ಮಮತಾ ಕಾಪು ರವರ ಬ್ಲಾಗ್

ಬಣ್ಣದ ಹಬ್ಬದ ಫಜೀತಿ

ಬಣ್ಣ -ಬಣ್ಣದ ಚಿತ್ತಾರ ಮೂಡಿಸುವ ಹೋಳಿ ಹಬ್ಬವೆಂದರೆ ಕಾಲೇಜು ವಿದ್ಯಾರ್ಥಿಗಳಿಗೆ ಬಹಳ ಅಚ್ಚುಮೆಚ್ಚು. ತಿಳಿಯದೆ ಯಾರಾದರೂ ಬಿಳಿ ಡ್ರೆಸ್ ಹಾಕಿಕೊಂಡು ಆ ದಿನ ಕಾಲೇಜಿಗೆ ಬಂದರಾದರೆ ಆ ಮೇಲೆ ಕೇಳೋ ಹಾಗಿಲ್ಲ. ಮೊದಲ ಟಾರ್ಗೆಟ್ ಆ ವಿದ್ಯಾರ್ಥಿಯೇ. ಅದೊಂದು ಮೋಜಿನ ಸಂಗತಿ. ಅಂದು ಹೋಲಿ ಹಬ್ಬ. ತರಗತಿಗೆ ಬರುವಾಗಲೇ ಕೆಲವು ವಿದ್ಯಾರ್ಥಿಗಳು ಬಣ್ಣದ ಹುಡಿಗಳ ಪ್ಯಾಕೆಟ್‌ಗಳನ್ನು ಬ್ಯಾಗ್‌ನಲ್ಲಿರಿಸಿಕೊಂಡು ಬಂದಿದ್ದರು. ಯಾರಿಗೂ ಗೊತ್ತಾಗದಂತೆ ಹಾಕಬೇಕು ಎಂಬುದು ಅವರವರ ಮನಸ್ಸಿನಲ್ಲಿ, ಒಬ್ಬರ ಮುಖ ಒಬ್ಬರು ನೋಡಿಕೊಂಡಾಗ ಮುಸಿಮುಸಿ ನಗು. ಇಷ್ಟು ಚಂದದ ಡ್ರೆಸ್ ಕೆಲವು ಕ್ಷಣಗಳಲ್ಲಿ ಇನ್ನೂ ಬಣ್ಣಮಯವಾಗುತ್ತದಲ್ಲ ಎಂದು. ಏನೇ ಆದರೂ ಮಧ್ಯಾಹ್ನದ ವರೆಗೆ ಏನೂ ಮಾಡುವಂತಿರಲಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.

ಬುಕ್‌- ಫೇಸ್‌ಬುಕ್‌

"ಮನುಷ್ಯರಿಂದ ಪುಸ್ತಕಗಳು ಎಷ್ಟೋ ವಾಸಿ... ಎಲ್ಲಾ ಸಮಯದಲ್ಲಿ ಖುಷಿ ಕೊಡದಿದ್ದರೂ ಯಾವತ್ತೂ ನೋವನ್ನುಂಟು ಮಾಡುವುದಿಲ್ಲ". ಇದು ಇತ್ತೀಚೆಗೆ ನನ್ನ ಸ್ನೇಹಿತನೊಬ್ಬ, ಫೇಸ್ ಬುಕ್ ನಲ್ಲಿ ದಾಖಲಿಸಿದ ಸ್ಟೇಟಸ್. ಯಾವತ್ತೂ ತಾನಾಯಿತು ತನ್ನ ಕೆಲಸವಾಯಿತು ಎಂದುಕೊಂಡಿರುತ್ತಿದ್ದ ಆತನಿಗೆ ಇದೇನಾಯಿತಪ್ಪ ಅಂದುಕೊಂಡೆ. ಹೆಚ್ಚು ಕಡಿಮೆ ನನ್ನ ಅಭಿಪ್ರಾಯವೂ ಅದೇ ಆಗಿದ್ದುದರಿಂದ ಲೈಕ್ ಬಟನ್ ಒತ್ತಿದೆ. ಪೇಸ್ ಬುಕ್‌ನಿಂದ ಲಾಗ್ ಔಟ್ ಆದ ನಂತರವೂ ಈ ವಿಚಾರ ನನ್ನ ತಲೆಯಲ್ಲಿ ಕೊರೆಯುತ್ತಿತ್ತು. ಇದರ ಬಗ್ಗೆ ಯೋಚಿಸುತ್ತಾ ಹೋದ ಹಾಗೆ ಗೆಳೆಯನ ಈ ವಾಕ್ಯದಲ್ಲಿ ೯೯% ರಷ್ಟು ನಿಜಾಂಶ ಇದೆ ಎಂದು ಅರಿವಾಯಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.6 (5 votes)
To prevent automated spam submissions leave this field empty.

ಕಬ್ಬು ತಿನ್ನುವ ಸಂಭ್ರಮ:

ಮ್ಮೂರಿನಲ್ಲಿ ಆಗ ಒಂದೇ ಪ್ರಾಥಮಿಕ ಶಾಲೆಯಿದ್ದಿದ್ದು. ನಾವು ಮನೆಯಿಂದ ಶಾಲೆಗೆ ಹೋಗಬೇಕಾದರೆ ಸುಮಾರು ಒಂದು ಗಂಟೆ ಕಾಲ ನಡೆದುಕೊಂಡೇ ಹೋಗಬೇಕಾಗಿತ್ತು. ಶಾಲೆಯಲ್ಲಿ ಒಂಭತ್ತೂವರೆಗೆ ಸ್ಟಡಿ ಬೆಲ್ ಬಾರಿಸುತ್ತಿದ್ದರಿಂದ ಅದಕ್ಕಿಂತ ಮುಂಚೆ ಎಲ್ಲರೂ ತರಗತಿಯ ಒಳಗಡೆ ಹಾಜರಿರಬೇಕೆಂಬುದು ಅಂದಿನ ನಿಯಮ. ಅದಕ್ಕಾಗಿ ಎಂಟು ಗಂಟೆಗೇ ಮನೆಯಿಂದ ಹೊರಡಬೇಕಾಗುತ್ತಿತ್ತು. ಈಗಿನಂತೆ ಅಂದು ಶಾಲೆಗಳಲ್ಲಿ ಬಿಸಿಯೂಟ ಇರಲಿಲ್ಲ. ಹಾಗಾಗಿ ಬೆಳಗ್ಗೆಯೇ ಮಧ್ಯಾಹ್ನದ ಊಟವನ್ನೂ ಬುತ್ತಿ ಕಟ್ಟಿಕೊಂಡು  ಹೋಗಬೇಕಾಗುತ್ತಿತ್ತು. ಒಂದಷ್ಟು ಪುಸ್ತಕಗಳು, ಒಂದು ದೊಡ್ಡದಾದ ಕೊಡೆ, ಬುತ್ತಿ(ಟಿಫನ್ ಬಾಕ್ಸ್‌) ಇವೆನ್ನೆಲ್ಲಾ ಒಂದೇ ಬ್ಯಾಗಿನಲ್ಲಿಟ್ಟುಕೊಂಡು, ಬೆನ್ನು ಬಾಗಿಸಿಕೊಂಡು ಹೋಗಬೇಕಾಗಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.2 (5 votes)
To prevent automated spam submissions leave this field empty.

ವಿವೇಕಾನಂದ ಜಯಂತಿ ಆಚರಣೆ -ಒಂದು ಸ್ಮರಣೆ.

ಪದವಿ ತರಗತಿಯಲ್ಲಿರುವಾಗ ಜನವರಿ ತಿಂಗಳು ಬಂತೆಂದರೆ ನಮಗೆ ಎಲ್ಲಿಲ್ಲದ ಸಂತಸ. ಅದಕ್ಕೆ ಹಲವಾರು ಕಾರಣಗಳು. ಹೊಸ ವರ್ಷದ ಸಂಭ್ರಮ, ಸಂಕ್ರಾಂತಿ ಹಬ್ಬ, ಗಣರಾಜ್ಯ ದಿನ, ಸ್ವಾಮಿ ವಿವೇಕಾನಂದ ಜಯಂತಿ ಹೀಗೆ ಹಲವಾರು ಸಂಭ್ರಮಾಚರಣೆಗಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.

ಕ್ಯಾಲೆಂಡರಿಗಷ್ಟೇ ಸೀಮಿತವಾಗದಿರಲಿ - 2013

ಲ್ಲವೂ ಹೊಸತು..ಹೊಸತು. ಬಣ್ಣ ಮಾಸಿದ ಗೋಡೆಗಳ ಮೇಲೆ ಬಣ್ಣದ ಕಾಗದಗಳ ಶೃಂಗಾರ. ಅಲ್ಲಲ್ಲಿ ಊದಿದ ಬಲೂನುಗಳು, ಎಂದೂ ಕಾಣದ ಈ ಸಂಭ್ರಮ ಹೊಸ ವರ್ಷದ ಸ್ವಾಗತಕ್ಕಾಗಿ. 2012ನೇ ಇಸವಿಗೆ ವಿದಾಯ ಹೇಳಿ, 2013-ನೂತನ ವರ್ಷವನ್ನು ಸ್ವಾಗತಿಸುವ ತಯಾರಿ. ಹನ್ನೊಂದು ಗಂಟೆಯಿಂದ ವಿವಿಧ ರೀತಿಯ ಆಟಗಳು ಈ ಹನ್ನೆರಡರ ವಿದಾಯಕ್ಕಾಗಿ. ಗಂಟೆ ಹನ್ನೆರಡು ತೋರಿಸಿದ್ದೇ ತಡ, ಹಲೋ ಹ್ಯಾಪಿ ನ್ಯೂ ಇಯರ್..ಹಲೋ ಹ್ಯಾಪಿ ನ್ಯೂ ಇಯರ್ -ಮೊಬೈಲನ್ನು ಕಿವಿಗೆ ಹಿಡಿದುಕೊಂಡು ಹಲವರ ಬೊಬ್ಬೆ . ಇನ್ನು ಕೆಲವರು ಈ ಹೊತ್ಗೆ ನೆಟ್ ವರ್ಕ್ ಕೈ ಕೊಡ್ಬೇಕಾ ಅಂದುಕೊಂಡು ಎದುರು ಸಿಕ್ಕ ಮೊಬೈಲ್ ಗಳನ್ನು ಕೇಳುವ ಸಹನೆಯೂ ಇಲ್ಲದೆ ತೆಗೆದುಕೊಂಡು ನಂಬರ್ ಒತ್ತಲು ಶುರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.

Pages

Subscribe to RSS - ಮಮತಾ ಕಾಪು ರವರ ಬ್ಲಾಗ್