ನೆನಪೇ!

3.666665

ಕ್ಷಣ ಮಾತ್ರ ಹತ್ತಿರ ಸುಳಿದು
ನಗೆಯರಳಿಸುವ ನೆನಪೇ
ನೀ ನನ್ನ್ ಸಖನೇ?

ನಗುವಿನಲ್ಲೂ ಅಳುವ
ಹೆಕ್ಕಿ ತೆಗೆವ ನೆನಪೇ
ನೀ‌ ಪರಮ ಸಿನಿಕನೇ?

ಏಕಾಂತದಲಿ ಬೆಂದ ಮನಕೆ
ಸಾಂತ್ವನ ತರುವ ನೆನಪೇ
ನೀನಮೃತಸಿಂಚನವೇ?

ಭೂತದ ಗೋರಿಯ ಮೇಲೆ
ಕುಣಿ ಕುಣಿದಾಡುವ ನೆನಪೇ
ನೀ‌ ಕಾಡುವ ಪಿಶಾಚಿಯೇ?

ಗತದ ಗೋಡೆಗೆ ಬಡಿದು
ಮರಳಿ ಬರುವ ನೆನಪೇ
ನೀ‌ ನನ್ನಾತ್ಮಬಂಧುವೇ?

ಹೆಸರ ಹಂಗಿಲ್ಲದೆ ನನ್ನ
ಬರಸೆಳೆದು ಅಪ್ಪುವ ನೆನಪೇ
ನಮ್ಮದು ದಿವ್ಯ ಅನುಬಂಧವೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಈ ನೆನಪುಗಳಿಗೆಂದೂ ಒಂದು ಹೆಸರ ಅಸ್ತಿತ್ವ ಕೊಡಲಾಗದು,,ಸೂಪರ್ ಕವಿತೆ ..>>ಹೆಸರ ಹಂಗಿಲ್ಲದೆ ನನ್ನ ಬರಸೆಳೆದು ಅಪ್ಪುವ ನೆನಪೇ ನಮ್ಮದು ದಿವ್ಯ ಅನುಬಂಧವೇ? >> ಸೂಪರ್ ಸಾಲುಗಳು:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದುಶ್ರೀ, "ನೆನಪೇ" ಖುಷಿ ನೀಡುತ್ತಿದೆ! ನೆನಪುಗಳು ನಿಮಗದ್ಯಾರೇ ಆಗಿರಲಿ ಪರವಾಗಿಲ್ಲ ಎಂಟು ತಿಂಗಳ ನಂತರ ಮತ್ತೆ ಕವನ ಬರೆದಿರಲ್ಲಾ ಇಷ್ಟು ಸುದೀರ್ಘ ಅಂತರ ನೀಡದಿರಿ ನೀವು ಇನ್ನೆಂದೂ ಬರೆಯುತ್ತಿರಿ ಬರೆಯುತ್ತಲೇ ಇರಿ ಇಂದು, ಎಂದೆಂದೂ -ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿತ್ತು ನಿಮ್ಮ್ ಕವನ, ನಂಗು ಸ್ವಲ್ಪ ಕಲ್ಸಿ.....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ವಾಣಿ @ಆಸು ಹೆಗ್ಡೆ ಮೆಚ್ಚಿದ್ದಕ್ಕೆ ಧನ್ಯವಾದಗಳು @ಕವಿನಾಗರಾಜ್ :)‌ :) @vnaveen ಏನ್ ಕಲಿಸಬೇಕು ಹೇಳಿ ಕಲಿಸೋಣ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಬರೆಯೋದನ್ನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದನ್ನು ನಾನೇ ಇನ್ನು ಕಲಿತಿಲ್ಲ ನಿಮಗೆ ಹೇಗೆ ಹೇಳಿಕೊಡಲಿ??
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@chikku @ಗೋಪಾಲ್ ಮೆಚ್ಚಿದ್ದಕ್ಕೆ ನನ್ನಿ :)‌ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿತೆಯ ಮುಂದುವರಿಕೆ ಇದಲ್ಲದಿದ್ದರೂ ಓದಿದ ಮೇಲೆ ಮನಸ್ಸು ಹೇಳಿದ್ದು - ಮರೆತರೂ ಮತ್ತೆ ವರ್ತಮಾನದೊಂದಿಗೆ ಥಳಕು ಹಾಕಿ ಭವಿಷ್ಯವ ಬದಲಿಸುವ ನೆನಪೇ.. ನೀನು ಬದುಕಿನ ಪಲ್ಲಟನವೇ!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.