ಬೇಡಿಕೆ

4.5

ಸ್ವಾಮಿ ನಿನ್ನಲಿ ಬೇಡಿಕೊಳ್ಳುವೆ
ಪ್ರೇಮ ಸಂತೋಷಗಳನು !
ವ್ಯೋಮಕೇಶನೆ ಬಾಳಿನೊಲ್ಮೆಯೆ
ನೇಮವಲದಿನ್ನೇನನು !!

ಕರ್ಮ ಸಾರ್ಥಕ ಮರ್ಮದಿಂದಲೇ
ಧರ್ಮವೆಂದದನೊಪ್ಪಿಹೆ !
ಜನ್ಮ ಧರ್ಮವ ಬಿಡದೆ ಸ್ಮೃತಿ ತಾ
ನೆಮ್ಮಿದಂತೆಯೆ ಬದುಕಿಹೆ !!

ನಿತ್ಯ ಸತ್ಯೋತ್ಸವವು ಜೀವನ
ಕತ್ತಲೆಗಳನು ಕಳೆಯಲಿ !
ಚಿತ್ತ ತಾವರೆಯಂತೆ ವಿಕಸನ
ಸತ್ಯ ಸೂರ್ಯೋದಯದಲಿ !!

ಮಿಥ್ಯೆಯಡಗಲಿ ಸ್ವಾರ್ಥ ಮುಳುಗಲಿ
ಮೃತ್ಯುವನು ತಾ ಗೆಲ್ಲಲಿ !
ಯತ್ನವೆಲ್ಲವು ಫಲಿಸಿ ಬೆಳಗಲಿ
ಜ್ಯೋತಿಯಂತೆಯೇ ಹೊಮ್ಮಲಿ !!

. - ಸದಾನಂದ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಉತ್ತಮ ಪ್ರಾರ್ಥನೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Dhanyavadagalu sir

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.