ಬಿದಿರಕ್ಕಿ

3.666665

ಮೊನ್ನೆ ಎಲ್ಲೊ ಬಿದಿರು ಮೆಳೆಯ ಹತ್ತಿರ ಹೋಗಿದ್ದೆ. ಅಲ್ಲಿ ಕೆಳಗೆ ನೋಡಿದರೆ ಗೋಧಿ ಬಣ್ಣದ ಅಕ್ಕಿಯ ರೀತಿಯ ಕಾಳುಗಳು ತುಂಬಾ ಬಿದ್ದಿದ್ದವು. ಸರಿಯಾಗಿ ನೋಡಿದರೆ, ಅರೆ! ಹೌದು ಇದು "ಬಿದಿರಕ್ಕಿ". ನಾನು ಅದೇ ಮೊದಲು ಬಿದಿರಕ್ಕಿಯನ್ನು ನೋಡಿದ್ದು. ಆಗ ಅಜ್ಜ ಅದರ ಬಗ್ಗೆ ಹೇಳುತ್ತಿದ್ದುದು ನೆನಪಾಯಿತು. "ಬಿದಿರು ಅಕ್ಕಿ ಬಿಡುವುದು ತುಂಬಾ ಅಪರೂಪ. ಹಾಗೊಂದು ವೇಳೆ ಬಿದಿರಕ್ಕಿ ಬಿಟ್ಟರೆ ಆ ವರ್ಷ ಬರಗಾಲ ಬರಲಿದೆ ಎಂದರ್ಥ." ಈ ವರ್ಷ ಬಿದಿರಕ್ಕಿಯೂ ಬಿಟ್ಟಿದೆ, ಬರಗಾಲವೂ ಬಂದಿದೆ. ಎಂತಹಾ ಕಾಕತಾಳೀಯ / ಪ್ರಕೃತಿ ವಿಸ್ಮಯವಲ್ಲವೇ?

ಅವತ್ತು ಜೊತೆಗೆ ಕ್ಯಾಮೆರಾವನ್ನೂ ತೆಗೆದುಕೊಂಡು ಹೋಗಿದ್ದೆ. ಹಾಗಾಗಿ ಅಪರೂಪ(?)ದ "ಬಿದಿರಕ್ಕಿ"ಯ ಚಿತ್ರವನ್ನು ತೆಗೆದುಕೊಳ್ಳಲು ಸಾಧ್ಯವಾಯಿತು. ಅಂದ ಹಾಗೆ, ಇದರಿಂದ ಅನ್ನ ತಯಾರಿಸಿ ಊಟ ಕೂಡ ಮಾಡುತ್ತಾರಂತೆ. ರುಚಿಯಾಗಿಯೂ ಇರುತ್ತಂತೆ. ಆದರೆ ಬಹಳ ಉಷ್ಣ ಎಂದು ಕೇಳಿದ್ದೇನೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಯಾರ ಬಳಿಯಲ್ಲಾದರೂ ಇದ್ದರೆ ತಿಳಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪ್ರಸನ್ನ ಅವ್ರೆ ನಿಮ್ಮ ಬ್ಲಾಗ್ ಗೆ ಕೊಟ್ಟ ಹೆಸರು ಚೆನ್ನಾಗಿದೆ(ಅಂತಃಸ್ಫುರಣ) ಹಾಗೆಯೇ ನಿಮ್ಮ ಬ್ಲಾಗ್ ಗೆ ಆ ಹೆಸರು ಬರುವ ಹಿನ್ನೆಲೆ ಬರಹ ಸಹಾ ಓದಿದೆ.. ನೀವ್ ಹೊಸಬರು ಅಂದುಕೊಂಡಿದ್ದೆ ಆದರೆ ಹಳಬರೆ..!! ಅಲ್ಲದೇ ಬೇಜಾನ್ ಸ್ವಾರಸ್ಯಕರ ಬರಹ ಬರೆದಿರುವಿರಿ.. ಈಗ ಆ ಎಲ್ಲವನ್ನು ಗುಡ್ಡೆ ಹಾಕಿಕೊಂಡು ಓದಲು ಕುಳಿತಿರುವೆ...:()) "ಅಂತಃಸ್ಫುರಣ" ಪದದ ಬಗ್ಗೆ ನಿಮ್ಮ ಅಭಿಪ್ರಾಯವೇನು? | ಸಂಪದ - Sampada http://sampada.net/b... ಬಿದಿರು ಅಕ್ಕಿ ಬಗ್ಗೆ ಕೇಳಿದ್ದೆ ಆದರೆ ಹೇಗಿರುತ್ತೆ ಅಂತ ನೋಡಿರಲಿಲ್ಲ, ನಾ ಸಹ ಬಿದಿರು ಅಕ್ಕಿ ಬರುವಾಗ ವಿಪರೀತ ಇಲಿ ಹೆಗ್ಗನಗಳು ಆಗಿ ಪ್ಲೇಗ್ ಹರಡುವುದು ಅಂತ ಕೇಳಿದ್ದೆ... ಬರಗಾಲ ಅಂತೂ ಆಗಲೇ ಶುರು ಆಗಿದೆ.ಲ್..!! ಒಳ್ಳೆಯ ಚಿತ್ರ ಸಮೇತ ವಿವರ ಹಂಚಿಕೊಂಡಿರುವಿರಿ.. ನಿಮ್ಮ ಈ ಬಗೆಗಿನ ಹೆಚ್ಚಿನ ಮಾಹಿತಿ ನಿಮಗೆ ಶ್ರೀಧರ್ ಜೀ, ಗಣೇಶ್ ಅಣ್ಣ- ಶ್ರೀ ಕರ್ ಅವರು ಕೊಡುವರು ಅನ್ಸುತ್ತೆ.. ನೋಡುವ.. ನಾ ಪ್ರಯತ್ನಿಸಿ ಕೆಲ ಲಿಂಕ್ ಕೊಟ್ಟಿರುವೆ ಅಲ್ಲಿ ನಡೆದಿರುವ ಚರ್ಚೆ ಬಲು ಮಜ್ವಾಗಿದೆ.. ಓದಿ.. ಶುಭವಾಗಲಿ... Bamboo blossom - Wikipedia, the free encyclopedia http://en.wikipedia.... Cultural interpretation Bamboo is believed to be able to sense changes in soil. Therefore, people in China believe that the blossom of bamboos is a precursor of coming natural disasters. Recent studies in India have found that, whenever bamboo blossoms, the rat population will increase fourfold, due to the "bamboo rice" nurturing the rats, and the expanded population of rats consumes the crops stored by people. Starvation is thus caused, so the blossom has become an indicator of coming starvation in Northeast India. >>ಭಾರತ ಮತ್ತು ಚೀನಾ ಮದ್ಯೆ ಎಸ್ಟ್ ಭಿನ್‌ಭಿಪ್ರಾಯ ವೈರದ್ಯ ಇದ್ದರೂ ಈ ಬಂಬು-ಬಿದಿರು ಹೂವು ವಿಷ್ಯದಲ್ಲಿ ಮಾತ್ರ ಒಂದೇ ಧಾಟಿಯ ಯೋಚನೆ..:())) What is Bamboo Rice? http://www.wisegeek.... Bamboo in bloom triggers famine fears - Times Of India http://articles.time...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿವಾಸಿಯವರೆ, >>ಈ ಬಗೆಗಿನ ಹೆಚ್ಚಿನ ಮಾಹಿತಿ ನಿಮಗೆ ಶ್ರೀಧರ್ ಜೀ, ಗಣೇಶ್ ಅಣ್ಣ- ಶ್ರೀ ಕರ್ ಅವರು ಕೊಡುವರು ಅನ್ಸುತ್ತೆ.. ನೋಡುವ.. -ಎಷ್ಟೊಂದು ಮಾಹಿತಿ ನೀಡಿದ್ದೀರಿ ! ಬಿದಿರಕ್ಕಿ ಬಗ್ಗೆ ಚಿತ್ರ ಮಾಹಿತಿ ನೀಡಿದ ಪ್ರಸನ್ನ ಅವರಿಗೂ, ಇನ್ನೂ ಹೆಚ್ಚಿನ ಮಾಹಿತಿ ಸೇರಿಸಿದ ಸಪ್ತಗಿರಿವಾಸಿಯವರಿಗೂ, ಕೆಲವು ಉಪಯುಕ್ತ ವಿವರ ನೀಡಿರುವ ಶ್ರೀಪತಿ, ಶ್ರೀಧರ್, ಪಾರ್ಥಸಾರಥಿಯವರಿಗೆ ನನ್ನಿ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನ ಕರ್ನಾಟಕ ಆಂದ್ರಗಳಲ್ಲಿ ಬೀಕರ ಬರಗಾಲದಲ್ಲಿ ಬಿದರಕ್ಕಿ ತಿನ್ನುತ್ತಿದ್ದರು. ಕೆಲವೊಮ್ಮೆ ಬರಗಾಲ ಇಲ್ಲದಿದ್ದರು ತಿಂದಿರಬಹುದು ಆದರೆ ಅದನ್ನು ಬರಗಾಲದಲ್ಲಿ ತಿನ್ನುವಾಗ ಉಷ್ಣ ಅಥವ ಸೀತ ಎಂದೆಲ್ಲ ನೋಡಲಾಗಲ್ಲ ಬಿಡಿ .. ಮದ್ಯ ಪ್ರದೇಶ ಬಿಹಾರ ಮುಂತಾದ ರಾಜ್ಯಗಳಲ್ಲಿ (ಕಾಲಹಂದಿ ಜಿಲ್ಲೆ) ಬರಗಾಲದಲ್ಲಿ ಮಣ್ಣನ್ನು ಶುದ್ದಗೊಳಿಸಿ ತಿನ್ನುತ್ತಿದ್ದರು ಅಂತ ಓದಿದ್ದ ನೆನಪು. ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನ ಅವರೆ, ಬಿದರಕ್ಕಿಯ ಬಗ್ಗೆ ಒಳ್ಳೆಯ ಫೋಟೋ ಹಾಕಿದ್ದಕ್ಕೆ ಅಭಿನಂದನೆಗಳು. ಬಿದಿರು ಸಾಮಾನ್ಯವಾಗಿ ಹನ್ನೆರಡು ವರ್ಷಕ್ಕೊಮ್ಮೆ ಹೂವು ಬಿಡುತ್ತದೆ. ಅದರ ಹೂವಿಂದ ಆದ ಧಾನ್ಯವೇ ಈ ಬಿದಿರಕ್ಕಿ. ಇದು ಬಹಳ ಅಪರೂಪವಾದ್ದರಿಂದ ಇದನ್ನು ಜನ ಇಷ್ಟ ಪಟ್ಟೇ ತಿನ್ನುತ್ತಾರೆ. ಅದು ಉಷ್ಣ/ಶೀತ ಆಮೇಲಿನ ಮಾತು. ಇರಲಿ, ಸಾಮಾನ್ಯವಾಗಿ ಯಾವುದೇ ಸಸ್ಯ ಹೂ ಬಿಡಬೇಕೆಂದರೆ ಅದಕ್ಕೆ ನೆಲದಲ್ಲಿ ಆರ್ದ್ರತೆ ಕಡಿಮೆಯಿರಬೇಕು. ಸಹಜವಾಗಿಯೇ ಬರಗಾಲದ ವರ್ಷಗಳಲ್ಲಿ ನೆಲದಲ್ಲಿ ತೇವಾಂಶ ಕಡಿಮೆಯಿರುವುದರಿಂದ ಅದು ಬಿದಿರು ಹೂ ಬಿಡಲಿಕ್ಕೆ ಅನುಕೂಲವಾಗುತ್ತದೆ. ಅದೇ ರೀತಿ ಬೊಂಬು ಹೂ ಬಿಟ್ಟರೆ ಬರಗಾಲ ಗ್ಯಾರಂಟಿ ಎನ್ನುವುದಕ್ಕೆ ಮೇಲೆ ಸಪ್ತಗಿರಿಯವರು ತಿಳಿಸಿರುವ ಹಾಗೆ ಬಿದರಕ್ಕಿಯನ್ನು ತಿಂದಾಗ ಇಲಿ ಹೆಗ್ಗಣಗಳ ಸಂಖ್ಯೆ ವಿಪರೀತವಾಗಿ ಬೆಳೆಯುತ್ತದೆ. ಒಮ್ಮೆ ಈ ಬಿದರಕ್ಕಿಯ ದಾಸ್ತಾನು ಖಾಲಿಯಾದಾಗ ಇಲಿ ಹೆಗ್ಗಣಗಳು ಸಹಜವಾಗಿಯೇ ಮಾನವರು ದಾಸ್ತಾನು ಮಾಡಿಟ್ಟುಕೊಂಡ ದಾಸ್ತಾನುಗಳನ್ನು ತಿಂದು ತೇಗುತ್ತವೆ. ಹಾಗಾಗಿ ನಮ್ಮಲ್ಲಿರುವ ದಾಸ್ತಾನು ಖಾಲಿಯಾಗಿ ಅದು ಬರಗಾಲಕ್ಕೆ ದಾರಿ ಮಾಡಿಕೊಡುತ್ತದೆ. ಇದೇ ರೀತಿ ದಾಂಡೇಲಿಯ ಅರಣ್ಯದಲ್ಲಿ ಬಿದಿರು ಹೂ ಬಿಟ್ಟಾಗ ಅದರಿಂದ ಒದಗ ಬಹುದಾದ ಬರಗಾಲಕ್ಕೆ ಹೆದರಿ ಬ್ರಿಟಿಷ್ ಸರ್ಕಾರ ದಾಂಡೇಲಿಯಲ್ಲಿ ಕಾಗದ ಕಾರ್ಖಾನೆಯನ್ನು ಸ್ಥಾಪಿಸಲು ನೂರು ವರ್ಷದ ಒಪ್ಪಂದ ಮಾಡಿಕೊಂಡಿತು. ಹೀಗೆ ಅಂದು ಬಿದಿರಿನ ಸಂಖ್ಯೆ ಕಡಿಮೆಯಾಗಿಸಲು ಕೈಗೊಂಡ ಉಪಾಯದಿಂದಾಗಿ ಕನ್ನಡಿಗರು ತಮ್ಮ ನೆಲ, ಜಲ ಹಾಗೂ ಸಂಸ್ಕ್ರುತಿಯನ್ನೂ ಕಳೆದುಕೊಳ್ಳಬೇಕಾಯಿತು. ಏಕೆಂದರೆ ಇವತ್ತು ದಾಂಡೇಲಿಯಲ್ಲಿ ಉತ್ತರ ಭಾರತೀಯರ ದಾಳಿಯೇ ಹೆಚ್ಚಾಗಿದೆ. ಅಲ್ಲಿನ ಮೂಲ ನಿವಾಸಿಗಳೇ ಈಗ ಅಲ್ಲಿ ಅಲ್ಪ ಸಂಖ್ಯಾತರು :((
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ್ ಬಂಡ್ರಿ ಯವರು ಹೇಳಿರುವಂತೆ ಬಿದಿರು ಹನ್ನೆರಡು ವರ್ಷಕ್ಕೊಮ್ಮೆ ಹೂ ಬಿಡುವುದಿಲ್ಲ, ಸುಮಾರು ನಲವತ್ತು ವರ್ಷಕ್ಕೊಮ್ಮೆ ಮಾತ್ರ ಹೂ ಬಿಡುತ್ತದೆ. ಹಾಗೂ ಜೀವನದಲ್ಲಿ ಒಮ್ಮೆ ಮಾತ್ರ ಈ ರೀತಿ ಹೂ ಬಿಟ್ಟು ಭತ್ತ/ಕಾಳು (ಅಕ್ಕಿ) ಆಗುತ್ತದೆ. ಒಮ್ಮೆ ಹೂ ಬಿಟ್ಟಿತೆಂದರೆ ಆ ಬಿದಿರಿನ ಸಾವು ಸಮೀಪಿಸಿತು ಎಂದೇ ಅರ್ಥ. ಹಾಗೆಯೇ ಹೂ ಬಿಡದ ಕಾಲದಲ್ಲಿ ಬಿದಿರುಗಳು ತುಂಬಾ ಗಟ್ಟಿ ಇರುತ್ತವೆ. ಮನೆ, ಕೊಟ್ಟಿಗೆ ಕಟ್ಟಲೂ ಉಪಯೋಗಿಸುತ್ತಾರೆ. ಆದರೆ ಒಮ್ಮೆ ಹೂ ಬಿಟ್ಟ ನಂತರ ಬಿದಿರು ತನ್ನ ಗಟ್ಟಿತನವನ್ನು ಕಳೆದುಕೊಳ್ಳುತ್ತದೆ. ಮನೆಗಳಿಗೆಲ್ಲಾ ಬಳಸಲು ಸಾಧ್ಯವಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀ ಪತಿ ಅವ್ರೆ- ನೀವ್ ಅಲ್ಲಿ ಹೆಚ್ಚು ಸಕ್ರಿಯ(ವಿಸ್ಮಯ ನಗರಿ) ಈಗ ಅಸ್ಟೆ ಒಬ್ಬರ ಬರಹಕ್ಕೆ ನಿಮ್ಮ ಒಂದು ಬರಹವನ್ಣ ಹೆಸರಿಸಿದ್ದೆ( ಕನ್ನಡಕ್ಕೆ ಡಬ್ಬಿಂಗ್ ಅಗತ್ಯ) ಈಗ ಗಣೇಶ್ ಅಣ್ಣ ವರ ಪ್ರತಿಕ್ರಿಯೆ ನೋಡುತ್ತಾ ಇಲ್ಲಿ ನಿಮ್ಮ ಹೆಸರು ನೋಡಿ... ಛೇ..!! ಇಸ್ತು ದಿನ ನಾ ನಿಮ್ಮನ್ನ ಇಲ್ಲಿ ಗಮನಿಸಿರಲಿಲ್ಲ ಅಂತಲೂ ಅನ್ನಿಸಿತು..:()) ಬಿಡಿ ಅಂತೂ ಭೇಟಿ ಆಯಿತಲ್ಲಾ... ಶುಭವಾಗಲಿ.. http://www.vismayana... ಡಬ್ಬಿಂಗ್ ಬೇಕೇ ಬೇಡವೇ ? | ವಿಸ್ಮಯ ನಗರಿ http://www.vismayana...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿವಾಸಿಗಳಿಗೆ ನಮಸ್ಕಾರ, ಕನ್ನಡ ಎಲ್ಲೆಲ್ಲಿ ಇರುತ್ತೋ ಅಲ್ಲೆಲ್ಲಾ ನಾನಿರಲು ಪ್ರಯತ್ನಿಸುತ್ತೇನೆ. ನಾನಿದ್ದಲ್ಲಿ ಕನ್ನಡ ಇದ್ದೇ ಇರುತ್ತೆ. :) ಸಂಪದದಲ್ಲಿ ಬಹಳ ದಿನಗಳಿಂದ ಇದ್ದೇನೆ. ಆದರೆ ಕಾರಣಾಂತರಗಳಿಂದ ಇಲ್ಲಿ ಬರುವುದು ಸ್ವಲ್ಪ ಕಡಿಮೆ ಅಷ್ಟೇ. ಅಂದ ಹಾಗೆ ತಮ್ಮ ಹೆಸರು ? ಊರು ? (ಗಿರಿಯಲ್ಲೇ ವಾಸ ಅಲ್ಲ ತಾನೇ ?)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀ ಪತಿ ಅವ್ರೆ- ನಿಮ್ಮ ಮರು ಪ್ರತಿಕ್ರಿಯೆ(ಇಸ್ತು ಬೇಗ) ಓದಿ ಮತ್ತು ಕನ್ನಡ ಇರುವೆಡೇ ನೀವು ನೀವು ಇರುವೆಡೇ ಕನ್ನಡ ಅಂತ ತಿಳಿದು ಖುಷಿ ಆಯ್ತು.. ನಿಮ್ಮ ಬರಹಗಳನ್ನ ಗಮನಿಸಿರುವ ಮತ್ತು ನಿನ್ನೆ ಮಧ್ಯರಾತ್ರಿ ನಿಮ್ಮ ಬ್ಲಾಗ್ ನೋಡಿದ ನನಗೆ ಅದು ಗೊತ್ತಾಗಿದೆ.. ನಿಮ್ಮ ಕನ್ನಡ ಪ್ರೀತಿ ಅನನ್ಯ ... ನಾವ್ ಕನ್ನಡದ ಏಳಿಗೆಗಾಗಿ ಸಕಲ ರೀತಿಯಲ್ಲೂ ತಯಾರು ಇರಬೇಕು ಇಲ್ಲವೇ ಅದನ್ನು ಮಾಡುವವರನ್ನ ಬೆಂಬಲಿಸಬೇಕು ನೀವ್ ಅಂತೂ ಮಾಡುತ್ತಿರುವಿರಿ(ನಿಮ್ಮ ಕನ್ನಡ ಪ್ರಶ್ನೋತ್ತರ - ನಾ ಮೆಚ್ಚಿದ್ದು) ನಿಮ್ಮ ಈ ಸೇವೆಗೆ ನನ್ನ ಬೆಂಬಲ ಸಹಕಾರ ಇರಲಿದೆ... ನಾವೆಲ್ಲರೂ ಕನ್ನಡವನ್ನ ಉಳಿಸಿ ಬೆಳೆಸಬೇಕಿದೆ.. ನಿಮ್ಮಂತವರ ಪರಿಚಯ ಆಗಿದ್ದ್ಡು(ಲೇಟ್ ಆಯ್ತು) ಭಲೇ ಖುಷಿ ತಂದಿದೆ.. ನಿಮ್ಮ ಊಹೆ ನಿಜ ಸಪ್ತಗಿರಿವಾಸಿ ನನ್ನ ಬರಹ ನಾಮ ಅಸ್ಟೆ- ನನ್ನ ಹೆಸರು ವೆಂಕಟೇಶ- ಇರೋದು ಇಲ್ಲೇ ನಮ್ಮ ಬೆಂಗಳೂರಲ್ಲಿ..!! ಪ್ರತಿಕ್ರಿಯೆಗೆ ನನ್ನಿ ಶುಭವಾಗಲಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮಗೂ ಅನಂತ ಧನ್ಯವಾದಗಳು. ಈ ರೀತಿ ಕನ್ನಡಾಭಿಮಾನಿಗಳೆಲ್ಲ ಒಂದಾದರೆ ಆನ್‌ಲೈನ್‌ನಲ್ಲೂ ಕನ್ನಡದ ಕಂಪು ಹರಡಬಹುದು. ಏನಂತೀರಿ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಪತಿ ಅವ್ರೆ: ನಾ 'ಸೈ' ಅಂತೀನಿ... ಆ ಮೂಲಕ ಕನ್ನಡಮ್ಮನಿಗೆ ನನ್ನ ಅಳಿಲು ಸೇವೆಯೂ ಲಭ್ಯವಾಗಲಿ... ತಮ್ಮ ತ್ವರಿತ ಪ್ರತಿಕ್ರಿಯೆಗೆ ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಮಾರು ನಲವತ್ತು ವರ್ಷಗಳಿಗೊಮ್ಮೆ ಬಿದಿರು ಹೂ ಬಿಟ್ಟು ತೆನೆ ಆಗಿ ಭತ್ತದಂತಹ ಏಕದಳ ದಾನ್ಯ ಬರುವುದು ಪ್ರಕ್ಱುತಿ ನಿಯಮ. ಇದಕ್ಕೂ ಬರಗಾಲಕ್ಕೂ ಸಂಬಂಧವಿಲ್ಲ. ಆದರೆ ಹಲವಾರು ಕ್ರಿಮಿ ಕೀಟಗಳ ಸಂತತಿ ಹೆಚ್ಚಾಗುವುದಂತೂ ನಿಜ. ಕಳೆದ ವರ್ಷ ತೀರ್ಥಹಳ್ಳ್ಳಿ ಸುತ್ತ ಮುತ್ತ ಬಿದಿರು ಹೂ ಬಿಟ್ಟು ಅಡಿಕೆ ಫಸಲಿಗೆ ಹಾನಿಯಾಗಿರುವುದು ಕಂಡು ಬಂದಿದೆ. ಈ ರೀತಿ ಬಿದಿರು ಹೂ ಬಿಡುವುದನ್ನು ‍ "ಬಿದಿರು ಕಟ್ಟೆ" ಎಂದೂ ಕರೆಯುವರು. ಬಿದಿರು ಸಹ ಒಂದು ಹುಲ್ಲು. ಭತ್ತದಂತಹ ಹುಲ್ಲು ಆರು ತಿಂಗಳಿಗೆ ಹೂ ಬಿಟ್ಟು ದಾನ್ಯವಾದರೆ ಈ ಹುಲ್ಲು ನಲವತ್ತು ವರ್ಷಕ್ಕೆ ಹೂ ಬಿಟ್ಟು ದಾನ್ಯವಾಗುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದ, ಹೆಚ್ಚಿನ ಮಾಹಿತಿ ನೀಡಿದ ಎಲ್ಲರಿಗೂ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.