ದುಬಾರೆ; ಅಲೆಯ ಮೇಲೆ ನಾನು ತೇಲಿ ಹೋದಾಗ

0

 

ಪ್ರತಿ ಬೆಳಗ್ಗೆ ೯ಕ್ಕೆ ಶುರುವಾಗುವ ಚೈತ್ರಯಾತ್ರೆಯಲ್ಲಿ ನಾವು ಹಣ ಸಂಪಾದಿಸಿದ್ದೆವೋ ಇಲ್ಲವು ಎನ್ನುವುದು ಸೆಕೆಂಡರಿ ಆದರೆ ರಾತ್ರಿ ಮತ್ತೆ ಮನೆ ತಲುಪಿದಾಗ ನಮ್ಮ ಮೂಗಿನ ಹೊಳ್ಳೆಗಳಲ್ಲಿ ಕೋಟಿ ಕಾರ್ಬನ್ ಕಣಗಳು ಸಂಪಾದನೆಯಂತೂ ಖಂಡಿತವಾಗಿ ಆಗಿರುತ್ತದೆ. ಜಂಜಾಟದ ನಗರ ಜೀವನ, ಎಂದೂ ನಾರ್ಮಲ್ ಗಿಂತ ಮೇಲೆ ಇಲ್ಲ ಕೆಳಕ್ಕೆ ಇರುವ ರಕ್ತದೊತ್ತಡ ವನ್ನು ಮತ್ತೆ ನಾರ್ಮಲ್ ಗೆ ತರಲು, ಶಾಶ್ವತವಾಗಿ ಅಲ್ಲದಿದ್ದರೂ ಒಂದು ವಾರಾಂತ್ಯದ ಮಟ್ಟಿಗೆ ಮುಕ್ತಿ ಬಯಸುತ್ತೇವೆ.


ಮುಂಗಾರು ಮಳೆ ಬೀಳುತಿದ್ದಂತೆ ಅಣಬೆ, ಜೀರುಂಡೆಗಳು ಜೀವತಳೆಯುತ್ತದೆ ಅದರ ಜೊತೆಗೆ ಜೀವ ತಳೆಯುವ ಇನ್ನೊಂದು ನಿರ್ಜೀವ ಸಂಗತಿ ಎಂದರೆ ಪ್ರಕೃತಿ ಚಾರಣದ ಹುಚ್ಚು. ಮುಂಗಾರುಮಳೆ ಯ ಪ್ರತಿ ಹನಿಯ ಅಮಲನ್ನು ಅನುಭವಿಸಬೇಕು ಎಂದಾದಾಗ ನೆನಪಾಗುವ ಮೊದಲ ಸ್ಥಳ ಮಡಿಕೇರಿ. ಈಗಿನ ಜನರ ಬಾಯಲ್ಲಿ ಶಾರ್ಟ್ ಅಂಡ್ ಸ್ವೀಟ್ ಆಗಿ ಕೂರ್ಗ್ ಎಂದು ಕರೆಸಿಕೊಳ್ಳುವ ಕೊಡಗು ಒಂದು ವಿಶಿಷ್ಟವಾದ ಸಂಸ್ಕೃತಿಯನ್ನು ತನ್ನಲ್ಲಿ ಹುದುಗಿಸಿ ಇಟ್ಟುಕ್ಕೊಂಡಿದೆ.ಹಳೆಯ ಆಚಾರ ಗಳೊಂದಿಗೆ ಹೊಸ ವಿಚಾರಗಳೂ ಇಲ್ಲಿ ಸಮ್ಮೇಳಿಸಿವೆ. ತಲೆಮಾರುಗಳಿಂದ ಸಾಗಿ ಬರುತ್ತಿರುವ ಎಸ್ಟೇಟ್ ಗಳಲ್ಲಿ ಈಚೆಗೆ ಹೋಂ-ಸ್ಟೆಯ್ಸ್ ಬೋರ್ಡ್ ಗಳು ನೇತಾಡುತ್ತಿವೆ; ಇಂತಹ ಬೋರ್ಡ್ ಗಳು ಹೊಸದಾಗಿದ್ದರೂ ಅಲ್ಲಿ ಸಿಗುವ ಸಾತ್ಕಾರ, ಸಂಭ್ರಮಗಳು ಹಿಂದಿನ ದಿನಗಳನ್ನು ನೆನಪಿಸಿತ್ತವೆ. ಕೆಲವೊಮ್ಮೆ ಇವ್ವು ನಾವು ಕೊಡುವ ದುಬಾರಿ ಬಾಡಿಗೆಗೆ ಸಂದ ಪುರಷ್ಕಾರ ಎಂದು ಅನಿಸುತ್ತದ್ದಾದರೂ ಪ್ರವಾಸ ಮುಗಿಸಿ ಹಿಂತಿರುಗುವಾಗ ಎಲ್ಲರ ಮುಗದಲ್ಲಿ ಬರುವ ಮಳೆಗಾಲದಲ್ಲಿ ಮರಳಿ ಇಲ್ಲಿಗೆ ಬರುವ ಮಾತಿರುತ್ತದೆ.

ಇಲ್ಲಿ ವರೆಗೆ ಡಿಸ್ಕವರಿ, ಎನ್.ಜಿ.ಸಿ ಗಳಲ್ಲಿ ನೋಡಿದ ರಿವರ್ ರಾಫ್ಟಿಂಗ್ ನಮ್ಮ ಕರ್ನಾಟಕದಲ್ಲಿ ಇದೆ ಎಂದು ಕೇಳಿದಾಗ ಅದನ್ನು ಮಾಡುವ ಮನಸ್ಸಾಯಿತು. ಈಜು ಬಾರದಿದ್ದರೂ ಆಲೆಯ ಮೇಲೆ ತೇಲುವ ಮನಸ್ಸಾಯಿತು!!

ರಿವರ್ ರಾಫ್ಟಿಂಗ್ ಅಂದ್ರೆ ...?
ನದಿಯು ನೈಸರ್ಗಿಗವಾಗಿ ಕಾಡುಮೇಡುಗಳ ನಡುವೆ ದಾರಿ ಮಾಡಿಕೊಂಡು ಹರಿಯುತ್ತಿರುತ್ತದೆ. ಈ ದಾರಿಗಳು ಕೆಲವೆಡೆ ತುಂಬಾ ಅಗಲವೂ ಕೆಲವೆಡೆಗಳಲ್ಲಿ ತುಂಬಾ ಕಿರಿದಾಗಿಯೂ ಇರುತ್ತದೆ, ಇವುಗಳ ನಡುವೆ ಬಂಡೆಗಳು ಕಲ್ಲುಗಳನ್ನು  ಕೊರೆದು ದಾರಿ ಮಾಡಿರುತ್ತವೆ, ಕೆಲವೊಂದು ಕಡೆಗಳಲ್ಲಿ ಬಂಡೆಗಳು, ಕಂದಕಗಳೂ ನಿರ್ಮಾಣ ವಾಗಿರುತ್ತವೆ. ಈ ರೀತಿಯ ಸಮತಟ್ಟು ಅಲ್ಲದ ಪ್ರದೇಶದಲ್ಲಿ ದೋಣಿ ಗಳು ಹಾದು ಹೋಗುವಾಗ ಅದು ನಾವಿಕನ ನಿರ್ದೇಶನಕ್ಕೆ ಬದಲಾಗಿ ನೀರಿನ ಸೆಳೆತಕ್ಕೆ ಅನುಗುಣವಾಗಿ ಸಾಗಲು ಶುರುಮಾಡುತ್ತದೆ ಹಿಡಿತ ತಪ್ಪಿದ ದೋಣಿಯನ್ನು ಮತ್ತೆ ಹಿಡಿತಕ್ಕೆ ತರುವುದು ಒಂದು ರೋಮಾಂಚಕ ಅನುಭವ.

ಎಲ್ಲಿ ..?
ಮಡಿಕೇರಿಯಿಂದ ಕುಶಾಲನಗರಕ್ಕೆ ಸಾಗುವ ದಾರಿಯಲ್ಲಿ ಕುಶಾಲ್ ನಗರ ತಲುಪುವ ಮೊದಲೇ ದುಬಾರೆ ಆನೆ ಉಧ್ಯಾನ ಗ್ಗೆ ಹೋಗುವ ತಿರುವು ಸಿಗುತ್ತದೆ. ಅಲ್ಲಿಂದ ಕೆಲವೇ ಮೈಲಿನಂತರದಲ್ಲಿ ಕಾವೇರಿ ತಟದಲ್ಲಿ ಹಲವಾರು ರಿವೆರ್ ರಾಫ್ಟಿಂಗ್ ಕ್ಯಾಂಪ್ ನವರನ್ನು ನೀವು ಕಾಣಬಹುದು.

ಪೂರ್ವ ತಯಾರಿ ..?
ಆಭರಣಗಳು, ಮೊಬೈಲ್ ಮತ್ತಿತರ ವಸ್ತುಗಳನ್ನು ಬೋಟ್ ಏರುವ ಮೊದಲೇ ತೆಗೆದಿಡಿ. ರಾಫ್ಟಿಂಗ್ ಕ್ಯಾಂಪ್ ನವರು ಕೊಟ್ಟ ಲೈಫ್ ಜಾಕೆಟ್, ಹೆಲ್ಮೆಟ್ ಅನ್ನು ಅವರ ಮೇಲ್ವಿಚಾರಣೆಯಲ್ಲಿ ಧರಿಸಿ. ರೋಮಾಂಚಕ ರೈಡ್ ಅನ್ನು ಚಿತ್ರೀಕರಿಸಲು ಬಯಸುವುದಾದರೆ ಕೆಮರಾ ಇಟ್ಟುಕೊಳ್ಳಿ, ಈ ಬಗ್ಗೆ ಮೊದಲೇ ನಿಮ್ಮ ಬೋಟ್ ನ ಮೇಲ್ವಿಚಾರಕರಿಗೆ ಹೇಳಿ, ಅವರು ರಾಫ್ಟ್ ಸಮೀಪಿಸುತಿದ್ದಂತೆ ನಿಮ್ಮ ಕೆಮಾರದ ಸುರಕ್ಷತೆ ಬಗ್ಗೆ ನೋಡಿಕೊಳ್ಳುತ್ತಾರೆ.

ರಾಫ್ಟಿಂಗ್ ಪ್ಯಾಕೇಜ್ ನಲ್ಲೆ ಏನೇನು ಬರುತ್ತದೆ ..?
ಒಂದು ಲೈಫ್ ಜಾಕೆಟ್, ಹೆಲ್ಮೆಟ್ ಮತ್ತು ಒಂದು ಹುಟ್ಟು. ೪, ೬, ೮ ಮಂದಿಗೆ ಒಂದರಂತೆ ಟ್ಯೂಬ್ ಬೋಟ್, ಪ್ರತಿಯೊಂದು ಬೋಟ್ ಗೆ ಒಬ್ಬ ಗೈಡ್, ಪ್ರತಿಯೊಂದು ಬೋಟ್ ಗೆ ಒಂದು ವಾಟರ್ ರೇಸಿಸ್ಟೆಂಟ್ ಬ್ಯಾಗ್ (ನಿಮ್ಮ ಮೊಬೈಲ್, ಕೆಮೆರ ಇಡಲು)

ಒಟ್ಟು ಎಷ್ಟು ರಾಫ್ಟ್ ಗಳಿರುತ್ತವೆ...?
ಮೂರರಿಂದ ಐದು ನೀರಿನ ಒಳಹರಿವಿನ ಮೇಲೆ ಅವಲಂಬಿಸಿರುತ್ತದೆ.

ರಾಫ್ಟ್ ಯಾರೆಲ್ಲ ಮಾಡಬಹುದು ..?
ಹದಿನೈದರಿಂದ ಅರುವತ್ತು ವಯಸ್ಸಿನ ನಡುವಿನ ಎಲ್ಲರೂ ಮಾಡಬಹುದು.ಈಜಲು ಬರುವವರೂ ಬಾರದವರೂ , ನೀರಿನ ಭಯ ಇರುವವರೂ ನಿರ್ಭೀತರಾಗಿ ಮಾಡಬಹುದು.

ಒಟ್ಟು ಉದ್ದ ..?
೭ ಕಿ.ಮಿ

ರಾಫ್ಟ್ ತೆಗೆದುಕೊಳ್ಳುವ ಸಮಯ ..?
೧ ಘಂಟೆ ಇಂದ ೪ ಘಂಟೆ, ಇದು ನೀರಿನ ಹರಿವು ಮತ್ತು ಬೋಟ್ ಚಲಾಯಿಸುತ್ತಿರುವವರ ಸಾಮರ್ಥ್ಯದ ಮೇಲೆ ಅವಲಂಬಿಸಿರುತ್ತದೆ.

ರಾಫ್ಟಿಂಗ್ ಗೆ ಪ್ರಶಕ್ತ ಸಮಯ...?
ಜೂನ್ ನಿಂದ ಆಗಸ್ಟ್
 
ನೀವು ರಾಫ್ಟ್ ಮಾಡುವ ಮುಂಚೆ ಕೆಲವೊಂದು ಸಲಹೆಗಳು:
೪ ಇಲ್ಲ ೬ ಮಂದಿಯ ಪಯಣ ಹೆಚ್ಚು ಮುದ ಕೊಡುತ್ತದೆ.
ನಿಮ್ಮ ಬೋಟ್ ನಲ್ಲಿ ಎಲ್ಲ ನಿಮ್ಮ ವಯೋಮಿತಿ ಮತ್ತು ಮನಸ್ತಿತಿಯವರೇ ಇರುವಂತೆ ಮುತುವರ್ಜಿ ವಹಿಸಿ ಇದು ನಿಮಗೆ ಇನ್ನಷ್ಟು ಥ್ರಿಲ್ ಒದಗಿಸುತ್ತದೆ.
ನಿಮ್ಮ ಜೊತೆಯಲ್ಲಿ ಬರುವ ಗೈಡ್ ನ ಮಾರ್ಗದರ್ಶನದಂತೆ ಹುಟ್ಟನ್ನು ಚಲಾಯಿಸಿ.
ಕೆಲವೊಂದು ಸಲ ದೋಣಿ ಮುಳುಗುವ ಸಂಭವವಿರುತ್ತದೆ. ನಿರ್ಭೀತರಾಗಿ ನೀರಲ್ಲಿ ಮುಳುಗಿ. ಲೈಫ್ ಜಾಕೆಟ್ ನಿಮ್ಮನ್ನು ಮೇಲೆ ತಳ್ಳುತ್ತದೆ.
ನೀವು ಎಷ್ಟು ಥ್ರಿಲ್ಲಿಂಗ್ ಆಗಿ ಇರ್ತೀರಿ ಅಷ್ಟು ಥ್ರಿಲ್ಸ್  ನಿಮ್ಮ ಗೈಡ್ ನಿಮಗೆ ಕೊಡುತ್ತಾನೆ, ಆದ್ದರಿಂದ ಭಯ ಮುಜುಗರ ಬಿಟ್ಟು ರೈಡ್ ಅನ್ನು ಸಂಪೂರ್ಣವಾಗಿ ಆಸ್ವಾದಿಸಿ.
ರಾಫ್ಟ್ ಮುಗಿದ ಬಳಿಕ ನಿಮ್ಮನ್ನು ಮೊದಲ ಸ್ಥಳಕ್ಕೆ ಜೀಪಿನಲ್ಲಿ ತಂದು ಬಿಡುತ್ತಾರೆ.

ಈ ಬಾರಿ ಹೊಸತನ್ನೆನನ್ನೋ ಸಾಧಿಸುವ ಛಲದಿಂದಲೇ ನಾವು ನಮ್ಮ ಬ್ಯಾಗ್ ಅನ್ನು ಕಟ್ಟಿಕೊಂಡಿದ್ದೆವು. ಮಡಿಕೇರಿಯಲ್ಲಿ ಹೊಸತೇನಿದೆ..? ಕಣ್ಣು ಬಿಟ್ಟರೆ ಕಾಣುವುದು ದೂರ ದೂರಕ್ಕೆ ಹಬ್ಬಿರುವ ಮಂಜು, ಮಂಜು ಮಾಯವಾದರೆ ಅಲ್ಲಿ ಕಾಣುವ ಕಾಫಿ ಎಸ್ಟೇಟ್ ಗಳು, ಕೆಲವೊಂದು ಜಲಪಾತಗಳು, ಟಿಬೀಟಿಯನ್ನರ ಪುನರ್ವಸತಿ ಕೇಂದ್ರ, ಮತ್ತು ಎಲ್ಲದರ ನಡುವೆ ಹುಟ್ಟಿ ತನ್ನಪಾಡಿಗೆ ಹರಿವ ಕಾವೇರಿ. ಇವಲ್ಲಿ ಹೊಸತನ ಏನಿದೆ ಅಂದುಕೊಂಡಿದ್ದೆ. ಆದರೆ ಪ್ರವಾಸ ಮುಗಿದಾಗ ಎಲ್ಲವು ಹೊಸತಾಗಿತ್ತು. ನೀವೂ ಹೋಗಿ ಬನ್ನಿ ಹೊಸ ಅನುಭವದೊಂದಿಗೆ ಹೊಸ ಅನುಭೂತಿಯೊಂದಿಗೆ ಮತ್ತೆ ಕೆಲಸದಲ್ಲಿ ನಿಮ್ಮ ದೈನಂದಿನ ಕಾರ್ಯದಲ್ಲಿ ತೊಡಗಲು ನೆರವಾಗುವುದು.

ನಿಮ್ಮ
ಕಾಮತ್ ಕುಂಬ್ಳೆ

 

ಈ ಲೇಖನ ನಿನ್ನೆಯ ಕನ್ನಡಪ್ರಭದ ಪ್ರವಾಸಪ್ರಭ ವಿಭಾಗದಲ್ಲಿ ಚೂರು ಬದಲಾವಣೆ ಯೊಂದಿಗೆ ಪ್ರಕಟ ಗೊಂಡಿದೆ. ಓದಲು (http://www.kannadaprabha.com/pdf/epaper.asp?pdfdate=8%2F18%2F2012) ಸಂಚಿಕೆಯ  ೧೭ ನೇ ಪುಟಕ್ಕೆ ಕ್ಲಿಕ್ಕಿಸಿ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಅಭಿನಂದನೆಗಳು ಕನ್ನಡಪ್ರಭದಲ್ಲಿ ನೋಡಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಯ ನುಡಿಗಳಿಗೆ ವಂದನೆಗಳು ಪಾರ್ಥ ಸರ್ !!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾಮತ್ ಅವರೆ, ಚಿತ್ರಲೇಖನ ಕನ್ನಡಪ್ರಭದಲ್ಲಿ ಚೆನ್ನಾಗಿ ಮೂಢಿ ಬಂದಿದೆ. ಅಲ್ಲಿನ ಕೆಲವು ಫೋಟೋಗಳನ್ನು ಸಂಪದದಲ್ಲಿಯೂ ಮಿನ್ನೇರಿಸಿದ್ದರೆ ಚೆನ್ನಾಗಿತ್ತು. ಅದಲ್ಲಿದೆಯೂ ನಿಮ್ಮ ರಾಫ್ಟಿಂಗ್ ಅನುಭವ ಕಥನ ಚೆನ್ನಾಗಿಯೇ ಇದೆ, ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ್ ಸರ್, ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು. ಫೋಟೋಗಳನ್ನು ಸೇರಿಸಿದ್ದೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಕ್ಕನ ಮನೆ ಮಡಿಕೇರಿಯ ಕಗ್ಗೊಡ್ಲು.. ಸುಮಾರು ಬಾರಿ ಅಲ್ಲಿಗೆ ಹೋಗಿ ಬ೦ದಿದ್ದೇನೆ. ಆದರೆ ಮಡಿಕೇರಿಯಲ್ಲಿ ರಿವರ್ ರಾಫ್ತಿ೦ಗ್ ಇದೆ ಅ೦ತ ಗೊತ್ತಿರಲಿಲ್ಲ.. ನಿಮ್ಮ ನಿರೂಪಣಾ ಶೈಲಿ ಬದಲಾವಣೆಗೊ೦ಡಿದೆ! ಮಾಹಿತಿಪೂರ್ಣ.. ಕನ್ನಡಪ್ರಭದಲ್ಲಿ ಲೇಖನ ಪ್ರಕಟವಾಗಿದ್ದಕ್ಕೆ ಅಭಿನ೦ದನೆಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವುಡ ಸರ್ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು. ಇನ್ನೊಮ್ಮೆ ಕೊಡಗಿಗೆ ಹೋದಾಗ ರಿವರ್ ಡ್ರಾಫ್ಟಿಂಗ್ ಮಾಡಿ ಬನ್ನಿ. (ಇಬ್ಬರು ಪುಟಾಣಿ ಪಾಪು ಗಳನ್ನು ಇನ್ನೊಬ್ಬರ ಸುಪರ್ಧಿಯಲ್ಲಿ ಬಿಟ್ಟು ಹೋಗ ಬೇಕಾದೀತು !!) << ನಿಮ್ಮ ನಿರೂಪಣಾ ಶೈಲಿ ಬದಲಾವಣೆಗೊ೦ಡಿದೆ! >> ನಿಮ್ಮಂತಹ ಹಿರಿಯರ ಮಾರ್ಗದರ್ಶನ ಮತ್ತು ಸಂಪದಿಗರ ಪ್ರೋತ್ಸಾಹಕ್ಕೆ ನಾನು ಋಣಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೆಂಕಟೇಶ್ ಅವ್ರೆ, ನಿಮ್ಮ ವಿಷಯ ವಿವರಣೆ, ನಿರೂಪಣಾ ಶೈಲಿ ಚೆನ್ನಾಗಿದೆ. ಅಭಿನಂದನೆಗಳು. ಅದ್ರೆ ನನಗೊಂದು ಸಂದೇಹ ಇಷ್ಟೆಲ್ಲಾ ಸಂತಸ ಕೊಡುವ ರಿವರ್ ರಾಫ್ಟಿಂಗ್ ದುಬಾರೆ , ದುಬಾರಿಯೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೀಣಾ ಅವರೇ ಮೆಚ್ಚುಗೆಯ ನುಡಿಗಳಿಗೆ ವಂದನೆಗಳು. ಹೌದು ನೀವಂದುಕೊಂಡಂತೆ ಕೊಂಚ ದುಭಾರಿ . ಒಬ್ಬನಿಗೆ ೪೦೦- ೫೦೦ ರೂ. ಕೇಳುತ್ತಾರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೀಣಾ ಅವರೆ, >> ಮಡಿಕೇರಿಯಿಂದ ಕುಶಾಲನಗರಕ್ಕೆ ಸಾಗುವ ದಾರಿಯಲ್ಲಿ ಕುಶಾಲ್ ನಗರ ತಲುಪುವ ಮೊದಲೇ ದುಬಾರೆ ಆನೆ ಉಧ್ಯಾನ ಗ್ಗೆ ಹೋಗುವ ತಿರುವು ಸಿಗುತ್ತದೆ. << ಈ ವಾಕ್ಯವನ್ನು ಗಮನಿಸಿದರೆ ನಿಮಗೆ ದುಬಾರೆ ಅಂದ್ರೆ ಏನು ಅಂತ ತಿಳಿಯುತ್ತೆ. ಅಲ್ಲಿಗೆ ಹೋಗಿ ಬಂದ ಮೇಲೆ ಅದು ದುಬಾರಿ ಎನ್ನುವುದು ನಿಮ್ಮ ಅನುಭವದಿಂದ ತಿಳಿಯುತ್ತದೆ :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)) ಅದೂ ನಿಜಾನೇ ಸರ್, ಅನುಭವದಿಂದಲೇ ತಿಳಿಯಬೇಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉಪಯುಕ್ತ ಮಾಹಿತಿ. ಧನ್ಯವಾದಗಳು. ಬಹಳಷ್ಟು ಬಾರಿ ಈ ದಾರಿಯಲ್ಲಿ ಹೋಗಿದ್ದೆನಾದರೂ ಒಮ್ಮೆಯೂ ಭೇಟಿ ಕೊಟ್ಟಿಲ್ಲ. ಈಗ‌ ಹೋಗುವ ಮನಸ್ಸಾಗಿದೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಂದಕುಮಾರ್ ಅವರೇ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು, ಮುಂದಿನ ಬಾರಿ ಮಡಿಕೇರಿಗೆ ಭೇಟಿ ಕೊಟ್ಟಾಗ ರಾಫ್ಟಿಂಗ್ ಮಾಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕುಂಬ್ಲೆ ಅವರೆ, ಲೇಖನದ ಶೀರ್ಷಿಕೆ ನೋಡಿ ಮೊದಲು ಭಯವಾಯಿತು. ಚಿತ್ರಗಳು,ವಿವರಣೆ(ಕನ್ನಡಪ್ರಭದಲ್ಲಿ ಬಂದ ಲೇಖನವೂ ಸೇರಿ), ಎಲ್ಲಾ ಸೂಪರ್. ನನಗೆ ಈಜಲು ಬರುತ್ತದೆ.. ಆದರೂ ರಾಪ್ಟಿಂಗ್ ಅಂದರೆ ಭಯವಾಗುವುದು. ನೀವು ದೈರ್ಯ ಹೇಳಿರುವುದರಿಂದ, ಚಿತ್ರದಲ್ಲಿರುವ ಯಾರ ಮುಖದಲ್ಲೂ ಭಯದ ಛಾಯೆಯೂ ಇಲ್ಲದಿರುವುದನ್ನು ನೋಡುವಾಗ ಒಮ್ಮೆ ಪ್ರಯತ್ನಿಸಬಾರದೇಕೆ ಅನಿಸುವುದು. ನೋಡೋಣ. (ಆ ಪ್ಲಾಸ್ಟಿಕ್ ದೋಣಿ ನನ್ನ ಭಾರ ತಡೆದೀತಾ :) ) -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶಣ್ಣ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು. ನಮ್ಮ ಇನ್ಸ್ಟ್ರಕಟರ್ ಕೊಟ್ಟ ಮಾಹಿತಿಯ ಪ್ರಕಾರ ಆ ದೋಣಿ ೬೦೦ ಕೆಜಿ ತೂಕವನ್ನು ತಾಳಬಲ್ಲದು ಮತ್ತು ಹಾಕುವ ಲೈಫ್ ಜಾಕೆಟ್ ೩೦೦ ಕೆಜಿ ವರೆಗಿನ ದೇಹಕ್ಕೆ ಹೊಂದ ಬಹುದಾಗಿದೆ. ಸೋ ನೀವು ನಿರ್ಭೀತರಾಗಿ ಪ್ರಯತ್ನಿಸ ಬಹುದು. ಪ್ಲುಸ್ ನಿಮಗೆ ಈಜು ಬರುತ್ತದೆ ಅಂದಿದ್ದಿರಿ. ಇನ್ನೇನು ಹೆದರಿಕೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೆಂಕಟೇಶ್ ರವರೇ, ದುಬಾರೆಯ ರಿವರ್ ರಾಫ್ಟಿಂಗ್ನ ಬಗ್ಗೆ ಸಚಿತ್ರ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ಕಳೆದ ಬಾರಿ ಕೊಡಗಿಗೆ ಹೋದಾಗ ಸಮಯದ ಅಭಾವದಿಂದ ಅಲ್ಲಿಗೆ ಹೋಗಲಾಗಲಿಲ್ಲ. ನಿಮ್ಮ ಪ್ರಶ್ನೋತ್ತರ ಶೈಲಿಯ ನಿರೂಪಣೆ ಚೆನ್ನಾಗಿದೆ. ನಿಮ್ಮ ಲೇಖನ ಕನ್ನಡ ಪ್ರಭದಲ್ಲಿ ಪ್ರಕಟವಾಗಿದ್ದಕ್ಕೆ ಅಭಿನಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ತೇಜಸ್ವಿಯವರೇ, <<ನಿಮ್ಮ ಪ್ರಶ್ನೋತ್ತರ ಶೈಲಿಯ ನಿರೂಪಣೆ ಚೆನ್ನಾಗಿದೆ.>> ಪೇಪರ್ ನಲ್ಲಿ ಇದನ್ನು ಅವರಿಗೆ ಅನುಗುಣವಾಗುವಂತೆ ಪ್ರಕಟಿಸಿದ್ದಾರೆ !! :( ಮದುವೆ ಆದ ಬಳಿಕ ಸಂಪದದಿಂದ ದೂರ ಆಗಿದ್ದೀರಿ ಅಂದು ಕೊಂಡಿದ್ದೆ, ಈಗ ನೋಡಿದರೆ ನೀವು ದೇಶದಿಂದಲೇ ದೂರ ಇದ್ದೀರಿ !!! ಹಿಂದಿನಂತೆ ನಿಮ್ಮಿಂದ ಉತ್ತಮ ಲೇಖನಗಳು ಸಂಪದದಲ್ಲಿ ಬರಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪೇಪರಲ್ಲಿ ಓದಿದ್ದೆ ನಿಮ್ಮ ಹೆಸರು ನೋಡಲು ಮರೆತಿದ್ದೆ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.