ಫೈರ್ಫಾಕ್ಸ್-ಕನ್ನಡದಿಂದ ಸಂಪದಿಗರಿಗೆ ಹೆಮ್ಮೆಯ ಕೊಡುಗೆ..!

5

ನಲ್ಮೆಯ ಸಂಪದಿಗರೇ,

ನಮ್ಮಲನೇಕರು ಫೈರ್ಫಾಕ್ಸ್ ಬ್ರೌಸರ್ ಕನ್ನಡ ಅವತರಣಿಕೆಯನ್ನ ಉಪಯೋಗಿಸುತ್ತಿರಬಹುದು. ಆದರೇ ಅದಕ್ಕಿಂತ ಅದರ ಬಗ್ಗೆ ಗೊತ್ತಿಲ್ಲದ, ಗೊತ್ತಿದ್ದೂ ಉಪಯೋಗಿಸದ ಅನೇಕ ಜನರಿದ್ದಾರೆಂಬುದು ನನ್ನ ಅನುಭವ. ನೀವಿದನ್ನ ಅಂದರೆ ಫೈರ್ಫಾಕ್ಸ್‌‌ನ ಕನ್ನಡ ವರ್ಷನ್ ಉಪಯೋಗಿಸಬೇಕೆಂದು ಬಯಸಿದಲ್ಲಿ ಅದನ್ನ ನಿಮ್ಮ ಕಂಪ್ಯೂಟರ್‌ಗೆ ಡೌನ್ಲೋಡ್ ಮಾಡಿಕೊಳ್ಳಲು, ಈ ಕೆಳಕಂಡ ಕೊಂಡಿ ಉಪಯೋಗಿಸಿಕೊಳ್ಳಬಹುದು.

ಕನ್ನಡ ಫೈರ್ಫಾಕ್ಸ್ ಡೌನ್‌ಲೋಡ್ ಕೊಂಡಿ.

ಇನ್ನು ವಿಚಾರಕ್ಕೆ ಬರೋಣ. ಎನಪ್ಪಾ ಇದು ಸಂಪದಿಗರಿಗೆ ಕೊಡುಗೆ ಅಂತ. ಸಾಧಾರಣವಾಗಿ ಕನ್ನಡ ಫೈರ್ಫಾಕ್ಸ್ ನಾನು ಉಪಯೋಗಿಸಲಾರಂಭಿಸಿ ಬಹಳ ದಿನಗಳೇ ಕಳೆದರೂ ಅದರ, ಅದರದ್ದೇ ಆದ ಪ್ರಾರಂಭಿಕ ಪುಟ ಅಂತಾ ಆಕರ್ಷಕವಾಗೇನು ಇರಲಿಲ್ಲ. ಅಕಸ್ಮಾತ್ತಾಗಿ ಇಂದು ಮತ್ತೆ ಇದೇ ಪೈರ್ಫಾಕ್ಸ್-ಕನ್ನಡದಲ್ಲಿ ನನ್ನ ಕೆಲಸ ನಾ ಶುರುಮಾಡುವಾಗ ನೋಡಿದ್ದೇನು? ಒಮ್ಮೆ ಕೆಳಗೆ ನೋಡಿ..! ಬಹುಷಃ ನಿಮಗೆ ಅರ್ಥ ಆಗಿರಬಹುದು ಅನ್ಕೋತೀನಿ..!

Firefox - Start Page - Kannada - Work

ಫೈರ್ಫಾಕ್ಸ್ ಏನು ಕೊಡುಗೆ ಸಂಪದಿಗರಿಗೆ ಕೊಟ್ಟಿದೆ ಅಂತ ಗೊತ್ತಾಗಿರಬೇಕಲ್ಲಾ, ಈಗ...!

ಇಲ್ಲ ಅಂದರೆ, ಇಲ್ಲಿಗೂ ಒಮ್ಮೆ. ಅಂದರೆ ನೇರವಾಗಿ ಆ ಪುಟಕ್ಕೆ ಒಮ್ಮೆ ಭೇಟಿ ಇತ್ತು ನೋಡಿ.

ಫೈರ್ಫಾಕ್ಸ್ ಆರಂಭಿಕ ಪುಟ

 

ಪೈರ್ಫಾಕ್ಸ್ ನೆಚ್ಚಿನ ತಾಣಗಳಲ್ಲಿ ಒಂದು ನಿಮ್ಮ ನೆಚ್ಚಿನ ತಾಣ ಕೂಡ..!

 

 

ನಿಮ್ಮೊಲವಿನ,

ಸತ್ಯ.. :-)

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.