ಬಂಗಾಳಿಗಳಿಗೆ ಎಳನೀರು ಇನ್ನು ಬಾಟಲ್ ಗಳಲ್ಲಿ ಲಭ್ಯ.

3.333335

( ನಾನು ಓದಿದ ಕೆಲವು ಸುದ್ದಿಗಳನ್ನು ಕನ್ನಡದಲ್ಲಿ ಬರೆದು ಪ್ರಕಟಿಸಿದ್ದೇನೆ. ನಿಮ್ಮ ಅಭಿಪ್ರಾಯ ಹಾಗೂ ಸಲಹೆಗಳಿಗೆ ಮುಕ್ತ ಸ್ವಾಗತ )
ಎಳನೀರನ್ನು  ಪ್ಯಾಕ್ ಅಥವಾ ಬಾಟಲ್ ಗಳಲ್ಲಿ ಶೇಖರಿಸಿ ಮಾರಾಟ ಮಾಡುವ ಯೋಜನೆಯೊಂದನ್ನು ರೂಪಿಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸಣ್ಣ ಹೂಡಿಕೆದಾರರನ್ನು ಪ್ರೋತ್ಸಾಹಿಸಿದ್ದಾರೆ. ಶೀಘ್ರದಲ್ಲೇ ಸಣ್ಣ ಹೂಡಿಕೆದಾರರ ಸ್ಥಳೀಯ ಅಂಗಡಿ ಮಳಿಗೆಗಳಲ್ಲಿ ಸಂಗ್ರಹಿತ ಎಳನೀರು ದೊರೆಯುವಂತಾಗುತ್ತದೆ.
ಎಳನೀರನ್ನು ಪ್ಯಾಕೇಜ್ ಅಥವಾ ಬಾಟಲ್ ಗಳಲ್ಲಿ ಸಂಗ್ರಹಿಸಿ ಮಾರಾಟ ಮಾಡುವ ಕುರಿತಾಗಿ,ಪ.ಬಂಗಾಳ ರಾಜ್ಯ ಆಹಾರ ಸಂಸ್ಕರಣೆ ಇಲಾಖೆ ಈಗಾಗಲೇ ಅಧ್ಯಯನ ನಡೆಸುತ್ತಿದೆ. ಪ.ಬಂ.ರಾಜ್ಯ ಸರ್ಕಾರವು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪ್ಯಾಕೇಜಿಂಗ್ ಸಹಯೋಗದೊಂದಿಗೆ, ಎಳನೀರಲ್ಲಿ ಉತ್ತಮ ಚೈತನ್ಯದಾಯಕ ಗುಣಗಳಿದ್ದು, ಎಳನೀರಿನ ಒಂದು ಭಾಗ, ಅಥವಾ ಒಂದು ಕಪ್ ಎಳನೀರು- ನೀರಿನ ಮೂರು ಭಾಗಕ್ಕೆ ಸಮನಾಗಿರುತ್ತದೆ ಎಂಬ ಅಂಶವನ್ನು ಹೈಲೈಟ್ ಮಾಡುತ್ತಿದೆ.
ದೇಹದಲ್ಲಿ ನಿಶ್ಯಕ್ತಿ ಉಂಟಾದಾಗ ಎಳನೀರನ್ನು ಸೇವಿಸಿದರೆ, ಮಾನವನ ದೇಹಕ್ಕೆ ಅತ್ಯಮೂಲ್ಯವಾಗಿ ಬೇಕಾಗಿರುವ  'ಸಿ' ಜೀವಸತ್ವದ ಅಂಶವಿರುವುದರಿಂದ  ಶಿಘ್ರದಲ್ಲೇ ದೇಹದಲ್ಲಿ ಚೈತನ್ಯ ಉಂಟುಮಾಡುತ್ತದೆ. ಇದು ಕೊಬ್ಬು ಹಾಗೂ ಕೊಲೆಸ್ಟರಾಲ್ ನಿಂದ ಮುಕ್ತವಾಗಿದ್ದು ಬೇಸಗೆಯ ಬೇಗೆ ತಣಿಸಲು ದೇಹಕ್ಕೆ ಬಲು ಉಪಕಾರಿ. ಅದೇನೇ ಇರಲಿ ಜೀವದ್ರವ ಎಂದೇ ಕರೆಯಲ್ಪಡುವ ಎಳನೀರನ್ನು ಬೇಕಾದಾಗ ಸ್ಥಳೀಯ ಅಂಗಡಿಗಳಲ್ಲೇ  ಕೊಂಡುಕೊಳ್ಳುವ ಪ.ಬಂಗಾಳ ಮುಖ್ಯಮಂತ್ರಿಯವರ ವವ್ಯಸ್ಥೆಯ  ಯೋಜನೆಯಂತೂ ಹಿತಕರ.

ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ಕಿಸಿ:http://articles.timesofindia.indiatimes.com/2012-12-26/kolkata/36007134_1_coconut-water-bottles-indian-institute

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.