ಪ್ರತಿಕ್ರಿಯೆ ಬಯಸದೇ....?

0

             ಕಾವ್ಯ......

            ಪ್ರತಿಕ್ರಿಯೆ ಇಲ್ಲೆಂದು

            ಹೀಗೇಕೆ ಬಸವಳಿದು

            ಕುಳಿತಿರುವೆ....!

            ನಿನಗಾಗಿ ಶಬ್ಧಗಳ

            ಆಭರಣ  ಹುಡುಕಿದರೂ

            ಸಿಗುತ್ತಿಲ್ಲ  ನನಗೆ !

             ಕಾವ್ಯವೆಂದಿತು.......

            ಗೆಳೆಯ ನೀನೆಷ್ಟು

            ಅಲಂಕರಿಸಿದರೂ

            ಇಷ್ಟವಾಗ ಬೇಕಲ್ಲ ಇತರರಿಗೆ !

            ನಿನಗೆ ನಿನ್ನದೇ ಆದ

            ಬಣವಿಲ್ಲ   ಬಲವಿಲ್ಲ...

            ಮುಗಿಸಿ ಬಿಡು ನನ್ನ  ಅಂತಿಮ ಕ್ರಿಯೆ !

           ಮುಗಿಸಿ  ಬಿಟ್ಟೆ.......

           ಯಾರೂ ಪ್ರತಿಕ್ರಿಯಿಸಲಿಲ್ಲ..!

           ಮತ್ತೆ ಹುಟ್ಟಿತು  ಕಾವ್ಯ  ತನ್ನಷ್ಟಕ್ಕೆ..

           ಪ್ರತಿಕ್ರಿಯೆ ಬಯಸದೇ....?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಭಾಗ್ವತರೇ ಹೌದು ಕವಿತೆ ತನ್ನಷ್ಟಕ್ಕೆ ತಾನೇ ಹುಟ್ಟುವುದು ಹಾಗಿರುವಾಗ ಬೇರೆಯ ಪ್ರತಿಕ್ರಿಯೆ ಎಂದರೆ? ಅವರಿಗೂ ಹುಟ್ಟಲೇಬೇಕಲ್ಲ, ಕ್ರಿಯೆ- ಪ್ರತಿಕ್ರಿಯೆಗೆ ಉತ್ತಮ ಕವನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಿನಾಥರವರೆ ವಂದನೆಗಳು. ತಮ್ಮ ಮೆಚ್ಚುಗೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾಗ್ವತ್, ಪ್ರತಿಕ್ರಿಯೆ ಬಯಸದೇ... ಹುಟ್ಟಿದ ಕವಿತೆಗೆ ಪ್ರತಿಕ್ರಿಯೆಯಾಗಿ ಇದೀಗ ಹುಟ್ಟಿದೆ ಈ ಕವಿತೆ: http://sampada.net/b... - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಸು ಹೆಗ್ಡೆಯವರಿಗೆ ನಮಸ್ಕಾರಗಳು. ನೀವು ಕೊಟ್ಟ ಕೊಂಡಿಯಲ್ಲಿರುವ ಕವನ ಓದಿದೆ. ನಿಮ್ಮ ಸದಭಿಪ್ರಾಯಕ್ಕಾಗಿ ನಮನಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇನ್ನೊಬ್ಬರಿಗಾಗಿ ಬರೆದದ್ದು ಎಷ್ಟೆಂದರೂ ನಿಮ್ಮ ಮನಸ್ಸನ್ನು ಗೆಲ್ಲಲಾರದು. ನೀವು ಬರೆದದ್ದು ನಿಮಗೆ ಮೊದಲು ಇಷ್ಟವಾಗಬೇಕು - ಸುಂದರವಾದ ಕವಿತೆ ಭಾಗ್ವತರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂತೋಷರವರೆ ನಿಮ್ಮ ಮಾತು ಸತ್ಯ.ನಮ್ಮ ಕಾವ್ಯ ನಮಗೆ ಮೊದಲು ಇಷ್ಟವಾಗಬೇಕು. ಕವನದ ಮೆಚ್ಚುಗೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾಗ್ವತ, <<ಗೆಳೆಯ ನೀನೆಷ್ಟು ಅಲಂಕರಿಸಿದರೂ ಇಷ್ಟವಾಗ ಬೇಕಲ್ಲ ಇತರರಿಗೆ ! ನಿನಗೆ ನಿನ್ನದೇ ಆದ ಬಣವಿಲ್ಲ ಬಲವಿಲ್ಲ...>> ಇದು ಕವಿ ತನ್ನ ಮನದ ಕೊರಗನ್ನು ಕಾವ್ಯದ ಬಾಯಿಯಿಂದ ಹೊರಹಾಕಿಸುತ್ತಿರುವಂತೆ ಭಾಸವಾಗುತ್ತಿದೆ. ತನ್ನದೇ ಆದ ಓದುಗರ ಬಣವಿಲ್ಲ, ಹಾಗಾಗಿ ತನ್ನ ಕಾವ್ಯಗಳಲ್ಲಿ ಮತ್ತು ತನ್ನಲ್ಲಿ ಯಾವುದೇ ಬಲವಿಲ್ಲ ಎಂದು ಕವಿ ಕರುಬುತ್ತಿರುವಂತೆ ಭಾಸವಾಗುತ್ತಿದೆ. ಇದು ಓರ್ವ ಸೃಜನಶೀಲ ಕವಿಯಲ್ಲಿನ ಅನಿರೀಕ್ಷಿತ ಗುಣಗಳು. ಈ ಸಾಲುಗಳೇ, ನಾನು ನೀಡಿರುವ ಆ ಕೊಂಡಿಯಲ್ಲಿರುವ ಆಸುಮನದ ಮಾತುಗಳನ್ನು ಬರೆಯುವಂತೆ ಪ್ರೇರೇಪಿಸಿದ್ದು. - ಆಸು ಹೆಗ್ಡೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಸು ಹೆಗ್ಡೆಯವರಿಗೆ ವಂದನೆಗಳು, <<ಇದು ಕವಿ ತನ್ನ ಮನದ ಕೊರಗನ್ನು ಕಾವ್ಯದ ಬಾಯಿಯಿಂದ ಹೊರಹಾಕಿಸುತ್ತಿರುವಂತೆ ಭಾಸವಾಗುತ್ತಿದೆ. ತನ್ನದೇ ಆದ ಓದುಗರ ಬಣವಿಲ್ಲ, ಹಾಗಾಗಿ ತನ್ನ ಕಾವ್ಯಗಳಲ್ಲಿ ಮತ್ತು ತನ್ನಲ್ಲಿ ಯಾವುದೇ ಬಲವಿಲ್ಲ ಎಂದು ಕವಿ ಕರುಬುತ್ತಿರುವಂತೆ ಭಾಸವಾಗುತ್ತಿದೆ. ಇದು ಓರ್ವ ಸೃಜನಶೀಲ ಕವಿಯಲ್ಲಿನ ಅನಿರೀಕ್ಷಿತ ಗುಣಗಳು. >> ಕಾವ್ಯದ ಪರಿಣಾಮದ ರೀತಿಯೇ ವಿಚಿತ್ರ. ನಾನು ರಚಿಸಿದ ಕವನವನ್ನೇ ನಾನು ಪದೇ ಪದೇ ಓದಿದ ನಂತರ ಅನೇಕ ತಿದ್ದುಪಡಿಮಾಡುತ್ತೇನೆ. ಹಲವು ಸಲ ನನಗೆ ತೀರ ಬಾಲಿಶವಾಗಿರುವ ಕವನ ಬೇರೆಯವರಿಗೆ ಇಷ್ಟವಾಗಿದೆ. ನಾನು ತುಂಬ ಇಷ್ಟಪಟ್ಟಿದ್ದು ಇತರರಿಗೆ ಕಳಪೆಯನಿಸಿದ್ದೂ ಇದೆ. ಬಣವಿಲ್ಲ ಎಂಬ ಪದವನ್ನು ಇಲ್ಲಿ ಬಳಸಿದ್ದು -ಬಂಡಾಯ, ನವ್ಯ,ದಲಿತ ಎಂಬರ್ಥದಲ್ಲಿ ಬಲವಿಲ್ಲ ಪದವನ್ನು-ಇನ್ನಷ್ಟು ಓದಬೇಕೆಂಬ , ಜ್ಞಾನದ ಬಲ ಬೇಕೆಂಬ ಅರ್ಥದಲ್ಲಿ <<ಕವಿ ಕರುಬುತ್ತಿರುವಂತೆ ಭಾಸವಾಗುತ್ತಿದೆ>> ಈ ಪದವನ್ನು ತಾವು ಇಲ್ಲಿ ಬಳಸುವಿರೆಂಬ ನಿರೀಕ್ಷೆಯಿರಲಿಲ್ಲ. ವಿವರಿಸಿದರೆ ನನ್ನನ್ನು ನಾನು ಸರಿಪಡಿಸಿಕೊಳ್ಳಬಹುದು. ತಮ್ಮ ಮಾರ್ಗದರ್ಶನದ ನಿರೀಕ್ಷೆಯಲ್ಲಿ....... -ಭಾಗ್ವತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಬಣವಿಲ್ಲ ಎಂಬ ಪದವನ್ನು ಇಲ್ಲಿ ಬಳಸಿದ್ದು -ಬಂಡಾಯ, ನವ್ಯ,ದಲಿತ ಎಂಬರ್ಥದಲ್ಲಿ>> ಬಣ ಎಂಬ ಪದವನ್ನು ಆ ಅರ್ಥದಲ್ಲಿ ಬಳಸಬಹುದೆಂಬ ಜ್ಞಾನ ನನಗಿದ್ದಿರಲಿಲ್ಲ. ನಾನು, "ಬಣ ನಾಮಪದ, (ದೇ) ೧ ಪಕ್ಷ, ಪಂಗಡ ೨ ಜಾತಿ, ವರ್ಣ" ಈ ಅರ್ಥವನ್ನಷ್ಟೇ ಅರಿತಿದ್ದೆ. ಹಾಗಾಗಿ ಆರೀತಿಯಾಗಿಯೇ ಅರ್ಥೈಸಿಕೊಂಡೆ. <ಬಲವಿಲ್ಲ ಪದವನ್ನು-ಇನ್ನಷ್ಟು ಓದಬೇಕೆಂಬ , ಜ್ಞಾನದ ಬಲ ಬೇಕೆಂಬ ಅರ್ಥದಲ್ಲಿ> ಇದನ್ನು ನಾನು ಅದೇ ರೀತಿ ಅರ್ಥೈಸಿಕೊಂಡಿದ್ದೇನೆ. <<ಕವಿ ಕರುಬುತ್ತಿರುವಂತೆ ಭಾಸವಾಗುತ್ತಿದೆ>> ಬಣದ ಅರ್ಥವನ್ನು ನಾನು ಅರ್ಥೈಸಿಕೊಂಡ ರೀತಿಯಲ್ಲಿಯೇ ಅರ್ಥೈಸಿಕೊಂಡ ನಂತರ, ತನಗಿಲ್ಲ ಅನ್ನುವಾಗ ಕವಿ ಅನ್ಯರನ್ನು ಕಂಡು ಕರುಬುತ್ತಿರುವಂತೆ (ಅಸೂಯೆ, ಹೆಟ್ಟೆಕಿಚ್ಚು ಪಡುತ್ತಿರುವಂತೆ) ಭಾಸವಾಗುತ್ತಿದೆ, ಅಂತ ಅನಿಸಿತು ನನಗೆ. ಕವಿಗೆ ಯಾವಾಗಲೂ ಹಾಗಾಗಬಾರದು ಎನ್ನುವುದೇ ನನ್ನ ಆಶಯ. ತನ್ನನ್ನು ಮತ್ತು ತನ್ನ ಬರಹಗಳನ್ನು ಮೆಚ್ಚುವವರು ಇದ್ದಾರೋ ಇಲ್ಲವೋ ಅದು ಗೌಣ ಆಗಬೇಕು, ಆಗಷ್ಟೇ ಹೆಚ್ಚು ಹೆಚ್ಚಾಗಿ ಬೆಳೆಯಬಹುದು ಅಂತ ನನ್ನನಿಸಿಕೆ. - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಸು ಹೆಗ್ಡೆಯವರಿಗೆ ವಂದನೆಗಳು. ನಿಮ್ಮ ಅಭಿಪ್ರಾಯ ಓದಿದ ನಂತರ ನನ್ನಲ್ಲಿ ಕೆಲವು ಪ್ರಶ್ನೆಗಳು ಉದ್ಭವಿಸಿದವು. ದಯವಿಟ್ಟು ಇದಕ್ಕೆ ತಮ್ಮಿಂದ ಮಾರ್ಗದರ್ಶನ ಸಿಗಬಹುದೆಂದು ಆಶಿಸುತ್ತೇನೆ. ಕವನದ ಅಂತಿಮ ಅರ್ಥಯಾವುದು ? ಕವಿಯ ಅರ್ಥವೇ ? ಓದುಗನ ಅರ್ಥವೇ ?. ಕಾವ್ಯಕ್ಕೆ ಅಂತಿಮ ಅರ್ಥವಿಲ್ಲ ಎಂದು ಎಲ್ಲೋ ಕೇಳಿದ ನೆನಪು.ಇದು ಸರಿಯೇ ? ಕಾವ್ಯ ಕವಿಯ ಅಂತರಂಗದ ಭಾವನೆಗಳ ಪ್ರತಿಬಿಂಬವೆಂದಾದರೆ- ಉದಾ-" ಭಿಕ್ಷುಕ" ನ ಬಗ್ಗೆ, ಕಾವ್ಯ ಬರೆಯ ಬೇಕಾದರೆ ಕವಿ ಅದನ್ನು ನೋಡಿ ಬರೆದರೆ ಸಾಕೇ ? ಅಥವಾ ಅನುಭವಿಸಿ ಬರೆಯ ಬೇಕೆ ? ಇನ್ನು ನನ್ನಲ್ಲಿ ಕೊರಗುವಿಕೆ, ಕರುಬುವಿಕೆಯಂತೂ ಖಂಡಿತ ಇಲ್ಲ ಎಂದು ಸ್ಪಷ್ಟವಾಗಿ ಹೇಳಬಲ್ಲೆ. ನಿಮ್ಮ ಸದಭಿಪ್ರಾಯವು ನನ್ನಂತ ಹೊಸಬರಿಗೆ ಬರೆಯಂತೂ ಖಂಡಿತ ಅಲ್ಲ ಅಂತ ನನ್ನ ಅನಿಸಿಕೆ. ಪ್ರತಿಯೊಬ್ಬನಲ್ಲಿರುವ ಕಾವ್ಯ ಕಟ್ಟುವ ಒಳಮನಸ್ಸಿನಲ್ಲಿ ಹಲವರ ಪ್ರಭಾವದೊಂದಿಗೆ ಸ್ವಂತಿಕೆ ರೂಪುಗೊಳ್ಳಬಹುದು. ರೂಪುಗೊಂಡಾಗಲೇ ಶಕ್ತ ಕಾವ್ಯಗಳು ಹುಟ್ಟ ಬಹುದು.ಆ ಕಾರಣಕ್ಕಾಗಿ ಸಂಪದ ಹಾಗೂ ನಿಮ್ಮಂತಹ ಹಿರಿಯ ಸಂಪದಿಗರನ್ನು ನಾನು ಸದಾ ಸ್ಮರಿಸುವೆ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾಗ್ವತರೇ, ಮೆಚ್ಚುಗೆಯ ಮಾತುಗಳು ಪುಟಿದೆಬ್ಬಿಸುವುದು ಸತ್ಯ, ಆದರೆ ಅದೇ ಅಂತಿಮವಾಗದೆಂಬುದೂ ಸತ್ಯ, ಅಳುಕದೆ ತುಂಬಿದ ಭಾವನೆಗಳ ಸ್ಫುರಿಸಿರಿ ನಿತ್ಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿನಾಗರಾಜ್ ರವರೆ ನಿಮ್ಮ ಮೆಚ್ಚುಗೆಯ ಸದಭಿಪ್ರಾಯಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾಗ್ವತರೆ, ಅದೇ ಕಣ್ರೀ ನಿಜವಾದ "ಕಾವ್ಯ"! ಯಾವ ಪ್ರತಿಕ್ರಿಯೆಯೂ ಬೇಕಿಲ್ಲ, ಎಷ್ಟು ಸಲ ಸತ್ತರೂ ಅದು ಹುಟ್ಟುತ್ತಲೇ ಇರುತ್ತದೆ. ಅದೇ ಕಾವ್ಯದ ಶಕ್ತಿ, ಅದು ನಿರ೦ತರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥ ಸರ್ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆನಿಮ್ಮ ಕವನ ಭಾಗ್ವತ ಸರ್ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ವಸಂತ್ ರವರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.