ಭೂವಿಮಾನ ಯಾನ

4

 

 

ಭೂವಿಮಾನ ಯಾನ

ಭೂವಿಮಾನವೇರಿ ಯಾನ
ವ್ಯೋಮಕಕ್ಷೆಯಲ್ಲಿ
ಅವ್ಯಾಹತವಾಗಿ ಸದಾ
ನಿಲ್ಲದಲ್ಲಿ ಇಲ್ಲಿ !!

ದೊಡ್ಡದಾದ ಈ ವಿಮಾನ
ದಲ್ಲಿ ಎಲ್ಲ ಉಂಟು
ಗುಡ್ಡ ಬೆಟ್ಟ ನದಿ ಸಾಗರ
ಜನ್ಮಾಂತರ ನಂಟು !!

ಕೋಟ್ಯಂತರ ಜೀವ ನಿ-
-ರ್ಜೀವವನ್ನು ಹೊತ್ತು
ನಿಷ್ಠೆಯಿಂದ ನೀಲ ನಭದಿ
ಸೂರ್ಯನಿಂಗೆ ಸುತ್ತು !!

ಅಜ್ಜ ಅಜ್ಜಿಯೆಂಬ ಮೂಲ
ದವರು ಇಲ್ಲಿ ಹುಟ್ಟಿ
ನಿಜ ವಿಮಾನದೊಳಗೆ ಮಾಡಿ
ಜೀವ ಯಾನ ಗಟ್ಟಿ !!

ನಮ್ಮ ಯಾನ ವೀ ವಿಮಾನ
ವೇರಿ ವೇಗದಲ್ಲಿ
ಹೆಮ್ಮೆಯೋಟ ಕೂಟವೆಂಬ
ಬಲು ಮಾಟಗಳಿಲ್ಲಿ !!

ಸೆಳೆತಕಾಗಿ ತಿರುಗಾಟದ
ಸೂತ್ರವಿದರ ಹಿಂದೆ
ತಿಳಿದು ಸಂಭ್ರಮಿಸಿದಾಗ
ಮಾತ್ರ ನೋಟ ಮುಂದೆ !!

- ಸದಾನಂದ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ರೂಪಕ ಸುಂದರವಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Dhanyavadagalu

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.