ನಿಷೇಧಾತ್ಮಕ ವೊಟು; ಅದೊಂದು ಪ್ರಹಸನ

5

  ಹುರಿಯಾಳುಗಳ ಪೈಕಿ ಯಾರೂ ಅರ್ಹರಿಲ್ಲ ಎಂದು ಅಧೀಕೃವಾಗಿ ತಿರಸ್ಕರಿಸುವ ಅವಕಾಶ ಚುನಾವಣಾ ಕಾನೂನಿನಲ್ಲಿದೆಯಂತೆ. ಹಾಗೆಂದು ವಿಜಯ ಕರ್ನಾಟಕ  ಮಾಹಿತಿ ನೀಡಿದೆ.(ಏ. 27) ಇಂತಹ ಪ್ರಕ್ರಿಯೆ ಒಂದು ಪ್ರಹಸನವೆನ್ನದೆ ಅನ್ಯತ್ರವಿಲ್ಲ. ‘ಅರ್ಹರು ಯಾರೂ ಕಣದಲ್ಲಿಲ್ಲವೆಂದು, ಒಳ್ಳೆಯವರು ವೋಟ್ ಮಾಡಲು ಹೋಗುತ್ತಿಲ್ಲ; ಈ ಕಾನುನು ಅವರನ್ನು ಮತಗಟ್ಟೆಗೆ ಸೆಳೆಯುತ್ತದೆ’ ಎನ್ನುವುದು ಸಮಜಾಯಷಿ. ಇಂಥಾ ನಿರೀಕ್ಷೆಯೇ ಬಾಲಿಶ. ಇಡೀ ಚುನಾವಣೆಯನ್ನು ನಕಾರಗೊಳಿಸುವಷ್ಟು ಸಂಖ್ಯೆಯ ಪ್ರಜ್ಞಾವಂತ ಮತದಾರರನ್ನು ಒಗ್ಗೂಡಿಸುವುದು ಸಾಧ್ಯವಾದರೆ, ‘ಇಲ್ಲ’, ‘ಬೇಡ’ಗಳ ನಿಷೇಧಾತ್ಮಕ ಸಾಮ್ರಾಜ್ಯವದರೂ ಏಕೆ? ಆ ನಾಯಕನನ್ನೇ ಕಣಕ್ಕಿಳಿಸಿ ಗೆಲ್ಲಿಸಬಾರದೇ?! ನಿಜವಾದ ಎಡವಟ್ಟಿರುವುದು ಇಲ್ಲಿ. ಎಲ್ಲೆಂದರೆ, ಕ್ಷೇತ್ರದ ಶೇ. 65-70ಮಂದಿಗೆ ಬೇಡವಾದ ನಿಷೇಧಾತ್ಮಕ ವ್ಯಕ್ತಿಯೇ ಗೆದ್ದು, ವಿಧಾನಸೌಧದಲ್ಲಿ ಕಾರುಬಾರು ನಡೆಸುವುದು. ಪರೀಕ್ಷೆಯಲ್ಲಿ, ಥರ್ಡ್‌ ಕ್ಲಾಸ್‌ ಪಸಾಗಬೇಕಾದರೂ, ಕನಿಷ್ಠ 35 ಅಂಕ ಬರಬೇಕು. ಇಲ್ಲಿ ಹಾಗಲ್ಲ. ಗೆದ್ದ ಅಭ್ಯರ್ಥಿ, ಸಮೀಪದ ಪ್ರತಿಸ್ಪರ್ಧಿಗಿಂತಾ ಎಷ್ಟು ಹೆಚ್ಚು ವೋಟ್ ಪಡೆದರು ಎಂದು ಹೇಳುವ Format ಅಳವಡಿಸಿಕಂಡಿದ್ದೆವೆಯೇ ಹೊರತು, ಒಟ್ಟು ಎಷ್ಟು Percent ಜನಪ್ರಿಯತೆ ಸಾಧಿಸಿದರು ಎಂಬ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ! ಕ್ರಿಕೆಟ್‌ನಲ್ಲಾದರೂ ಗೆಲುವಿಗೆ ಸಂಕೀರ್ಣ ಲೆಕ್ಕಾಚಾರವಿದೆ. ನಮ್ಮಲ್ಲಿ ಚುನಾವಣೆ, It is not cricket! ಇದನ್ನು ನಾವು ಕುದುರೆ ಜೂಜಿನಂತೆ ನೋಡುತ್ತಾ ಬಂದಿದ್ದೇವೆ. ಅದನ್ನು ಸುಧಾರಿಸಬೇಕೆಂದು ಪ್ರಜ್ಞಾವಂತರೆನಿಸಿದವರಿಗೆ ಅನ್ನಿಸಿದರೆ ಸಾಕು; ಬೇರಾವ ಸರ್ಕಸಿನ ಅಗತ್ಯವೂ ಇರುವುದಿಲ್ಲ! 
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.