ಕಾಲ- ಕಾಯುವದಿಲ್ಲ ಉತ್ತರಿಸುತ್ತದೆ !

0

                     ಮಕ್ಕಳ ದೃಷ್ಟಿಯಲ್ಲಿ  ಅಪ್ಪನೆಂದರೆ.....

                    ಸಂಪ್ರದಾಯದ  ಜಾಡು ಹಿಡಿದು

                    ಹೊಸಬೆಳಕಿಗೆ ಮುಖವೊಡ್ಡದವ

                    ಅವರ  ಇಚ್ಛೆಗೆ ವಿರುದ್ಧ ಚಿಂತಿಸಿ

                    ಮೀಸೆತೂರಿಸುವ  ಜಿರಲೆ..!

                   ಆಗಾಗ ಹೊಸಬಟ್ಟೆ, ಬೈಕು ಕೊಡಿಸದ 

                   ಜಿಪುಣ.....

                   ನಿನ್ನ ಗುರಿಸಾಧಿಸು ಕೊಡಿಸುವೆನೆಂದು

                    ಬೇಲಿ  ಹಾಕುವ  ನಿಪುಣ!

                   "ಉದ್ದಕೂದಲು ಬಿಡದೆ, ಎಣ್ಣೆ ಹಾಕಿ ಬಾಚಿಕೋ

                   ಮಾಡದಿರು ಅತಿಯಾದ ಫ್ಯಾಶನ್, ಕೆಟ್ಟವರ ದೋಸ್ತಿ

                  ನಿನ್ನತನವೇ  ನಿನಗಿರುವ  ಆಸ್ತಿ !"

                 ಎಂದು ಆಗಾಗ ಸುರುಳಿ  ಸುತ್ತುವ ಟೇಪಿನಂತೆ !

                  ಆದರೆ.....

                  ಮಗನು ಅಪ್ಪನಾದಾಗ ಮಾಡುವುದು ಹೀಗೆಯೇ..!

                  ಅಪ್ಪನು  ಅಪ್ಪನೇ..!  ಮಗನು  ಮಗನೇ..!

                   ಏಕೆಂದರೆ......

                   " ಕಾಲ  ಕಾಯುವದಿಲ್ಲ   ಉತ್ತರಿಸುತ್ತದೆ"

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಜವಾಗಿ ಹೇಳುವುದಾದರೆ ಹಿರಿಯ ತಲೆಮಾರು ಕಿರಿಯ ತಲೆಮಾರನ್ನು 'ಜೀವನ ಅರಿಯದ ಅಜ್ಞಾನಿಗಳು' ಎಂದು ಯೋಚಿಸುವುದು ಇದಕ್ಕೇ ಕಾರಣ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಪ್ರಕಾರ ಹಿರಿಯ ತಲೆಮಾರಿನವರು ಮು೦ದಿನ ಕಿರಿಯ ತಲೆಮಾರಿನವರು ತಮ್ಮ ಜೀವನದಲ್ಲಿ ಸುಖ ಸ೦ತೋಷದಿ೦ದ ಬದುಕಲಿ, ಅವರ ಜೀವನದಲ್ಲಿ ಯಾವುದೇ ಕಷ್ಟ ನಷ್ಟಗಳು ಬರದಿರಲಿ ಎ೦ದು ಬಯಸುವುದೇ ಇದಕ್ಕೆ ಕಾರಣ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಾನು ತಪ್ಪು ಮಾಡಿ ಅನುಭವಿಸಿದ್ದನ್ನು, ತನ್ನ ಮಗನೂ. ತಪ್ಪು ಮಾಡಿಯೇ ಅನುಭವಿಸದಿರಲಿ ಎನ್ನುವನು ಅಪ್ಪ, ತನ್ನಪ್ಪ ತನ್ನ ವೈರಿಯೆಂದೇ ತಿಳಿಯುತ್ತಾ, ಬೆಳೆದು, ನಂತರ ಅಪ್ಪನಾದಾಗ ಅರಿಯುವ ತನ್ನ ತಪ್ಪುಗಳ ಆ ಬೆಪ್ಪ! - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದ ಸಂಪದಿಗರಾದ ಸಂತೋಷರವರಿಗೆ, ಮಂಜುನಾಥರವರಿಗೆ,ಗೋಪಿನಾಥರವರಿಗೆ,ಆಸುಹೆಗ್ಡೆಯವರಿಗೆ ಧನ್ಯವಾದಗಳು. _ಭಾಗ್ವತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾಗ್ವತರೇ, ನಿಮ್ಮ ಕವನ ಮತ್ತು ಸುರೇಶ ಹೆಗ್ಡೆಯವರ ಪ್ರತಿಕ್ರಿಯೆ ಮೆಚ್ಚುಗೆಯಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಳೇ ಬೇರಿನಿಂದಲೇ ಹೊಸ ಚಿಗುರು, ಬೇರಿನ ಆಸರೆಯಿಂದಲೇ ಚಿಗುರಿನ ಭವಿಷ್ಯ.........ಚೆನ್ನಾಗಿದೆ ಭಾಗ್ವತ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕವಿ ನಾಗರಾಜ್ ರವರಿಗೆ, ಗೋಪಾಲರವರಿಗೆ, ರಘುರವರಿಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.