ನಾವಿದ್ದೇವೆ

3.5

ನಾವಿದ್ದೇವೆ

ನಾವಿದ್ದೇವೆ ನಾವಿದ್ದೇವೆ
ಕಳ್ಳರ ಜೊತೆಗೆ ನಾವಿದ್ದೇವೆ
ಸುಳ್ಳರ ಜೊತೆಗೆ ನಾವಿದ್ದೇವೆ
ಮಳ್ಳರ ಜೊತೆಗೆ ನಾವಿದ್ದೇವೆ
ಎಲ್ಲರ ಜೊತೆಗೂ ನಾವಿದ್ದೇವೆ
ನಾವಿದ್ದೇವೆ ನಾವಿದ್ದೇವೆ !!

ಲೆಕ್ಕಕ್ಕಿಲ್ಲ ನಾವಿದ್ದೇವೆ
ಸೊಕ್ಕಲ್ಲೆಲ್ಲ ನಾವಿದ್ದೇವೆ
ನೆಕ್ಕಿದ್ದಿಲ್ಲ ನಾವಿದ್ದೇವೆ
ನಕ್ಕಲ್ಲೆಲ್ಲ ನಾವಿದ್ದೇವೆ
ಪಕ್ಕಕ್ಕೆಲ್ಲ ನಾವಿದ್ದೇವೆ
ನಾವಿದ್ದೇವೆ ನಾವಿದ್ದೇವೆ !!

ಹೇಸಿಗೆಯೆನ್ನದೆ ನಾವಿದ್ದೇವೆ
ಬೇಸರವಿಲ್ಲದೆ ನಾವಿದ್ದೇವೆ
ಮೋಸವ ಮಾಡಿರಿ ನಾವಿದ್ದೇವೆ
ಕಾಸಿಗೆ ಲೇಸಿಗೆ ನಾವಿದ್ದೇವೆ
ಮೀಸೆಯ ವೀರರು ನಾವಿದ್ದೇವೆ
ನಾವಿದ್ದೇವೆ ನಾವಿದ್ದೇವೆ

ಯೋಚನೆ ಬೇಡ ನಾವಿದ್ದೇವೆ
ವಿಚಾರ ಬೇಡ ನಾವಿದ್ದೇವೆ
ಪಚೀತಿ ಕೆಟ್ಟರು ನಾವಿದ್ದೇವೆ
ನೀಚರೆನ್ನದೇ ನಾವಿದ್ದೇವೆ
ಸಾಚಾ ತನಕೆ ನಾವಿದ್ದೇವೆ
ನಾವಿದ್ದೇವೆ ನಾವಿದ್ದೇವೆ !!

ಸೋಗಲಾಡಿಗಳೇ ನಾವಿದ್ದೇವೆ
ಹೋಗಿಸಲಾಗದ ನಾವಿದ್ದೇವೆ
ಈಗಿದ ಕೇಳಿರಿ ನಾವಿದ್ದೇವೆ
ಬೀಗದೆ ನಿಲ್ಲಿರಿ ನಾವಿದ್ದೇವೆ
ಬಾಗುವ ದಿನವಿದೆ ನಾವಿದ್ದೇವೆ
ನಾವಿದ್ದೇವೆ ನಾವಿದ್ದೇವೆ !!

ಎಲ್ಲರ ಬಣ್ಣವ ಕಂಡಿದ್ದೇವೆ
ಬಗೆಬಗೆ ನೋವನು ಉಂಡಿದ್ದೇವೆ
ಸ್ವಾರ್ಥಿಗೆ ಸೇವೆಯ ಮಾಡಿದ್ದೇವೆ
ಆಡದೆ ಮಾತನು ನುಂಗಿದ್ದೇವೆ
ಕಾಯುತ ಬಾಳುತ ನಾವಿದ್ದೇವೆ
ನಾವಿದ್ದೇವೆ ನಾವಿದ್ದೇವೆ !!
ನಾವಿನ್ನೂ ಇದ್ದೇವೆ ನಾವಿದ್ದೇವೆ !!!

- ಸದಾನಂದ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸದಾನಂದ ರವರೇ , ನಾವಿದ್ದೇವೆ, ಉತ್ತಮ ಕವನ. ಬರೆಯುತ್ತಿರಿ, ವಂದನೆಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಬಹುಜನರು ಇರುವ ರೀತಿಯ ವಾಸ್ತವತೆ ಬಿಂಬಿಸಿರುವಿರಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.