ಪೈಲ್ವಾನ್ - ಹಿಂದಿನ ಹಳ್ಳಿಯಲ್ಲಿ ಮಾಡಿದ್ದೇನು?!! - ಜಮಾನಾದ ಜೋಕುಗಳು -೩

2.5


    ಪೈಲ್ವಾನ್ ಪಾಪಣ್ಣ ಒಂದು ಕಾಡಿನ ಮೂಲೆಯಲ್ಲಿದ್ದ ಹಳ್ಳಿಗೆ ಹೋದ. ಅಲ್ಲಿ ನಾಲ್ಕು ರಸ್ತೆ ಸೇರುವಲ್ಲಿ ನಿಂತು, "ಈ ಊರಿನಲ್ಲಿ ನೀವ್ಯಾರೂ ನನಗೆ ಅನ್ನ-ನೀರು ಕೊಡದೇ ಇದ್ದರೆ, ಹಿಂದಿನ ಹಳ್ಳಿಯಲ್ಲಿ ಮಾಡಿದ್ದನ್ನೇ ಈ ಹಳ್ಳಿಯಲ್ಲೂ ಮಾಡುತ್ತೇನೆ" ಎಂದು ಆವಾಝ್ ಹಾಕಿದ. ಊರವರೆಲ್ಲಾ ಹೆದರಿ ಇವನೇನಾದರೂ ಮಾಡಿಯಾನು ಎಂದು ಹೆದರಿ ಅವನಿಗೆ ಮಟನ್ನು-ಚಿಕನ್ನು ಸಮೇತ ಭರ್ಜರಿ ಊಟವನ್ನೇ ಹಾಕಿದರು. ಆ ಪೈಲ್ವಾನ ಊಟ ಮಾಡಿ ಸುಧಾರಿಸಿಕೊಂಡ ಮೇಲೆ ಒಬ್ಬ ಮುದುಕಿ ಧೈರ್ಯಮಾಡಿ ಕೇಳಿದಳು, "ಸ್ವಾಮಿ, ನಾವು ಊಟ ಹಾಕದಿದ್ದರೆ ಹಿಂದಿನ ಹಳ್ಳೀಲಿ ಮಾಡಿದ್ದನ್ನು ಇಲ್ಲೂ ಮಾಡ್ತೀನಿ ಅಂಥಾ ಹೇಳಿದ್ರಲ್ಲಾ, ಅಲ್ಲೇನು ಮಾಡಿದ್ರಿ?" ಪೈಲ್ವಾನ್, "ಆ ಹಳ್ಳೀಲಿ ಯಾರೂ ಊಟಾ ಹಾಕಲ್ಲ ಅಂದ್ರು ಅದಕ್ಕೇ ಆ ಹಳ್ಳೀನ್ ಬಿಟ್ಟು ಈ ಹಳ್ಳೀಗ್ ಬಂದೆ, ಇಲ್ಲೂ ಯಾರೂ ಊಟಾ ಹಾಕ್ದೇ ಇದ್ದಿದ್ದ್ರೇ ಇಲ್ಲೂ ಅದ್ನೇ ಮಾಡಿ ಮುಂದಿನ್ ಹಳ್ಳೀಗ್ ಹೋಗ್ತಿದ್ದೇ!"

(ವಿ.ಸೂ: ಇದನ್ನು ರಾಮಕೃಷ್ಣ ಮಠದ ಹಿರಿಯ ಸ್ವಾಮೀಜಿಗಳೊಬ್ಬರಿಂದ ಕೇಳಿದ್ದು. ನಾವು ಏನೇನೋ ಮಾಡ್ತೀವಂತ ಜಂಬ ಕೊಚ್ಚಿಕೊಳ್ತೀವಿ ಆದರೆ ಯಾವುದನ್ನೂ ಮಾಡುವುದಿಲ್ಲ ಎನ್ನುವುದನ್ನು ತಿಳಿ ಹೇಳುವುದಕ್ಕೋಸ್ಕರ ಈ ಕತೆಯನ್ನು ಹೇಳುತ್ತಿದ್ದರು)




 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿದೆ ... ಇದೇ ಕಥೆಯನ್ನು 'ಭಿಕ್ಷುಕನ' ರೂಪದಲ್ಲಿ ಕೇಳಿದ್ದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓದಿ ಪ್ರತಿಕ್ರಿಯಿಸಿದ ಶ್ರೀನಾಥ ಭಲ್ಲೆಯವರಿಗೆ, ಸಪ್ತಗಿರಿಗಳಿಗೆ, ಪ್ರೇಮಾ ಅವರಿಗೆ ಮತ್ತು ಕವಿಗಳಿಗೆ ಧನ್ಯವಾದಗಳು. ತಡವಾಗಿ ಪ್ರತಿ ಉತ್ತರ ನೀಡುತ್ತಿರುವುದಕ್ಕೆ ಕ್ಷಮೆಯಿರಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) :) ಏನಾದರೂ ಜಂಬ ಕೊಚ್ಚಿಕೊಳ್ಳಲಿ ಊಟ ಸಿಕ್ತು ತಾನೇ ಅವ್ನಿಗೆ!!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಚಿಕ್ಕೂ, ಆದರೆ ಇನ್ನೊಬ್ಬರು ಗಾಬರಿಯಾಗುವಂತೆ ಜಂಬ ಹೊಡೆದನಲ್ಲ ಅದು ನಿಜಕ್ಕೂ ಗ್ರೇಟ್ ಅಲ್ವಾ :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.