ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩

0

 ಇಲ್ಲಿಯವರೆಗೆ ...


ಮೊಲದ ಜೊತೆಯೇ ಆಟ ಆಡುತ್ತಾ ಕಾಲ ಕಳೆವ 'ಸೃಷ್ಟಿ' ಗೆ ಡಾ: ಸಿರಿ ಬೈದಿದ್ದು ಮತ್ತು ಮೊಲವನ್ಣ ಅವಳಿಂದ ಬೇರೆ ಮಾಡಿ ಗೂಡಿಗೆ ಸೇರಿಸಿದಳು ಅಸ್ಟೆ....

ಅವತ್ತು ಪೂರ್ತಿ ಮುಖ ಊದಿಸಿಕೊಂಡು ಇದ್ದ 'ಸೃಷ್ಟಿ' ಯನ್ಣ ಅವಳ ಪಾಡಿಗೆ ಬಿಟ್ಟು ತಾವ್ ಇಬ್ಬರು ಮಾತಾಡುತ್ತಾ ಕುಳಿತಿದ್ದರು ಡಾ: ಸಿರಿ ಮತ್ತು ವಿಶಾಲ್.. ಏನೋ ಶಬ್ಧ ಕೇಳಿಸಿ ಏನು ಅಂತ ಹೋಗಿ ನೋಡಿದರೆ ಅಲ್ಲಿ ಅವಳ ಕೋಣೆಯಲ್ಲಿ ಇವರಿಗೆ ಬೆನ್ನು ಮಾಡಿ ನಿಂತಿರುವ 'ಸೃಷ್ಟಿ' ಕೈಗಳಲ್ಲಿ ಕೊಸರಾಡುತ್ತಿರುವ ಮೊಲ, 'ಸೃಷ್ಟಿ' ಕಣ್ಣುಗಳಲ್ಲಿ ಕೆಂಡದ ಛಾಯೆ....ಕಾಣಿಸಿ ದಂಪತಿಗಳಿಗೆ ಭಯ ಆಯ್ತು, ಆದರೂ ಸಾವರ್ಸಿಕೊಂಡು 'ಸೃಷ್ಟಿ' ಆ ಮೊಲ ಬಿಡು, ಪ್ರಾಣಿಗಳಿಗೆ ಹಿಂಸೆ ಕೊಡಬಾರದು ಪಾಪ..! ಅನ್ನುತ್ತಾ ಮುಂದೆ ಮುಂದೆ ಬರಲು, 'ಸೃಷ್ಟಿ' ಮತ್ತಸ್ತು ವ್ಯಗ್ರ ಆಗಿ ವಿಚಿತ್ರ ಶಬ್ಧ ಹೊರಡಿಸುತ್ತಾ ಆ ಮೊಲವನ್ ಗಟ್ಟಿಯಾಗಿ ಹಿಡಿದು ಓಡುತ್ತಾ ಮನೆ ಹಿಂದೆ ಓಡಿದಳು....

ಕತ್ತಲೇ ತುಂಬಿದ್ದ ಮನೆ ಹಿಂದುಗಡೆ ತಡ ಬಡಾಯಿಸುತ್ತಾ ಹೋಗಿ ನೋಡಿದಾಗ ಆಲ್ ದೂರದಲ್ಲಿ 'ಸೃಷ್ಟಿ' ಕುಳಿತಿರುವುದು ಕಾಣಿಸಿ

ಓ! ಸದ್ಯ ಇಲ್ಲೇ ಇರುವಳು ಏನೂ ಆಗಿಲ್ಲ ಅಂತ , 'ಸೃಷ್ಟಿ' ಈ ಕಡೆ ತಿರುಗು ,ಬಾ ಇಲ್ಲಿ ಎಂದರು, ಬರದೇ ಇದ್ದ 'ಸೃಷ್ಟಿ' ಹತ್ತಿರವೇ ಹೋದ ಇಬ್ಬರು ಅವಳನ್ನ ನೋಡಿ ಧಂಗಾಗಿ ಬೆಚ್ಚಿದರು,

ಡಾ: ಸಿರಿ -ಬಸವಳಿದು ಬಿದ್ದಳು...

ಅಲ್ಲಿ ಅವರು ಕಂಡಿದ್ದು ಏನು???.


ಹಿಂದಿನ ಭಾಗಳ ಲಿಂಕ್ :

ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೧

ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೨


------------------------------------------------------------------------------------------------------------

ಅಲ್ಲಿ ಅವರು ಕಂಡಿದ್ದು ಏನು???.ಸೃಷ್ಟಿ'ಯ ಮುಖದ ತುಂಬಾ ಮೆತ್ತಿದ ರಕ್ತ, ಮತ್ತು ಕೈನಲ್ಲಿ ಅಳಿದುಳಿದ ಮೊಲದ ದೇಹದ ಅವಯವಗಳು...

ಅಯ್ಯೋ..!! ಈ 'ಸೃಷ್ಟಿ' ಹೇಗಾಗಬಾರದು ಅಂತ ನಾವ್ ಅಂದುಕೊಂಡಿದ್ದೆವೋ ಅದರಂತೆಯೇ ಆದಳೇ ?

ಪತ್ನಿ , ಡಾ: ಸಿರಿಯನ್ನ  ಅಲುಗಾಡಿಸಿ ಎಬ್ಬಿಸಿದ -ಡಾ: ವಿಶಾಲ್ , ಎಚ್ಚರವಾಗಿ ಕಣ್ಣು ತೆರೆದು 'ಸೃಷ್ಟಿ' ಕಡೆ ನೋಡಿ  ಕೈ ತೋರಿಸಿ  ಏನೋ ಹೇಳಲು ಪ್ರಯತ್ನಿಸಿದ  ಅವಳಿಗೆ  ಸುಮ್ಮನಿರುವಂತೆ ಹೇಳಿ, 'ಸೃಷ್ಟಿ' ಹತ್ತಿರ ಹೋಗಿ ಅವಳ ಕೈನಿಂದ  ಮೊಲದ ಅವಯವಗಳನ್ನ  ಕಿತ್ತಿ ದೂರ ಬಿಸಾಕಿ ಕೊಸರಾಡುತ್ತಿದ್ದ   ಅವಳನ್ನ ಕರೆದುಕೊಂಡು  ಮನೆಗೆ ಹೋಗಿ ಹೊರಗಡೆಯ ನಲ್ಲಿಯಲ್ಲಿ ಅವಳ ಮುಖ ತೊಳೆದು ಒಳಗೆ ಕರೆದೊಯ್ದು  ಮತ್ತು ಬರುವ ಇನ್ಜೆಕ್ಚನ್  ಕೊಟ್ಟು ಮಲಗಿಸಿದರು...
ಹಾಲಿನಲ್ಲಿ ಇಬ್ಬರೂ ತಲೆಯ ಮೇಲೆ  ಕೈ ಹೊತ್ತು ಚಿಂತಾಕ್ರಾಂತರಾಗಿ  ಕುಳಿತರು, ಒಬ್ಬರನ್ನೊಬ್ಬರು ನೋಡುತ್ತಾ.. 

ವಿಶಾಲ್, ಕೊನೆಗೂ 'ಸೃಷ್ಟಿ' ಪ್ರಾಣಿ ಸಹಜ ಗುಣಗಳನ್ನ  ತೋರಿಸುವುದಕ್ಕೆ ಶುರು ಮಾಡಿರುವಳು,ಈಗ ನಾವ್ ಇದ್ದುದುದಕ್ಕೆ  ಸ್ಸರಿ ಹೋಯ್ತು, ನಾವಿಲ್ಲದ ವೇಳೆಯಲ್ಲಿ ಇವಳು ಈ ರೀತಿ ಹೊರಗೆ ಹೋಗಿ ಪ್ರಾಣಿ ಪಕ್ಷಿ ಕೊನೆಗೆ ಮನುಷ್ಯರನ್ನೇ ತಿನ್ನುವದಕ್ಕೆ ಶುರು ಹಚ್ಚಿಕೊಂಡರೆ  ಹೆಂಗೆ?- ಡಾ: ಸಿರಿ ಯ ಪ್ರಶ್ನೆ   ..

ಅವಳತ್ತ ನೋಡುತ್ತಾ ಡಾ: ವಿಶಾಲ್ ಹೇಳಿದ 

'
 
ಸಿರಿ ನಿನಗೆ ಗೊತ್ತಲ್ಲ  ನಾವ್ ಅವಳನ್ನ ಸೃಷ್ಟಿಸುವಾಗ ಮುಕ್ಕಾಲು ಪ್ರತಿಶತ  ವಿವಿಧ  ಪ್ರಾಣಿಗಳ ಅಂಡಾಣು+ ವಂಶವಾಹಿಗಳನ್ನ  ಆದರೆ ಕಾಲು  ಭಾಗ  ಮಾತ್ರ    ನನ್ನ  ವಂಶವಾಹಿ ಬೆರೆಸಿರುವೆ..

ಪ್ರಾಣಿಗಳ ಹಿಂಸಾ  ಪ್ರವೃತ್ತಿ  ಇವಳಲ್ಲಿ ಈಗ ಕಾಣಿಸುತ್ತಿದೆ.. 
ಅದಕ್ಕೆ ಏನು ಪರಿಹಾರ? ಡಾ: ಸಿರಿ ಪ್ರಶ್ನೆ
ವಿಶಾಲ್: ನನ್ಗೆ ಈಗ ಸಧ್ಯಕ್ಕೆ ಏನೂ ತೊಚುತ್ತಿಲ್ಲ, ಆಮೆಲೆ ಏನಾದರೂ  ಹೊಳೆಯಬಹ್ದು..ನೊಡುವ.
ರಾತ್ರಿ ಊಟ ಮಾಡಿ 'ಸೃಷ್ಟಿ' ಬಗ್ಗೆಯೇ ಯೋಚಿಸುತ್ತ ಇಬ್ಬರು ಮಲಗಿದರು..

ಬೆಳಗ್ಗೆ 
ಸುಮಾರು ೮ ಕ್ಕೆ ಎದ್ದು ಕುಳಿತ  'ಸೃಷ್ಟಿ'  ಸೀದಾ  ಎದ್ದು ಹೊಗಿ  ಮನೆಯಲ್ಲಿ ಪ್ರಯೋಗಕ್ಕೆ ಅಂತ ಇರಿಸಿದ್ದ ಗಾಜಿನ   ದೊಡ್ಡ ನೀರಿನ ತೊಟ್ಟಿಯಲ್ಲಿ ಧಬೀಲನೆ ಬಿದ್ದಳು , ಅವಳು ಎದ್ದುದು   ಎದ್ದು ಹೋಗಿ ಗಾಜಿನ   ದೊಡ್ಡ ನೀರಿನ ಆ ದೊಡ್ಡ ತೊಟ್ಟಿಗೆ ಧಬೀಲನೆ ಬಿದ್ದುದು  ಇದ್ಯಾವುದೂ ಅಡುಗೆ ಮನೆಯಲ್ಲಿ ತಿಂಡಿ ರೆಡಿ ಮಾಡುತ್ತಿದ್ದ ಸಿರಿಗೂ , ಮತ್ತು ಹಾಲ್ ನಲ್ಲಿ ಪೇಪರ್ ಓದುತ್ತಿದ್ದ ವಿಶಾಲ್ ಗೂ ಗೊತ್ತಾಗಲೇ ಇಲ್ಲ..

ತಿಂಡಿ ರೆಡಿ ಮಾಡಿ  'ಸೃಷ್ಟಿ' ಗೆ ಎಬ್ಬಿಸಲು ಬಂದ  ಸಿರಿ, ಅಲ್ಲಿ 'ಸೃಷ್ಟಿ'  ಕಾಣಿಸದೆ  ಹೊರಗಡೆ ಬಂದು , ವಿಶಾಲ್ 'ಸೃಷ್ಟಿ' ಕಾಣಿಸುತ್ತಿಲ್ಲ, ನೀ ನೋಡಿದೆಯ? ಅಂದಾಗ , ಇಲ್ಲವಲ್ಲ 'ಅವಳು' ಇತ ಕಡೆ ಬಂದ ಹಾಗಿಲ್ಲ, ಹೊರಗಡೆ ಬರದೆ ಮನೆಯೊಳಗೇ ಎಲ್ಲಿ ಅಡಗಿ ಕುಳಿತಿರಲು ಸಾಧ್ಯ?  ಅಲ್ಲಿ ಏನಾದರೂ?.....

 ಒಡನೆಯೇ  ಇಬ್ಬರ ಮನವೂ ಏನೋ ಕೇಡು ಶಂಕಿಸಿ  ಓಡುತ್ತ ಹೋಗಿ ಒಳಗೆ ತಾವ್ ಪ್ರಯೋಗಕ್ಕೆ ಇರಿಸಿದ್ದ ದೊಡ್ಡ ಗಾಜಿನ ನೀರಿನ ತೊಟ್ಟಿಯ ಕಡೆ ನೋಡಿದಾಗ,  ಮನೆ ಒಳಗಡೆಯೇ ಪ್ರಯೋಗಕ್ಕೆ ಅಂತ ಇರಿಸಿದ್ದ ಪಾರದರ್ಶಕ ಗಾಜಿನ  ದೊಡ್ಡ ನೀರಿನ ತೊಟ್ಟಿಯಲ್ಲಿ ಈಜಾಡುತ್ತಿದ್ದ 'ಸೃಷ್ಟಿ' ಕಾಣಿಸಿದಳು..
  'ಸೃಷ್ಟಿ' ಯಾವುದೇ ಅಳುಕು ಇಲ್ಲದೆ ನೀರಿನಲ್ಲಿ ಕೈ ಕಾಲು ಬೀಸುತ್ತ ಈಜು ಹೊಡೆಯುತ್ತಿರುವಳು..!!

ಸೋಜಿಗವಾಗಿ ಒಬ್ಬರ ಮುಖವನ್ನು ಒಬ್ಬರು ನೋಡಲು ,ಇಬ್ಬರತ್ತ ನೋಡಿದ 'ಸೃಷ್ಟಿ' ಒಮ್ಮೆ ನಕ್ಕಳು ಮತ್ತೆ ಈಜು ಹೊಡೆಯಲು ಶುರು ಮಾಡಿದಳು..
'ಸೃಷ್ಟಿ' ಸಾಕು ಮೇಲೆ ಬಾ- ಒಂದು ಘಂಟೆ ನಂತರವೂ ಅವಳು ಮೇಲೆ ಬಾರದೆ ಇದ್ದಾಗ  ಕರೆದಳು ಸಿರಿ ..

ಮೇಲೆದ್ದು ಬಂದ ಅವಳ ಬಟ್ಟೆ ಬದಲ್ಸಿ ವಿಟಮಿನ್ ಮಿಶ್ರಿತ ಮಿಶ್ರಣ ಕುಡಿಸಿ  ಅವಳನ್ನ ಅವಳಿಗಾಗಿಯೇ ಇದ್ದ ರೂಮಲ್ಲಿ ಬಿಟ್ಟು ಬಂದರು...
ಹೀಗೆಯೇ ಮುಂದೆ ಯಾವುದೇ ತೊಂದರೆ ಆಗದೆ ಅವಳು ಸುಮಾರು ೮ ವರ್ಷದ ಪ್ರಾಯಕ್ಕೆ ಬಂದಾಗ , ಅವಳು ಆ ವಯಸ್ಸಲ್ಲಿ ಸಾಮಾನ್ಯವಾಗಿ ಆ ವಯಸ್ಸಲ್ಲಿ ಇರಬೇಕಾದ ಹುಡುಗಿಯರಿಗೆ ವಿರುದ್ಧವಾಗಿ ,ಈಗ  ಹುಡುಗಿಯರು ೧೮-೨೦ ವರ್ಷ ಆದಾಗ  ಹೇಗೆಲ್ಲ ಅವಯವಗಳು -ಮತ್ತು ದೇಹಾಕಾರದಲ್ಲಿ ಬದಲಾವಣೆಗಳು ಆಗುವವೋ ಹಾಗೆಲ್ಲ  ಆಗಲು ಶುರು ಆಯ್ತು.. ಇದು ಡಾ: ಸಿರಿ ಮತ್ತು ವಿಶಾಲ್  ಗೆ ಪೇಚಿಗೆ ಇಟ್ಟುಕೊಂತು ...!!

ಈಗೀಗ 'ಸೃಷ್ಟಿ' ಯ ಹಠಮಾರಿತನ ಮೊಂಡುತನ  ಕೋಪ ತಾಪ  ಸೆಡವು ಎಲ್ಲವೂ ಸಹಿಸಲು ಅಸಾಧ್ಯ ಎಂಬಂತೆ ಆಯ್ತು.. ಇದಕ್ಕೆ ಕಾರಣ ಅವಳು ಬಹುಪಾಲು ಹೊತ್ತು ಒಂಟಿಯಾಗೆ  ರೂಮಲ್ಲಿ ಇದ್ದುದು ಏಕಾಂಗಿತನ ಕಾಡಿದ್ದು..  


ಡಾ  : ವಿಶಾಲ್- ಸಿರಿ ,ಅಪ್ಪಿ ತಪ್ಪಿಯೂ ತಮ್ಮ ಯಾವುದೇ ಸ್ನೇಹಿತರನ್ನು- ಸಂಬಂಧಿಗಳನ್ನು  ಮನೆಗೆ ಕರೆದುಕೊಂಡು ಬಂದಿರಲಿಲ್ಲ .!! ಅದಕ್ಕೆ ಕಾರಣ 'ಸೃಷ್ಟಿ',..
ಅವಳು ಯಾರ ಕಣ್ಣಿಗೂ ಒಂದು ಹಂತದವರೆಗೆ ಬೀಳಬಾರದು, ಎಲ್ಲವೂ ನಾವ್ ಅಂದುಕೊಂಡ ಹಾಗೆಯೇ ನಡೆದರೆ ಆಗ ಒಂದು ಶುಭ ದಿನ ಅವಳನ್ನು ಜಗತ್ತಿಗೆ ಪರಿಚಯಿಸುವ ಅಂತ ಇಬ್ಬರೂ ನಿಶ್ಚ್ಯಯಿಸಿ ಆಗಿತ್ತು... 

ಅದೊಮ್ಮೆ ಎಂದಿನಂತೆ 'ಸೃಷ್ಟಿ' ಗೆ ಘಂಟೆಗಟ್ಟಲೆ ನೀರಲ್ಲಿ ಆಟ ಆಡಿ  ಡಾ: ಸಿರಿ ಕೊಟ್ಟ  ವಿಟಮಿನ್ ಮಿಶ್ರಣ ಕುಡಿದು  ತನ್ನ ರೂಮಿಗೆ ಹೋದಳು..

ಇಬ್ಬರೂ ಆ ಬಗ್ಗೆಯೇ ಮಾತಾಡುತ್ತ  ನಗುತ್ತ, ಏನೇನೋ ವಿಚಾರ ಹೇಳುತ್ತಾ  ಹಾಯಾಗಿ ಮಾತಾಡುತ್ತಿದ್ದರಲ್ಲ....  
ಆಗ 

ಅಲ್ಲಿ  ಆ ರೂಮಲ್ಲಿ ಒಂಟಿಯಾಗಿ ಕುಳಿತು  ಒಂಥರಾ ಏಕಾಂಗಿತನ ಅನುಭವಿಸುತ್ತಿದ್ದ  'ಸೃಷ್ಟಿ' ಕಣ್ಣಿಗೆ  ಡಾ: ಸಿರಿ ಅದೊಮ್ಮೆ ಕೊಡಿಸಿದ್ದ ಪೇಪರ್ ಪೆನ್ಸಿಲ್ಲು ಬಣ್ಣ ಕಾಣಿಸಿತು..
ಪೇಪರ್ ಸ್ಕೆಚ್ ಪೆನ್ನು ಕೈಗೆತ್ತಿಕೊಂಡು  ಹಲವು ಚಿತ್ರಗಳನ್ನು ಬಿಡಿಸಿದಳು...

ಆಗಲೇ ಅಲ್ಲಿ ಕಿಟಕಿ ಹತ್ತಿರ 

ಮಿಯಾವ್ ..ಮಿಯಾವ್ ಅಂತ ಸದ್ದ್ಧು ಕೇಳಿಸಿ ಮೊದಲು ಬೆಚ್ಚಿ ಬಿದ್ದಳು, ಅವಳಿಗೆ ಯಾವುದೇ ಶಬ್ದ  ಪ್ರಾಣಿಗಳು ಒಂಥರಾ ವಿಚಿತ್ರವಾಗಿ ಕಾಣಿಸುತ್ತಿದ್ದವು..  ಇವಳ ವಿಚಿತ್ರ ರೂಪ ನೋಡಿ ಬೆಕ್ಕು ಬೆದರಿ ಅಲ್ಲ್ಲಿಯೇ ನಿಂತಿತ್ತು , ಅದರ ಹತ್ತಿರ ಹೋಗಿ  ಹತ್ತಿರ ಬಾ ಎಂಬಂತೆ ಕೈ ಮಾಡಿದಳು ಅದು ಬೆದರಿ ಅಲ್ಲಿಯೇ ನಿಂತಿತ್ತು, ಅದರ ಹತ್ತಿರ ಹೋಗಿ ಕೈನಲ್ಲಿ ಎತ್ತ್ತಿಕೊಂಡು  ಅದರ ಜೊತೆ ಆಟ ಆಡುತ್ತ ಕುಳಿತಳು, ಮೊದಲಿಗೆ ಭಯ ಪಟ್ಟಿದ್ದರೂ ಇವಳನ್ನ  ನೋಡಿ ಅವಳ ಜೊತೆ ಬೆರೆತು  ಬೆಕ್ಕು ಮತ್ತು ಅವಳು ಸ್ನೇಹಿತರಾದರು..

ಡಾ: ಸಿರಿ ಮತ್ತು ವಿಶಾಲ್ ಗೆ  ಈ ಬೆಕ್ಕು ಮತ್ತು 'ಸೃಷ್ಟಿ' ವಿಚಾರವೇ ಗೊತ್ತಿರಲಿಲ್ಲ, ಅದೊಮ್ಮೆ  ಮಿಯಾವ್ ಮಿಯಾವ್ ಶಬ್ದ ಕೇಳಿಸಿ ನಮ್ಮ ಮನೆಯಲ್ಲಿ ಬೆಕ್ಕು ಅದ್ಯಾವಾಗ ಬಂತು? ಅಂತ ಅಚ್ಚರಿಯಿಂದ ಅದು ಎಲ್ಲಿದೆ ಅಂತ ಕೈನಲ್ಲಿ ಹಾಲು ಹಿಡಿದು ಹುಡುಕುತ್ತ ಹೋರಾಟ ಸಿರಿ ಗೆ  ಅದು 'ಸೃಷ್ಟಿ' ರೂಮಲ್ಲೇ ಇರುವುದು ಗೊತ್ತಾಗಿ ಭಯ ಆತಂಕ ಎಲ್ಲವೂ ಒಟ್ಟೊಟ್ಟಿಗೆ  ಆಯ್ತು...??

ಹಿಂದೊಮ್ಮೆ ಮೊಲದ ದಾರುಣ ಅಂತ್ಯ ಕಂಡಿದ್ದರಲ್ಲ..

ಬಾಗಿಲು ತೆಗೆದು ಸಿರಿ  ಒಳ  ಬರುವ ಮೊದಲೇ, ಸಿರಿ ಬಾಗಿಲ ಹತ್ತಿರ ಬಂದಿದ್ದು 'ಸೃಷ್ಟಿ' ಯ ಶ್ರವಣ ಶಕ್ತಿ ಗುರುತಿಸಿ ಬೆಕ್ಕನ್ನು ಒಳಗಡೆ ಅಡಗಿಸಿ ಇಟ್ಟು ಕುಳಿತಿದ್ದಳು...!!

ಒಳ ಬಂದು ಸುತ್ತ ಮುತ್ತ ನೋಡಿದ ಸಿರಿ ಗೆ ಬೆಕ್ಕು ಕಾಣಿಸಲಿಲ್ಲ, ಅದರ ಶಬ್ಧವೂ ಕೇಳಿಸಲಿಲ್ಲ , ಹಾಗಾದರೆ  ಆ ಬೆಕ್ಕಿನ ರೀತಿ ಧ್ವನಿ ಮಾಡಿದ್ದು ಇದೆ 'ಸೃಷ್ಟಿಯೇ' ಇರಬೇಕು ಅಂತ  ಹತ್ತಿರ ಬಂದು 'ಸೃಷ್ಟಿ' ಹತ್ತಿರ ಕುಳಿತು ತಲೆ ಮೇಲೆ ಕೈ ಹಾಕಿ ನೇವರಿಸಿ  ಹಾಗೆ ಒಮ್ಮೆ  ಸುತ್ತ ಮುತ್ತ ನೋಡಿ  ಬಾಗಿಲು ಹಾಕಿಕೊಂಡು  ಹೊರ ಬಂದಳು...

ಸಿರಿ ಹೋದ  ಮೇಲೆ ಸ್ವಲ್ಪ ಹೊತ್ತು ಕಾಡಿದ್ದು  ಅಲ್ಲಿ ಬಾಕ್ಸ್ ಒಂದರಲ್ಲಿ ಅಡಗಿಸಿ ಇಟ್ಟಿದ್ದ  ಬೆಕ್ಕನ್ನು ಹೊರ ತೆಗೆದಳು 'ಸೃಷ್ಟಿ'... ಪ್ರೀತಿಸುವುದು  ಮುದ್ದಿಸುವುದ್ ಮಾಡಿ ಒಮ್ಮೆಲೇ ಬಾಕ್ಸ್ಗೆ ಹಾಕಿ ಬಚ್ಚಿಟ್ಟು ಭಯ ಬೀಳ್ಸಿ ಮತ್ತೆ ಈಗ ಹೊರ ತೆಗೆಯುತ್ತಿರುವ 'ಸೃಷ್ಟಿ'ಯ ಮನದಾಳವನ್ನು ಅರಿಯುವ ವ್ಯರ್ಥ ಪ್ರಯತ್ನ ಮಾಡಿ ಸೋತಿತು ಬೆಕ್ಕು..!!

ಸ್ವಲ್ಪ ಹೊತ್ತು ಆದ ಮೇಲೆ  ಡಾ: ಸಿರಿ ಮನದಲ್ಲಿ ಯೋಚನೆಯೊಂದು ಬಂತು, 'ಸೃಷ್ಟಿ' ಯನ್ನ ಬಹುಕಾಲ ಒಂಟಿಯಾಗಿ ಬಿಡುವುದು ಸರಿ ಅಲ್ಲ, ಆಗಾಗ ಅವಳನ್ನು ಕೂಡಿಸಿಕೊಂಡು  ಕೆಲ ವಿಷಯಗಳನ್ನು ಕಲಿಸಬೇಕು, ಆಟೋಟ ದಲ್ಲಿ ಪಾಲ್ಗೊಳ್ಳುವ ಹಾಗೆ ಮಾಡಬೇಕು, ಎಂದುಕೊಳ್ಳುತ್ತ 'ಸೃಷ್ಟಿ', ಸೃಷ್ಟೀ  ಎಂದು ಜೋರಾಗಿ ಕೂಗಿ ಕರೆದಳು, ಬೆಕ್ಕನ್ನು ಕಿಟಕಿಯಿಂದ ಆಚೆಗೆ ಬಿಸುಟು  ಡಾ: ಸಿರಿ ಹತ್ತಿರ ಬಂದು ನಿಂತ 'ಸೃಷ್ಟಿ'ಗೆ - ನಿನಗೆ ಈಗ ಮೇಕಪ್ ಮಾಡುವೆ ಬಾ, ಎಂದು ಕರೆದೊಯ್ದು ಅವಳನ್ನು ದೊಡ್ಡ ಸೈಜಿನ ಮಿರರ್ ಮುಂದೆ ನಿಲ್ಲ್ಸಿದಾಗ, 'ಸೃಷ್ಟಿ' ತನ್ನ ರೂಪವನ್ನು ದೆಹಾಕಾರವನ್ನು ಮಾತು ಸಿರಿ ಯ  ದೇಹಾಕಾರವನ್ನು ನೋಡಿ -ನಾ ಯಾಕೆ ಹೀಗೆ? ಅವರು ಹಾಗೆ? ಎಂದು ಮನದಲ್ಲಿ  ಯೋಚಿಸಿದಳು..

ಅವಳ ಯೋಚನೆ ಅರಿತವಳಂತೆ, ಡಾ: ಸಿರಿ ನಗುತ್ತ, 'ಸೃಷ್ಟಿ' ನೀ ಇನ್ನು ಚಿಕ್ಕವಳಲ್ಲವೇ  ಹಾಗಾಗಿ ನಿನಗೆ ಇನ್ನು ತಲೆಯಲ್ಲಿ ಕೂದಲು ಬಂದಿಲ್ಲ, ಆಮೇಲೆ ಕೂದಲು ಬರುವುದು, ನೀ ಸಹಾ ನಮ್ಮಂತೆಯೇ ಆಗುವೆ ಎಂದು  ಸಮಾಧಾನ ಮಾಡಿದಳು.. ಆಮೇಲೆ ತನ್ನ ಕೊರಳಲ್ಲಿದ್ದ  ಲವ್ ಚಿಹ್ನೆಯ ಸರವನ್ನು  ಅವಳ ಕೊರಳಿಗೆ ಹಾಕಿ ಮಿರರ್ ನೋಡು ಎಷ್ಟು ಚೆನ್ನಾಗಿ ಕಾಣಿಸುತ್ತೆ ಎಂದಾಗ, ತನ್ನ ಪ್ರತಿ ಬಿಂಬ ನೋಡಿ 'ಸೃಷ್ಟಿ' ಗೆ ಅನ್ನಿಸ್ತು ಹೌದಲ್ಲ, ಚೆನ್ನಾಗಿದೆ..
ಆಮೇಲೆ ಅವಳಿಗೆ ವಿಧವಿಧವಾದ  ಪರಿಕರಿಗಳಿಂದ ಸಖತ್ತಾಗಿ ಮೇಕಪ್ ಮಾಡಿ  ಕಣ್ಣು ಹುಬ್ಬು ತೀಡಿ  ತುಟಿಗೆ  ಕೆಂಪು ಲಿಪ್ ಸ್ಟಿಕ್ ಬಳಿದು  ತಲೆಗೆ ವಿಗ್ ಹಾಕಿ  ಮತ್ತೊಮ್ಮೆ ಕನ್ನಡಿ ಎದುರು ನಿಲ್ಲಿಸಿದಾಗ 'ಸೃಷ್ಟಿ' ತನ್ನ ಕಣ್ಣುಗಳನ್ನ ತಾನೇ ನಂಬುವುದಕ್ಕೆ ಆಗಲಿಲ್ಲ..

ಇದಕ್ಕೆ ಮೊದಲೇ ಈ ಸುಂದರ ಕ್ಷಣಗಳನ್ನು ಸೆರೆ ಹಿಡಿಯಲು ಕ್ಯಾಮೆರ ಒಂದನ್ನು ಒಂದೆಡೆ  ರಹಸ್ಯವಾಗಿ ಇರಿಸಿದ್ದಳು ಡಾ: ಸಿರಿ..
ಮೈ ಕೈ ತುಂಬಿಕೊಂಡು ಚೆಲುವಿನ ಗಣಿಯಾಗಿ ವಯಸ್ಸಿಗೆ ಬಂದ  ಮಗಳನ್ನ  ನೋಡಿದರೆ ಹೇಗೆ ಅನ್ನಿಸುವುದೋ  ಹಾಗೆ 
ಅವಳನ್ನು ಆ ಮೇಕಪ್ನಲ್ಲಿ ನೋಡಿದ ಡಾ: ಸಿರಿ ಗೆ ಬೇಡ ಬೇಡ ಅಂದರೂ ಮನದಲ್ಲಿ ಒಂದು ಅವ್ಯಕ್ತ ಭಾವ ಹಾದು ಹೋಯ್ತು..???

ಒಂದೊಮ್ಮೆ ಹಾಗೆನಾರ ಆದ್ರೆ?
ಛೆ ಛೆ..!! ಆಗದೆ ಇರಲಿ....

ಆ ದಿನ ಪೂರ 'ಸೃಷ್ಟಿ' ಬಹು ಖುಷಿಯಾಗಿ ಇದ್ದಳು, ಆಮೇಲೆ ತನ್ನ ರೂಮಿಗೆ ಹೋಗಿ  ಪೆನ್ಸಿಲ್ಲು, ಪೇಪರ್ ತೆಗೆದುಕೊಂಡು ಹಲವು ಚಿತ್ರಗಳನ್ನು ಬಿಡಿಸಿದಳು...

ರಾತ್ರಿ ಮಾಮೂಲಿನಂತೆ ವಿಟಮಿನ್ ಮಿಶ್ರಣ ಸೇವಿಸಿ ಮಲಗಿಕೊಂಡಳು, 

ಅತ್ತ 

ತಮ್ಮ ಊಟ ಮುಗಿಸಿ 'ಸೃಷ್ಟಿ' ಬಗ್ಗೆಯೇ ಮಾತಾಡುತ್ತ ಅವಳಿಗೆ ಇವತ್ತು ಮೇಕಪ್ಪು ಮಾಡಿದ್ದು ಅದನ್ನು ರೆಕಾರ್ಡ್ ಮಾಡಿದ್ದು ಡಾ: ವಿಶಾಲ್ ಗೆ  ತೋರಿಸಿದಳು 
ಸಿರಿ..

ಆ ವೀಡಿಯೊ ಕ್ಲಿಪ್ಪಿಂಗ್ ನೋಡುತ್ತಾ ಡಾ: ವಿಶಾಲ್ ಗೆ  ಒಮ್ಮೆ ಮೈ ಜುಮ್ ಎಂತು..!!
ಮೈ ಗಾಡ್ 'ಸೃಷ್ಟಿ' ಮೇಕಪ್ ಮಾಡಿದರೆ ಇಷ್ಟು ಸುಂದರಳಾಗಿ ಕಾಣುವಳೇ?
ಅವನ ಮುಖವನ್ನೇ ನೋಡಿ , ವಿಶಾಲ್ ಏನಾಯ್ತು? ಎನ್ನಲು, 
ಏನಿಲ್ಲ, 'ಸೃಷ್ಟಿ' ಈ ಮೇಕಪ್ನಲ್ಲಿ ಸುಂದರವಾಗಿ ಕಾಣುತಿರುವಳು, ತುಂಬಾ ಚೆನ್ನಾಗಿ ಮೇಕಪ್ ಮಾಡಿರುವೆ ಎಂದ...
ಥ್ಯಾಂಕ್ಸ್  ಎಂದು ತನ್ನ ಮನದಾಳದ ಅವ್ಯಕ್ತ ಭಯವನ್ನು ದೂರ ಮಾಡಲು ಏನೋ ಯೋಚ್ಸಿ  ಅವನ ಕೊರಳ ಸುತ್ತ ಕೈ ಹಾಕಿದಳು ಡಾ: ಸಿರಿ ..

ಇಬ್ಬರೂ  ಶೃಂಗಾರದಲ್ಲಿ ಮೈ ಮರೆತಿದ್ದಾಗ.....

ಅತ್ತ 

ರೂಮ್ನಲ್ಲಿ ಮಲಗಿದ್ದ  'ಸೃಷ್ಟಿ' ಇವರ ಮಾತುಗಳನ್ನು ಕೇಳಿಸಿ ಕೊಳ್ಳುತ್ತಿದ್ದಳು,ನಿದ್ದೆ ಬಾರದೆ ಹೊರಳಾಡಿ ಹಾಗೆಯೇ ಎದ್ದು ಬಂದು  ಹಾಲಿನಲ್ಲಿ ನೋಡಿದರೆ..??
 
 

ಅಲ್ಲಿ ಹಾಲಿನಲ್ಲಿ  ತಮ್ಮ ಮೈ ಮನ ಮರೆತು ಶೃಂಗಾರದಲಿ ಸಕ್ರಿಯರಾಗಿದ್ದ,ತನ್ಮಯರಾಗಿದ್ದ    ಸಿರಿ ಮತ್ತು ವಿಶಾಲ್ ಅವರನ್ನು ಕಂಡು ಅವರಿಬ್ಬರೂ  ಅದರಲ್ಲಿ ಹೊಂದುತ್ತಿರುವ ಆನಂದವನ್ನು  ಕಣ್ಣಾರೆ ಕಂಡು ಕಿವಿಯಾರೆ ಕೇಳಿ   'ಸೃಷ್ಟಿ' ಯ ಮನದಲ್ಲಿ ಆಂದೋಲನ ಶುರ ಆಯ್ತು, ಮೈ ಬಿಸಿ ಆಯ್ತು, ಬಾಗಿಲ ಚೌಕಟ್ಟು  ಹಿಡಿದುಕೊಂಡು  ನೋಡುತ್ತಾ ಏನೋ ಕಲ್ಪಿಸಿಕೊಳ್ಳುತ್ತಾ  ನಿಂತಿದ್ದಳು,  ಸ್ವಲ್ಪ ಹೊತ್ತು ಆದ ಮೇಲೆ ವಾಪಾಸ್ಸು ರೂಮಿಗೆ ಬಂದು  ಹಾಸಿಗೆ ಮೇಲೆ ಮಲಗಲು ಪ್ರಯತ್ನಿಸಿದಳು,
 ಇನ್ನೆಲ್ಲಿ ನಿದ್ರೆ.....??

ಬೆಳಗ್ಗೆ ತಿಂಡಿ ತಯಾರು ಮಾಡಿ  ಊರಿಂದ ನೆಂಟರೊಬ್ಬರು  ಬಂದಿರುವರೆಂದು ಅವರನ್ನು ಮನೆಗೆ ಕರೆದ್ಕೊಂದು ಬರಲು ಆಗದ್ದರಿಂದ ಅವರನ್ನು  ಹೊರಗಡೆಯೇ ಮಾತಾಡಿಸಿಕೊಂಡು   ರೈಲು ಹತ್ತಿಸಿ ವಾಪಾಸೂ ಬರುವುದಾಗಿಯೂ  ಹೀಗಾಗಿ ಮನೆಯಲ್ಲೇ ಇದ್ದು 'ಸೃಷ್ಟಿ' ಯನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು  ಅವಳ ಮೇಲೆ ನಿಗಾ ವಹಿಸಬೇಕು  ಎಂತಲೂ ಇದಕಾಗಿ  ತಾವ್ ಅದಾಗಲೇ ಮನೆ ಎಲ್ಲೆಡೆ  ಅಳವಡಿಸಿರುವ ಕ್ಯಾಮೆರ  ಮತ್ತು ಅದರ ನಿಯಂತ್ರಣ- ದೃಶ್ಯ ವೀಕ್ಷಣೆ  ಮಾನಿಟರ್ ಮೇಲೆ ಗಮನ ಇರಲಿ ಎಂದು ಡಾ: ವಿಶಾಲ್ ಗೆ ಅರ್ಧ ಘಂಟೆವರೆಗೆ ಲೆಕ್ಚರ್ ತೆಗೆದುಕೊಂಡಳು ಸಿರಿ... 

ಗ್ಯಾರೆಜ್ನಲ್ಲಿದ್ದ ಕಾರನ್ನು ಹೊರಗೆ ತಂದು ಸ್ಟಾರ್ಟ್ ಮಾಡಿ ಸೃಸ್ಥಿ ಮತ್ತು ವಿಶಾಲ್ ಕಡೆಗೆ ಕೈ ಬೀಸಿ 'ಹುಷಾರು' ಅಂತ ವಿಶಾಲ್ ಗೆ ಸೂಚ್ಯವಾಗಿ ಹೇಳಿ  ಹೊರಟಳು ಡಾ: ಸಿರಿ...

ಕಾರು ಕಣ್ಮರೆಯಾಗುವವರೆಗೆ ನೋಡುತ್ತಾ ನಿಂತಿದ್ದ  ವಿಶಾಲ್  ಆಮೇಲೆ ಹಿಂದಕ್ಕ್ಕೆ ತಿರುಗಿ ನೋಡಿದರೆ, ಅಲ್ಲಿ 'ಸೃಷ್ಟಿ' ಇಲ್ಲ... ಎಲ್ಲಿ ಹೋದಳು ಅಂತ ದಿಗಿಲಾಗಿ ಮನೆಯ ಒಳ ಬಂದು  ನೋಡಿದರೆ ಅಲ್ಲಿ ..........????

ತನ್ನ ಕಡೆಗೆ ಬೆನ್ನು ಮಾಡಿ ಅನ್ಯಮನಸ್ಕಳಾಗಿ  ಕುಳಿತಿದ್ದ  'ಸೃಷ್ಟಿ'...
ಅವಳ ಹತ್ತಿರ ಹೋಗಿ  ತಲೆಯ ಮೇಲೆ ಕೈ ಆಡಿಸಿ , 'ಸೃಷ್ಟಿ' ಯಾಕೆ? ಬೇಜಾರ?  ಸಿರಿ ಇನ್ನೇನು ಬರುವಳು ಎಂದಾಗ ಅವಳ ಮುಖದಲ್ಲಿ  ರೋಷದ ಛಾಯೆ ಕಾಣಿಸಿತು... ಒಹ್..!! ಸಿರಿ ಯಾವಾಗಲೂ ಇವಳ ಜೊತೆ ಕಟ್ಟುನಿಟ್ಟಾಗಿ ಗಂಭೀರವಾಗಿ ಇರುವುದು ಮತ್ತು ಅವತ್ತು ಮೊಲವನ್ನ  ಕಿತ್ತುಕೊಂಡು ಬಂದಿದ್ದಕ್ಕೆ ಇವಳಿಗೆ ಅವಳ ಮೇಲೆ  ಕೋಪ ಬಂದಿದೆ  ಅಂತ ಗೊತ್ತಾಗಿ, ಅವಳ ಬಳಿ ಸಾರಿ ಕುಳಿತು, 

'ಸೃಷ್ಟಿ'  ಹಾಡು ಕೇಳುವೆಯ ಅಂತ  ಟೇಪ್ ಹತ್ತಿರ ಹೋಗಿ  ಅದರಲ್ಲಿ ನೃತ್ಯ ಮಾಡಲು ತಕ್ಕುದಾದ ಪಾಶ್ಚ್ಯಾತ್ಯ  ಸಂಗೀತ ಹಾಕಿ ನರ್ತಿಸಲು ಶುರು ಮಾಡಿದ..
ಅವನು ಡ್ಯಾನ್ಸ್ ಮಾಡುವುದ ಕೈ ಕಾಲು ಕುನಿಸುವುದೇ  ಒಂಥರಹ ವಿಚಿತ್ರ ಅನ್ನ್ನಿಸಿ  ಮೆಲ್ಲಗೆ ಅವನ ಹತ್ತಿರ ಹೋಗಿ ನಿಂತಳು 'ಸೃಷ್ಟಿ'..
ಬಾ ಇಲ್ಲಿ ಬಾ ನೋಡು ಹೀಗೆ ಹೀಗೆ ಅಂತ ಹೆಜ್ಜೆ ಹಾಕಿ  ಕುಣಿದು ತೋರಿಸಿದ, ಅವಳೂ ಹಾಗೆಯೇ ಪ್ರಯತ್ನಿಸಿದರೋ  ಅದು ಆಗದೆ ಕೈ ಚೆಲ್ಲಿ ಕುಳಿತಾಗ, ಅವಳ ಹತ್ತಿರ ಬಂದು ಕೈ ಹಿಡಿದು ತನ್ನ ಕೈಗಳನ್ನು ಅವಳ  ಕೊರಳ ಸುತ್ತ ಬಳಸಿ  ಕೈ ಹಾಕಿ ಕುಣಿಯುವುದು ಹೇಳಿ ಕೊಡತೊಡಗಿದ.. 

ಈ ತರಃ ಪುರುಷನೊಬ್ಬನ ಕೈ ತೋಳು ಬಳಸಿ ನರ್ತಿಸುವುದೇ ಅವಳಿಗೆ   ಆನಂದವಾಗಿ  ಅವನೊಡನೆ ಹೆಜ್ಜೆ ಹಾಕತೊಡಗಿದಳು... ಸುಮಾರು ಹೊತ್ತು ವಿಧ ವಿಧವಾಗಿ ಕುಣಿದು, ಕೊನೆಗೆ ಒಬ್ಬರ ಕೈಗಳನ್ನು ಒಬ್ಬರು ಹಿಡಿದು  ಸುತ್ತಲೂ ತಿರುಗುವಾಗ ಕಣ್ಣು ಮುಚ್ಚಿ ಪರವಶಳಾಗಿ ಖುಷಿ ಅನುಭವಿಸುತ್ತಿದ್ದ .....'ಸೃಷ್ಟಿ' ಯ ಕತ್ತಿನತ್ತ ನೋಡಿದ ವಿಶಾಲ್, ಅಲ್ಲಿ ತಾ ಸಿರಿ ಗೆ  ಹಾಕಿದ್ದ ಪ್ರೇಮ ಚಿಹ್ನೆಯ  ಸರ ,ಇಲ್ಲಿ ಇವಳ ಕೊರಳಲ್ಲಿ, ಒಮ್ಮೆ ಸಿರಿ ಮತ್ತು 'ಸೃಷ್ಟಿ' ಇಬ್ಬರೂ ಮತ್ತ್ತು ಬೇರೆ ಬೇರೆ ಆಗಿ   ಅವನ ಕಣ್ಣ ಮುಂದೆ ಕಾಣಿಸತೊಡಗಿದರು, ಕೊನೆಗೆ ಸಿರಿ ಮಾಯವಾಗಿ ಅಲ್ಲಿ 'ಸೃಷ್ಟಿ' ಯ ರೂಪವೇ ಎದುರು ನಿಂತಂತಾಯ್ತು.. 

ಸುತ್ತಲೂ ತಿರುಗುತ್ತ ಮೈ ಮರೆತಿದ್ದ ವಿಶಾಲ್ ಧುತ್ತನೆ ನಿಂತ, ಆನಂದಕ್ಕೆ ತಡೆ ಬಿದ್ದುದ್ ಕಂಡು ಕಣ್ಣು ತೆರೆದು ನೋಡಿದ  'ಸೃಷ್ಟಿ' ಹತ್ತಿರ ಬಂದು  ವಿಶಾಲ್ ಬೆನ್ನ ಸುತ್ತ ಕೈ ಬಳಸಿ  ಮುಖವನ್ನು ಹತ್ತಿರ ತಂದು  ಅವನ ತುಟಿಯ ಮೇಲೆ ಚುಂಬಿಸ ಹೊರಟಳು..

ಷಾಕ್ ಗೆ ಒಳಗಾದವನಂತೆ  ಇದೆಲ್ಲ ನೋಡುತ್ತಿದ್ದ ವಿಶಾಲ್ 'ಅಂತರಾತ್ಮ' ಎಚ್ಚರಿಸಿತು, ಇನೇನು ಹತ್ತಿರ ಬಂದ ಅವಳ ಕೆಂಪು ತುಟಿಗಳಿಗೆ ಕೈ ಅಡ್ಡ ಇಟ್ಟ.. ನಿರಾಸೆಯಾಗಿ ಕೋಪದಿಂದ ನೋಡಿದಳು 'ಸೃಷ್ಟಿ'.... ಮೈ ಮನದ ಕಾವು ಇಳಿಸಿಕೊಳ್ಳಲು  ಹಾಗೆಯೇ ಹೋಗಿ ನೀರಿನ ಗಾಜಿನ ತೊಟ್ಟಿಯಲ್ಲಿ ಧಬೀಲನೆ ಬಿದ್ದು  ಈಜು ಹೊಡೆಯುತ್ತ ವಿಶಾಲ್ ಕಡೆಗೆ ನೋಡುತ್ತಿದ್ದಳು...

ಸಟ್ಟನೆ ಆದ ಈ ಎಲ್ಲ  ಪ್ರಸಂಗದಿಂದ  ಮತ್ತು ಒಂಥರಹ ಅಪರಾಧಿ ಪ್ರಜ್ಞೆಯಿಂದ  ನರಳುತ್ತ ತನ್ನ ಕೋಣೆಗೆ ಹೋಗಿ ಅಲ್ಲಿ  ಮಾನಿಟರ್ ಮೇಲೆ  ಅವಳು ಈಜು ಹೊಡೆಯುತ್ತಿರುವುದು ನೋಡುತ್ತಿರಲು....

ನೀರಿನ ತೊಟ್ಟಿಯಿಂದ ಎದ್ದು ಬಂದ  'ಸೃಷ್ಟಿ' ತನ್ನ ಬಟ್ಟೆಗಳನ್ನು ಕಳಚಿ ನಗ್ನಳಾಗಿ  ಮತ್ತೆ ನೀರಿನ ತೊಟ್ಟಿಯಲ್ಲಿ ಧುಮುಕಿದಳು... ಅವಳ ಅವಯವಗಳನ್ನು ತುಂಬಿ ತುಳುಕುವ ದೇಹ ಸಂಪತ್ತನ್ನು  ತೋರಿಸುತ್ತ  ಈಜುತ್ತಾ ಈಜುತ್ತಾ ಎತ್ತಲೋ ನೋಡುತ್ತಿದ್ದ ಅವಳು  ತನ್ನನ್ನೇ ನೋಡುತ್ತಿದ್ದಂತೆ ತನ್ನನ್ನೇ ಕರೆಯುತ್ತಿದ್ದಂತೆ ಕೋಣೆಗೆ ಅವಳ ಕೈ ತನ್ನೆಡೆಗೆ ಬಂದಂತಾಗಿ  ಮಾನಿಟರ್ ಆಫ್ ಮಾಡಿ ತಲೆ ಮೇಲೆ ಕೈ ಹೊತ್ತು ಕುಳಿತ..... ಮೈ ಒಂದು -ಮನಸು ಒಂದು -ಅಂತರಾತ್ಮದ  ಎಚ್ಹರಿಕೆ ಯ ಅಡಕತ್ತರಿ ಮಧ್ಯೆ ಸಿಕ್ಕು 


 
 

ಒಹ್..!! ದೇವ್ರೇ ಇದೇನು ಪರೀಕ್ಷೆ?....

ಮೊದಲೇ ಇವಳಿಗೆ  ಜೊತೆಯಾಗಿ ಇನೊಂದು ಗಂಡು ಜೀವಿ ಇಲ್ಲ, ಈಗ ಇವಳಿಗೆ ವಯೋ ಸಹಜವಾಗಿ  ಬಯಕೆ ಬಂದಿದೆ, ಆದರೆ  ಸೃಷ್ಟಿಗೆ ಕಾರಣನಾದ ನಾ  ಹಾಗೆ ಮಾಡಬಹುದೇ?
ಅದು ಸರಿಯೇ?
ಈ ಬಯಕೆಯನ್ನು  ಅವಳು ಯಾವ ವಿಧದಲ್ಲಾದರೂ ತೀರಿಸ್ಕೊಳ್ಳದೆ  ಬಿಡಳು.... ಛೆ ಛೆ....!!
ಭಗವಂತ ನೀನೆ ದಾರಿ ತೋರಿಸು...
ನಾ ಏನು ಮಾಡಲಿ..?
ಹೀಗೆ ಗೊಂದಲದಲ್ಲಿ ಮೈ ಮನಗಳ ಕಾಮನೆಗಳ  ಸುಳಿಯಲ್ಲಿ  ಬಿದ್ದು ಒದ್ದಾಡುತ್ತಿರುವ  ಡಾ: ವಿಶಾಲ್ ಮುಂದಿನ ನಡೆ ಏನು?????
 
 
 

ಕೊನೆಯ ಭಾಗದಲ್ಲಿ  ..
 
 
.................!!!

  
ಚಿತ್ರ ಮೂಲಗಳು :
 
 

 

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಮ್ಮ ಕಲ್ಪನಾಶಕ್ತಿ ಅತ್ಯದ್ಭುತ. ನಿರೂಪಣಾ ಶೈಲಿ ಅನನ್ಯ. ಕುತೂಹಲಜನ್ಯ ಕತೆಯ ಅಂತಿಮಭಾಗಕ್ಕಾಗಿ ಕಾಯುತ್ತಿದ್ದೇನೆ. ಯಾವಾಗ ಬಿಡುಗಡೆ ಮಾಡುತ್ತೀರಿ. ಗುಪ್ತಾತಿಗುಪ್ತಸೃಷ್ಟಿರಹಸ್ಯವಿಜ್ಞಾನತಜ್ಞಸಪ್ತಗಿರಿವಾಸಿನೇ ನಮಃ |
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಂಜುಂಡ ಅವ್ರೆ ನಿಮ್ಮ ಹೊಗಳಿಕೆ- ಮೆಚ್ಚ್ಹುಗೆ ,ನಿರೀಕ್ಷೆ ನನ್ ಜವಾಬ್ಧಾರಿ ಹೆಚ್ಚಿಸಲಿ . . ನನ್ನ ಬಗೆಗಿನ ನಿಮ್ಮ ನಿರೀಕ್ಷೆಯ ಮಟ್ಟವನ್ನುಹೆಚ್ಚಿಸಿಕೊಳ್ಳಲು ಆಗದಿದ್ದರೂ , ಈಗ ಇರುವ ಮಟ್ಟವನ್ನು ಕಾಯ್ದುಕೊಳ್ಳುವುದೆ ನನ್ನ ಮೊದಲ ಆದ್ಯತೆ..!! ಪ್ರಶಸ್ತಿ- ಪ್ರಶಂಶೆ- ಮೆಚ್ಚುಗೆ ಇತ್ಯಾದಿ ನಮ್ಮ ಜವಾಬ್ಧಾರಿ ಹೆಚ್ಚಿಸುವುದು ಅಂತ ಡಾ: ರಾಜ್ ಅವರು ಒಂದೊಮ್ಮೆ ಹೇಳಿದ ನೆನಪು... ಅದು ನಿಜ... ನಿಮಗೆ ಕಥೆ ಮೆಚ್ಚುಗೆಯಾಗಿದ್ದು ಕೇಳಿ 'ಸಮಾಧಾನ' ಆಯ್ತು...!! ಈ ತರಹದ ಕುತೂಹಲಕಾರಿಯಾಗಬಲ್ಲ ವೈಜ್ಞಾನಿಕ ಬರಹ ಬರೆವಾಗ ಮೊದಲಿಗೆ ಕೊಂಚ ಭಯವೇ ಆಗಿತ್ತು....!! ನಾ ಸರಣಿಗಳಲ್ಲಿ ಬರೆದ ಹಲವು ಬರಹಗಳು ಮೊದಲ ಭಾಗದಲ್ಲಿ ಕುತೂಹಲ ಮೂಡಿಸಿ ಆಮೇಲೆ ಬರು ಬರುತ್ತಾ.....?? ರಾ...ರೆ.... ಬ......ಕ.... ತು...!! ಅನ್ನೋ ಹಾಗೆ ಆಗಿವೆ..:()) ಅದಕ್ಕೆ ನಾ ಈಗೀಗ ಸರಣಿಗಳಲ್ಲಿ ಬರೆಯುವ ಬಗ್ಗೆ '೧೦೮' ಸಾರಿ ಯೋಚಿಸಿ ಬರೆಯುತ್ತಿರುವೆ,,,!! ನಾವ್ ಬರೆವ ಬರಹಗಳು ನಮಗೆ ತೃಪ್ತಿ ಕೊಡುವುದಕ್ಕಿಂತ ಅದನ್ನು ಓದಿ ಮೆಚ್ಚಿ ಪ್ರತಿಕ್ರಿಯಿಸುವವರಿಗೆ 'ಇಷ್ಟ' ಆಗುವುದು 'ಕುತೂಹಲ' ಮೂಡಿಸುವುದರಲ್ಲಿ ನಾವ್ ಯಶಸ್ವಿ ಆಗುವುದರಲ್ಲಿ 'ಧನ್ಯತಾ' ಭಾವ ಇರುವುದು.. ಮೊದಲಿಂದಲೂ 'ತುಂಬಾ' ವ್ಯಾಕರಣ ದೋಷಗಳೊಂದಿಗೆ ನಾ ಬರೆದ ಎಲ್ಲ ಬರಹಗಳನ್ನು ಓದಿ ,ಮೆಚ್ಚಿ ತಪ್ಪಿದ್ದರೆ ತಿದ್ದಿ -ತೀಡಿ, ಬೆನ್ನು ತಟ್ಟಿ ಹುಮ್ಮಸ್ಸು -ಹುರುಪು -ತುಂಬಿದ ಸಂಪದಿಗರ 'ಹೃದಯ ವೈಶಾಲ್ಯತೆ' ದೊಡ್ಡದು...!! ಶುಭವಾಗಲಿ.... ಪ್ರತಿಕ್ರಿಯೆಗೆ ಮೆಚ್ಚುಗೆಗೆ ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಥೆ ಚೆನ್ನಾಗಿದೆ. ಊಹೆಗೂ ಮೀರಿದ ತಿರುವನ್ನು ನೀಡಿರುವಿರಿ. ಬಹುಶಃ  ಪ್ರತಿ ಸೃಷ್ಟಿಕರ್ತನು ತನ್ನದೆ ಸೃಷ್ಟಿಯಿಂದ ಬೇಸತ್ತು ತಾನೆ ಅದರ ಅಂತ್ಯ ಮಾಡುತ್ತಾನೆ ಎಂಬುದು ಮತೊಮ್ಮೆ  ಸಾಭೀತಾಗುವ ಸಂಭವ ಹೆಚ್ಚಾಗಿ ಕಾಣುತ್ತಿದೆ.

 

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತೀಕ್ ಅವ್ರೆ- ೩ ಭಾಗಗಳನ್ನು ಮೆಚ್ಚಿ ,ಮೂರು ಕಡೆಯೂ 'ವಿಭಿನ್ನವಾಗಿ' ಪ್ರತಿಕ್ರಿಯ್ಸಿದ ನಿಮಗೆ ನನ್ನಿ ಇನ್ನು ೪ ನೆ ಅಥವಾ ಕೊನೆಯ(ಆದರೆ ಇಲ್ಲವಾದರೆ ೫ ನೆಯ ಭಾಗವೂ ಬರಬಹ್ದು..!!) ಭಾಗದಲ್ಲಿ ಕಥೆಯ ಅಂತ್ಯ .....ಹೇಗೆ......ಆಗುವುದು....??? ಅದಂತೂ ನಂಗೆ ಗೊತ್ತಿದೆ,,,,:()))) ಅದು ತುಂಬಾ ..............ರೀ ರ....... .........ಕ್ ನೀಡುವದು......:())) ಶುಭವಾಗಲಿ.... ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದು ಕಛೇರಿಯಲ್ಲಿ ಕೆಲಸ ಮಾಡುತ್ತಿರುವಾಗಲು ನಿಮ್ಮ ಕಥೆ (ತಲೆ ತುಂಬಾ ತುಂಬಿತ್ತು) ಮನಸ್ಸನ್ನು ಕಾಡುತಿತ್ತು. ಅಂತ್ಯ ಹೀಗಿರಬಹುದು ಹಾಗಿರಬಹುದು ಎಂದು ಯೋಚಿಸಿ ಯೋಚಿಸಿ ಕಡೆಯಲ್ಲಿ ಹೀಗಾಗಬಹುದು ಎಂಬುದನ್ನು ಊಹಿಸಿರುವೆ ಅದನ್ನು ನಿಮ್ಮ ಕಥೆಯ ಕೊನೆಯ ಭಾಗ ಪ್ರಕಟಿಸಿದ ನಂತರ ತಿಳಿಸುವೆ. ‍ಪ್ರತೀಕ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯೋಚಿಸಿ ....... .......................ಯೋಚಿಸಿ ಕಡೆಯಲ್ಲಿ ಹೀಗಾಗಬಹುದು ಎಂಬುದನ್ನು ಊಹಿಸಿರುವೆ ------------------------------------------------------------------------------------ :(()))) ಪ್ರತೀಕ್- ನಿಮ್ಮ ಕಾತುರ- ನಿರೀಕ್ಷೆಯ ಮಟ್ಟ ಮುಟ್ಟುವ ಪ್ರಯತ್ನ(ಪ್ರಾಮಾಣಿಕ) ಮಾಡುವೆ ... ಶುಭವಾಗಲಿ .. ತ್ವರಿತ ಪ್ರತಿಕ್ರಿಯೆಗೆ ನನ್ನಿ ಅಂದ್ ಹಾಗೆ ನೀವ್ ಎಲ್ಲಿ ? ಏನು ? ಕೆಲಸ ಮಾಡುವಿರಿ ... ಇದಕ್ಕೆ ಉತ್ತರವನ್ನು ನನ್ನ ವಯುಕ್ತಿಕ ಮಿಂಚಿಗೆ ಕಳಿಸಿ.. ಅದು ನನ್ನ ಹೆಸರು ಕ್ಲಿಕ್ಕ್ಸಿದರೆ ಸಿಗುವುದು \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಳಾಸ ದೊರಕುತ್ತಿಲ್ಲ, ನನ್ನ ವಿವರಗಳಿಗೆ ಫೇಸ್ ಬುಕ್ ನಲ್ಲಿ ನನ್ನ ಹೆಸರು prathik jarmalle (ನನ್ನ ಗಣಕ ಯಂತ್ರದಲ್ಲಿದ್ದ ತೊಂದರೆಯ ಕಾರಣ ಪ್ರತಿಕ್ರಿಯೆಯಲ್ಲಿ ತಡವಾಯಿತು ಕ್ಷಮೆಯಿರಲಿ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ ಅವ್ರೆ ನಿಮ್ಮ ಫೆಸ್ಬುಕ್ ಅಯ್ ಡಿ ಹುಡುಕಿ ಮೆಸೆಜ್ ಕಳಿಸಿರುವೆ...ನೊಡೀ.. \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೊಸ ಸೃಷ್ಟಿಯನ್ನೆ ಮಾಡುತ್ತಾರೆ ಎಂಬ ಕಾರಣಕ್ಕಾಗಿ ತಂಬಿಟ್ಟು ಸ್ವಾಮಿಯವರು ಸಪ್ತಗಿರಿವಾಸಿಯನ್ನು ಹೊರಗಿಟ್ಟಿದ್ದು ಎಂದು ಹೇಳಿದ ಗಣೇಶರ ಮಾತು ನಿಜ!! ಚೆನ್ನಾಗಿದೆ, ನಿಮ್ಮ ಸೃಷ್ಟಿ, ವೆಂಕಟೇಶರೆ. ಮುಂದುವರೆಸಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

 

ಸಪ್ತಗಿರಿವಾಸಿ : ತಾನೇ ಹೊಸ "ಸೃಷ್ಟಿ"ಕ್ರಿಯೆ ಪ್ರಾರಂಭಿಸಿದವನು. ಬಹಳ ಡೇಂಜರ್!


ಹ ಹ....!!

ಹಿರಿಯರೇ  

ನಿಮ್ಮಿಬ್ಬರ(ಗಣೇಶ್ ಅಣ್ಣ- ನೀವುಗಳು) ಮೆಚ್ಚುಗೆ-ಉತ್ತೇಜನ-  ಹರಸುವಿಕೆಯೇ 

ನನ್ನ ಬರಹಗಳಿಗೆ 
ಶಕ್ತಿ-ಸ್ಪೂರ್ತಿಯ ಸೆಲೆ...
.

ಪ್ರತಿಕ್ರಿಯೆಗೆ
ನನ್ನಿ


 

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ಸಪ್ತಗಿರಿವಾಸಿ ಬರೆದುದಾ!? ನಂಬಲಾಗುತ್ತಿಲ್ಲಾ! ಚೆನ್ನಾಗಿದೆ..ಕೊನೆಯ ಭಾಗವೂ ಚೆನ್ನಾಗಿರುವುದು ಎಂದು ಗ್ಯಾರಂಟಿ ಹೇಳಬಲ್ಲೆ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಂಬಲಾಗುತ್ತಿಲ್ಲಾ! ----------------------- ನೀವ್ ಯಾಕೆ ಆ ರೀತಿ ಹೇಳಿದಿರೋ....??? ನನಗೆ ಗೊತ್ತಾಯ್ತು..!! ಬರಹಕ್ಕೂ -ಬರಹಗಾರನಿಗೂ ಲಿಂಕ್....?? ;()))) ಗಣೇಶ್ ಅಣ್ಣ- ನಿಮ್ಮ ಭರವಸೆ ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುವೆ ... ಭರವಸೆಯುಕ್ತ ಪ್ರತಿಕ್ರಿಯೆಗೆ ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿವಾಸಿಗಳೇ, ಗ್ರೋತ್ ಹಾರ್ಮೋನುಗಳು ನಿಧಾನವಾಗಿ ಕೆಲಸ ಮಾಡುವಂತೆ ಅವಳ ಕ್ರೋಮೋಸೋಮುಗಳಲ್ಲಿ ಬದಲಾವಣೆಯನ್ನು ಮಾಡಲು ನಿಮ್ಮ ಸಂಶೋಧಕರಿಗೆ ತಿಳಿಸಿ. ಅದೇ ರೀತಿ ಪ್ರಾಣಿಗಳ ಭಾವನೆಗಳನ್ನು ಉಂಟು ಮಾಡುವ ಕ್ರೋಮೋಸೋಮುಗಳನ್ನು ವರ್ಣತಂತುಗಳ ಭಾಗಗಳನ್ನು ನಿಷ್ಕ್ರಿಯಗೊಳಿಸಿ ಅದರಲ್ಲಿ ಒಳ್ಳೆಯ ಭಾವನೆಯುಂಟು ಮಾಡುವ ವರ್ಣತಂತುಗಳು ಅಥವಾ ಜೀನ್ಸುಗಳನ್ನು ಸ್ಱುಷ್ಟಿಯ ದೇಹದೊಳಗೆ ಪ್ರವೇಶಿಸುವಂತೆ ಮಾಡಿ. ಅಚಾನಕ್ಕಾಗಿ ಈ ಕಂತನ್ನು ಇಂದು ನೋಡಿದೆ. ನಿಜಕ್ಕೂ ನಿಮ್ಮ ಕಲ್ಪನಾ ಶಕ್ತಿ ಮತ್ತು ವಂಶವಾಹಕಗಳ ಬಗ್ಗೆ ನಿಮ್ಮ ತಿಳುವಳಿಕೆ ಅನನ್ಯವಾಗಿದೆ. ಅಂ.ಭಂ.ರು ಹೊಸ ಹೊಸ ರುಚಿಗಳನ್ನು ತಯಾರಿಸುವುದರಲ್ಲಿ ನಿಪುಣರಾಗಿದ್ದರೆ ಅವರ ಶಿಷ್ಯ ಹೊಸ ಹೊಸ ಜೀವಿಗಳನ್ನು ತಯಾರಿಸುತ್ತಿದ್ದಾನೆ. ಗುರುವನ್ನು ಮೀರಿದ ಶಿಷ್ಯ...ಬಹು ಪರಾಕ್; ಬಹು ಪರಾಕ್!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಿ ಮುನ್ದಿನ ಕ0ತು ನಿಮ್ಮ ಸ0ದೆಹವನ್ನು .............................ದೆ...!! ಕಾಲನ ಕೈನಲ್ಲಿ .........ದೆ...!! ಮು0ದಿನ ಎರಡು ಭಾಗಗಳೂ ..............ವೆ.....!! ಪ್ರತಿಕ್ರಿಯೆಗೆ ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂದೇಶ ಬಂದಿಲ್ಲ, ದಯವಿಟ್ಟು ಇಲ್ಲಿಗೆ ಕಳುಹಿಸಿ prathik.jarmale@gmail.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ ನಿವ್ ಕೊಟ್ಟ ಮಿನ್ಛೆ ವಿಳಾಸಕ್ಕೆ ಮಿನ್ಛೆ ಕಳಿಸಿರುವೆ.. ನೊಡೀ.... ಸಾಮಾಜಿಕ ಜಾಲ ತಾಣಗಳಲ್ಲಿ ವಯುಕ್ತಿಕ ಮಿನ್ಛೆ ವಿಳಾಸ ಕೊಟ್ಟರೆ ಸ್ಪಾಮ್ ಬರಬಹುದು.....:((( ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.