ಭಿಕ್ಷೆ

3.5

ದೇವ ನಿನ್ನ ಕರುಣೆಯ ಜೀವಿಗಳು ನಾವು

ನೀ ಆಡಿಸಿದ ಹಾಗೆ ಆಡುವ  ಗೊಂಬೆ  ನಾವು

 ನೀ ಕೊಡುವ ಚಾಟಿಯು ನಮಗೆ ದ:ಖವು 

ನೀ ಕೊಡುವ ಕಾಣಿಕೆಯು ಸುಖವು

ಸುಖ ಇದ್ದಾಗ ನಿನ್ನ ನೆನವು ಮರೆಯುವರು

ಕಷ್ಟ ಬಂದಾಗ ನಿನ್ನ ಮೊರೆ ಹೋಗುವರು

ಸಂಕಟ ಬಂದಾಗ ವೆಂಕಟರಮಣ  ಎನ್ನುವರು

 ನಾವೆಲ್ಲೆರು ನಿನ್ನಿಂದ ಸುಖವ ಬೇಡುವ ಭಿಕ್ಷುಕರು

  ಈ ಜಗತ್ತಿನಲ್ಲಿ ಸುಖ-ದು:ಖ  ಎಲ್ಲವೂಕ್ಷಣಿಕ

 ನಿನ್ನ ಬಿಟ್ಟು ಇಲ್ಲಿ ಯಾವುದೂ ಶಾಶ್ವತವಲ್ಲ

ನಿನ್ನಿಂದ  ಎಲ್ಲರೂ ಸುಖವನ್ನೇ ಬಯಸುವರು

ಒಟ್ಟಿನಲ್ಲಿ ನಾವೆಲ್ಲರು ಒಂದು ರೀತಿಯ ಭಿಕ್ಷುಕರು

ತಮ್ಮ ಸ್ವಾರ್ಥಕ್ಕೋಸ್ಕರ  ಏನು ಮಾಡಲು ಸಿದ್ದರಿರುವರು

ತಮ್ಮ ಸುಖಕ್ಕಾಗಿ ಬೇರೆಯವರ ಶಾಂತಿ ಹಾಳುಮಾಡುವರು

ಇದರಿಂದ ಬೇಸತ್ತು ಹುಡುಕುತ್ತಾ ಹೂರಟೆ ಮನ: ಶಂತಿ

 ಆದರೆ ಹಬ್ಬಿತ್ತು ಅಶಾಂತಿ ಎಲ್ಲ ಕಡೆ

 ಹೆತ್ತ ತಂದೆ -ತಾಯಿ ದೂರವಿಟ್ಟು

ಕಾಯಕ ಯೋಗಿ ಆಗದೆ ಬಯಸಿದೆನು ಸುಖವ

ದೇವ ನಿನ್ನ ನೆನೆಯದೆ ಮೂರ್ಖನಾದೆನು

ಕೊಡು ದೇವ ಮುಕ್ತಿ ಎಂಬ ಭಿಕ್ಷೆಯನು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ರವೀಂದ್ರ ಎನ್ ಅಂಗಡಿಯವರಿಗೆ ವಂದನೆಗಳು
ಭಿಕ್ಷೆ ಒಂದು ಅರ್ಥಗರ್ಭಿತ ವರ್ತಮಾನದ ಸ್ಥಿತಿ ಬಿಂಬಿಸುವ ಕವನ, ಗುಣಶೇಖರ ಮೂರ್ತಿಯವರ ಪ್ರತಿಕ್ರಿಯಾತ್ಮಕ ಕವನ ನಿಮ್ಮ ಕವನದ ಗಹನತೆಯನ್ನು ಹೆಚ್ಚಿಸಿದೆ, ಹೀಗೆಯೆ ನಿಮ್ಮ ಕ್ರಿಯಾಶೀಲ ಬರವಣಿಗೆ ಮುಂದುವರಿಯಲಿ. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ಸರ್
ನಿಮ್ಮ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.