ಮತ್ತೊಮ್ಮೆ ತಿರುಗಿ ನೋಡುವಾಸೆ

3

 


 ಮತ್ತೊಮ್ಮೆ ತಿರುಗಿ ನೋಡುವಾಸೆ 
 
 ನಡೆಯಲು ಯತ್ನಿಸಿದರು ನಡೆಯಲಾಗದು ನನಗೆ
 ಓಮ್ಮೆ ತಿರುಗಿ ನೋಡಿ ಕಣ್ತುಂಬುವ ಆಸೆ ಎನಗೆ
 
 ಕೆಲ ಹೆಜ್ಜೆಗಳ ಕ್ರಮಿಸಿ ತಿರುಗಿ ನೋಡಿದೆ ನಾನು
 ಸೌಂದರ್ಯವ ಸವಿಯುತ ಹಾಗೆಯೇ ನಿಲ್ಲಲೇನು?
 
 ನನ್ನೀ ವರ್ತನೆಯ ಗಮನಿಸುವರೆಂಬ ಭಯವೆನಗೆ
 ಆದರೂ ಬಿಡಿಸಿಕೊಳ್ಳಲಾರೆ ಆಕರ್ಷಣೆಯ ಆ ಘಳಿಗೆ
 
 ಒಂದು ದಿನದಿ ನಿಂತು ನೋಡಿದರು ತೀರದು ದಾಹ
 ದಿನ ಕಳೆದಂತೆ ಗಾಡವಾಗುತ್ತಿದೆ ನನ್ನೀ ಮೋಹ
 
 ಕಚೇರಿಯ ಒಳಗಿದ್ದರೂ ಗಂಟೆಗೊಮ್ಮೆ ಅದೇ ಧ್ಯಾನ
 ಮಳಿಗೆಯೊಳು ಖರೀದಿಗೆ ನಿಂತರು ಅದರದೇ ಧ್ಯಾನ
 
 ಹೆಂಡತಿಯೊಡು ಬೈಸಿಕೊಂಡಿದ್ದು ಆಯಿತು ನಾನು
 ಹಾಗಂತ ನನ್ನ ಆಸೆಯ ಕೂಸನು ಬಿಡಲಾಯಿತೇನು
 
 ಶುರುವಾಗಿದೆ ನನಗೆ ನನ್ನ ಕಾರು ನೋಡುವ ಚಟ  
 ಖರೀದಿಸಿದ ಮೇಲೆ ನನ್ನ ಹೊಸ ಶೆವ್ರೋಲೆಟ್ ಬೀಟ್        
 
 - ತೇಜಸ್ವಿ.ಎ.ಸಿ


 ಇದಕ್ಕೆ ಸಂಬಂಧಪಟ್ಟ ಹಳೆಯ ಕವನ: sampada.net/article/25669 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮತ್ತೊಮ್ಮೆ ತಿರುಗಿ ನೋಡುವಾಸೆ --------------------------- ತೇಜಸ್ವಿ ಅವ್ರೆ ಶೀರ್ಷಿಕೆ ಓದಿ !! ಕುತೂಹಲಿ ಆಗಿ ಕವನದ ಕೊನೆವರ್ಗೆ ಬರ್ವವರೆಗೂ ನೀವ್ ಯಾವುದರ ಬಗ್ಗೆ ಬರೆದಿರುವ್ರಿರೋ ಅಂತ ಕುತೂಹಲ ಇತ್ತು, ಮೊದಲಿಗೆ ಅದು ಹುಡುಗಿ ಬಗ್ಗೆ ಅಂದುಕೊಂಡೆ ಆಮೇಲೆ ಮುಂದೆ ಗೊತ್ತಾಯ್ತು - ಆಗಲೇ ಹುಡುಗಿ ಇರುವಳು!!( ಹೆಂಡತಿಯೊಡು ಬೈಸಿಕೊಂಡಿದ್ದು ಆಯಿತು ನಾನು) ಮುಂದೇನು???? ಅಂತ ಓದುತ್ತ ಹೋಗಲು ಕೊನೆಗೆ ಅಸಲು ವಿಷ್ಯ ಗೊತಾತು:()) ನೀವ್ ಹೊಸ ಕಾರು ಕೊಂಡ ಸಂದರ್ಭದಲ್ಲಿ ಸಂಪದಿಗರಿಗೆ ಸಿಹಿ ಕೊಡೋಲ್ಲವೇ?... ಶುಭವಾಗಲಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿವಾಸಿಯವರೇ, ಕೊನೇತನಕ ಕುತೂಹಲವಿಟ್ಟು ಕೊನೆಗೆ ಒಂದ್ ಒಳ್ಳೆ ತಿರುವು ಕೊಡೋಣ ಅಂತಾನೆ ಇದನ್ನು ಬರೆದದ್ದು. ಸ್ವಲ್ಪ ಮಜಾ ಕೊಟ್ಟಿರಬೇಕು ಅನ್ಸುತ್ತೆ.....ಹ್ಹ ಹ್ಹ ಹ್ಹ. ಎಲ್ಲರೂ ಓಮ್ಮೆ ಸಮ್ಮಿಲನದಲ್ಲಿ ಸಿಗೋಣ ಆಗ ಕಾರ್ ಕೊಂಡಿದ್ದಕ್ಕೆ ಎಲ್ರಿಗೂ ಸಿಹಿ ಕೊಡ್ತೀನಿ..:-). ನಿಮಗೆ ಶುಭವಾಗಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾರುಗಳ ಬಗ್ಗೆ ಇರುವ ಆಸಕ್ತಿಗೆ(ಹುಚ್ಚಿಗೆ) ನನಗೆ ಎಲ್ಲಾ ಕಾರು ನೋಡುವ ಚಟ! ಸದ್ಯಕ್ಕಂತೂ ಅದು ಬಿಟ್ಟು ಹೋಗುವ ಹಾಗಿಲ್ಲ!! ಬೀಟ್ ನನ್ನ ಇಷ್ಟದ ಡಿಸೈನ್ ಗಳಲ್ಲಿ ಒಂದು. ಮಿನಿ ಬೀಸ್ಟ್(Beast)!! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೂ ಈಗ ನನ್ನದಷ್ಟೆ ಅಲ್ಲ ಬೇರೆ ಕಾರುಗಳ ನೋಡುವ ಆಸಕ್ತಿಯು ಬೆಳೆದಿದೆ. ಹೌದು, ಬೀಟ್ ವಿನ್ಯಾಸ ಚೆನ್ನಾಗಿದೆ... :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.