ನಿನ್ನ ಗತಿಯೂ ಇಷ್ಟೇ ಕಣಯ್ಯಾ..!

3

ಕೇವಲ ಕ್ಷಣದ ಹಿ೦ದೆ ಎಲ್ಲವೂ ಚೆನ್ನಾಗಿತ್ತು!

ಅ೦ತರ್ಜಾಲ ತಡಕಾಡುತ್ತಾ..

ಅವರಿವರ ಕವನ ಓದುತ್ತಾ ಪ್ರತಿಕ್ರಿಯಿಸುತ್ತಿದ್ದಾಗ..

ಎಲ್ಲವೂ ಚೆನ್ನಾಗಿತ್ತು.. ಇದ್ದಕ್ಕಿದ್ದ೦ತೆ ಇದೇನಾಗಿ ಹೋಯಿತು!

ಇಲಿಯನ್ನು ಹಿಡಿದು ಆಚೀಚೆ ಓಡಿಸುತ್ತಾ

ಕೀಲಿಮಣೆಯ ಮೇಲೆಲ್ಲಾ ಬೆರಳುಗಳನ್ನು ಆಡಿಸುತ್ತಾ

ಮನದ ಭಾವನೆಗಳಿಗೆಲ್ಲಾ ಅಕ್ಷರ ರೂಪವನ್ನು

ನೀಡುತ್ತಿರುವಾಗಲೇ ಇದೇನಾಗಿ ಹೋಯಿತು!

ಕಣ್ಣ ಮು೦ದಿನ ಗಣಕಯ೦ತ್ರದಿ೦ದ

ಕಣ್ನುಗಳನ್ನು ಆಚೀಚೆ ಕೀಲಿಸಲಾರದಷ್ಟು

ತನ್ಮಯತೆಯನ್ನು ಮೆರೆಯುತ್ತಿದ್ದಾಗಲೇ

ಧಡಕ್ಕನೆ ಮೇಲೆದ್ದು ನಿಲ್ಲುವ೦ತೆ ಇದೇನಾಗಿ ಹೋಯಿತು!

ಕ್ಷಣ ಮಾತ್ರದಲ್ಲಿ ಏನೆಲ್ಲಾ ಭಾವನೆಗಳು!

 ಫ್ಯಾನಿ೦ದ ಪಟಕ್ಕನೇ ಕೆಳಬಿದ್ದ  ಹಲ್ಲಿಯೊ೦ದು

ಕಣ್ಣೆದುರಲ್ಲಿಯೇ ಅಸುನೀಗಿದ೦ತೆಲ್ಲಾ

ಮೈಯೆಲ್ಲಾ ಒಮ್ಮೆ ನಡುಗಿದ೦ತಾಯಿತು!

  ನಿನ್ನ ಗತಿಯೂ ಇಷ್ಟೇ ಕಣಯ್ಯಾ!

ಎ೦ದು ಹೇಳಿದ೦ತಾಯಿತು!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾವಡರೆ ನನ್ನನ್ನು ಸಹ ಹೆದರಿಸಿಬಿಟ್ಟಿರಿ. ನಿಜ ನಾವು ಸದಾ ಪ್ರಪಂಚದ ಆಗು ಹೋಗುಗಳ ಮಧ್ಯೆ ಎಷ್ಟು ತನ್ಮಯರಾಗಿಬಿಟ್ಟಿದ್ದೇವೆ ಅಂದರೆ ಒಮ್ಮೆಲೆ ಎದುರು ಬಂದು ನಿಲ್ಲ ಬಹುದಾದ ಆ ಸಾವಿಗೆ ಏನುತ್ತರ ಕೊಡುವುದು ಎಂದು ಹೊಳೆಯುವುದೆ ಇಲ್ಲ. ಇದನ್ನೆ ನಾನು ಮೊನ್ನೆ ಪ್ರತಿಕ್ರಿಯೆಯಲ್ಲಿ ಬರೆದಿದ್ದೆ ನಿಮ್ಮ"ಅಪರಂಜಿಗಿಲ್ಲ ಅಳುಕು(ಅಪಸವ್ಯ!)' ಕವನದಲ್ಲಿ' ಹಲ್ಲಿಯ ಸಾವು ಮನದ ಮೇಲೆ ಬೀರುವ ಪರಿಣಾಮ ನಮ್ಮೊಳಗಿನ ಯಾವುದೊ ಭಾವವನ್ನು ಎಚ್ಚರಗೊಳಿಸುತ್ತೆ ಅದಕ್ಕೆ ಹಲ್ಲಿಯ ಸಾವು ಒಂದು ಕಾರಣ. ಆದರೆ ಆ ಕಾರಣೆ ಬೇರೆಯು ಆಗಬಹುದು ಯಾವುದೆ ಕಾರಣವಿಲ್ಲದೆಯು ಇರಬಹುದು. ಅರ್ದರಾತ್ರಿಯಲ್ಲಿ ಎಚ್ಚರವಾಗಿ ಒಮ್ಮೆಲೆ ಯಾವುದೊ ಭಾವ ಕಾಡಲು ಶುರುಆಗುತ್ತೆ. ನಾನೆಲ್ಲಿನನು ಇಲ್ಲಿ ಏಕೆ ಬಂದು ಮಲಗಿರುವೆ. ಇದು ಯಾವ ಮಾಯ ಪ್ರಪಂಚ. ನಾವು ಹೋಗುವ ಕಾಲ ಬಂದರೆ ಹೋಗುವದೆಲ್ಲಿಗೆ ಇತ್ಯಾದಿ. ಬೆಳಗೆ ಸೂರ್ಯನ ಕಿರಣದ ಜೊತೆ ಎಲ್ಲ ಭಾವ ಕರಗಿ ಮತ್ತೆ ಮಾಯಪ್ರಪಂಚ ನಮ್ಮನ್ನು ತಬ್ಬಿಕೊಳ್ಳುತ್ತದೆ. 'ನಾನು' ಎಂಬ ಆ ಭಾವ ಎಲ್ಲೊ ಮರೆಯಾಗಿ , ಎಲ್ಲ ಭಾವಗಳ ಜೊತೆ ಬೆರೆತುಹೋಗುತ್ತೆ. ನಿಜ ಹಲ್ಲಿಯ ಸಾವು ಸೂಚಿಸಿದಂತೆ "ನಿನ್ನ ಗತಿಯು ಅಷ್ಟೆ" ಅಲ್ಲ ಎಲ್ಲರ ಗತಿಯು ಅಷ್ಟೆ! ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ನಾವಡ ರವರೆ, ನಿಮ್ಮ ಕವನದಲ್ಲಿ ಬಂದ ಅನಪೇಕ್ಷಿತ ಅತಿಥಿ ಹಲ್ಲಿಯಂತೆ ಎಲ್ಲರ ಬಾಳು. ಮುಂದಿನ ಕ್ಷಣದಲ್ಲಿ ಏನೆಂದು ಉಹೇಕೂಡಾ ಮಾಡಲಾಗದ ಅತಂತ್ರರು ನಾವು, ಆದರೂ...................... ಅನಪೇಕ್ಷಿತ ಅತಿಥಿ ಸಾವು ಕೂಡಾ! ಯಾವಾಗಲಾದರು ಬರಬಹುದು ಎಂಬುದನ್ನು ಚನ್ನಾಗಿ ತಿಳಿಸಿದ್ದಿರ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಪೇಕ್ಷಿತ ಹಾಗೂ ಅನಪೇಕ್ಷಿತ ಎಲ್ಲರೂ ಆ ವಿಧಿಯ ಮು೦ದೆ ಆ ಕಾಲನ ಮು೦ದೆ ಒ೦ದೇ! ಯಾವತ್ತೋ ಬರುವ ಸಾವು ಇ೦ದೇ ಬರಲೆ೦ಬ ನಮ್ಮಲ್ಲಿನ ಮಾನಸಿಕ ಸ್ಥೈರ್ಯ ಬಹುಶ: ಆ ಸಮಯವನ್ನು ಯಾವುದೇ ನೋವುಗಳಿ೦ದ ಮಾನಸಿಕ ವಿಭ್ರಾ೦ತಿಗಳಿಗೆ ಒಳಗಾಗದ೦ತೆ ಕಾಪಾಡಬಹುದು.. ನಿಮ್ಮ ವಿಮರ್ಶಾತ್ಮಕ ಪ್ರತಿಕ್ರಿಯೆಗೆ ನನ್ನ ವ೦ದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ವತ: ನಾನೇ ಆ ಕ್ಷಣಕ್ಕೆ.. ಹಲ್ಲಿಯ ಸಾವನ್ನು ಕ೦ಡು ತೀವ್ರವಾಗಿ ಚಡಪಡಿಸಿದ್ದೆ . ಇನ್ನೊಬ್ಬರ ಸಾವೇ ನಮಗೆ ಈ ತರಹದ ಚಡಪಡಿಕೆಯನ್ನು ನೀಡಿದರೆ.. ನಮ್ಮ ಕೊನೆಯ ದಿನಗಳು ಇನ್ನು ಹೇಗೋ! ನಿಮ್ಮ ವಿಮರ್ಶಾತ್ಮಕ ಪ್ರತಿಕ್ರಿಯೆಗೆ ನನ್ನ ವ೦ದನೆಗಳು ಪಾರ್ಥರೇ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ನೀವು ಸಾರ್ವಕಾಲಿಕ ಸತ್ಯವನ್ನು ತಿಳಿದುಕೊಂಡ ರೀತಿ ಅದ್ಭುತವಾಗಿದೆ. "All things whether good or bad have an ending"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರಿಗೆ ಸಾರ್ವಕಾಲಿಕ ಸತ್ಯವನ್ನರುಹಲು ಹಲ್ಲಿಯೊ೦ದು ತನ್ನ ಪ್ರಾಣ ಬಿಡಬೇಕಾಯ್ತಲ್ಲ ಶ್ರೀಧರರೇ! ಹೌದು ಪ್ರತಿಯೊ೦ದಕ್ಕೂ ಒ೦ದು ಅ೦ತ್ಯವೆ೦ಬುದಿದೆ ... ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಪ್ರಕೃತಿಯ ಎದುರಿನಲ್ಲಿ ನಾವು ಕೂಡ ಸಣ್ಣ ಹಲ್ಲಿಗಳಿದ್ದಂತೆ (ಸಣ್ಣ ಸೊಳ್ಳೆಯಂತೆ ಎಂದು ಹೇಳಬಹುದು) ಒಳ್ಳೆಯ ಕವನ ರಾಘವೇಂದ್ರ ನಾವಡರೆ. ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದಗಳು ಸತೀಶರೇ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಕ್ಷಣ ಮಾತ್ರದಲ್ಲಿ ಏನೆಲ್ಲಾ ಭಾವನೆಗಳು!" ನಾವಡ ಅವ್ರೇ ಬರಹದ ಕೊನೆ ಸಾಲಿನವರೆಗೂ ಇದ್ದ ಭಾವ ಅಂತ್ಯದಲ್ಲಿ ಧುತ್ತನೇ ಭಯಕ್ಕೆ ಬದಲಾಗಿದ್ದು ಭ್ರಮೆಯಲ್ಲಿಯೇ ತೇಲುತ್ತಿರುವವನಿಗೆ ನೈಜತೆಯ ದರ್ಶನ ಆದ ಹಾಗ್ ಆಯ್ತು.. ಈ ಎರಡೂ ಮೂರು ದಿನಗಳಲ್ಲಿ ನಿಮ್ಮಿಂದ ಎರಡು ಬರಹಗಳು ಎರಡೂ ಒಮ್ಮೆ ಯೋಚ್ಹೀಸುವಂತೆ ಮಾಡಿದ್ದವು... ಒಳಿತಾಗ್ಲಿ.. \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮೆಚ್ಚುಗೆಗೆ ನಾನು ಋಣಿಯಾಗಿದ್ದೇನೆ ಸಪ್ತಗಿರಿವಾಸಿಗಳೆ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದೇ ಜೀವನ!! ಚೆನ್ನಾಗಿದೆ ನಾವಡವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಚೇತೂ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.