ಮರಣೋತ್ತರ ಪರೀಕ್ಷೆ ಬೇಡ!

0

ಸಖೀ,
ನಾನು ಆಡುವ ಮಾತುಗಳೆಲ್ಲಾ ನನ್ನವು
ಹಾಗೆಯೇ ನಿನ್ನ ಮಾತುಗಳೆಲ್ಲಾ ನಿನ್ನವು

ಈ ಭಾವ ಭಾವಗಳ ಬಂಧ ಬಿಗಿಯಾಗಿರಲು
ಸಂಬಂಧಗಳ ನಡುವೆ ಇರದು ಪರೀಕ್ಷೆಗಳು

ಮೌನಮಾತು ಮಾತು-ಮೌನ ಹೀಗೆಯೇ
ಸಾಗುತ್ತಿರಬೇಕೀ ಜೀವನ ಎಂದಿನಂತೆಯೇ

ಆಡಿದ ಪ್ರತಿ ಮಾತಿನ ಮರಣೋತ್ತರ ಪರೀಕ್ಷೆ
ಮಾಡಿದರೆ ಈ ಜೀವನವೇ ಆದೀತೊಂದು ಶಿಕ್ಷೆ

ನನ್ನ ಭಾವಗಳಿಗೆ ನಾನೇ ಜವಾಬ್ದಾರ ನೀನಲ್ಲ
ನಿನ್ನನಿಸಿಕೆಗಳಿಗೆ ಜವಾಬ್ದಾರಳು ನೀ ನಾನಲ್ಲ!
*******

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

<ಆಡಿದ ಪ್ರತಿ ಮಾತಿನ ಮರಣೋತ್ತರ ಪರೀಕ್ಷೆ ಮಾಡಿದರೆ ಈ ಜೀವನವೇ ಆದೀತೊಂದು ಶಿಕ್ಷೆ ನನ್ನ ಭಾವಗಳಿಗೆ ನಾನೇ ಜವಾಬ್ದಾರ ನೀನಲ್ಲ ನಿನ್ನನಿಸಿಕೆಗಳಿಗೆ ಜವಾಬ್ದಾರಳು ನೀ ನಾ…ನಲ್ಲ! (ನಾನಲ್ಲ.) ನಾ... ನಲ್ಲ! ಎಂಬುದನ್ನು ಚೆನ್ನಾಗಿ ಬಳಸಿರುವಿರಿ. ಆಸು ಹೆಗ್ಡೆಯವರೆ.... "ಆಡಿದ ಪ್ರತಿ ಮಾತಿನ ಮರಣೋತ್ತರ‌ ಪರೀಕ್ಷೆ" ಈ ವಾಕ್ಯ ಸದಾ ನೆನಪಿನಲ್ಲುಳಿಯುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಡಿದ ಮಾತಿನ ಮರಣೋತ್ತರ ಪರೀಕ್ಷೆ ಬೇಡ! ಹಾಗೆ ನಾವಾಡಿದ ಮಾತಿಗೆ ಮರಣ ಬೇಡ ! :))) ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1. ಯೋಚಿಸಬೇಕಾದ ವಿಷಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಡುವಾತನು ಮರಣ ಪೂರ್ವ ಪರೀಕ್ಷೆ ನಡೆಸಿದ್ದರೆ, >>ಆಡಿದ ಪ್ರತಿ ಮಾತಿನ ಮರಣೋತ್ತರ ಪರೀಕ್ಷೆ<< ಬೇಕೆನಿಸುವುದಿಲ್ಲ ಅಲ್ಲವೆ ನಲ್ಲರೆ.....? ಆಸು ಸಾರ್ ಚೆನ್ನಾಗಿದೆ. ಧನ್ಯವಾದ‌ಗಳು ರಾಮೋ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.