ನಗೆಹನಿಗಳು - 43 ನೇ ಮತ್ತು ಕೊನೆಯ ಕಂತಿನ ನಂತರ 44 ನೇ ಕಂತು!

3.75

ಭಯೋತ್ಪಾದಕರಿಗೆ ನಾನು ಹೆದರುವವನಲ್ಲ- ನನ್ನ ಮದುವೆ ಆಗಿ ಎಷ್ಟೋ ವರುಷ ಆಗಿವೆ
-----
ಅರವತ್ತು ವರ್ಷದ ಶ್ರೀಮಂತ ಹರೆಯದ ಸುಂದರಿಯನ್ನು ಮದುವೆ ಆದ. ಎಲ್ಲ ಗೆಳೆಯರಿಗೂ ಆಶ್ಚರ್ಯ - ಅದು ಹೇಗೆ ಅವಳು ಅವನನ್ನು ಒಲಿದಳು ? ಅಂತ.
ಅವನನ್ನೇ ಕೇಳಿದಾಗ ಹೇಳಿದ - ಏನಿಲ್ಲ, ಅವಳಿಗೆ ನನ್ನ ವಯಸ್ಸಿನ ಬಗ್ಗೆ ಸುಳ್ಳು ಹೇಳಿದೆ , ಅಷ್ಟೇ!
ಅವರು ಕೇಳಿದರು -ಎಷ್ಟು ಅಂತ ಹೇಳಿದೆ ?
ಅವನು ಹೇಳಿದ - 85 !
-----
- ಅಪ್ಪಾ, ಮದುವೆಗೆ ಎಷ್ಟು ಹಣ ಖರ್ಚಾಗುತ್ತದೆ ?
- ಒಟ್ಟು ಎಷ್ಟು ಅಂತ ಈಗಲೇ ಹೇಳಲು ಬರುವುದಿಲ್ಲ ಮಗೂ , ನಾನು ಇನ್ನೂ ಹಣ ಕೊಡುತ್ತಲೇ ಇದ್ದೇನೆ .
-----
ನನ್ನ ಹೆಂಡತಿಗೆ ಎಷ್ಟೋ ವರ್ಷಗಳಿಂದ ಒಂದು ಮಾತನ್ನೂ ಹೇಳಿಲ್ಲ, ಯಾಕೆಂದರೆ ಅವಳಿಗೆ ಅಡ್ಡಬಾಯಿ ಹಾಕುವುದು ಸೇರುವದಿಲ್ಲ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (4 votes)
To prevent automated spam submissions leave this field empty.