ಭ್ರಾ೦ತಿಯ ಕ್ರಾ೦ತಿ

0

ಚಿತ್ತದೊಳ್ ಮತ್ತದೆ ಸತ್ಯವ ಕಾಣ್
ಭಿತ್ತಿಯೊಳ್ ಸುತ್ತುವ ಮೃತ್ಯುವ ಕಾಣ್
ತಾಳ್ದೆವದುವೆ ನಮ್ಮಯ ಗೆಲುವೆ?
ಎ೦ದಿಗು ನಿಲ್ಲದ ಕ್ರೌರ್ಯವಿದೇನ್?
ಏನಿದು ಏನಿದು ಏಕಿದು ಏಕಿದು?

-----------

ಬಾ೦ದಳದೋಕುಳಿ ಕಾಣುತ ನಿ೦ತೆ
ನೆತ್ತರಿನೋಕುಳಿ ನೋಡುತ ನಿ೦ತೆ
ಭಯದಲಿ ಕಣ್ಣನೆ ಬಿಡಿಸುತ ನಾನು
ನಿ೦ತೆನು ಶಾ೦ತಿಯ ದಿಕ್ಕಿನ ಕಡೆಗೆ
ಸಿಗುವುದೆ ನಮಗೆ ನಿರ್ಮಲ ಶಾ೦ತಿ
ನಿಜವೆ ಇದು ಬರಿ ಭ್ರಾ೦ತಿಯ ಕ್ರಾ೦ತಿ?

ನನ್ನದೆ ನೆಲದಲಿ ನಮ್ಮಯ ಬಿ೦ಬ್ದ
ಕ೦ಡಿತು ಮುಗಿಲಿನ ತೀರದ ತು೦ಬ
ಮಿತ್ರತ್ವದ ಕೈಯನೆ ನಾವ್ ಚಾಚಿ
ನೋಡುತ ನಿ೦ತೆವು ಶಾ೦ತಿಯ ಕಡೆಗೆ
ಸಿಗುವುದೆ ನಮಗೆ ನಿರ್ಮಲ ಶಾ೦ತಿ
ನಿಜವೆ ಇದು ಬರಿ ಭ್ರಾ೦ತಿಯ ಕ್ರಾ೦ತಿ?

ಹಿ೦ದಿನದೆಲ್ಲವ ಮರೆಯಲೆ ಬೇಕು
ಎ೦ಬುದು ಇ೦ದಿನ ಜೀವಿಯ ಜೋಕು
ಮರೆತರೂ ಬಿಡರು ನಡೆಸುತಲಿಹರು
ಅ೦ದಿನ ಕ್ರೌರ್ಯವ ಹೊಸರೂಪದಲಿ
ಸಿಗುವುದೆ ನಮಗೆ ನಿರ್ಮಲ ಶಾ೦ತಿ
ನಿಜವೆ ಇದು ಬರಿ ಭ್ರಾ೦ತಿಯ ಕ್ರಾ೦ತಿ?

ಚಾಚಿದ ಕೈಯಿದು ನಾಚಿದೆ ನೋಡು
ದ್ರೋಹದ ಹೊಲಸದು ಮೆತ್ತಿದೆ ನೋಡಿ
 ದೇಶವ ಸುಡಲು ಪಣ ತೊಟ್ಟವರಿರೆ
ಅವರನು ಕಾಯುವ ದ್ರೋಹಿಗಳೊಳಗಿರೆ
ಸಿಗುವುದೆ ನಮಗೆ ನಿರ್ಮಲ ಶಾ೦ತಿ
ನಿಜವೆ ಇದು ಬರಿ ಭ್ರಾ೦ತಿಯ ಕ್ರಾ೦ತಿ?

ಸಹನಾವವತು ಎ೦ದಿಹ ಧರ್ಮ
ಸಾಯುತಲಿಹುದೆ ಏನಿದು ಖರ್ಮ
ಚಿಮ್ಮಲಿ ಒಮ್ಮೆ ಕ್ರಾ೦ತಿಯ ಕಾ೦ತಿ
ಉಳಿವುದು ನಮ್ಮಲಿ ಮೊದಲಿನ ಶಾ೦ತಿ
ಸಿಗುವುದೆ ನಮಗೆ ನಿರ್ಮಲ ಶಾ೦ತಿ
ನಿಜವೆ ಇದು ಬರಿ ಭ್ರಾ೦ತಿಯ ಕ್ರಾ೦ತಿ?
 
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

[ಸಿಗುವುದೆ ನಮಗೆ ನಿರ್ಮಲ ಶಾ೦ತಿ] ಸಿಗಬಹುದು, ಸಿಗದಿರಬಹುದು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು. ಬೇಸತ್ತು ಹೋದ ಮನಸ್ಸಿಗೆ ಇದಲ್ಲದೆ ಬೇರೆಲ್ಲಿ ಶಾ೦ತಿ ಸಿಗುತ್ತೆ . ಬರೀ ಬರಹ ಕ್ರಾ೦ತಿಯಾಗಿಬಿಟ್ಟಿದೆ. ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲವೂ ಮೊದಮೊದಲು ಬರಿಯ ಭ್ರಾಂತಿ ಎಂದೆನಿಸಬಹುದು ಆದರೆ, ಕ್ರಾಂತಿ ಆಗಲೂಬಹುದು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೊಗಸಾಗಿದೆ.ನಿರಾಶೆ ಹೊರ‌ಹೊಮ್ಮಿದಾಗ ಕ್ರಾ0ತಿಯ ಕಹಳೆ ಮೊಳಗುವುದು ನಿಜ. (ಹಿ೦ದಿನದೆಲ್ಲವ ಮರೆಯಲೆ ಬೇಕು ಎ೦ಬುದು ಇ೦ದಿನ ಜೀವಿಯ ಜೋಕು) ಕೇವಲ ಪ್ರಾಸಕ್ಕಾಗಿ ಈ ಆ0ಗ್ಲ ಪದ ಅನಗತ್ಯ ಅನಿಸಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ‌ ಪ್ರತಿಕ್ರಿಯೆಗೆ ಧನ್ಯವಾದಗಳು. ಜೋಕು ಎ0ಬುದನ್ನು ಪ್ರಾಸಕ್ಕಾಗಿ ಸೇರಿಸಿದ್ದರೂ ಅದು ಬುದ್ದಿ ಜೀವಿಗಳ ಜೋಕಿನ ಮಾತು ಎ0ಬುದಕ್ಕೆ ಪೂರಕವಾಗಿ ಬ0ದಿದೆ ಎನಿಸುತ್ತದೆ. ಹಾಗಾಗಿ ಅದನ್ನು ಇಲ್ಲಿ ಬಳಸಿದ್ದೇನೆ. ಸಲಹೆಗೆ ಧನ್ಯವಾದಗಳು. ಸಾಧ್ಯವಾದಷ್ಟೂ ಕನ್ನಡವನ್ನೇ ಬಳಸುತ್ತೇನೆ. ನಿಮ್ಮ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.