ದುಡಿತಕ್ಕೆ ಬೆಲೆಯಿಲ್ಲ ಮಂಗಳೂರಿನಲ್ಲಿ

4.666665
ಮಂಗಳೂರಿನವರು ಬುದ್ದಿವಂತರು, ಶ್ರಮಜೀವಿಗಳು ಎಲ್ಲಾ ಕ್ಷ್ತೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.ಒಂದೇ ಮಾತಿನಲ್ಲಿ ಹೇಳುವುದಾದರೆ ಅಂಡರ್ ವರ್ಡ್ (ಎಮ್ ರೈ) ನಿಂದ ಹಿಡಿದು ಮಿಸ್ ವರ್ಡ್ (ಐಶ್ವರ್ಯ ರೈ) ವರೆಗೂ ನಮ್ಮ ಮಂಗಳೂರಿನವರೇ ಎದ್ದು ಕಾಣುತ್ತಾರೆ. 
 
ವಿದ್ಯೆಗಾಗಿ ಎಲ್ಲೆಲ್ಲಿಂದಲೋ ವಿದ್ಯಾರ್ಥಿಗಳು ಬಂದು ಮಂಗಳೂರಿನಲ್ಲೇ ಬೀಡು ಬಿಡುತ್ತಿದ್ದಾರೆ. ಅಲ್ಲಲ್ಲಿ  ಅಂತರ್ - ಧಾರ್ಮಿಕ ಕಲಹಗಳು ನಡೆಯುತ್ತಿದ್ದಾರೂ ಮಂಗಳೂರು ನಿಜಕ್ಕೂ ಶಾಂತೀಪ್ರಿಯ ನಗರ. ನಿನ್ನೆ ಕಿತ್ತಾಡಿದ ಜನ ಇಂದು ಒಂದಾಗುತ್ತಿದ್ದಾರೆ. ಸದ್ದಿಲ್ಲದೆ ಇತರೆ ಧರ್ಮಿಯರ ಹಬ್ಬ ಸಡಗರಗಳಲ್ಲಿ ತಾವೂ ಭಾಗಿಯಾಗಿ ಸಂಭ್ರಮಿಸುತ್ತಾರೆ. 
 
ಆಧುನಿಕತೆಗೆ ಪ್ರೋತ್ಸಾಹಿಸುವುದರ ಜೊತೆಗೆ ಯುವಜನತೆ ಪಾಶ್ಚಾತ್ಯ ಸಂಸ್ಕ್ರತಿಗೆ ಮಾರು ಹೋಗದಂತೆ ತಡೆಯುವ ಕೆಲವು ತಂಡಗಳು ಮಂಗಳೂರನ್ನು ಬಹು ಬೇಗನೆ ಕೆಡದಂತೆ ನೋಡಿಕೊಳ್ಳುತ್ತಿವೆ. ಕಳೆದ್ ೩ ವರ್ಷಗಳಿಂದ ಒಂದಿಲ್ಲೊಂದು ಸುದ್ದಿಯಿಂದ ಮಂಗಳೂರು ಬಿಬಿಸಿಯಲ್ಲೂ ಬಿಸಿ ಬಿಸಿ ಚರ್ಚೆಗೆ ವಸ್ತುವಾಗಿದ್ದದ್ದು ನಮಗೆಲ್ಲರಿಗೂ ನೆನಪಿದೆ.
 
ಪಾರ್ಕ್ ಗಳಿಲ್ಲದ್ದಿದ್ದರೂ ಮಂಗಳೂರು ಸೌಂದರ್ಯವನ್ನು ಕಡಾಲ ಕಿನಾರೆ ಹೆಚ್ಚಿಸುತ್ತಿದ್ದು, ಆಧಿಕಾರಿಗಳನ್ನು ಸದಾ ಎಚ್ಚರಿಸುವ ಸಾರ್ವಜನಿಕರು...ಇಷ್ಟೆಲ್ಲಾ ಇದ್ರೂ ಮಂಗಳೂರು ಉದ್ಯೋಗಕ್ಕೆ ತಕ್ಕುದಾದ ಬೆಲೆ ತೆರಲು ಹಪಹಪಿಸುತ್ತಿದೆ.
 
ಎಂಪಸಿಸ್, ಇನ್ಘೋಸಿಸ್ ಮುಂತಾದ ಪ್ರಮುಖ ಕಂಪೆನಿಗಳು ಮಂಗಳೂರಿನಲ್ಲಿ ಬೀಡು ಬಿಟ್ಟಿವೆ... ಹಲವಾರು ವಿದ್ಯಾವಂತರು ಇತರೆಡೆಗೆ ಪಯಣಿಸದೆ ಮಂಗಳೂರಿನಲ್ಲೇ ಇರುವ ಕಂಪೆನಿಗಳಲ್ಲಿ ಉದ್ಯೋಗದಲ್ಲಿ ನಿರತರಾಗಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗಿಗಳು ಮಾಡುವ ಕೆಲಸವನ್ನೇ ಇಲ್ಲೂ ಮಾಡುತ್ತಿದ್ದಾರೆ. ಆದರಿಲ್ಲಿ ಸಂಬಳಕ್ಕೆ ಮಾತ್ರ ಬರಗಾಲ. ಜುಜುಬಿ ಸಂಬಳ ಸಾಕಾಗಿಲ್ಲ ವೆಂದರೆ ಕಂಪೆನಿ ಬಿಟ್ಟು ಹೋಗಿ ಎನ್ನಲು ಕಂಪೆನಿಯ ಅಧಿಕಾರಿಗಳು ಹಿಂಜರಿಯುವುದಿಲ್ಲ. ರಾತ್ರಿಯೆಲ್ಲಾ ಬಿಪಿಓ ಕಂಪೆನಿಗಳಲ್ಲಿ ದುಡಿದರೂ ತಿಂಗಳ ಸಂಬಳ ೪,೦೦೦/- ಹೆಚ್ಚೆಂದರೆ ೭,೦೦೦/-  ಉಳಿದ ಕಡೆಗಳಲ್ಲಿ ಹೆಚ್ಚಿನ ಎಲ್ಲಾ ಶ್ರಮಜೀವಿಗಳಿಗೂ ಮಂಗಳೂರಿನಲ್ಲಿ ತಿಂಗಳ ಸಂಬಳ ೩,೦೦೦. ಆಶ್ಚರ್ಯವಾದರೂ ಇದು ವಾಸ್ತವ. 
 
ನಾಲ್ಕೈದು ಮಂದಿ ಮಾಡುವ ಕೆಲಸವನ್ನು ಒಬ್ಬರಿಂದಲೇ ಮಾಡಿಸಿದರೂ ಸಂಬಳದ ವಿಷಯ ಬಂದಾಗ ಬಾಸ್ ಸೈಲೆನ್ಸ್.
ಖರ್ಚು ವಿಷಯ ಬಂದಾಗ ಮಂಗಳೂರು ಯಾವ ವಿಷಯದಲ್ಲೂ ಮಹಾ ನಗರಿಗೆ ಕಮ್ಮಿ ಇಲ್ಲ ಬಿಡಿ. ಮನೆಯ ಕಸಕಡ್ಡಿಗಳನ್ನು ಕೊಂಡೊಯ್ಯುವ ಗಾರ್ಬೇಜ್ ನವನಿಗೆ ೨ ವಾರಕ್ಕೊಮ್ಮೆ ೧೫ ರೂಪಾಯಿ ನೀಡಲೇ ಬೇಕು. ಇಲ್ಲವಾದಲ್ಲಿ ಅವ ಮಾಯ! ಸರ್ಟಿಫಿಕೆಟ್ ಎಟೆಸ್ಟೇಷನ್ ಗೆ ಶಾಲೆಗೆ ಹೋದರೆ ಮುಖ್ಯೊಪಾದ್ಯಯರು ಪ್ರತೀ ಸಹಿಗೆ ೨೫ ರೂ ಸ್ವೀಕರಿಸುತ್ತಾರೆ.
 
ಇನ್ನು ಕಳ್ಳ ಕಾಕರ ಮಹಿಮೆಯನ್ನು ಸಾರಲು ಮಂಗಳೂರಿನ ಎಲ್ಲಾ ಪತ್ರಿಕೆಗಳಲ್ಲೂ ಸ್ಥಳವೇ ಸಾಕಾಗುತ್ತಿಲ್ಲ. ಪ್ರತೀ ದಿನ ವಿನೂತನ ರೀತಿಯಲ್ಲಿ ಕಳ್ಳರು ತಮ್ಮ ಬುದ್ದಿವಂತಿಕೆ ತೋರಿಸುತ್ತಿದ್ದಾರೆ. ಕಡಲ ಕಿನಾರೆಯಲ್ಲಿರುವ ಮರಳನ್ನು ಅಕ್ರಮವಾಗಿ ರಾಶಿ ರಾಶಿಯಾಗಿ ಲಾರಿಗಳಲ್ಲಿ ಕೊಂಡೊಯ್ಯುವವರ ಸಂಖ್ಯೆಯೆನೂ ಕಮ್ಮಿಯಿಲ್ಲ....
 
ಕಳ್ಳತನ ನಗರದಲ್ಲಿ ಹೆಚ್ಚಲು ನಿರುದ್ಯೋಗನೇ ಪ್ರಮುಖ ಕಾರಣ... ವಿದ್ಯಾಬ್ಯಾಸ ವಿದ್ದರೂ ಉದ್ಯೋಗವಿಲ್ಲ, ಉದ್ಯೋಗವಿದ್ದರೂ ನ್ಯಾಯಯುತ ಸಂಬಳದ ಕೊರತೆಯಿಂದ ಜನ ನಿರಾಶಿತರಾಗಿದ್ದಾರೆ.

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಈ ದೇಶದಲ್ಲಿ ನಿಜವಾದ ಕಳ್ಳರು,ದರೊಡೇಕೊರರು,ಅತೀ ಬುದ್ದಿವ0ತರು,ಏಲ್ಲರು ವಿದ್ಯವನ್ತರೆ,ಕಾರಣ ನಿರುದ್ಯೊಗ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ಮಂಗಳೂರಿನ ಪರಿಸ್ಥಿತಿ ಮಾತ್ರವಲ್ಲ.ಎಲ್ಲಾ ಕಡೆಯು ಹೀಗೆಯೇ.ಮಂಗಳೂರಲ್ಲಿ ಸ್ವಲ್ಪ ಜಾಸ್ತಿ ಅಷ್ಟೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಿತಾರವರೇ, ನೀವು ಬರೆದಿರುವುದನ್ನು ಓದಿದರೆ ಆಶ್ಚರ್ಯವಾಗುತ್ತಿದೆ. ಉದ್ಯೋಗವಿಲ್ಲವೆ ಅಥವಾ ಉದ್ಯೋಗ ಮಾಡಲು ಜನ ತಯಾರಿಲ್ಲವೆ? ಏಕೆ0ದರೆ ಇಲ್ಲಿ ಹೈದರಾಬಾದಿನಲ್ಲಿ ಒ0ದು ಕಾಲದಲ್ಲಿ ಮನೆ ಸಿಗುವುದು ಬಹಳ ಸುಲಭವಿತ್ತು ಆದರೆ ಕೆಲಸ ಸಿಗುವುದು ಕಠಿಣವಿತ್ತು. ಆದರೆ ಇ0ದು ಮನೆ ಸಿಗುವುದು ಅಷ್ಟು ಕಷ್ಟವಿಲ್ಲದಿದ್ದರೂ ಕೆಲಸ ಮಾಡಲು ಬಹಳಷ್ಟು ಕಡೆ ಜನಗಳೇ ಸಿಗುತ್ತಿಲ್ಲ. ನಮ್ಮ ಜಮಾನದಲ್ಲಿ ಕನ್ನಡಿಗರ ಬಗ್ಗೆ ಒ0ದು ಹೇಳಿಕೆಯಿತ್ತು. ಅದೇನೆ0ದರೆ, "ಕನ್ನಡಿಗರಿಗೆ ದಿವಾನ್ ನೌಕರಿ ಸಿಗೋಲ್ಲ, ಇವ್ರು ಜವಾನ್ ನೌಕರಿ ಮಾಡಲಿಕ್ಕೆ ತಯಾರಿಲ್ಲ?" ಅದೇ ಸಮಸ್ಯೆ ಇರಬಹುದೇನೋ? ಇದೇನೆ ಇದ್ದರೂ ತಿ0ಗಳ ಅಷ್ಟು ಕಡಿಮೆ ಎ0ದರೆ ನಿಜಕ್ಕೂ ಆಶ್ಚರ್ಯವೆನಿಸುತ್ತಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೀಣಾ ಅವ್ರೆ ಬೆಂಗಳೂರಲ್ಲಿ ಕೆಲಸ ಮಾಡ್ತಾ ಒಳ್ಳೆ ಸಂಬಳ ಎಣಿಸೋ ನಮಗೆ, ನಮ್ಮ ಮಂಗಳೂರಿನ ಸಹೃದಯ-ಸಹೋದ್ಯೋಗಿಗಳ ಸಂಬಳದಲ್ಲಿ ವ್ಯತ್ಯಾಸವಿದೆ - 'ಈ ತರಹದ ತಾರತಮ್ಯ' ಇದೆ ಅಂತ ಗೊತ್ತಿರಲಿಲ್ಲ. ಇದು ಯೋಚಿಸಬೇಕಾದ ವಿಷ್ಯ. ಇದು ಕಂಪನಿಗಳ 'ದ್ವಿಮುಖ' ನೀತಿಗೆ ಸ್ಪುಸ್ಟ ನಿದರ್ಶನ. ಅಪರಾಧಗಳ ಹೆಚ್ಚಳಕ್ಕೂ ನೀವ್ ಹೇಳಿದ ಹಾಗೆ 'ನಿರುಧ್ಯೋಗವೇ' ಕಾರಣ. ಸಂಬಂದಿಸಿದವರು, ಕಾರ್ಮಿಕ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯೋನ್ಮುಕವಾಗಬೇಕಿದೆ. ನಿಮ್ಮ ಬರಹದ ಮೊದಲ ಸಾಲು ಗಮನ ಸೆಳೆಯಿತು ಮಂಗಳೂರಿನವರು ಬುದ್ದಿವಂತರು, ಶ್ರಮಜೀವಿಗಳು ಎಲ್ಲಾ ಕ್ಷ್ತೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.ಒಂದೇ ಮಾತಿನಲ್ಲಿ ಹೇಳುವುದಾದರೆ ಅಂಡರ್ ವರ್ಡ್ (ಎಮ್ ರೈ) ನಿಂದ ಹಿಡಿದು ಮಿಸ್ ವರ್ಡ್ (ಐಶ್ವರ್ಯ ರೈ) ವರೆಗೂ ನಮ್ಮ ಮಂಗಳೂರಿನವರೇ ಎದ್ದು ಕಾಣುತ್ತಾರೆ. ಅದು ಸತ್ಯ... ವಿಚಾರಪ್ರಚೋದಕ ಬರಹ... ಮಂಗಳೂರಿನ ಸಹೃದಯೀ ಸಹೋದ್ಯೋಗಿಗಳ ಈ ಸಮಸ್ಯೆ ಅತಿ ಬೇಗನೆ ಪರಿಹಾರವಾಗಲಿ ಎಂದು ಹಾರೈಸುವೆ. ಶುಭವಾಗಲಿ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.