ಮನಸ್ಸಿನ ಮನಸ್ಸೇ ಹೀಗೆ......!

5

                ಮನಸ್ಸು.......... 

                ಕೆಲವೊಮ್ಮೆ  ಏನೆಲ್ಲ ಬಾಡಿಗೆ ಪಡೆದು

                ಸಾಂತ್ವನ ಹೇಳುತ್ತದೆ..!

                ಅಮ್ಮ ಮುನಿಸಿ ಕೊಂಡಾಗ

                ಆಕೆಯ ಬೆನ್ನಿಗಂಟಿಕೊಂಡೇ

                ತನ್ನ ಪ್ರಾಮಾಣಿಕತೆಯ

                ಪ್ರಮಾಣ ಪತ್ರಗಳ ರಾಶಿ ಸುರುವಿ

                ಸಮಾಧಾನ ಪಡಿಸಿ...

                ಮನಸ್ಸಿನಲ್ಲಿ, ಗೆದ್ದೆನೆಂಬ ಪದಕ

               ಗೆಳೆಯ ಕೋಪಿಸಿಕೊಂಡಾಗ

               ಇನ್ನೊಬ್ಬ ಸಖನ ಬಳಿಗೆ

              ತನ್ನೊಳಗಿರುವದನೆಲ್ಲ ತೋಡಿ

              ಮನಸ್ಸು ಹಗುರ ಗೊಳಿಸಿ ಕೊಳ್ಳುವ ತವಕ..!

               ಪತ್ನಿಯು ಮುನಿಸಿಕೊಂಡಾಗ..

               ಹಳೆಯ ನೆನಪುಗಳ ಮೆಲಕು ಹಾಕಿ

               ಮನಸ್ಸಿಗೆ ತಾತ್ಕಾಲಿಕ  ಉಪಶಮನ..!

               ಮನಸ್ಸಿನ ಸಾಂತ್ವನಕೆ ಮನಸ್ಸು

               ಮನಸ್ಸು ಮಾಡಬೇಕು ....!

               ಮನಸ್ಸಿನ  ಮನಸ್ಸೇ  ಹೀಗೆ !

             ( ಶ್ರೀ ರಾಘವೇಂದ್ರ ನಾವಡರ ' ಮನಸ್ಸಿಗೆ ಮನಸ್ಸಿದೆಯೇ " ಎಂಬ ಮಾತಿನ ಪ್ರೇರಣೆ )

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ನನ್ನ ಪ್ರಶ್ನೆಗೆ ನಾನೊ೦ದು ರೀತಿಯಲ್ಲಿ ಉತ್ತರ ಕ೦ಡುಕೊ೦ಡರೆ ನೀವೊ೦ದು ರೀತಿಯಲ್ಲಿ! ಆದರೂ ನನ್ನದ್ದಕ್ಕಿ೦ತ ನಿಮ್ಮದೇ ಸೊಗಸು. ಧನ್ಯವಾದಗಳು. ನಾನೆತ್ತಿದ ಪ್ರಶ್ನೆಯೊ೦ದು ಕವನದ ಉಗಮಕ್ಕೆ ಕಾರಣವಾಗಿದ್ದು, ನನಗೆ ಹೆಮ್ಮೆಯೆನಿಸುತ್ತದೆ. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ ನಮಸ್ಕಾರ, ನಿಮ್ಮ "ಕಲ್ಲಾದರೂ ಕದಲದೇ" ಕವನದ ಸಾಲುಗಳು ನನಗೆ ಈ ಕವನ ಬರೆಯಲು ಪ್ರೇರೇಪಿಸಿತು.ನಿಮ್ಮ ಕಾವ್ಯವನ್ನೆಲ್ಲ ಸಂಪದದಲ್ಲಿ ಓದುತ್ತೇನೆ. ಅವು ನನ್ನಂತವರಿಗೆ ಒಂದಿಷ್ಟು ಬರೆಯಲು ಪ್ರೇರೇಪಿಸುತ್ತದೆ.ಸಂಪದದ ಮೂಲಕ ನಿಮ್ಮಂತಹ ಸಹೃದಯಿಗಳ ಒಡನಾಟದಲ್ಲಿ ಇನ್ನಷ್ಟು ಕಲಿಯ ಬೇಕೆಂಬ ಹಂಬಲದೊಂದಿಗೆ ನಿಮ್ಮ ಪ್ರೀತಿಪೂರ್ವಕ ಸದಭಿಪ್ರಾಯಕ್ಕೆ ಅನಂತ ಧನ್ಯವಾದಗಳು. -ಭಾಗ್ವತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾಗ್ವತರೆ ತುಂಬಾ ಚೆನ್ನಾಗಿದೆ ನಿಮ್ಮ ಕವನ. ಬೇರೆಯವರಿಗೂ ಪ್ರತಿಕ್ರಿಯಿಸಿ ಸರ್. ನಿಮ್ಮೆಲ್ಲರ ಉತ್ತೇಜನದಿಂದ ಹಲವಾರು ಲೇಖಕರು ಕವಿಗಳು ಹುಟ್ಟಿಕೊಳ್ಳುತ್ತಾರೆ. ಇದು ವಿನಂತಿ. ಆದೇಶವಲ್ಲ. ನಿಮ್ಮ ಇಚ್ಛೆಗೆ ಬಿಟ್ಟದ್ದು. ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರೇಶ ನಾಡಿಗರವರಿಗೆ ನಮಸ್ಕಾರ. ಕವನದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ತಮಗೆ ಧನ್ಯವಾದಗಳು. <<ಬೇರೆಯವರಿಗೂ ಪ್ರತಿಕ್ರಿಯಿಸಿ >> ಖಂಡಿತ ಪ್ರತಿಕ್ರಿಯಿಸುವೆ. ನಾನಿರುವ ಊರಲ್ಲಿ ವಿದ್ಯತ್ ಹಾಗೂ ನೆಟ್ ವರ್ಕ ಸಮಸ್ಯೆ ಇದೆ.ಹಾಗಾಗಿ ಕೆಲವೊಮ್ಮೆ ನಾನು ಈ ವಿಷಯದಲ್ಲಿ ಅಸಹಾಯಕ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<<ಮನಸ್ಸಿನ ಸಾಂತ್ವನಕೆ ಮನಸ್ಸು ಮನಸ್ಸು ಮಾಡಬೇಕು ....! ಮನಸ್ಸಿನ ಮನಸ್ಸೇ ಹೀಗೆ !>>>>> ಭಾಗ್ವತರೇ ಮನಸ್ಸಿನ ಮನಸ್ಸಿಗೆ ಮನದಲ್ಲೇ ಹೇಳಬೇಹು ಉತ್ತಮ ಕವನ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಿನಾಥರವರೆ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಮನಸ್ಸೆ ಇಂದು ರೀತಿಯ ಹಿತವಾದ ಅನುಭವ ತುಂಬಾ ಅರ್ಥಪೂರ್ಣ ಕವನ ಭಾಗ್ವತ ಸರ್ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಸಂತ್ ರವರೆ ನಿಮ್ಮ ಮೆಚ್ಚುಗೆಗಾಗಿ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ.. ಕವನ ಇಷ್ಟವಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂತೋಷರವರೆ ನಿಮ್ಮ ಮೆಚ್ಚುಗೆಗಾಗಿ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿದೆ ಭಾಗ್ವತವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ್ ರವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ, ಭಾಗ್ವತರೇ. ಮನಸ್ಸೇ ಹಾಗೆ! ಇದ್ದದ್ದನ್ನು ಹೊರಹಾಕಿದಾಗಲೇ ನಿರಾಳತೆ! ಮುಚ್ಚಿಟ್ಟುಕೊಂಡರೆ ಅಶಾಂತತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿನಾಗರಾಜ್ ರವರೆ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.