ಪುಳಿಯೋಗರೆ (ವಿಧಾನ ೧)

4.545455

ಬೇಕಾಗುವ ಸಾಮಗ್ರಿಗಳು :

ಒಣ ಮೆಣಸಿನ ಕಾಯಿ ೨೬

ಕೊತ್ತಂಬರಿ ಬೀಜ ೧ ಚಟಾಕು

ಮೆಣಸು ೧ ಚಟಾಕು

ಜೀರಿಗೆ ೧ ಚಟಾಕು

ಕಡಲೆಬೇಳೆ ೧ ಚಟಾಕು

ಉದ್ದಿನ ಬೇಳೆ ೧ ಚಟಾಕು

ಸಾಸುವೆ ೧/೨ ಚಟಾಕು

ಮೆಂತ್ಯ ೧/೪ ಚಟಾಕು

ಅರಿಸಿನದ ಕೊನೆ ೨

 

ಮಾಡುವ ವಿಧಾನ :  ಮೆಣಸಿನ ಕಾಯನ್ನು ತೊಟ್ಟು ತೆಗೆದು ೨ ಭಾಗ ಮಾಡಿ ಬಾಣಲೆಗೆ ಒಂದು ಸ್ಪೂನ್ ಎಣ್ಣೆ ಹಾಕಿ ಹುರಿದು ಬೇರೆ ಪಾತ್ರೆಗೆ ಹಾಕಿ.  ಪುನಃ ಒಂದು ಸ್ಪೂನ್ ಎಣ್ಣೆ ಹಾಕಿ, ಕೊತ್ತಂಬರಿ ಬೀಜವನ್ನು ಹುರಿದು ಅದನ್ನು ಪಾತ್ರೆಗೆ ಹಾಕಿ. ಉಳಿದ ಸಾಮಾನುಗಳನ್ನು ಎಣ್ಣೆ ಹಾಕದೆ ಹುರಿದು ಪಾತ್ರೆಗೆ ಹಾಕಿ.  ಅರಿಸಿನ ಒರಳಲ್ಲಿ ಕುಟ್ಟಿ ಉಳಿದ ಎಲ್ಲಾ ಸಾಮಾನುಗಳನ್ನು ಕುಟ್ಟಿ (ಕುಟ್ಟೋಕೆ ಶಕ್ತಿ, ಒರಳು ಇಲ್ಲದಿರುವವರು, ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ) ಜರಡೆಯಾಡಿಕೊಳ್ಳಿ.  

ಪುಳಿಯೋಗರೆ ಮಾಡುವ ವಿಧಾನ :

ಒಂದು ಕಿತ್ತಲೆ ಹಣ್ಣಿನ ಗಾತ್ರದಷ್ಟು ಅಂದರೆ ಮೂಸಂಬಿ ಗಾತ್ರ (ಅಜ್ಜಿ ಹೀಗೆ ಬರೆದಿಟ್ಟಿರೋದು ;-) )ದಷ್ಟು ಹುಣಸೇ ಹಣ್ಣನ್ನು ಬಿಸಿ ನೀರಿಗೆ ಹಾಕಿ ಗೊಜ್ಜು ಶೋಧಿಸಿ ಅದನ್ನು ಬಾಣಲೆ ಅಥವಾ ಡಬರಿಯಲ್ಲಿ ಕುದಿಸಿ.  ಗಟ್ಟಿ ಆದಾಗ ಮೇಲೆಲ್ಲಾ ಹಾರಲು ಶುರುವಾಗುತ್ತದೆ.  ಆಗ ಒಂದು ಚಟಾಕು ಉಪ್ಪು, ನಿಂಬೇ ಹಣ್ಣಿನ ಗಾತ್ರದಷ್ಟು ಬೆಲ್ಲ, ೬ ಗರಿ ಕರಿಬೇವು ಹಾಕಿ, ಇಡ್ಲಿ ಹಿಟ್ಟಿನಂತೆ ಗಟ್ಟಿ ಆದಾಗ ಕೆಳಗಿಟ್ಟು ಬೇರೆ ಪಾತ್ರೆಯಲ್ಲಿ ೧/೨ ಪಾವು ಎಣ್ಣೆ, ೬ ಮೆಣಸಿನ ಕಾಯಿ, ಚೂರು ಸಾಸಿವೆ, ೧ ಸ್ಪೂನ್ ಕಡಲೆಬೇಳೆ, ಉದ್ದಿನ ಬೇಳೆ ಹಾಕಿ.  ಹದವಾಗಿ ಹುರಿದು ಅದನ್ನು ಆ ಹುಳಿಗೆ ಹಾಕಿ, ಮಾಡಿಟ್ಟುಕೊಂಡಿರುವ ಪುಡಿ ೧/೨ ಪಾವು ಅಳತೆ ಹಾಕಿರಿ.  ೧/೪ ಕೆ.ಜಿ ಬಿಳೀ ಎಳ್ಳು ಹುರಿದು ಕುಟ್ಟಿ ೧ ಪಾತ್ರೆಯಲ್ಲಿಡಿ.  ೧/೨ ಕೆ.ಜಿ. ಕಡಲೆಕಾಯಿ ಬೀಜ ಹುರಿದು ಬೇಳೆ ಮಾಡಿ ಇಟ್ಟುಕೊಳ್ಳಿ ಅಥವಾ ಎಣ್ಣೆಯಲ್ಲಿ ಹದವಾಗಿ ಕರಿಯಿರಿ.  ೧ ಕೊಬ್ಬರಿ ತುರಿದಿಟ್ಟುಕೊಂಡು ಅದನ್ನು ಪುಡಿಯಾಗಿ ಮಾಡಿ ಆರಿಸಿ ಗೊಜ್ಜು ಸ್ವಲ್ಪ, ಕೊಬ್ಬರಿ ತುರಿ, ಎಳ್ಳು ಪುಡಿ, ಕಡಲೆಕಾಯಿಯ ಬೀಜ ಸ್ವಲ್ಪ ಎಣ್ಣೆ ಹಾಕಿ ಕಲಸಿರಿ.  ಉಪ್ಪು ಸಾಲದಿದ್ದರೆ ಹಾಕಿ.

 

(ಉಸ್ಸಪ್ಪಾ! ಬರೆಯೋಕೆ ಸಾಕಾಯಿತು, ಇನ್ನು ಇದನ್ನು ಮಾಡೋದು ಹೇಗೆ? ನಾನು  ಯಾವತ್ತು ಇದನ್ನು ಈ ಅಳತೆಯಲ್ಲಿ ಮಾಡಿಲ್ಲ.  ಹಾಗಾಗಿ ಎಷ್ಟು ಜನರ ಊಟಕ್ಕೆ ಈ ಗೊಜ್ಜು ಅಂತಾ ಖಂಡಿತವಾಗಿಯೂ ಗೊತ್ತಿಲ್ಲ.  ಬಹುಶಃ ನನಗೆ ಸಣ್ಣ ಅನುಮಾನ, ಅಜ್ಜಿ ಯಾವುದಾದರೂ ಜಾತ್ರೆಗಾಗಿ ಈ ಅಳತೆ ಬರೆದಿಟ್ಟಿದ್ದಾರಾ? ಅಂತಾ.  ಮಾಡಿ ನೋಡಿ ಆನಂದಿಸಿ).

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (11 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅಂದಹಾಗೆ ಇಂಚರರವರೆ ನಿಮ್ಮ ಅಜ್ಜಿ ಪುಳಿಯೋಗರೆಯನ್ನು ತಿನ್ನುವ ವಿಧಾನವನ್ನು ಬರೆದಿಟ್ಟಿದ್ದರೆ ತಿಳಿಸಿ :) ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್, ಸಂಪದಿಗರು ಈ ತರಹದ ಪ್ರಶ್ನೆಗಳನ್ನು ಕೇಳುತ್ತಾರೆಂದು ನನಗೆ ಗೊತ್ತು. ಅದಕ್ಕಾಗಿಯೇ ನಾನು ಬರೆದದ್ದು ‘ಮಾಡಿ, ನೋಡಿ, ಆನಂದಿಸಿ’ ಎಂದು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರ ಒಮ್ಮೆ ಗಣೇಶರ ಮಾತು ನಂಬಿ ನರ್ವೋಳು ಸೊಪ್ಪಿನ ಸಾಂಬಾರ್ ಮಾಡಲು ಹೋಗಿ ಪಾಡು ಬಿದ್ದೆ

ಇಲ್ಲಿ ಕ್ಲ್ರಿಕ್ ಮಾಡಿ

ನನ್ನ ಅಡುಗೆ ಪ್ರಯೋಗ 

ಈಗ ನೀವು ಪುಳೀಯೋಗರೆ ಮಾಡಲು ಉತ್ತೇಜನ ಕೊಡುತ್ತಿದ್ದೀರಿ 

 ‘ಮಾಡಿ, ನೋಡಿ, ಆನಂದಿಸಿ’

ನಾನು ಸಿದ್ದ

ಈಗ  I have to hire some one to eat   (ಅಂಗ್ಲ ಪ್ರಯೋಗಕ್ಕೆ ಕ್ಷಮೆ ಇರಲಿ)

ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿಯವರೆ, >>>ನಾನು ಸಿದ್ದ ಇದು ನೋಡಿ ವೀರ ಯೋಧನ ಹೇಳಿಕೆ. ಬಿಡಬೇಡಿ. ಅಡುಗೆ ಕೋಣೆಗೆ ನುಗ್ಗಿ.. ಇಂಚರ ಅವರು ಹೇಳಿದ ಕ್ರಮದಲ್ಲೇ ಮಾಡಿ..ಒಣ ಮೆಣಸಿನ ಕಾಯಿ ೨೬ ಹಾಕಲು ಮರೆಯದಿರಿ. ವಿಧಾನ ೧ ಸರಿಯಾಗಿಲ್ಲ ಅನಿಸಿದರೆ, ವಿಧಾನ ೨, ೩,..ನೀವೇ ಹುಡುಕಿ ಮಾಡಿ..ನಂತರ ನೋಡಿ.. -ಗಣೇಶ. ಇಂಚರ ಅವರೆ, ಸಂಪದ ತುಂಬಾ ಪುಳಿಯೋಗರೆ ಗಮಗಮ.. ಪಾರ್ಥಸಾರಥಿಯವರ ಪುಳಿಯೋಗರೆ ಸ್ನಾನ(ಮಡೆ ಸ್ನಾನದಂತೆ)ದ ವರದಿ(ನನ್ನ ಅಡುಗೆ ಪ್ರಯೋಗ ೨) ಓದಿ.. ಆನಂದಿಸಲಿದ್ದೀರಿ :) -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಣ ಮೆಣಸಿನಕಾಯಿ, ಕೋತ್ತಂಬರಿ ಬೀಜವನ್ನೂ ಸಹ, ಎಣ್ಣೆ ಬಳಸದೆ ಹುರಿದರೆ ಚೆನ್ನಾಗಿರುತ್ತೆ. ಈ ತರಹ ಮಾಡಿದರೆ ಒರಳಲ್ಲಿ ಕುಟ್ಟಲೂ ಸುಲಭ (ಬೇಗ ಪುಡಿಯಾಗುತ್ತೆ :P) ರುಚಿಯೂ ಬೇರೆ ಇರುತ್ತೆ, ಒಮ್ಮೆ ಪ್ರಯತ್ನ ಮಾಡಿ ನೋಡಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವಲಕ್ಕಿ ಅಥವಾ ಅಕ್ಕಿ ಶಾವಿಗೆ ಒಗ್ಗರಣೆ ಹಾಕಬೇಕಾದರೆ ಹಾಗೇ ಎಣ್ಣೆ ಹಾಕದೆ ಒಣದಾಗಿ ಕುಟ್ಟಿಕೊಂಡರೆ ರುಚಿಯಿರುತ್ತದೆ. ಆದರೆ ಅಮ್ಮ ಹೇಳೋ ಪ್ರಕಾರ ಒಣಮೆಣಸಿನಕಾಯಿ ಎಣ್ಣೆ ಹಾಕದೆ ಹುರಿದರೆ ಘಾಟಾಗುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗೆಯೆ, ಪಾವಿನ ಬದಲು ಏನು ಬಳಸಬಹುದು? ಅಳತೆ ಪಾವು ಸಿಗುವುದು ಈಗ ಕಷ್ಟ. ನನ್ನ ಅಮ್ಮ ಈಗಲು ಪಾವಿನಲ್ಲೇ ಅಳೆಯುತ್ತಾರೆ. ಆದರೆ ನಾನು ಬಳಸುವುದು ಒಂದು ಪುಟ್ಟ ಕಪ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೨ ಚಟಾಕು = ೧ ಪಾವು; ೪ ಪಾವು = ೧ ಸೇರು. ಇನ್ನು ೧ ಸೇರು ಅಕ್ಕಿ ಸುಮಾರು ೧೧೦೦ - ೧೨೫೦ ಗ್ರಾಮ್ ತೂಗುತ್ತದೆ (ಹಗುರ ಪದಾರ್ಥಗಳಾದ ಕೊತ್ತಂಬರಿ ಬೀಜ, ಜೀರಿಗೆಗೆ ಇದು ಅನ್ವಯಿಸುವುದಿಲ್ಲ). ೧ ಪಾವು ಎಣ್ಣೆ - ಕಾಲು ಲೀಟರ್ ಎನ್ನಬಹುದು. ನಮ್ಮ ಬಹುತೇಕ ಅಡುಗೆ ವಿಧಾನಗಳಲ್ಲಿ ಪಾವು-ಚಟಾಕು ಬಳಸುವಾಗ ಅವು ಘನ ಅಳತೆ (ವಾಲ್ಯೂಮ್) ಸೂಚಿಸುತ್ತವೆ. ಮಿಕ್ಕಿದ್ದನ್ನು ನೀವೇ ಕಂಡುಕೊಳ್ಳಬಹುದು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.