್ಲ ವಿಶ್ವಣ್ಣ, ಸ್ವಾಮಿಯಣ್ಣ ದಿನಾಲೂ ಹೋಗ್ತಾರಲ್ಲ ಅವ್ರ ಜೊತೆ ನಾನೂ ಹೋಗ್ತೀನಿ. ಹಂಗೆ ಒಂದಿನ ಇವ್ರಿಬ್ರೂ ಕುಡಿತಿದ್ರಾ ಆಗ ಸಾರಾಯಿ ಕೊಡೊ ಗೌಡ್ರು ನನ್ನನ್ನ 'ನೀನು ಇಲ್ಲಿಗ್ಯಾಕಪ್ಪ ದಿನಾನೂ ಬರ್ತೀಯಾ?? ಕುಡಿಯಲ್ಲ ಆದ್ರೂ ಸುಮ್ನೆ ಯಾಕೆ ಬರ್ತೀಯಾ??' ಅಂದ್ರು. ಓ ಅಂದ್ರೆ ನೀನೂ ಕುಡಿ ಇನ್ನೊಂದ್ಸ್ವಲ್ಪ ಲಾಭ ಆಗ್ಲಿ ಅಂತ ಅವ್ರ ಪ್ಲಾನ್ ಇರ್ಬೇಕು ಮೋಹನ. ಅದೆಲ್ಲ ಏನೂ ಇಲ್ಲ ಗೌಡ್ರೆ. ಮತ್ತೆ?? ಒಬ್ಳು ಮಗ್ಳಿದ್ದಾಳೆ ಅದ್ಕೆ ಅವ್ರಿಗೆ ಭಯ. ಹ್ಹ ಹ್ಹ ಹ್ಹ ಓಹೋ ಹೀಗೆ ವಿಷ್ಯ, ನೋಡು ಅವ್ರಿಗೆ ಸಾರಾಯಿ ಕುಡಿಯೋ ಇಬ್ರು ಬಗ್ಗೆ ಹೆದ್ರಿಕೆ ಇಲ್ಲ ಕುಡೀದೇ ಇರೋ ನಿನ್ನ ಬಗ್ಗೆ ಹೆದ್ರಿಕೆ. ಅವ್ರ ಪಾಡಿಗೆ ಅವ್ರು ಕುಡಿದು ಬಿದ್ದು ಎಲ್ಲೋ ಸಾಯ್ತಾರೆ, ನೀನು ಡೇಂಜರ್. ಅಕ್ಕಿ ಮೇಲೆ ಆಸೆ ನೆಂಟ್ರ ಮೇಲೆ ಪ್ರೀತಿ ಅನ್ನೋ ಹಾಗಿದೆ ಅವ್ರ ಪರಿಸ್ಥಿತಿ. ಹೌದು ಗೌಡ್ರೆ. ಮಧ್ಯಾಹ್ನ ಆಗಿತ್ತು, ಸೊಪ್ಪು ಎಲ್ಲಾ ಸೊಗರಾಗಿತ್ತು, ೧ ಘಂಟೆ ಬಸ್ ಹೋಯ್ತು. ಅದ್ನ ನೋಡಿ ಗೌಡ್ರೆ ಊಟದ ಹೊತ್ತಾಯ್ತು. ಸರಿ ಹೊರ್ಡಿ, ಊಟ ಆದ್ಮೇಲೆ ಇನ್ನೊಂದು ಮರ ಹತ್ತಿ ಕಡಿ ಅಂದು ನಾನೂ ಮನೆ ಕಡೆ ಹೊರಟೆ. ಊಟ ಆಗಿ ಮತ್ತೆ ಅಲ್ಲಿಗೆ ಬಂದೆ ಮೋಹನ ಮತ್ತೆ ಗ್ಯಾಂಗ್ ಆಗ್ಲೇ ಬಂದು ಎಲಡಿಕೆ ಹಾಕಿಕೊಳ್ತಿದ್ರು. ಎಲ್ಲ ಆದ್ಮೇಲೆ ಮೋಹನ ಮರ ಹತ್ತೋಕೆ ರೆಡಿಯಾದ. 'ಅಲ್ವೋ ಮೋಹನ ಚಡ್ಡಿ ಹಾಕೊಂಡು ಮರ ಹತ್ತದಲ್ವೇನೋ ಪ್ಯಾಂಟ್ ಕಷ್ಟ'. 'ಪೇಟೆಗೆ ಹೋಗಿದ್ದೆ, ಆದ್ರೆ ಬಡ್ಡಿಮಗ ಅಂಗಡಿಯವನು ೮೦ ರೂ ಅನ್ನೋದಾ, ಅದ್ಕೆ ವಾಪಸ್ ಬಂದೆ.' 'ಅಲ್ಲಯ್ಯ, ಫಿಲಂ ನೋಡೋದಕ್ಕೆ ಅಷ್ಟು ಸುರಿತೀಯಾ, ಒಂದು ಚಡ್ಡಿ ತಗೊಳ್ಳೋಕೆ ಇಷ್ಟು ಯೋಚ್ನೆ ಮಾಡ್ತೀಯಲ್ಲ?'. 'ಫಿಲಂ ನೋಡಿದ್ರೆ ಮಜಾ ಸಿಗತ್ತೆ ಚಡ್ಡಿಲಿ ಏನು ಸಿಗತ್ತೆ?' 'ಸರಿ ಬಿಡಪ್ಪ, ಕೇಳಿದ್ದೇ ತಪ್ಪಾಯ್ತು'. ಮೋಹನ ಮರ ಹತ್ತಿ ಅರ್ಧ ಘಂಟೆ ಆದ್ಮೇಲೆ ಇಳಿದ. ಕೆಳಗೆ ಕೂತು ಸುಧಾರಿಸಿಕೊಳ್ತಿದ್ದವನೇ 'ಗೌಡ್ರೆ, ಯಾವ್ದಾದ್ರೂ ಒಂದು ಹಳೆ ಸೆಟ್ ಇದ್ರೆ ಕೊಡಿ' 'ನಾನೇನು ಮೊಬೈಲ್ ಅಂಗಡಿ ಇತ್ಕೊಂಡಿದಿನೇನೋ?' 'ಹಳೆವು ಇರತ್ತಲ ನೋಡಿ' 'ಯಾವ್ದು ಇಲ್ಲ, ಎಂಥಕೆ ನಿಂಗೆ?, ಊರಿಗೆ ಹೋಗೋದು ಹೇಗಿದ್ರೂ ೩ ತಿಂಗ್ಳು ಬಿಟ್ಟು, ಜೊತೆಗೆ ನಿನ್ನ ಮನೆಯವರೆಲ್ಲ ಇಲ್ಲೇ ಇದ್ದಾರೆ'. 'ನನ್ನ ಮಾವನ ಮಗ್ಳು ಊರಲ್ಲೇ ಇದ್ದಾಳೆ' 'ಓಹೋ ಅದ್ಕೆ ಸೆಟ್, ಅವ್ಲ್ಹತ್ರ ಸೆಟ್ ಇದೆಯಾ?' 'ಹ್ಞೂ ಗೌಡ್ರೆ, ಅವ್ಳಿಗೆ ನಾನೇ ತೆಗ್ಸಿಕೊಟ್ಟಿದ್ದು' ಕೆಂಪಗೆ ಹೊಳಿತಿದ್ದ ೩೨ ಹಲ್ಲುಗಳನ್ನ ತೋರ್ಸಿದ. 'ಥೂ ನಿನ್ ಜನ್ಮಕ್ಕೆ ಒಂದಿಷ್ಟು ಬೆಂಕಿ ಹಾಕ, ಅಲ್ಲಯ್ಯ ನಿನ್ನ ದುಡ್ಡಲ್ಲಿ ಅವ್ಳಿಗೆ ಮೊಬೈಲ್ ತೆಗ್ಸಿಕೊಟ್ಟೆ, ಈಗ ನಿನ್ನ ಹತ್ರ ಮೊಬೈಲಿಲ್ಲ, ನಿನ್ನ ಮಾವನ ಮಗ್ಳು ಇನ್ಯಾವನ ಹತ್ರನೋ ಹರಟೆ ಹೊಡಿತಿದ್ರೆ??' 'ಹಂಗೆಲ್ಲ ಏನೂ ಆಗಲ್ಲ ಗೌಡ್ರೆ, ಒಂದು ಪಕ್ಷ ಹಂಗೇನಾದ್ರೂ ಆದ್ರೆ ಇನ್ನೊಬ್ಬ ಮಾವ ಇದ್ದಾನೆ ಅವ್ನಿಗೂ ಒಬ್ಳು ಮಗ್ಳಿದ್ದಾಳೆ'. 'ನೀನೂ ನಿನ್ನ ಸೆಟ್ ನಿನ್ನ ಸೆಟಪ್, ದೇವ್ರೇ ಕಾಪಾಡ್ಬೇಕು. ಏನಾದ್ರೂ ಮಾಡ್ಕೊಂಡು ಸಾಯಿ, ಒಟ್ನಲ್ಲಿ ಇಲ್ಲಿರೋ ಸೊಪ್ಪು ಇವತ್ತು ಸಂಜೆಯೊಳಗೆ ಗದ್ದೆ ಮುಟ್ಟಿರ್ಬೇಕು' ಅಂತ್ಹೇಳಿ ನಾನು ಮನೆ ಕಡೆ ಹೆಜ್ಜೆ ಹಾಕಿದೆ. ಹಳೆ ಸೆಟ್ ಇದ್ರೆ ನೋಡಿ ಮರೀಬೇಡಿ ಗೌಡ್ರೇ, ಮೋಹನ ಕೂಗ್ತಿದ್ದದ್ದು ದೂರದಿಂದ ಕೇಳ್ತಿತ್ತು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಇನ್ನು ಇದೆ ಅಂತ ಮುಂದೆ ನೋಡಿದರೆ ಮುಗಿದೆಹೋಗಿದೆ "ಪುರಾಣ" , ಮುದ ನೀಡುವ ಸಂಭಾಷಣೆ ಗಳಿಂದ ಕೂಡಿದ ಬರಹ ಚೇತನ್ ರವರೇ ....ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಹ ಹ್ಹ ಹ್ಹ ಅಷ್ಟು ಬೇಗ ಓದಿಬಿಟ್ಟಿದ್ದೀರಾ ನೀವು ಮುಗ್ದೇಹೋಯ್ತು ಅಷ್ಟೇ ಇದ್ದಿದ್ದು. ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದ ಸತೀಶವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ ರವರೆ ವಂದನೆಗಳು, ಗೌಡ್ರೆ ನಿಮಗಿಂತ ನಿಮ್ಮ ಮೋಹನನೆ ಬೆಟರು, ನೀವು ಆತನಿಗೆ ಎರಡು ಚಡ್ಡಿ ಒಂದು ಮೊಬೈಲ್ ತೆಗೆದು ಕೊಡಲೇ ಬೇಕು. ಅವನ ಪ್ರಣಯ ಪ್ರಸಂಗ ಸಾಂಗವಾಗಿ ನೆರವೇರಲು ಇದು ಅವಶ್ಯು. ಉತ್ತಮ ಲೇಖನ ಧನ್ಯುವಾದಗಳು. .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಹ ಹ್ಹ ಹ್ಹ ಅಯ್ಯೋ ಬೇಡ ಬಿಡಿ ಆಮೇಲೆ ಅದ್ನ ಕೊಡ್ಸಿ ಇನ್ನೂ ಎಷ್ಟು ಮನೆಗಳ್ನ ಹಾಳುಮಾಡ್ತಾನೋ!! ಮೆಚ್ಚುಗೆಗೆ ಧನ್ಯವಾದ ಸರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

> ಬೆಂಗಳೂರಿನಲ್ಲೊಂದು ದಿನ ಲೇಖಕರಿಂದ : ಮಲ್ಲೇಶ್ವರಂ ಹತ್ರ ಬಸ್ ಬಂದಾಗ ಬಸ್ ಅರ್ಧ ಖಾಲಿಯಾಯ್ತು. ಬಸ್ಸಲ್ಲಿ ಹಾಕಿದ್ದ ಎಫ್ ಎಂನಲ್ಲಿ 'ಇದೇನಾ ಸಭ್ಯತೆ, ಇದೇನಾ ಸಂಸ್ಕೃತಿ' ಹಾಡು ಬರ್ತಿತ್ತು, ಒಂದು ಹುಡ್ಗಿ, ಸುಮಾರು ೧೯-೨೦ ವಯಸ್ಸಿರಬಹುದು. ಸಣ್ಣ ಚಡ್ಡಿ, ಶರ್ಟ್ ಡ್ರೆಸ್ ಹಾಕಿದ್ಲು, ಬಸ್ ಮುಂದಿನ ಬಾಗ್ಲಿಂದ ಹತ್ತಿದ್ಳು. ಹತ್ತಿದ ತಕ್ಷಣ ಆ ಹಾಡು ಕೇಳಿ ಅವ್ಳಿಗೆ ಏನನ್ಸಿತೋ ಅಥ್ವ ಅಲ್ಲಿದ್ದವರೆಲ್ಲ ಅವ್ಳನ್ನೇ ನೋಡಿದ್ದಕ್ಕೋ ಅವ್ಳಿಗೆ ಮುಜುಗರ ಆಗಿ ತನ್ನ ಚಡ್ಡಿಯನ್ನ ಕೈನಿಂದ ಎಳೆದುಕೊಳ್ತಿದ್ಲು!! ಜೀನ್ಸ್ ಚಡ್ಡಿ, ಎಳೆದ್ರೆ ಉದ್ದ ಆಗತ್ತಾ?? ಬಹುಶ, ಈ ಹುಡ್ಗಿ ೮ನೇ ಕ್ರಾಸಲ್ಲೋ, ಮಂತ್ರಿ ಮಾಲಲ್ಲೋ ಯಾವ್ದೋ ಹರಿದ ಜೀನ್ಸ್ ತಗೊಂಡಿರ್ಬೇಕು (ಬಹುತೇಕ ಹುಡುಗರ ಜೀನ್ಸ್ ಪ್ಯಾಂಟ್ ಹಾಗೇ), ಮಲ್ಲೇಶ್ವರಂನಲ್ಲಿ ಈ ಹುಡ್ಗಿ ಆ ಪ್ಯಾಂಟ್ ತಗೊಂಡಿದ್ದು ನೋಡಿ ಶಿವ ತನ್ನ ೩ನೇ ಕಣ್ಣನ್ನೋ ಅಥ್ವಾ ತ್ರಿಶೂಲವನ್ನೋ ಸಿಟ್ಟಿನಿಂದ ಬಿಟ್ಟಿರಬೇಕು, ಆಗ ಅದು ತುಂಡಾಗಿ ಚಡ್ಡಿ ಆಗಿರ್ಬೇಕು, ಇವ್ಳು ವಿಧಿಯಿಲ್ಲದೇ ಅದ್ನ ಹಾಕೊಂಡಿದ್ದಾಳೆ!! >> ಚೇತನ್ ಆಗ್ಲಿ ಆಗ್ಲಿ ಪಾಪ ಅವನಿಗೆ ಒಂದು ಸೆಟ್ ಕೊಡ್ಸಿ ಹಾಗೆ ನೀವು ಒಂದು ಹೊಸ ಸೆಟ್ ತಗೋಳ್ಳೀ ನಿಮ್ಮ ಲವರ್ ಗೆ ಕೊಡೋಕೆ ಒಟ್ನಲ್ಲಿ ನಿಮ್ಗೆ ಬೆಂಗ್ಳೂರಿನಲ್ಲಿದ್ದಾಗು ಚಡ್ಡಿ ಚಿಂತೆ ಹಳ್ಳಿಗೆ ಹೋದ್ರು ಚಡ್ಡಿ ಚಿಂತೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಬ್ಬಬ್ಬ ಪಾರ್ಥವ್ರೆ ನೀವೂ ಆಗ್ಬಹುದು ಚೆನ್ನಾಗೇ ಲಿಂಕ್ ಮಾಡ್ತೀರಾ!!! <ಒಟ್ನಲ್ಲಿ ನಿಮ್ಗೆ ಬೆಂಗ್ಳೂರಿನಲ್ಲಿದ್ದಾಗು ಚಡ್ಡಿ ಚಿಂತೆ ಹಳ್ಳಿಗೆ ಹೋದ್ರು ಚಡ್ಡಿ ಚಿಂತೆ> ಯಾಕೋ ಅದು ಬಿಡೋ ಹಾಗೆ ಕಾಣ್ತಿಲ್ಲ ನೋಡಿ :) :) ಮೆಚ್ಚುಗೆಗೆ ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) ಚೆನ್ನಾಗಿದೆ ಚೇತನ್.. ಮೋತಿ, ಮೋಹನ, ಮೊಬೈಲ್ ಮತ್ತು ಸಾರಾಯಿ ಪ್ಲಾನ್, ಹಾಗೂ ಪಾರ್ಥ ಅವರ ಚಡ್ಡಿ ಲಿಂಕ್.. :) -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೋಡಿ ಗಣೇಶಣ್ಣ ಹೇಗ್ಹೇಗೆ ಲಿಂಕ್ ಮಾಡ್ತಾರೆ ಅಂತ, ತುಂಬಾ ಕೇರ್ಫುಲ್ ಆಗಿರ್ಬೇಕು :( !!! ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ್ >>>>ಬರಹ ಓದಿ ತುಟಿಯ ಮೇಲೆ ನಗೆ ಲಾಸ್ಯವಾಡಿತು... ಮುಸ್ಸಂಜೇಲಿ ಓದಿ ಮನ ಮುದಗೊಂಡಿತು... >>>>>ಪಾರ್ಥ ಸಾರಥಿ ಅವರ ಪ್ರತಿಕ್ರಿಯೆ- ಮತ್ತು 'ಚಿಕ್ ಚಡ್ಡಿ ಬಾಲೆ' ಚಿಕ್ಕಥೆ ಓದಿ ನಗೆ ಬಂತು:) ಕೆಲ ಸಾಲುಗಳು ಎಂದಿನಂತೆ ನನ್ನ ಗಮನ ಸೆಳೆದವು.. ಇಲ್ಲಿ ಹಾಕಿದ್ದೇನೆ... ಅದ್ಹೇಗೆ ಇವ್ನು ಇಷ್ಟೊತ್ತು ಸುಮ್ನಿದ್ದಾನಲ್ಲ ಅಂತ ಕೂದಲಿಗೆ ಅದೇನು ಕೆಮ್ಮಣ್ಣು ಬಳ್ಕೊಂಡಿದೀಯಲ್ಲ? ಯಾವ ಮಣ್ಣೂ ಅಲ್ಲ ಗೌಡ್ರೆ, ಲೂಸ್ ಮಾದನ ಫಿಲಂ ನೋಡಿ ಕಲರ್ ಹಾಕಿಸ್ಕೊಂಡಿದ್ದು. ಸರಿ ಬಿಡು ಹಂಗಾದ್ರೂ ಪೈಂಟ್ ಕಂಪನಿಯವ್ನು ಉದ್ಧಾರ ಆಗ್ಲಿ!! ಒಬ್ಳು ಮಗ್ಳಿದ್ದಾಳೆ ಅದ್ಕೆ ಅವ್ರಿಗೆ ಭಯ 'ಫಿಲಂ ನೋಡಿದ್ರೆ ಮಜಾ ಸಿಗತ್ತೆ ಚಡ್ಡಿಲಿ ಏನು ಸಿಗತ್ತೆ?' 'ಹಂಗೆಲ್ಲ ಏನೂ ಆಗಲ್ಲ ಗೌಡ್ರೆ, ಒಂದು ಪಕ್ಷ ಹಂಗೇನಾದ್ರೂ ಆದ್ರೆ ಇನ್ನೊಬ್ಬ ಮಾವ ಇದ್ದಾನೆ ಅವ್ನಿಗೂ ಒಬ್ಳು ಮಗ್ಳಿದ್ದಾಳೆ'.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) ನೀವೂ ಆಗ್ಬಹುದು ಬಿಡ್ರಿ. <ಚಿಕ್ ಚಡ್ಡಿ ಬಾಲೆ> :) ಮೆಚ್ಚುಗೆಗೆ ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<'ಹಂಗೆಲ್ಲ ಏನೂ ಆಗಲ್ಲ ಗೌಡ್ರೆ, ಒಂದು ಪಕ್ಷ ಹಂಗೇನಾದ್ರೂ ಆದ್ರೆ ಇನ್ನೊಬ್ಬ ಮಾವ ಇದ್ದಾನೆ ಅವ್ನಿಗೂ ಒಬ್ಳು ಮಗ್ಳಿದ್ದಾಳೆ'.>> ಹ ಹ ಹ್ಹಾ !!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) ಮೆಚ್ಚುಗೆಗೆ ಧನ್ಯವಾದ ಕಾಮತವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನವ್ರೆ, ಮಂಜಣ್ಣ ಮೆಚ್ಚುಗೆಗೆ ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಕ್ಕುರವರೆ, ಮೋಹನ ಹುಡುಗೀನ‌ ಸೆಟ್ ಮಾಡ್ಕೊಳ್ಳೋಕೆ ಸೆಟ್ ಕೊಡಿಸಿದ; ನೀವು ? ಗೊತ್ತಾಯ್ತು ಬಿಡಿ ನಿಮ್ಮ ಹಳೆಯ ಸೆಟ್ ಏನಾಯ್ತ್ಯೂಂತ :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) ಹ್ಹ ಹ್ಹ ಹ್ಹ ಪ್ರತಿಕ್ರಿಯೆಗೆ ಧನ್ಯವಾದ ಶ್ರೀಧರವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.