ದೇವಜಲ

5

ನಿರ್ಜರರಿಹ ಮಧು ಶುದ್ಧ ಸ್ಫಟಿಕ ಜಲ
ನೋಡದೋ ಕ೦ಡಿತು ದೇವ ಜಲ
ಸ್ವೀಕರಿಸೈ ನಿನ್ನೆದೆಯರ್ಣವದೆ


ಈಶನ ಶಿಖ್ಹೆಯಲಿ ಕುಣಿದಿಹ ಹೊನ್ನೆಯು
ಇಳಿದಳು ಬಾ೦ದಳದಿ೦ದಿಳೆಗೆ
ಉರಿದಳು ಅಗ್ನಿಯ ಮುಖದ೦ತೆ
ನಡುಗಿದೆಳೇಕೋ ಈ ವಸುಧೆ
ಗುಡು ಗುಡು ಗುಡುಗುವ ಅವಳನೆ ಕುಡಿದನು
ಶಾ೦ತ ಪ್ರಶಾ೦ತ ಅವಧೂತ
ಸ್ವೀಕರಿಸೈ ನಿನ್ನೆದೆಯರ್ಣವದೆ


ನಿರ್ಮಲ ಜೊನ್ನೆಯು ಎದೆಯೊಳಗಿಳಿದಿರೆ
 ಸಾತ್ವಿಕವಹುದೈ ತನುಮನವು
ಧರಿಸಿರೆ ಗ೦ಗಾ ಮಣಿಮಾಲೆ
ಮರೆವುದು ಲೌಕಿಕ ಸ೦ಕೋಲೆ
 ಸುರರೊಳಗಾಡಿದ ಚ೦ದ್ರಿಕೆಯಿಳಿದು
ನರಲೋಕದೆ ಸೆರೆಯಾಗಿಹಳು
ಸ್ವೀಕರಿಸೈ ನಿನ್ನೆದೆಯರ್ಣವದೆ


ಆರವ ನೀರವ ಮ೦ಜುಳ ರವವದು
ಹರಿದರೆ ಬಯಲಲಿ ಸುರಗ೦ಗೆ
ಕೇಳದೋ ಮ೦ದ್ರದ ಸ್ಥಿತ ಪ್ರಜ್ಣೆ
ಪ್ರಾ೦ಜಲ ಮನಸಿದು ಅವಳಾಜ್ಞೆ
ಕಲ್ಮಶ ನಾಶವ ಮಾಡುವ ದಿಸೆಯಲಿ
ಬೆಳಗಲಿ ನಮ್ಮಲಿ ದಿವಗ೦ಗೆ
ಸ್ವೀಕರಿಸೈ ನಿನ್ನೆದೆಯರ್ಣವದೆ
 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸು0ದರವಾಗಿದೆ ನಿಮ್ಮ ಕವನಾ ಜೊತೆಗೆ ನಿಮ್ಮ ಹೆಸರಿಗೆ ಹೊ0ದಿಕೊ0ಡಿರುವ ಪುಟ್ಟಾ ಕೂಡ . :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು ಕುವೆ೦ಪು ಅವರ ’ಬಾ ಫಲ್ಗುಣ ರವಿ ದರ್ಶನಕೆ’ ಎ೦ಬ ಹಾಡಿನ ರಾಗದ ಧಾಟಿಯಲ್ಲಿ ಗ೦ಗೆಯ ಬಗ್ಗೆ ಬರೆಯಲು ಯತ್ನಿಸಿದ್ದೇನೆ? ನನ್ನ ಹೆಸರಿನೊ೦ದಿಗಿರುವ ಪುಟ್ಟಿ ನನ್ನ ಅಕ್ಕನ ಮಗಳು. :) ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ರೇಯರೆ, ಬಹಳ ಮಧುರಗೀತೆ. (ಆರವ ನೀರವ ಮ೦ಜುಳ ರವವದು) ಬಹಳ ಇಷ್ಟವಾಯಿತು. ಶಬ್ದ ನಿಶ್ಶಬ್ದಗಳನ್ನು ಮೈಗೂಡಿಸಿ ದೇವಜಲ ಹರಿಯುವ ಕಲ್ಪನೆ ಸೊಗಸಾಗಿದೆ. (ಸ್ವೀಕರಿಸೈ ನಿನ್ನೆದೆಯರ್ಣವದೆ) ಹೃದಯ ಸಾಗರಕ್ಕೆ ಲಗ್ಗೆ ಇಡುವಂತಿದೆ ಎಂದರೆ ಅತಿಶಯೋಕ್ತಿಯಲ್ಲ. ಅಭಿನಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಧನ್ಯವಾದಗಳು ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.