ನಗೆಹನಿಗಳು ( ಹೊಸವು ?) - 42 ನೇ ಕಂತು

3.333335

( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ
)
****
- ನಿನ್ನ ಬಗ್ಗೆ ಅವನು ಏನೆಲ್ಲಾ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾನೆ, ಗೊತ್ತೆ ?
- ಸುಳ್ಳು ತಾನೇ , ಹೇಳಲಿ. ನಿಜ ಏನಾದರೂ ಹೇಳಿದರೆ ಅವನನ್ನು ಕೊಂದೇ ಹಾಕುತ್ತೇನೆ!
****
- ಹಾಗಾದರೆ ನೀವು ಈ ವರ್ಷ ಪ್ಯಾರಿಸ್ ಗೆ ಹೋಗ್ತಾ ಇಲ್ಲವೇ ?
-ಇಲ್ಲ , ಅದು ಲಂಡನ್ , ಈ ವರ್ಷ ನಾವು ಹೋಗದೆ ಇರೋದು. ಪ್ಯಾರಿಸ್ - ನಾವು ಹೋದ ವರ್ಷ ಹೋಗದೆ ಇದ್ದದ್ದು !
****
ಲಾಯರುಗಳು ಜಾಸ್ತಿ ಇದ್ದಷ್ಟೂ ಕೇಸು ತೀರ್ಮಾನ ತಡ .
ಡಾಕ್ಟರುಗಳು ಜಾಸ್ತಿ ಇದ್ದಷ್ಟೂ ಕೇಸು ತೀರ್ಮಾನ ಬೇಗ!
****
- ಕೊಡಗು ಅಂದರೆ ನನಗೆ ಬಲು ಪ್ರೀತಿ. ಎಷ್ಟೊಂದು ಸುಂದರ ಸಮಯವನ್ನು ಅದು ನನಗೆ ಕೊಟ್ಟಿದೆ.
- ಆದರೆ ನೀವು ಎಂದೂ ಕೊಡಗಿಗೆ ಹೋಗಿಲ್ಲವಲ್ಲ ?
- ನನ್ನ ಹೆಂಡತಿ ಹೋಗುತ್ತಿರುತ್ತಾಳಲ್ಲ ? ಅವಳ ತವರು ಅದು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.