ಬೆಂಗಳೂರಿನ ಜನ ಬಿಡಿ

4.5

 ಬೆಂಗಳೂರಿನ ಜನ ಬಿಡಿ..

ಬೆಂಗಳೂರಿನ ಜನ ಬಿಡಿ

ಸಾಮಾಜಿಕ ಜೀವನ ಸ್ವಲ್ಪ ಜಾಸ್ತಿ

ಮೀಟಿಂಗ್ ಪಾರ್ಟಿಗಳು ಜಾಸ್ತಿ

ಸಂಘ ಸಂಸ್ಥೆಗಳಲ್ಲಿ ಓಡಾಟ ಜಾಸ್ತಿ

ಹಾಗೆ ಮನೆಗೆ ಬಂದರೆ

ಮನೆಯವರ ಜೊತೆ ಮೌನ ಜಾಸ್ತಿ

ಅಕ್ಕಪಕ್ಕದ ಮನೆಯವರ ಜೊತೆ ಮಾತು ನಾಸ್ತಿ!

ಬೆಂಗಳೂರಿನ ಜನ ಬಿಡಿ

ಸಾಮಾಜಿಕ ಜೀವನ ಸ್ವಲ್ಪ ಜಾಸ್ತಿ

ಹಗಲೆಲ್ಲ ಅನಾಥಾಶ್ರಮದಲ್ಲಿ ಓಡಾಟ

ಸಾಲದೆಂಬತೆ ವೃದ್ದಾಶ್ರಮದಲ್ಲಿ ಆಸಕ್ತಿ

ಮನೆಯಲ್ಲಿನ ತಂದೆ ತಾಯಿಯರು

ಹೊರ ಹಾಕುವ ನಿಟ್ಟುಸಿರಿನ ಬಗ್ಗೆ ಏಕೊ ನಿರಾಸಕ್ತಿ!

ಬೆಂಗಳೂರಿನ ಜನ ಬಿಡಿ

ಸಾಮಾಜಿಕ ಜೀವನ ಸ್ವಲ್ಪ ಜಾಸ್ತಿ

ಸಂಬಂಧಗಳನ್ನು ತೊರೆಯರು

ಮೊಬೈಲ್ ನಲ್ಲಿ ಮೆಸೇಜ್ ಮಾಡುವರು

ಫೇಸ್ ಬುಕ್ ನಲ್ಲಿ ಕಂಟ್ಯಾಕ್ಟ್ ಬಿಡರು

ಟ್ವಿಟರ್ ನಲ್ಲಿ ಮಾತು ಮರೆಯರು

ಎದುರಿಗೆ ಹೋದರೆ ಏಕೊ

ಮೌನ ಮುರಿಯರು !

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿದೆ ಪಾರ್ಥರೆ ನಿಮ್ಮ ಬೆಂಗಳೂರಿಗರ ವಿಡಂಬನೆ. ಇದು ಎಲ್ಲಾ ಮಹಾನಗರಗಳ ಚಿತ್ರಣವೂ ಹೌದು :(( ಬೆಂಗಳೂರಿನಲ್ಲಿ ಜನ ತಂದೆ‍ ತಾಯಿಯರನ್ನು ಹೊರಹಾಕದೆ ಇನ್ನೂ ಮನೆಯಲ್ಲಿ ಇಟ್ಟುಕೊಂಡಿದ್ದಾರೆ ಎಂದ್ರೆ ಅದೇಕೋ ನಂಬೋಕೆ ಆಗ್ತಿಲ್ಲ , ಅವರನ್ನ್ಯಾವಗಲೋ ವ್ರುದ್ದಾಶ್ರಮ ಸೇರಿಸಬೇಕಿತ್ತಲ್ಲವೆ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಶ್ರೀಧರ್ ನನಗೆ ಬರೆಯುವಾಗಲೆ ಅನಿಸಿತು ಎಲ್ಲ ಮಹಾನಗರಗಳ ಕತೆಯು ಇದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರಕಾರ ನಾನು ಬೆಂಗಳೂರಿನವನಲ್ಲ :) ಮೀಟಿಂಗ್ ಪಾರ್ಟಿ ಇತ್ಯಾದಿ....ನಾಸ್ತಿ. :( ಮನೆಯವರೊಂದಿಗೆ,ತಂದೆತಾಯಿ ಜತೆ(ತಂದೆ ತಾಯಿ ಈಗಿಲ್ಲ) ಮಾತು ಜಾಸ್ತಿ. ಸಂಪದವೇ ನನ್ನ ಫೇಸ್‌ಬುಕ್ ಟ್ವಿಟ್ಟರ್ >>>ಎದುರಿಗೆ ಹೋದರೆ ಏಕೊ ಮೌನ ಮುರಿಯರು ! -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿಯೆ ನೀವು ಬೆಂಗಳೂರಿನವರಲ್ಲ ಅರ್ದರಾತ್ರಿಯಲ್ಲಿ 'ಎಲ್ಲಿಂದಲೊ ಬಂದವರು' ಮೌನ ಮುರಿಯರೆಂದರೆ ಮಾತನಾಡರೆಂಬ ಅರ್ಥದಲ್ಲಿ ಹೇಳಿರುವೆ ‍ಪಾರ್ಥಸಾರಥಿ

>>>ಅರ್ಧರಾತ್ರಿಯಲ್ಲಿ 'ಎಲ್ಲಿಂದಲೊ ಬಂದವರು' -ಹ್ಹ ಹ್ಹ ದೆವ್ವ..!! ಪಾರ್ಥಸಾರಥಿಯವರೆ, ಕವನ ಚೆನ್ನಾಗಿದೆ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಹ ಹ್ಹ ದೆವ್ವ !!! ವಂದನೆಗಳು ಗಣೇಶರವರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೆಂಗಳೂರಿನ ಜನ ಬಿಡಿ ಸಾಮಾಜಿಕ ಜೀವನ ಸ್ವಲ್ಪ ಜಾಸ್ತಿ ಟ್ರಾಫಿಕ್ ಜೊತೆಗೇ ದಿನಾ ಇವರ ದೋಸ್ತಿ ವ್ಯವಸ್ಥೆ ವಿರುದ್ದ ತೋರಲಾರದೆ ಮಸ್ತಿ ಸ್ವಂತ ಜನರ ಜೊತೆ ಆಡ್ತಾರೆ ಕುಸ್ತಿ ತೊಗೊಂಡ್ ಹೋಗೋದಕ್ಕೆ ಆಗ್ದೆ ಇದ್ರೂ ಅಸ್ತಿ ಸದಾ ಇದೇ ಚಿಂತೆ ’ಹೇಗೆ ಮಾಡ್ಲಿ ಆಸ್ತಿ’ ನಾ ಹೇಳಿದ್ದು ಸ್ವಲ್ಪ ಆಯ್ತೇನೋ ಜಾಸ್ತಿ !!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಹೇಳೀದ್ದು ಜಾಸ್ತಿಯೇನು ಆಗಲಿಲ್ಲ ಸರಿಯಾಗೆ ಇದೆ ಬಿಡಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)) ಬೆಂಗಳೂರಿನ ಜನವಾ? . . . .?. . . ಬಿಟ್ಟುಬಿಡಿ!!!!!!!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೇಗೆ ಬಿಡಲಿ ನಾನಿರುವುದೆ ಅಲ್ಲಿ !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸಾರಥಿ ಅವ್ರೆ ಮೊದಲನೆಯದಾಗಿ ನಿಮ ಈ ವಿಡಂಬನಾತ್ಮಕ ಕವನ ಹಿಡಿಸಿತು ಅದ್ರಲ್ಲಿರುವುದೆಲ್ಲ ನಿಜವೂ ಹೌದು. ಇದಕ್ಕೆ ಬಂದ ಕೆಲ ಪ್ರತಿಕ್ರಿಯೆಗಳು ನಗೆ ಉಕ್ಕಿಸಿದವು..(ಗಣೇ ಸಣ್ಣ ಮತ್ತು ಕವಿ ನಾಗರಜರದು ) ನೀವು ಈ ಸಾರಿ ಮಾಸದಲ್ಲಿ ಸಂಪದ ಬರೆಯದೆ ಇರ್ವದು 'ಏನೋ ಕಲ್ಕೊಂದಂಗಿದೆ:)) ಮತ್ತು ದೆವ್ವಗಳನ್ನ ಮರ್ತೆ ಬಿಟಿರ? >>>ನಿಮ್ಮ ಕೆಲ ಹಳೆಯ ಬರಹಗಳಿಗೆ ನಾ ಲೇಟ ಆಗ್ ಪ್ರತಿಕ್ರಿಯಿಸಿದ್ದೇನೆ. ಒಮ್ಮೆ ಕಣ್ಣಾಡಿಸಿ... ಕೆಲ ಸಾಲುಗಳು ಅರ್ಥಗರ್ಭಿತವಾಗಿದ್ದು ಗಮನ ಸೆಳೆದವು... >>>ಮನೆಯಲ್ಲಿನ ತಂದೆ ತಾಯಿಯರು ಹೊರ ಹಾಕುವ ನಿಟ್ಟುಸಿರಿನ ಬಗ್ಗೆ ಏಕೊ ನಿರಾಸಕ್ತಿ! >>>ಮನೆಯವರ ಜೊತೆ ಮೌನ ಜಾಸ್ತಿ ಅಕ್ಕಪಕ್ಕದ ಮನೆಯವರ ಜೊತೆ ಮಾತು ನಾಸ್ತಿ! ಎದುರಿಗೆ ಹೋದರೆ ಏಕೊ >>>ಮೌನ ಮುರಿಯರು ! ಧನ್ಯವಾದಗಳು ಶುಭವಾಗಲಿ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಸಪ್ತಗಿರಿಯವರೆ ನಿಜಕ್ಕು ಈ ಬಾರಿ ನನಗು ಬೇಸರ ಎನಿಸಿದೆ, ಕಳೆದ ತಿಂಗಳು ಸಂಪದದಲ್ಲು ಕೆಲವು ತಾಂತ್ರಿಕ ತೊಂದರೆ ಕಾಣಿಸಿ ಕೊಂಡು ಸಂಪದ ಪುಟಗಳು ತೆರೆಯುತ್ತಿರಲಿಲ್ಲ ಅಲ್ಲದೆ ನನ್ನ ಮನೆಯ ಸಿಸ್ಟಮ್ ಸಹ ಏಕೊ ತೊಂದರೆ ಕೊಟ್ಟಿತು ನನಗು ಕೈ ಹಾಗು ಮನ ತುಡಿಯುತ್ತಿದೆ ದೆವ್ವಗಳ ಕತೆ ಹೇಗೆ ಮರೆಯಲಿ ಮತ್ತೆ ಹೊಸ ಕತೆಗಳೊಂದಿಗೆ ಬರುತ್ತೇನೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥರೆ, ಬೆ೦ಗಳೂರಿನ ಜನ ಬಿಡಿ, ಅ೦ತನ್ನುತ್ತಾ ಬಹುತೇಕ ಇ೦ದಿನ ನಗರ ಜೀವನದ ಧಾವ೦ತದ ಬದುಕಿನ ಸು೦ದರ ಚಿತ್ರಣ ನೀಡಿದ್ದೀರಿ. ಗನೇ"ಸಣ್ಣ"ನ೦ತಹ ಕೆಲವರು "ಅರ್ಧರಾತ್ರಿಯಲ್ಲಿ ಎಲ್ಲಿ೦ದಲೋ" ಬ೦ದವರು ಇದಕ್ಕೆ ಅಪವಾದ ಅನ್ನಬಹುದೇನೋ!! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಮಂಜುರವರೆ ಕೆಲ ಜನ ನೋಡಿ ಹೀಗೆ ಎಲ್ಲಕ್ಕು ಅಪವಾದವಾಗಿರುತ್ತಾರೆ ಹ್ಹ ಹ್ಹ ಹ್ಹ ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಿಡಿ ಬಿಡಿಯಾಗಿದ್ದಾರೆ ಬೆ0ಗ್ಳೂರಿನ ಜನ.. ಬಿಟ್ಟು ಬಿಡಿ.. ಚುಚ್ಚುವ ವಿಡ0ಬನೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಿಟ್ಟು ಬಿಟ್ಟೆ... :‍))) ವಂದನೆಗಳು ಪ್ರಸನ್ನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.