ಮಾತೃಭೂಮಿಯ ಮೇಲೇಕಿಷ್ಟು ಮತ್ಸರ

3

ಊರಿದ ಬುವಿ
ಉಣ್ಣುವ  ಅನ್ನ
ಉಸಿರಾಡುವ ಗಾಳಿ
ಉಟ್ಟ ಬಟ್ಟೆ
ಎಲ್ಲವೂ ಇಲ್ಲಿಯದೇ

ರಕ್ತ ಹಂಚಿಕೊಂಡ
ಭಾವನೆಗಳನ್ನು ಬೆಸೆದ
ಅಣ್ಣ ತಮ್ಮ ಅಕ್ಕ ತಂಗಿಯರೂ
ಬಂಧು ಬಾಂಧವರೂ
ಎಲ್ಲರೂ ಇಲ್ಲಿಯವರೇ

ಭೂಮಿಯ ಉರಿಸಿ
ಅನ್ನಕೆ ವಿಷ ಬೆರೆಸಿ
ಗಾಳಿಯ ಮಲಿನಗೊಳಿಸಿ
ಬಂಧುಗಳ ನೆತ್ತರ ಹರಿಸಿ
ಬಟ್ಟೆ ಬದಲಾಯಿಸುವ ಘೋರ ಮನಸ್ತಿತಿಯೇಕೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೌದು ಏಕೆ ? ಇಲ್ಲಿನವರು ಅವರಿಗೇನು ಮಾಡಿಹರು ತಮ್ಮಗಿಲ್ಲದ ಅನ್ನ ನೀರು ಅವರಿಗೆ ಕೊಟ್ಟು ಸಲಹಿಹರು ಹಲವು ದ್ರೋಹದ ಬೆಂಕಿಯ ಒಡಲಲಿಟ್ಟು ನಕ್ಕು ಬೆನ್ನಿಗೆ ಬಿದ್ದವರಂತೆ ಸಲಹಿಹರು ಮಾತು ಕತೆಯಲ್ಲಿ ಪದೆಪದೆ ಬಾಯಿ ಬಾಯಿ ಎಂದು ನುಡಿದಿಹರು ಆದರೆ ಎಲ್ಲರು ಒಂದು ಮರೆತಿಹರು 'ಬೇವು ಬಿತ್ತಿ ಮಾವು ಬೆಳೆವ ತವಕವೇಕೆ ಮಾನವ' ನಾವು ಅವರಿಂದ ಬಹಳ ನಿರೀಕ್ಷಿಸಲಾಗದು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1 ಪಾರ್ಥರೆ, ಕೊತ್ತಂಬರಿ ಬೀಜದಿಂದ ಕೊತ್ತಂಬರಿಯೇ ಹುಟ್ಟುವುದು :((
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಹನೆಯನ್ನು ಹೇಡಿತನವೆಂದು ಭ್ರಮಿಸುವ, ಸ್ನೇಹವನ್ನು ದ್ವೇಷಿಸುವ ವಿಕ್ಱತ ಮನಸ್ಸುಗಳವು. ಅವರ ಕಣ್ಣುಗಳನ್ನು ಅವರೆ ತೆರೆದು ನೋಡಬೇಕು. ಧನ್ಯವಾದಗಳು ಚಿಕ್ಕು ರಾಮೋ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚ್ಹೇತನ್ ಅವ್ರೇ..... ಸಕಾಲಿಕ ಬರಹ.... ದಾರಿ ತಪ್ಪಿದ ಆ ಯುವ ಜನತೆಯನ್ನ ಸರಿ ದಾರಿಗೆ ತರಲು ಆ ಹಿರಿಯರಿಂದ ಆಗುತ್ತಿಲ್ಲ...:(( ಇದರಲ್ಲು ರಾಜಕೀಯ ಮಾಡುವ ರಾಜಕರಣಿಗಳನ್ನು ಮೊದಲು ........ದ್ದು ಒಡಿಸಬೇಕು... ಅಮಾಯಕರ ಜೀವನದ ಜೊತೆ ಚ್ಹೆಲಾಟ ಆಡೋ ಇವರಿಗೆ ಜನರೇ ಬುದ್ಧಿ ಕಲಿಸುವ ಕಾಲ ದೂರ ಇಲ್ಲ ಅನ್ಸುತ್ತೆ... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ್, ಕವನ ಚೆನ್ನಾಗಿ ಮೂಡಿ ಬಂದಿದೆ. ಜನರನ್ನು ಮರುಳು ಮಾಡುವ ವಿವಿಧ ವೇಷಗಳನ್ನ ಧರಿಸಿಕೊಂಡು ಅಟ್ಟಹಾಸಗೈಯುತ್ತಾ ಮಾತೃ ಭೂಮಿಯನ್ನು ದುರ್ಬಲಗೊಳಿಸುತ್ತಿರುವ ಮತಾಂಧ ಶಕ್ತಿಗಳಿಗೆ ತಮ್ಮ ಕವನ ಕಣ್ತೆರೆಸ ಬಹುದೇನೋ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ ಖೋಡುವಳ್ಳಿ ಯವರೆ ವಂದನೆಗಳು " ಮಾತೃಭೂಮಿಯ ಮೇಲೇಕಿಷ್ಟು ಮತ್ಸರ ?" ಯಾಕೆಂದರೆ ಈ ನೆಲದ ನೆಮ್ಮದಿ ಅವರಿಗೆ ಮುಖ್ಯವಲ್ಲ, ಧರ್ಮದ ಮತಾಂಧತನ, ತನ್ನದೆ ಶ್ರೇಷ್ಟ ಉಳಿದವರದು ಕನಿಷ್ಟ ಎಂಬ ಭಾವನೆ, ಭೂಮಿ ಉರಿಯಲಿ ಅನ್ನಕೆ ವಿಷ ಬೆರೆಯಲಿ ಗಾಳಿ ಮಲಿನ ಗೊಳ್ಳಲಿ ಬಂಧುಗಳ ನೆತ್ತರದ ಕೋಡಿಯೇ ಹರಿಯಲಿ ಅವರಿಗೆ ಅದು ಲೆಖ್ಖಕ್ಕಿಲ್ಲ, ಇದು ಕ್ರೂರ ಮನಸ್ಥಿತಿಯ ಅಲಿಖಿತ ಸಿದ್ಧಾಂತ. ಸರಳ ಆದರೆ ನಮ್ಮನ್ನು ಆತ್ಮಾವಲೋಕನಕ್ಕೆ ಹಚ್ಚುವ ಉತ್ತಮ ಕವನ, ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ್ ಅವರೆ ನಮಸ್ಕಾರ. ದ್ವೇಷದ ಬೆಂಕಿ ತನ್ನ ಮನೆಯ ಸುಡುವುದಲ್ಲದೆ ನೆರೆಮನೆಯ ಸುಡದು...ಇದು ಯಾಕೆ ಅರ್ಥವಾಗ್ತಿಲ್ಲಾ ಜನತೆಗೆ.ಉತ್ತಮ ಕವನ ಅಭಿನಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಚೇತನ್ ರವರೆ, ಮಾನವ ಅತ್ಯಂತ ಸ್ವಾರ್ಥಿಯಾದ್ದರಿಂದ ತನ್ನೊಬ್ಬನನ್ನು ಬಿಟ್ಟು ಮಿಕ್ಕೆಲ್ಲರಮೇಲು ಮತ್ಸರವೇ! ಉತ್ತಮ ಕವನ. ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದ ಪಾರ್ಥವ್ರೆ, ಶ್ರೀಧರವ್ರೆ, ರಾಮಮೋಹನವ್ರೆ, ಸಗಿಯವ್ರೆ, ಲತೀಫವ್ರೆ, ಪಾಟೀಲ್ ಸರ್, ಎಂಎಂಶೇಖವ್ರೆ, ಪ್ರಕಾಶವ್ರೆ ಎಲ್ಲರಿಗೂ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.