ಮುಗ್ದ ನಗು

4

ಅವರು ಸ್ನೇಹಿತರು. ಬಾನುವಾರ ಬೇಟಿಮಾಡಿದವರು ಏನೊ ಹೇಳುತ್ತಿದ್ದರು. ಅವರೊಂದು ಕಾರ್ಯಕ್ರಮದಲ್ಲಿ ಬಾಗವಹಿಸುತ್ತಿದ್ದಾರೆ ಅವರ ಸ್ನೇಹಿತರಾದ ಡಾಕ್ಟರ್ ಒಬ್ಬರು ಆಯೋಜಿಸಿರುವುದು. ಅದೇನೊ ಆಂಟಿ ಟೊಬ್ಯಾಕೊ ಕ್ಯಾಂಪೇನ್ ಅಂತೆ. ಅಂದರೆ ತಂಬಾಕು ಸೇವನೆಯ ವಿರೋದಿ ಹೋರಾಟ. ಅದರ ಅಂಗವಾಗಿ ಶಾಲೆಗಳಿಗೆ ಬೇಟಿಕೊಡುವುದು ಮಕ್ಕಳಿಗೆ ತಿಳುವಳಿಕೆ ಹೇಳುವುದು ಇತ್ಯಾದಿ. ನಾನು ಕೇಳಿ ನಗುತ್ತಿದ್ದೆ. ಅವರಿಗೆ ನಗುವಿನ ಅರ್ಥವಾಯಿತೇನೊ
“ಸಾರ್ ನಾನು ಈಗ ಸಿಗರೇಟ್ ಸೇದುವುದು ಬಿಟ್ಟುಬಿಟ್ಟಿದ್ದೇನೆ. ಇಂತ ಕಾರ್ಯಕ್ರಮದಲ್ಲಿರುವಾಗ  ಆ ಕೆಲಸಕ್ಕೆ ಮನ ಒಪ್ಪಲಿಲ್ಲ ಅಲ್ಲದೆ ಒಂದು ಪ್ರಾಮಾಣಿಕತೆ ಇರಬೇಕಲ್ಲವೆ “ ಎಂದರು. ನನಗು ತುಂಬಾ ಸಂತಸ ಎನಿಸಿತು.
-------------------------------------------------
ರಾಮಕೃಷ್ಣರ ಕಾಲದಲ್ಲಿ ಅವರ ಬಳಿ ಒಬ್ಬಾಕೆ ಬಂದಳು ತನ್ನ ಚಿಕ್ಕ ಮಗುವಿನೊಡನೆ
“ಸ್ವಾಮಿ ಇವನು ತುಂಟ ತುಂಬಾ ಬೆಲ್ಲ ತಿನ್ನುತ್ತಾನೆ. ನೀವು ಒಮ್ಮೆ ಹೇಳಿ ಸಾಕು ಬಿಟ್ಟು ಬಿಡುತ್ತಾನೆ”
ರಾಮಕೃಷ್ಣರು ತುಸು ಯೋಚಿಸಿದರು ನಂತರ ನುಡಿದರು
“ಆಗಲಮ್ಮ ಹೇಳೋಣ ನೀನು ಒಂದು ಕೆಲಸಮಾಡು ಹದಿನೈದು ದಿನ ಬಿಟ್ಟು ಪುನಃ ಬಾ ಆಗ ಹೇಳಿ ಒಪ್ಪಿಸುತ್ತೇನೆ”
ಆಕೆ ಬೇಸರದಿಂದ ಹೋಗಿ ಹದಿನೈದು ದಿನಕ್ಕೆ ಪುನಃ ಬಂದಳು. ಆಗ ರಾಮಕೃಷ್ಣರು ಮಗುವನ್ನು ಕರೆದು
“ನೋಡು ಮಗು ಬೆಲ್ಲ ತುಂಬಾ ತಿನ್ನುವುದು ದೇಹಕ್ಕೆ ಒಳೆಯದಲ್ಲ ಬಿಟ್ಟು ಬಿಡು”
ಆ  ಮಗುವು ಆಗಲಿ ಒಂದು ಒಪ್ಪಿ ಹೊರಟು ಹೋಯಿತು.
ಅವರ ಶಿಷ್ಯರೊಬ್ಬರು ಆಕ್ಷೇಪಿಸಿದರು. ಈ ಮಾತನ್ನು ಅಂದೆ ಹೇಳಬಹುದಿತ್ತು. ಹದಿನೈದು ದಿನ ಬಿಟ್ಟು ಬರಲು ಹೇಳಿದ್ದು ಏಕೆ.
ಅವರು ನಗುತ್ತ ನುಡಿದರು
“ಅಂದು ಆಕೆ ಬಂದಾಗ ನನಗು ಬೆಲ್ಲ ತಿನ್ನುವ ಚಟವಿತ್ತು. ಹಾಗಿರಲು ಮಗುವಿಗೆ ಹೇಗೆ ಹೇಳಲಿ ನಾನು ಪ್ರಾಮಾಣಿಕನಾಗಿರದೆ ಮಗುವಿನಿಂದ ಹೇಗೆ ಅದನ್ನು ನಿರೀಕ್ಷಿಸಲಿ ಅದಕ್ಕಾಗಿ ನಾನು ಈ ಹದಿನೈದು ದಿನದಲ್ಲಿ ಬೆಲ್ಲ ತಿನ್ನುವದನ್ನು ಬಿಟ್ಟೆ”
======================================================
ನನ್ನ ಸ್ನೇಹಿತರು ಪುನಃ ಸಿಕ್ಕಿದ್ದರು. ಪುನಃ ಅದೇ ಮಾತು
ಏನೊ ಮಾತನಾಡುತ್ತ ಜೀಬಿನಿಂದ ಸಿಗರೇಟ್ ತೆಗೆದು ಬಾಯಿಗಿಟ್ಟರು. ನನಗೆ ನಗು “ಇದೇನು ಪುನಃ” ಕೇಳಿದೆ.
“ಎಷ್ಟು ಹೇಳಿದರು ನೀನು ಕೇಳಲ್ಲವಲ್ಲ, ಮಣ್ಣು ತಿನ್ನಬೇಡ ಮಗು “ ಎಂದು ತಾಯಿ ಪದೆ ಪದೆ ಗೋಳಾಡಿದರು, ಹೇಗೊ ಬಾಗಿಲ ಮರೆ ಸೇರಿ ಗೋಡೆಯನ್ನು ಕೆರೆದು ,  ಮಣ್ಣನ್ನು ಬಾಯಿಗಿಟ್ಟು ನಗುವ ಮಗುವಿನ ಮುಗ್ದ ನಗು.

ಚಿತ್ರಮೂಲ :  encrypted-tbn2.google.com/images

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಉಪದೇಶ ಮಾಡುವುದು ಸುಲಭ ಆದರೆ ಅದನ್ನು ಅಳವಡಿಸಿಕೊಂಡು ಉಪದೇಶ ಮಾಡುವುದು ಕಷ್ಟ ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1. ನಿಜ, ಪಾರ್ಥರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಕವಿನಾಗರಾಜರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿಗಳೆ, ಸಿಗರೇಟು ಸೇದೋದನ್ನು ಬಿಡುವುದು ಬಹಳ ಸುಲಭ, ಏಕೆಂದರೆ ಅದನ್ನು ನಾನು ಹಲವಾರು ಬಾರಿ ಮಾಡಿದ್ದೇನೆ ಎಂದನಂತೆ ಒಬ್ಬ ಮಹಾನುಭಾವ. ಇದನ್ನೇ ಅಕ್ಷರಶ: ಅನುಸರಿಸುತ್ತಿದ್ದಾರೆ ಬಿಡಿ ನಿಮ್ಮ ಗೆಳೆಯರು :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಶ್ರೀಧರ್ ಬಂಡ್ರಿಯವರೆ ತಮ್ಮ ಪ್ರತಿಕ್ರಿಯೆಗೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿ ಯವರಿಗೆ ವಂದನೆಗಳು ' ಮುಗ್ಧ ನಗು ' ಒಂದೊಳ್ಳೆಯ ಲೇಖನ, ಆಚರಣೆ ಮತ್ತು ಉಪದೇಶಗಳು ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ ಮತ್ತು ಮಹಾತ್ಮಾ ಗಾಂಧೀಜಿ ಯಂತಹವರಿಗೆ ಮಾತ್ರ ಸಾಧ್ಯ, ಈಗ ಎಲ್ಲರೂ ಉಪದೇಶ ನೀಡುವವರೆ, ಆದರೂ ಉಪದೇಶ ನಮ್ಮಲ್ಲಿ ಬದಲಾವಣೆ ತುರುವದಾದರೆ, ಉಪದೇಶಕನ ವ್ಯಕ್ತಿಗತ ದೌರ್ಬಲ್ಯಗಳು ಗೌಣ, ಇಂದು ಅಂತಹ ದೊಂದು ಸ್ಥಿತಿಯಲ್ಲಿ ನಾವಿದ್ದೇವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೇಗೊ ನಾವೊಂದು ಒಳ್ಳೆಯ ದಾರಿಯಲ್ಲಿ ನಡೆದರು ಆಯಿತು ತಮ್ಮ ಮಾತು ನಿಜ‌ ವಂದನೆಗಳೊಡನೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದಕ್ಕೆ ಅಲ್ವ ಸರ್ ಹೇಳೋದು , ಪುರಾಣ ಹೇಳೋಕೆ ಬದನೆಕಾಯಿ ತಿನ್ನೋಕೆ ಅಂತ. ಮುಗ್ಧ ನಗು ಚೆನ್ನಾಗಿದೆ ಅಭಿನಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1(ವೀಣಾ ಅವರ) ಪ್ರತಿಕ್ರಿಯೆಗೆ... ಹೇಳುವುದು ಒಂದು ಮಾಡುವುದು ಇನ್ನೊಂದು ನೆನಪಿಗೆ ಬಂತು..... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೇಳುವದನ್ನೆ ಮಾಡುತ್ತ ಹೋದರೆ ಸ್ವಾರಸ್ಯವೆಲ್ಲಿ ಉಳಿದೀತು ಅಲ್ಲವೆ ಸಪ್ತಗಿರಿಯವರೆ :)) ಈಚೆಗೆ ನಿಮ್ಮ ಬರಹಗಳೆಲ್ಲ ಕಡಿಮೆಯಾಯಿತು. ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಮೇಡಮ್ ಯಾರೊ ಹೇಳಿದರು ಎಂದು ಬದನೆಕಾಯಿ ಬಿಡಕ್ಕೆ ಆಗುತ್ತ! ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಚಿತ್ರ ನೋಡಿದರೆ ನನ್ನ ಬಬ್ಲೂವಿನ ತು೦ಟಾಟಗಳೆ ಫಕ್ಕನೆ ಕಣ್ಮು೦ದೆ ಹಾದು ಹೋಗುತ್ತವೆ. ಒಳ್ಳೆಯ ಚಿತ್ರಕ್ಕಾಗಿ ನಿಮಗೊ೦ದು ವ೦ದನೆ.. ಅನುಭಾವದಿ೦ದ ಉ೦ಟಾಗುವ ಅನುಭವಗಳು ಮೇಲಿನ ಮಹಾತ್ಮರದ್ದು! ಒಳ್ಳೆಯ ಲೇಖನ.. ರಾಮಕೃಷ್ಣರ ಸ೦ಗತಿಯನ್ನು ಓದಿ ತಿಳಿದುಕೊ೦ಡಿದ್ದೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗು ಹಾಗೆ ಅನ್ನಿಸಿತ್ತು ! ಮತ್ತೆ ಈ ಬರಹದ ಮೂಲ ಭಾವ ನೀವನ್ನುವಂತೆ ಆ ನಗೆಯೆ ಆಗಿದೆ. ನಾನು ಕೇಳಿದಾಗ ಅವರ ಮುಖದಲ್ಲಿ ಒಂದು ತುಂಟ ನಗೆ (ಅಥವ ಮುಗ್ದ ನಗೆ) ಮೂಡಿತ್ತು. ಆ ನಗುವಷ್ಟೆ ಈ ಬರಹದ ವಸ್ತು. ಮತ್ತೆ ನೀವು ಮಾಡಿಸಿದ ತಿದ್ದುಪಡಿಗೆ ಅನಂತ ವಂದನೆಗಳು. ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಸಾರ್ ನಾನು ಈಗ ಸಿಗರೇಟ್ ಸೇದುವುದು ಬಿಟ್ಟುಬಿಟ್ಟಿದ್ದೇನೆ. >>> ಓಹೋ! ಅದಕ್ಕೇ ಬಾಯಲ್ಲಿ ಗಣೇಶ್ ಬೀಡಿ ಅನ್ನಿ ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಪಾರ್ಥಸಾರಥಿಯವರೆ, ಮಗುವಿನ ಚಿತ್ರ,ನಿಮ್ಮ ಬರಹ, ಉಳಿದ ಪ್ರತಿಕ್ರಿಯೆಗಳು ಮುಗ್ದ ನಗು ತರಿಸಿದವು. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶ್ (ಮೀಸೆ ತಿರುಗಿದೆ) ನಿಮ್ಮ ಮೆಚ್ಚುಗೆಗೆ ನನ್ನ ವಂದನೆಗಳು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಶ್ರೀನಾಥ್ ಬಲ್ಲೆಯವರೆ ಗಣೇಶರ ಬಾಯಲ್ಲಿ ಗಣೇಶ್ ಬೀಡಿ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥವ್ರೆ ಫೇಸ್ಬುಕಲ್ಲಿ ನೋಡಿದೆ ಅರ್ಧ ಮಾತ್ರ ಇತ್ತು, ಇಲ್ಲಿ ಓದಿದ್ದೆ. ಸಕತ್ ಬಿಟ್ಟೆನೆಂದರೂ ಬಿಡದೀ ಮಾಯೆ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಟ್ನಲ್ಲಿ ಅರ್ದಾನ ಪೂರ್ತಿಯಾಗಿ ಇಲ್ಲಿ ಓದಿದ್ರಿ :)) ವಂದನೆಗಳು ಚೇತನ್ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.