ದೇವರಲ್ಲಿ ಮಳೆಗಾಗಿ ಮೊರೆ -೨

4.75

ಮೊದಲ ಭಾಗ :  http://sampada.net/blog/%E0%B2%A6%E0%B3%87%E0%B2%B5%E0%B2%B0%E0%B2%B2%E0...

ದೇವರು : ಯಾರಲ್ಲಿ ಈತನನ್ನು ಕುದಿಯುವ ಎಣ್ಣೆಯ ಕೊಪ್ಪರಿಗೆಯಲ್ಲಿ ಹಾಕಿ.
ನಾನು   : ದೇವರೆ, ಇದು ಅನ್ಯಾಯ. ನಾನೇನು ತಪ್ಪು ಮಾಡಿದೆ?
ದೇ      : ಈತ ಯಾರ ಭಕ್ತಿಗೀತೆ ಹಾಡಿದ್ದು? ನನ್ನದು ತಾನೆ? ಮೆಚ್ಚಿ ಹೊಗಳಬೇಕಾದವನು ನಾನು, ನೀನಲ್ಲ. ಈ ಮೂವರ ಮುಖ ನೋಡಿ ನಿನ್ನನ್ನು ಈ ಬಾರಿ ಕ್ಷಮಿಸಿದ್ದೇನೆ.
ನಾನು  : ಧನ್ಯವಾದ ದೇವರೆ. ಇಬ್ಬರು ಸರಿ, ಮೂರನೆಯ "ದುರ್ಗುಣ"ನ ಬಗ್ಗೆ ತಮಗೆ ಗೊತ್ತಿಲ್ಲ ಕಾಣುತ್ತದೆ. ಯಾವಾಗಲೂ ತಮ್ಮನ್ನು ತೆಗಳುತ್ತಿರುತ್ತಾನೆ. ಆತನನ್ನು ಎಣ್ಣೆ ಕೊಪ್ಪರಿಗೆಯಲ್ಲಿ ಹಾಕಿ, ಗರಂ ಮಸಾಲೆ ಹಾಕಿ, ಒಂದು ಒಗ್ಗರಣೆ....
ದೇವರು : ಏsssಯ್..ನಿಲ್ಲಿಸು. ಬಾಯಿಗೆ ಬಂದಂತೆ ಒದರಲು ಇದು ವಿದಾನ ಸಭೆಯಲ್ಲ. ತೆಗಳುತ್ತಾ ಇರುವುದೇ ಆತನಿಗೆ ನಾನು ಕೊಟ್ಟಿರುವ ಶಿಕ್ಷೆ. ಯಾರಿಗೇ ಆಗಲಿ ಶಿಕ್ಷೆ ಕೊಡುವುದು ಬಿಡುವುದು ನನ್ನಿಷ್ಟ. ನಡುವೆ ನಿನ್ನದೇನು ವಕಾಲತ್ತು? ಯಾರಲ್ಲಿ..
ನಾನು :ತಪ್ಪಾಯ್ತು ದೇವರೆ, ಇನ್ನೊಮ್ಮೆ ಈ ಇಬ್ಬರ ಅಲ್ಲ, ಮೂವರ ಮುಖ ನೋಡಿ ಕ್ಷಮಿಸಿಬಿಡಿ. ಇನ್ನೊಂದೇ ಒಂದು ಪ್ರಶ್ನೆ-ದೇವರು ದಯಾಮಯ ಅಂತ ಕೇಳಿದ್ದೆ. ಚಿತ್ರಗಳಲ್ಲೂ ನಿಮ್ಮ ಸುಂದರ ಮುಖವನ್ನೇ ನೋಡುತ್ತೇವೆ. ಇಲ್ಲಿ ನೋಡಿದರೆ ಹುಬ್ಬುಗಂಟಿಕ್ಕಿಕೊಂಡೇ ಇದ್ದೀರಿ ಯಾಕೆ?
ದೇವರು : ನಿನ್ನ ಸೇವೆ ಮಾಡಲೆಂದೇ ಇರುವ ಬ್ಯಾಂಕ್, ಕಛೇರಿಗಳಲ್ಲಿ ಕೆಲಸ ಮಾಡುವವರು ಹುಬ್ಬುಗಂಟಿಕ್ಕಿಕೊಂಡೇ ಕೆಲಸ ಮಾಡುವಾಗ ಈ ಪ್ರಶ್ನೆ ಕೇಳಿದ್ಯಾ? ಜನಸೇವೆ ಮಾಡಲೆಂದೇ ನೀನು ಆರಿಸಿ ಕಳುಹಿಸಿದ ರಾಜಕಾರಣಿ ನಗುತ್ತಾ ನಿನ್ನ ಕೆಲಸ ಮಾಡುವನಾ? ನಾನು ಜಗತ್ತಿನ ಒಡೆಯ, ನಿನ್ನ ಸೇವಕನಲ್ಲ ತಿಳಿದುಕೋ..ಯಾರಲ್ಲಿ..
ಕೂಡಲೇ ನಾಗೇಶರು ಇನ್ನೊಂದು ಸ್ವರಚಿತ ಭಕ್ತಿಗೀತೆ ಹಾಡಿದರು. ಕೇಳಿ ಪ್ರಸನ್ನರಾದ ದೇವರು "ಚೆನ್ನಾಗಿ ಹಾಡಿದಿ. ನಿಮ್ಮ ಸಮಸ್ಯೆಯೇನು?" ಎಂದರು.
ನಾಗೇಶ : ನಿಮಗೆ ಗೊತ್ತಿಲ್ಲದ್ದೇನಿದೆ ದೇವರೆ. ಆದರೂ ಭಿನ್ನವಿಸಿಕೊಳ್ಳುವೆ. ಕರ್ನಾಟಕದಲ್ಲಿ ಮುಂಗಾರು ಮಳೆ ಸರಿಯಾಗಿ ಸುರಿಯದೇ ಬಹಳ ತೊಂದರೆಯಾಗಿದೆ.
ದೇವರು : ನೀನು ವಾಸಿಸುವುದೆಲ್ಲಿ?
ನಾಗೇಶ : ಸಿಂಗಾಪುರದಲ್ಲಿ. ಆದರೆ ಕರ್ನಾಟಕದಲ್ಲೇ ಹುಟ್ಟಿಬೆಳೆದದ್ದು..
ದೇವರು : ಡಾಮಿಸಿಲ್ ಸರ್ಟಿಫಿಕೇಟ್ ತಂದಿದ್ಯಾ?
ನಾಗೇಶ :!?
ಗಣೇಶ : ನಾಗೇಶರೆ, ನಾನು ಇತ್ತೀಚೆಗೆ ಮಾಡಿಸಿರುವೆ. ನನಗದರ ಅನುಭವವಿದೆ. ಬೇಕಾದ ದಾಖಲೆಗಳನ್ನು ಒದಗಿಸಿ, ನೋಟರಿ ಸೈನ್ ಹಾಕಿಸಿ, ಕಂಪ್ಯೂಟರ್ಗೂ ಉಳಿದವರಿಗೂ ಫೀಡ್ ಮಾಡಿ, ನಮ್ಮ ಕೈಗೆ ಡಾಮಿಸಿಲ್ ಸರ್ಟಿಫಿಕೇಟ್ ಸಿಗಲು ಕಮ್ಮಿಯೆಂದರೂ ಒಂದುವಾರ ಬೇಕು. ಏನು ಮಾಡುವುದೀಗ?
ಕವಿನಾಗರಾಜ :ನಡುವೆ ಮಾತನಾಡುತ್ತಿರುವುದಕ್ಕೆ ಕ್ಷಮಿಸಿ ದೇವರೆ. ನಾನು ಕರ್ನಾಟಕದಲ್ಲೇ ಹುಟ್ಟಿ, ಬೆಳೆದು, ಕನ್ನಡಿಗರ ಸೇವೆ ಮಾಡುತ್ತಾ ನಿವೃತ್ತನಾಗಿರುವೆ. ಮುಂಗಾರು ಮಳೆ ಕೈಕೊಟ್ಟರೆ ಕರ್ನಾಟಕ ಬಹಳ ತೊಂದರೆಯಲ್ಲಿ ಸಿಲುಕುವುದು. ತಾವು ದಯಮಾಡಿ..
ದೇವರು : ಸರಿ. ನೀವು ಅಪ್ಲಿಕೇಶನ್ ಫಿಲ್ ಮಾಡಿ, ದೇವಲೋಕದಿಬ್ಬರ ವಿಟ್‌ನೆಸ್ ಹಾಕಿ, ವರುಣನ ಡಿಪಾರ್ಟ್‌ಮೆಂಟ್‌ನಲ್ಲಿ ಕೊಟ್ಟುಹೋಗಿ. ಆರು ತಿಂಗಳು ಬಿಟ್ಟು ಬನ್ನಿ.
"ಆಆಆರು ತಿಂಗಳು!!!"
ಮೂವರೂ ತಲೆಮೇಲೆ ಕೈ ಹೊತ್ತುಕೊಂಡು ಕುಳಿತರು. ದುರ್ಗುಣ : #@# ^%%&** *&%$#..
ಕವಿನಾಗರಾಜರು ಸುಧಾರಿಸಿಕೊಂಡು ಎದ್ದು : ದೇವರೆ, ನಿಮಗೆ ಆರು ತಿಂಗಳು ಕ್ಷಣಕ್ಕಿಂತಲೂ ಕಮ್ಮಿ. ಆದರೆ ನಮಗೆ ಬದುಕು ಸಾವಿನ ಪ್ರಶ್ನೆ. ಮಳೆಯ ತುಂಬಾ ಅಗತ್ಯವಿದೆ. ಕರುಣೆ ತೋರಿ..
ದೇವರು : ಮಂಡೂರಿನ ಜನ ಉಸಿರಾಡಲಾಗದೇ ಸಾಯುತ್ತಿರುವಾಗ ನಿಮ್ಮ ಸರಕಾರ ಆರು ತಿಂಗಳ ಸಮಯ ಕೇಳಿಲ್ಲವಾ? ಇಲ್ಲೀಗ ಮಳೆ ಇಲ್ಲದೇ ಯಾರ ಪ್ರಾಣವೂ ಹೋಗಿಲ್ಲ. ನಮಗೂ ಕೆಲವು ಕ್ರಮವಿದೆ. ವರುಣನ ಡಿಪಾರ್ಟ್‌ಮೆಂಟ್‌ನವರು ಭೂಮಿಯ ಎಲ್ಲಿ ಅವಶ್ಯಕತೆಗಿಂತ ಜಾಸ್ತಿ ಮಳೆಯಾಗುತ್ತಿದೆ ಎಂದು ನೋಡಿ, ಅಲ್ಲಿನ ಎರಡು ವರ್ಷದ ಮಳೆಯ ಪ್ರಮಾಣ ನೋಡಿ, ಅಲ್ಲಿಗೆ ತೊಂದರೆ ಆಗುವುದಿಲ್ಲ ಎಂದಾದರೆ ಮಳೆ ಮೋಡಗಳನ್ನು ನಿಮ್ಮಲ್ಲಿಗೆ ಸಾಗಿಸಬೇಕು. ಇದಕ್ಕೆಲ್ಲಾ ಸಮಯಬೇಕು. ಬೇಕಿದ್ದರೆ ತಿಂಗಳಿಗೊಮ್ಮೆ ವರುಣನನ್ನು ನಿಮ್ಮಲ್ಲಿಗೆ ಕಳುಹಿಸಿ ಆಗಿರುವ ಪ್ರಗತಿಯನ್ನು ತಿಳಿಸುವ ವ್ಯವಸ್ಥೆ ಮಾಡುವೆ. ನೀವಿನ್ನು ಹೋಗಿ.
ನಾಗರಾಜರು : ನಾಗೇಶರೆ, ನಾವು ನಮ್ಮ ಜಡ್ಡುಹಿಡಿದ ವ್ಯವಸ್ಥೆಯನ್ನು ಸರಿಪಡಿಸದೇ ದೇವರಲ್ಲಿ ಮೊರೆಯಿಡುವುದು ವ್ಯರ್ಥ. ಹಿಂತಿರುಗಿ ಹೋಗೋಣ. ಮಂತ್ರಿಗಳಿಗೆ ಇಂದೇ ಒಂದು ಪತ್ರ ಬರೆಯುವೆ..
ದೇವರಿಗೆ ಕೈಮುಗಿದು ಹಿಂತಿರುಗಿದೆವು. ತಿರುಗಿ ನೋಡಿದಾಗ ದೇವರ ಮುಖದಲ್ಲಿ ಪ್ರಶಾಂತ ನಗುವಿತ್ತು.
ದುರ್ಗುಣ : ಮು**ದೇವರು %‍॓॑**^ %$ (**$ ಏನಕ್ಕೂ ಉಪಯೋಗವಿಲ್ಲ. *&%$ ^%$#...
:) :) :)

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಜನಸೇವೆ ಮಾಡಲೆಂದೇ ನೀನು ಆರಿಸಿ ಕಳುಹಿಸಿದ ರಾಜಕಾರಣಿ ನಗುತ್ತಾ ನಿನ್ನ ಕೆಲಸ ಮಾಡುವನಾ? ..
> ಸದಾನಂದಗೌಡರು :‍)
ಬರಹದಲ್ಲಿ ವ್ಯಂಗ್ಯ ಸಾಕಷ್ಟಿದ್ದು ಮನಸ್ಸು ತಟ್ಟುತ್ತದೆ.
ಹಿಂದಿರುಗಿ ಬರುವಾಗ ದೇವರ ಮುಖದಲ್ಲಿದ್ದ ಮಂದಹಾಸ ಏಕೋ ತಿಳಿಯಲಿಲ್ಲ :‍)
ಎರಡನೇ ಬಾಗ ಸಾಕಷ್ಟು ಮನಸು ತಟ್ಟಿತು. ಅಭಿನಂದನೆಗಳು
‍‍‍‍‍‍> ..ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಸದಾನಂದಗೌಡರು :) ರೈಲ್ವೇ ಬಡ್ಜೆಟ್ ಅವರ ನಗುವನ್ನೂ ಕಸಿಯಿತು- http://articles.economictimes.indiatimes.com/2014-06-23/news/50798620_1_...
ಪಾರ್ಥರೆ, ತಮ್ಮ ಮೆಚ್ಚುಗೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶ್ ಜಿ, ನಮ್ಮೂರಿನ ಹೆಂಗಳೆಯರು ಬೀದಿ ನಲ್ಲಿ ನೀರಿಗೆ ಪಡುವ ಬವಣೆಯನ್ನಾದರೂ ಕಂಡು ಕರುಣೆಯುಕ್ಕಿ ಮಳೆ ಬರಿಸುವನೇನೊ ಎಂದುಕೊಂಡು ಒಂದು ಪದ್ಯ ಲೇಖನ ಬರೆದೆ. ಅದನ್ನು ದೇವರು ಕೂಡ ಓದಲಿ ಅಂತ ಈ ಲೇಖನದ ಪ್ರತಿಕ್ರಿಯೆಯಲ್ಲಿ ಲಿಂಕಾಗಿ ಸೇರಿಸುತ್ತಿದ್ದೇನೆ. ನೋಡೋಣ ಅವರ ಕಣ್ಣೀರಿಗೆ ಕರಗಿಯಾದರೂ ಏನಾದರೂ 'ಜಾದೂ' ತೋರಿಸಲು ಮನಸು ಮಾಡುತ್ತಾನ ಅಥವ ಬರಿ 'ಜಾಡು'ಗಳನ್ನು ಕೈಗೆ ಕೊಟ್ಟು ನಿಮ್ಮನ್ನು ನೀವೆ ಸ್ವಚ್ಚ ಮಾಡಿಕೊಳ್ಳಿ ಅಂತ ಓಡಿಸುತ್ತಾನ ಅಂತ ! :-)
http://sampada.net/%E0%B2%AC%E0%B3%80%E0%B2%A6%E0%B2%BF-%E0%B2%A8%E0%B2%...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದೇವರು ಒಲಿದರೂ ಪೂಜಾರಿ ಬಿಡ ಅಂದ ಹಾಗೇ, ಮಳೆ ಸಾಕಷ್ಟು ಸುರಿದರೂ ನಳ್ಳಿ ನೀರ ಲೈನ್ ಮ್ಯಾನ್/ಲೋಕಲ್ ಕಾರ್ಪೊರೇಟರ್.. ಮರ್ಜಿಗನುಸಾರ ಬೀದಿ ನಲ್ಲಿ ನೀರ ಬವಣೆ ತಪ್ಪದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಯತ್ನ ಮುಂದುವರೆಯಲಿ ಗಣೇಶರೇ. ನಿನ್ನೆ ಎಲ್ಲೋ ಹೊಗುತ್ತಿದ್ದ ಮೋಡಗಳು ಹಾಸನದಲ್ಲಿ ಕೆಲಕ್ಷಣ ನಿಂತು ನಾಲ್ಕೇ ಹನಿ ಉದುರಿಸುತ್ತಿದ್ದಂತೆ ಇದ್ದಕ್ಕಿದ್ದಂತೆ ಬಿರುಗಾಳಿ ಬೀಸಿ ಮೋಡಗಳನ್ನು ಅಲ್ಲಿಂದ ಓಡಿಸಿಬಿಟ್ಟಿತು. ಬಹುಷಃ ನೀವು ಹಿಂತಿರುಗಿ ಬಂದಾಗ ತಡೆಯಲಾಗದೆ ಹಾಡು ಹೇಳಿಬಿಟ್ಟಿರಬೇಕು! :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿನಾಗರಾಜರೆ, (...ಹಿಂತಿರುಗಿ ಹೋಗೋಣ. ಮಂತ್ರಿಗಳಿಗೆ ಇಂದೇ ಒಂದು ಪತ್ರ ಬರೆಯುವೆ.. ಮೇಲಿನ ಬರಹದಲ್ಲಿ ಹೇಳಿದಂತೆ ನೀವು ಪತ್ರ ಬರೆದದ್ದು ಮಂತ್ರಿಗಳಿಗೆ ತಲುಪಿರಬೇಕು ಕಾಣುತ್ತದೆ. ಅದಕ್ಕೇ ಮೊನ್ನೆ ವಿದಾನ ಸಭೆಯಲ್ಲಿ "ದೇವರಿಂದಲೂ ಸಾಧ್ಯವಿಲ್ಲ.." ಅಂತ ಡಿಕೆಶಿ ಗುಡುಗಿದ್ದಾರೆ. :)
>>>ಬಹುಷಃ ನೀವು ಹಿಂತಿರುಗಿ ಬಂದಾಗ ತಡೆಯಲಾಗದೆ ಹಾಡು ಹೇಳಿಬಿಟ್ಟಿರಬೇಕು! :) ಕಳೆದ ಭಾನುವಾರದ ಘಟನೆ ನೆನಪಾಯಿತು- ಆದಿನ ಮಳೆಯ ಸೂಚನೆಯೇ ಇರಲಿಲ್ಲ. ಒಂದು ರೌಂಡ್ ವಾಕಿಂಗ್(ಬೈಕಲ್ಲಿ :) ) ಹೋಗೋಣ ಅಂತ ನಾನು, ಮಗಳು ಹೊರಟೆವು. ಅರ್ಧ ದಾರಿಯಲ್ಲಿ ಹನಿ ಮಳೆ ಬಂತು. ಈಗೇನು ಮಾಡೋದು ಅಂತ ( ಹಿಂದೆ ಹೋಗುವುದಾ ಅಥವಾ ಮಳೆ ನಿಲ್ಲುವವರೆಗೆ ಯಾವುದಾದರೂ ಹೋಟಲ್ಲಿಗೆ ನುಗ್ಗುವುದಾ ಎಂಬ ಅರ್ಥದಲ್ಲಿ) ಮಗಳ ಬಳಿ ಕೇಳಿದರೆ- "ಅಪ್ಪಾ, ನೀವು ಒಂದು ಹಾಡು ಹೇಳಿ!" ಅನ್ನುವುದಾ ಅವಳು..
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.