ಗಿಡದಡಿ ಬಿದ್ದ ಪಕಳೆಗಳು.....!

4

                ಹೂವಿನ ಗಿಡದಡಿ ಬಿದ್ದ...

                ಪಕಳೆಗಳ ನೋಡಿ

                ಮೆಲಕು ಹಾಕಿದಳು....ಅಜ್ಜಿ

                ಕಳೆದು  ಹೋದ  ನೆನಪುಗಳ....!

               ತನ್ನ ತವರು ಮನೆಯಿಂದ

               ಮುರಿದು  ತಂದಿದ್ದ  ಈ .....ಟೊಂಗೆ

               ಈ ಮನೆಯ ಅಂಗಳದಿ ನೆಟ್ಟು ಸಿಂಗರಿಸಲು !

               ನೆಟ್ಟಿದ್ದು  ಗಿಡವಾಗಿ..

               ಮೈ ತುಂಬ  ಮೊಗ್ಗು !

               ನೋಡಿದವರಿಗೆಲ್ಲ   ಹಿಗ್ಗು

               ಅವಳ ಪತಿಗೆ ಈ ಗಿಡದ

               ಹೂವೇ ಪೂಜೆಗೆ  ಬೇಕು..

               ಮಕ್ಕಳಿಗೆ ಮಾತ್ರ ಈಗ ಎರಡೂ ಬೇಡ !

               ಕಳೆದವೆಷ್ಟೋ  ವರುಷ..!

               ಗಿಡವೀಗ  ಹಳತಾಗಿದೆ..

               ಟೊಂಗೆ ಎಷ್ಟೋ ಸಲ ಮುರಿಸಿಕೊಂಡಿದೆ !

               ಈಗ  ಒಂದೋ  ಎರಡೋ

               ಹೂವುಗಳರಳಿ  ಪಕಳೆಗಳುರುಳುತ್ತವೆ

               ಅಜ್ಜಿ...ತನ್ನ ಕೈ ಮೇಲೆ ಕೈ ಇಟ್ಟು

               ಚರ್ಮದ ನಿರಿಗೆಗಳ ಮೇಲೆ ಬೆರಳನಿಟ್ಟು

               ಆಸೆಗಣ್ಣಿನಿಂದೊಮ್ಮೆ  ಗಿಡದೆಡೆಗೆ ನೋಟ

               "ಮುದಿಜೀವದೆಡೆಗೊಂದು

                ಇರಲಿ ಕರುಣೆಯ ಕಣ್ಣು...

               ಸಾಕಿ ಸಲುಹಿದ ಋಣವ  ತೀರಿಸುವ ದಾರಿ"

               ಬಿದ್ದ ಪಕಳೆ ಮಾತಾಡಿದಂತೆ ಅಜ್ಜಿಗನಿಸಿ

               ನಸು ನಕ್ಕಳು...!

               ಚಿಗುರುವುದೆ  ಮತ್ತೆ ಗಿಡ ...!

               ಮಾಡಬೇಕಾದವರಾರು ಕಾಳಜಿ ?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ತುಂಬಾ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಗೋಪಾಲ್ ರವರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾದ ಅನಿಸಿಕೆ, ಭಾಗ್ವತರೇ. ಮಕ್ಕಳು, ಮೊಮ್ಮಕ್ಕಳು ಆ ಗಿಡವನ್ನು ಕಡಿಯದಿದ್ದರೆ ಸಾಕು, ಅದೇ ಅಜ್ಜಿಗೆ ಬೇಕು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನಾಗರಾಜ್ ರವರೆ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಕವಿತೆಗಳ ಹಿಂದಿನ ಚಿಂತನೆ ನನಗೆ ತುಂಬಾ ಇಷ್ಟವಾಗುತ್ತದೆ ಹಾಗೆಯೇ ಏನನ್ನೂ ವಸ್ತುಶಃ ಹೇಳದೆ ಓದುಗನ ಮನದಲ್ಲಿ ವಿಚಾರವನ್ನೆಬ್ಬಿಸುವ ಕೌಶಲ್ಯವೂ ಕೂಡ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂತೋಷರವರೆ, ನಿಮ್ಮ ಮೆಚ್ಚುಗೆಯ ಮಾತಿಗೆ ಅನಂತ ಧನ್ಯವಾದಗಳು.ನಿಮ್ಮೆಲ್ಲರ ಒಡನಾಟದಲ್ಲಿ ಸದಾ ಕಲಿಯುವ ಬೆಳೆಯುವ ಇಚ್ಛೆಯೊಂದಿಗೆ ತಮ್ಮವ _ಭಾಗ್ವತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.