ನಗೆಹನಿಗಳು ( ಹೊಸವು ?) - 40 ನೇ ಕಂತು

4

( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ
)

****

-ಕಣದಲ್ಲಿ ಇರುವ ಈ ಇಬ್ಬರು ಅಭ್ಯರ್ಥಿಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು ?
-ಸದ್ಯ, ಈ ಇಬ್ಬರಲ್ಲಿ ಒಬ್ಬ ಮಾತ್ರ ಗೆಲ್ತಾನೆ !

****

- ನಿನ್ನೆ ನೀವು ಹೋದ ನಾಟಕ ಸುಖಾಂತವಾಗಿತ್ತೆ ?
- ಹೌದು , ಅದು ಮುಗಿದದ್ದಕ್ಕೆ ಎಲ್ಲರೂ ಸಂತೋಷ ಪಟ್ಟರು!

****
ನಟ - ನನ್ನ ನಾಟಕ ಅಂದರೆ ಪ್ರೇಕ್ಷಕರು ಕುರ್ಚಿಗೆ ಅಂಟಿಕೊಂಡೇ ಇರ್ತಾರೆ.
- ಅಂಟು ? ಅವರನ್ನು ಎದ್ದು ಹೋಗದ ಹಾಗೆ ತುಂಬಾ ವಿಚಿತ್ರ ಉಪಾಯಾನೇ ಮಾಡಿದ್ದೀರಿ!

****
ಸಿನಿಮಾ ಥಿಯೇಟರ್ ನಲ್ಲಿ
- ಚಿನ್ನಾ , ಸಿನಿಮಾ ತೆರೆ ಸರಿಯಾಗಿ ಕಾಣುತ್ತದೆಯೇ?
- ಹೌದು
- ಮತ್ತೆ , ಯಾರ ತಲೆಯೂ ಅಡ್ಡ ಬರುವುದಿಲ್ಲ ತಾನೇ ?
- ಇಲ್ಲರೀ
- ಸೀಟು ಸರಿಯಾಗಿದೆಯೆ ?
- ಹೌದು ರೀ
- ಹಾಗಾದರೆ , ನೀನು ಇಲ್ಲಿ ಬಾ , ನಾನು ಅಲ್ಲಿ ಕೂಡುತ್ತೇನೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.