ಥಟ್ ಅಂತ ಹೇಳಿ - ಲಿಮ್ಕ ದಾಖಲೆ!

3.6

ಗೆಳೆಯರೆ!

ನಿಮಗೆಲ್ಲ ತಿಳಿದಿರುವ ಹಾಗೆ ಚಂದನ ವಾಹಿನಿಯಲ್ಲಿ ’ಥಟ್ ಅಂತ ಹೇಳಿ’ ಕನ್ನಡ ಕ್ವಿಜ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮ ಈಗ ಅಧಿಕೃತವಾಗಿ ಲಿಮ್ಕ ದಾಖಲೆಯನ್ನು ಸೇರಿದೆ. ಸಂಬಂಧಿತ ದಾಖಲೆ ಪತ್ರವನ್ನು ಲಗತ್ತಿಸಿದ್ದೇನೆ. ಈ ಬಗ್ಗೆ ಮಾಹಿತಿಯು ೨೦೧೨ ಆವೃತ್ತಿಯ ಲಿಮ್ಕ ಪುಸ್ತಕದಲ್ಲಿ ಬಂದಿದೆ. ಭಾರತದ ಯಾವುದೇ ವಾಹಿನಿಯಲ್ಲಿ ಸುದೀರ್ಘ ಕಾಲ ಕ್ವಿಜ್ ಕಾರ್ಯಕ್ರಮ ನಡೆಸಿದ್ದಕ್ಕಾಗಿ ಈ ದಾಖಲೆ ಸಂದಿದೆ.

ಈಗ ಥಟ್ ಅಂತ ಹೇಳಿ ೨೦೦೦ ನೆಯ ಕಂತಿನ ಅಂಚಿಗೆ ಬಂದಿದೆ. ಜೂನ್ ೧೭, ೨೦೧೨ ರಂದು ಮೈಸೂರಿನ ಶ್ರೀಸಚ್ಚಿದಾನಂದ ಗಣಪತಿ ಆಶ್ರಮದಲ್ಲಿ ೨೦೦೦ ಕಂತಿನ ಮುದ್ರಣ ನಡೆಯಲಿದೆ. ಹೆಚ್ಚಿನ ವಿವರಗಳನ್ನು ಮುಂದೆ ತಿಳಿಸುವೆ. ಥಟ್ ಅಂತ ಹೇಳಿ ಕಾರ್ಯಕ್ರಮ ಇಷ್ಟು ಸುದೀರ್ಘವಾಗಿ ನಡೆಯಲು ಕಾರಣ ಚಂದನ ವಾಹಿನಿಯ ಉಪ ಮಹಾ ನಿರ್ದೇಶಕರಾದ ಡಾ|ಮಹೇಶ್ ಜೋಷಿ, ಕಾರ್ಯಕ್ರಮ ನಿರ್ಪಾಪಕರಾದ ಶ್ರೀಮತಿ ಉಷಾ ಕಿಣಿ, ಆರತಿ ಎಚ್.ಎನ್ ಹಾಗೂ ರಘು. ಇವರ ಜೊತೆಯಲ್ಲಿ ತಾಂತ್ರಿಕ ವರ್ಗ ಹಾಗೂ ಸೃಜನಶೀಲ ವರ್ಗದಲ್ಲಿ ಕೆಲಸ ಮಾಡುತ್ತಿರುವವರನ್ನು ನೆನೆಯಬೇಕು. ಎರಡನೆಯ ಕೃತಜ್ಞತೆಯು ನಮ್ಮ ಕನ್ನಡ ಜನತೆಗೆ ತಲುಪಬೇಕು. ಅವರಿಲ್ಲದೇ ಈ ಕಾರ್ಯಕ್ರಮವಿಲ್ಲ ಅಲ್ಲವೆ! ಈ ಕಾರ್ಯಕ್ರಮದಲ್ಲಿ ೧೪ ವರ್ಷ ವಯಸ್ಸಿನ ಶಾಲಾ ಬಾಲಕರಿಂದ ಹಿಡಿದು ೮೫ ವರ್ಷದ ವೃದ್ಧರವರೆಗೂ ವಿವಿಧ ವಯೋಮಾನದವರು ಬಂದಿದ್ದಾರೆ. ಅವರೆಲ್ಲರಿಗೂ ನಮ್ಮ ಕೃತಜ್ಞತೆಗಳು.

ನಮ್ಮ ಮುಂದಿನ ಹಾದಿ ತುಸು ಕಠಿಣವೆನಿಸಿದೆ. ನಮ್ಮ ಮುಂದಿನ ಪಯಣದ ನಿಮ್ಮ ಸಲಹೆ ಹಾಗೂ ಮಾರ್ಗದರ್ಶನಗಳು ಅಗತ್ಯ. ದಯವಿಟ್ಟು ನೀಡಿ. 

ನಿಮ್ಮವ

 

ನಾಸೋಮೇಶ್ವರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.6 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪ್ರಮಾಣ ಪತ್ರವೇಕೋ ಕಾಣುತ್ತಿಲ್ಲ..................
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಗ ಕಾಣುತ್ತಿದೆ... :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾ ಸೋಮೇಶ್ವರ್ ಅವರೇ - ಮೊದಲಿಗೆ ನಿಮಗೆ ಈ ಸಂದರ್ಭದಲ್ಲಿ ಶುಭಾಶಯಗಳು.. ನಿಮ್ಮ ಈ ಕಾರ್ಯಕ್ರಮವೂ ಇನ್ನಸ್ಟು ದಾಖಲೆ ಸೇರಲಿ ಎಂದು ಹಾರೈಸುವೆ.. ಅದೆಲ್ಲದಕ್ಕಿಂತ ಹೆಚ್ಚಾಗಿ ಆ ಕಾರ್ಯಕ್ರಮ ಜನಪ್ರಿಯವಾಗಿದ್ದು ಸಾಮಾನ್ಯ ಜ್ಞಾನವನ್ನು (ಕನ್ನಡ ಸಾಹಿತ್ಯ- ಸಾಹಿತಿಗಳ ಬಗ್ಗೆ) ಹೆಚ್ಚಿಸುತ್ತಿದೆ.. ನಾ ನಿಮ್ಮ ಆ ಕಾರ್ಯಕ್ರಮವನ್ನು ನೋಡಿರುವೆ, ಯಾವುದೇ ಅಡಂಭರ ಇಲ್ಲದೆ ಅತಿ ಸರಳವಾಗಿ ನೀವ್ ನಡೆಸಿಕೊಡುವ ಆ ಕಾರ್ಯಕ್ರಮ ನಂಗೆ ಮೆಚ್ಚ್ಹಿನದು.. ಹಲವೊಮ್ಮೆ ನಾ ಅರಿಯದ ಮಾಹಿತಿ ಅದು ಒದಗಿಸಿದೆ.. ನಮ್ಮ ನಾಡಿನ ಸಾಹಿತಿಗಳು ಅವರ ಪ್ರಕಟಣೆಗಳು. ಇತ್ಯಾದಿ ಬಗ್ಗೆ ಸಾಮಾನ್ಯ ಜ್ಞಾನ ಹೆಚ್ಚಲು ಸಹಾಯ ಮಾಡಿದೆ.. ಇನ್ನು ಈ ಬರಹ ಮತ್ತು ಪ್ರತಿಕ್ರಿಯೆ(ನಿಮ್ಮದೇ ಪ್ರತಿಕ್ರಿಯೆಯನ್ನು ನೀವೇ ನಿಮ್ಮ ಬರಹಕ್ಕೆ ಹಾಕಿದ್ದು..!!) ಬಗ್ಗೆ: ನನ್ ಊಹೆಯಂತೆ, ಇದನ್ನು ಬರಹವಾಗಿಸಿ ಸಂಪದಕ್ಕೆ ಸೇರಿಸಿದ ಮೇಲೂ ಓದುಗರು ಗಮನಿಸುವರೋ? ಪ್ರತಿಕ್ರಿಯ್ಸುವರೋ? ಇಲ್ಲವೋ? ಅಂತ ಯಾರಾದ್ರೂ' ಇತ್ತೀಚಿನ ಪ್ರತಿಕ್ರಿಯೆಗಳು' ಮೇಲೆ ಕ್ಲಿಕ್ ಮಾಡಿ ನಿಮ್ಮ ಪ್ರತಿಕ್ರಿಯೆ ನೋಡಿ ಈ ಬರಹಕ್ಕೆ ಪ್ರತಿಕ್ರಿಯೆ ಹಾಕಲಿ ಅಂತ ನೀವೇ ನಮ್ಮ ಬರಹಕ್ಕೆ ಪ್ರತಿಕ್ರಿಯಿಸಿದಿರ? (ಮೊದಲಿಗರಾಗಿ)... ೫ ವರ್ಷ ೩೮ ವಾರಗಳಿಂದ ಸಂಪದಲ್ಲಿ ಇರುವ ನೀವುಗಳು , ನನ್ ಗಮನಕ್ಕೆ ಬಂದ ಹಾಗೆ ಹಿಂದೆ ಸಕ್ರಿಯರಾಗಿ ಹಲವು ಬರಹಗಳಿಗೆ ಪ್ರತಿಕ್ರಿಯಿಸಿರುವಿರಿ.. ಅದರಲ್ಲ್ಲಿ ಒಂದು ನನ್ ಗಮನ ಸೆಳೆದದ್ದು 'ಥಟ್ ಅಂತ ಹೇಳಿ ಅಂತ ಗಣೇಶ್ ಅಣ್ಣ ಅವರು ಬರೆದ ಒಂದು ಬರಹದಲ್ಲಿ ಅವರು ಯಾರಿಗೋ ಪ್ರತಿಕ್ರಿಯಿಸುತ್ತ(ತಮಾಷೆಯಾಗಿ) ನಿಮ್ಮ ಈ ಕಾರ್ಯಕ್ರಮದ ಕುರಿತು ಅಣಕ ಮಾಡಿದ್ದರು ಅಂತ ನೀವು ಆ ಕಾರ್ಯಕ್ರಮದ ವಿಶೇಷತೆ ಹಿನ್ನೆಲೆ ಉದ್ದೇಶ ಇತ್ಯಾದಿ ಕುರಿತು ಅವರಿಗೆ ಪ್ರತಿಕ್ರಿಯಿಸಿದ್ದಿರಿ..!! ಅದನ್ನು ಈಗ ಹುಡುಕಿದೆ(ಅವರು ವಿಪರೀತ ಬರಹ ಬರೆದಿದ್ದರಿಂದ ಹುಡುಕಲು ಆಗದೆ..!!) ಉಹೂ ವಿಫಲನಾದೆ..:((( ಬರಹ.,.. ಈ ಸಂದರ್ಭದಲ್ಲಿ ಮತ್ತೆ ಆ ಬರಹ ಇಲ್ಲಿ ಹಾಕಿರುವೆ..... ಆ ಮೇಲೆ ಆ ಕಾರ್ಯಕ್ರಮ ಬಿಡುವಿಲ್ಲದ ಕೆಲಸದ ಮಧ್ಯೆ ಸಂಪದದಲ್ಲಿ ನೀವ್ ಸಕ್ರಿಯವಾಗಿಲ್ಲ ಅನ್ನಿಸುತ್ತೆ... ನೀವ್ ಕೊನೆಯದಾಗಿ ಸಂಪದದಲ್ಲಿ ಬರೆದ ಬರಹ ಫೆಬ್ರುವರಿ ೦೧- ೨೦೧೧ ರಂದು ನೀವು ಬಂದರೆ ನನಗೆ ಸಂತೋಷವಾಗುತ್ತದೆ http://sampada.net/b... ಶುಭವಾಗಲಿ.... ಒಂದು ಸಂತೋಷಕರವಾದ ಮಾಹಿತಿಯನ್ನು ನಮ್ಮೊಡನೆ ಹಂಚಿಕೊಂಡಿರುವಿರಿ ಪ್ರಮಾಣ ಪತ್ರದ ಅವಶ್ಯಕತೆ ಇಲ್ಲ ಬಿಡಿ... ನಾವ್ ಈ ಕುರಿತ ಸುದ್ಧಿಯನ್ನ ದಿನ ಪತ್ರಿಕೆಗಳಲ್ಲಿ ಕೆಲ ದಿನಗಳ ಹಿಂದೆ ಓದಿರುವೆವು..!! ನನ್ನಿ .\\\\\|||||||||//////
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾ ಸೋಮೇಶ್ವರ್ ಅವರಿಗೆ ಶುಭಾಶಯಗಳು. ಸಪ್ತಗಿರಿವಾಸಿಯವರೆ, >>ಅದರಲ್ಲ್ಲಿ ಒಂದು ನನ್ ಗಮನ ಸೆಳೆದದ್ದು 'ಥಟ್ ಅಂತ ಹೇಳಿ ಅಂತ ಗಣೇಶ್ ಅಣ್ಣ ಅವರು ಬರೆದ ಒಂದು ಬರಹದಲ್ಲಿ ಅವರು ಯಾರಿಗೋ ಪ್ರತಿಕ್ರಿಯಿಸುತ್ತ(ತಮಾಷೆಯಾಗಿ) ನಿಮ್ಮ ಈ ಕಾರ್ಯಕ್ರಮದ ಕುರಿತು ಅಣಕ ಮಾಡಿದ್ದರು ಅಂತ ನೀವು ಆ ಕಾರ್ಯಕ್ರಮದ ವಿಶೇಷತೆ ಹಿನ್ನೆಲೆ ಉದ್ದೇಶ ಇತ್ಯಾದಿ ಕುರಿತು ಅವರಿಗೆ ಪ್ರತಿಕ್ರಿಯಿಸಿದ್ದಿರಿ..!! ಅದನ್ನು ಈಗ ಹುಡುಕಿದೆ(ಅವರು ವಿಪರೀತ ಬರಹ ಬರೆದಿದ್ದರಿಂದ ಹುಡುಕಲು ಆಗದೆ..!!) ಉಹೂ ವಿಫಲನಾದೆ..:((( -ನಾನೂ ಇದುವರೆಗೆ ಹುಡುಕಿದೆ-ಬಹುಷಃ ಇದೇ ಇರಬಹುದೇ?- http://sampada.net/b... ಅದನ್ನು ಅಲ್ಲಿ ಓದಲು ಸಮಯವಿಲ್ಲದವರಿಗೆ : ನಾಸೋ : ಕನ್ನಡ ಕಂದಮ್ಮಗಳಿರಾ ಚಂದನ ಅಂತ ಒಂದು ವಾಹಿನಿಯಿದೆ, ಅದರಲ್ಲಿ ಥಟ್ ಅಂತ ಹೇಳಿ ಕ್ವಿಜ್ ಕಾರ್ಯಕ್ರಮ ಬರ್ತಿದೆ... ನಿಮಗ್ಯಾರಿಗೂ ಅದು ಇಷ್ಟವಿಲ್ಲವೆ???? :( ಗ : ನಾ ಸೋಮೇಶ್ವರರೆ, ಥಟ್ ಅಂತ ನೆನಪಾಗಲಿಲ್ಲ. ಕ್ಷಮಿಸಿ. ** >>ನಿಮಗ್ಯಾರಿಗೂ ಅದು ಇಷ್ಟವಿಲ್ಲವೆ???? ಇಷ್ಟವಿಲ್ಲದಿದ್ದರೆ ಅದು ಇಷ್ಟು ವರ್ಷ ನಡೆಯಲು ಸಾಧ್ಯವಿತ್ತಾ? ********* ಸರ್, ನಿಮ್ಮ ಕಣ್ಣು, ನಿಮ್ಮ ಸ್ವರ, ನೀವು ಮಾತನಾಡುವ ರೀತಿ..ಎಲ್ಲಾ ಇಷ್ಟವಾಗುವುದು. ತಪ್ಪು ತಪ್ಪು ಉತ್ತರಿಸಿದವರನ್ನೂ ಗೌರವದಿಂದಲೇ ನಡೆಸಿಕೊಳ್ಳುವ ನಿಮ್ಮ ರೀತಿ ಉಳಿದ ಕಾರ್ಯಕ್ರಮ ನಡೆಸುವವರೂ ಕಲಿಯಬೇಕು. ಆದರೆ, ಕಾರ್ಯಕ್ರಮ ಇಷ್ಟವಾಗಲು ನಡೆಸಿಕೊಡುವವರ ಜತೆ, ಭಾಗವಹಿಸುವವರೂ, ಸೆಟ್ಟಿಂಗ್ ಸಹ ಚೆನ್ನಾಗಿರಬೇಕು. ೩ ಜನದ ಬದಲು ಜಾಸ್ತಿ ಜನವಿದ್ದರೂ ತೊಂದರೆ ಇಲ್ಲ,೧-೨ ತಪ್ಪು ಉತ್ತರಕೊಟ್ಟ ಹಾಗೆ ಅವರನ್ನು ಎಲಿಮಿನೇಟ್ ಮಾಡುತ್ತಾ ಬನ್ನಿ. ಕೊನೆಗೆ ಒಬ್ಬನಿಗೇ ಪ್ರಶ್ನೆಗಳ ಸುರಿಮಳೆ ಹರಿಯಲಿ-ಉತ್ತರಗಳೂ ಥಟ್ ಅಂತ ಬರಲಿ-ಅಂತಹವರನ್ನು ನೆಕ್ಸ್ಟ್ ರೌಂಡ್‌ಗೆ ತೆಗೆದುಕೊಂಡರೂ ಪರವಾಗಿಲ್ಲ. ಒಂದೊಂದು ಕಾರ್ಯಕ್ರಮದಲ್ಲೂ ಒಬ್ಬ ಕನ್ನಡದ ಹೆಸರುವಾಸಿ ಸಾಹಿತಿ ಜತೆಗಿದ್ದರೆ ಇನ್ನೂ ಚಂದ. ಪುಸ್ತಕಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವ ಬದಲು ಥಟ್ ಅಂತ ಗೆದ್ದವನಿಗೆ ಕೊಡಲು ಒಂದು ಚಲುವಿ ಇದ್ದರೆ ಇನ್ನೂ ಒಳ್ಳೆಯದು :) ಸರ್, ತಪ್ಪು ತಿಳಕೊಳ್ಳಬೇಡಿ. ಟಿ.ವಿ. ರಿಮೋಟು ಹೆಚ್ಚಿನ ಸಲ ನಮ್ಮ ಕೈಯಲ್ಲಿರುವುದಿಲ್ಲ. ಈಗಿನ ಹುಡುಗರು ಒಂದು ಓವರ್‌ನಲ್ಲಿ ೨ ಸಿಕ್ಸರ್ ಬರದಿದ್ದರೆ ೨೦-೨೦ ಕ್ರಿಕೆಟ್‌ನ್ನೇ ಬೋರು ಎಂದು ಚಾನಲ್ ಬದಲಾಯಿಸುವರು. ಈ ತಪ್ಪು ತಪ್ಪು ಉತ್ತರಕೊಡುವವರನ್ನು ಕಾರ್ಯಕ್ರಮದ ಉದ್ದಕ್ಕೂ ನೋಡುತ್ತಾ ಇರಲು ಒಪ್ಪುವರಾ? ಇದು ನನ್ನೊಬ್ಬನ ಅಭಿಪ್ರಾಯ. *** ಸದ್ಯಕ್ಕೆ ಕನ್ನಡದಲ್ಲಿ ನಿಮ್ಮ ಹಾಗೂ SPBಯವರ ಪ್ರೋಗ್ರಾಂಗಳೆರಡೇ ಚೆನ್ನಾಗಿರುವುದು. ತಪ್ಪಿದ್ದಲ್ಲಿ ಕ್ಷಮಿಸಿ, ಕನ್ನಡದ ಕಂದಮ್ಮ-ಗಣೇಶ. ನಾಸೋ :ಗಣೇಶ್, ನಿಮ್ಮ ಅಭಿಪ್ರಾಯಗಳನ್ನು ಓದಿ ನೋವು-ನಲಿವುಗಳೆರಡೂ ನನಗಾಗಿವೆ. ಕಾರ್ಯಕ್ರಮದಲ್ಲಿ ಕೊರತೆಗಳು ಸಾಕಷ್ಟಿವೆ. ಅದನ್ನು ನಾನೂ ಒಪ್ಪುತ್ತೇನೆ. ಇಂತಹ ಕಾರ್ಯಕ್ರಮಗಳಿಗೆ ಒಳ್ಳೆಯ ಪ್ರಾಯೋಜಕರ ಅಗತ್ಯವಿದೆ. ಈ ಪ್ರಾಯೋಜಕರಿಲ್ಲದೇ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಇದನ್ನು ತಾಂತ್ರಿಕವಾಗಿ ಉತ್ತಮಪಡಿಸುವ ಯೋಜನೆಗಳಿವೆ. ಅವು ಬೇಗ ಕಾರ್ಯರೂಪಕ್ಕೆ ಬರಲಿ ಎಂದಷ್ಟೇ ಆಶಿಸುತ್ತೇನೆ. -ನಾಸೋ ಗ : ನಾ ಸೋಮೇಶ್ವರರೆ, ಪ್ರಾಯೋಜಕರಿಲ್ಲದೇ ಕಾರ್ಯಕ್ರಮ ಪ್ರಸಾರವಾಗುತ್ತಿದೆ ಎಂಬ ಅರಿವಿರಲಿಲ್ಲ. ತಮ್ಮ ಮನಸ್ಸಿಗೆ ನೋವುಂಟು ಮಾಡಿದ್ದಕ್ಕೆ ಕ್ಷಮೆಯಿರಲಿ. ನಿಮ್ಮ ಆಶಯಗಳು,ಯೋಜನೆಗಳು ಎಲ್ಲವೂ ಬೇಗನೆ ಈಡೇರಲಿ ಎಂದು ನಾನೂ ಆಶಿಸುತ್ತೇನೆ. ತಮಗೆ ಆರ್ಯಭಟ ಪ್ರಶಸ್ತಿ ಸಿಕ್ಕಿದ್ದಕ್ಕೆ ಶುಭಾಶಯಗಳು. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶ್ ಅಣ್ಣ- ಅಂತೂ ಛಲ ಬಿಡದ ತ್ರಿವಿಕ್ರಮನಂತೆ (ಚಾ ಬಿಡದ ಚಿಕ್ಕು!!) ನಿಮ್ಮದೇ ಬರಹಗಳ ಮಂಥನ ಮಾಡಿ ಈ ನಿಮ್ಮ ಬರಹ ಹೊರ ತೆಗೆದಿರ ?.. :()) ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಸೋಮೇಶ್ವರ ಅವರೆ , ತಾವು ಚಂದನ ವಾಹಿನಿಯಲ್ಲಿ ನಡೆಸಿಕೊಡುತ್ತಿರುವ 'ಥಟ್ ಅಂತ ಹೇಳಿ'ಕಾರ್ಯಕ್ರಮ 2000 ಸಾವಿರದ ಅಂಚಿಗೆ ಬಂದಿರುವ ವಿಶಯ ತಮ್ಮ ಈ ಲೇಖನದಿಂದ ಓದಿ ಬಹಳ ಸಂತೋಷ ವಾಯಿತು ಜೊತೆಗೆ ಈ ಕಾರ್ಯಕ್ರಮ ಲಿಮ್ಕ ದಾಖಲೆಗೆ ಸೇರುತ್ತಿರುವುದ ಕೇಳಿ ಇನ್ನಷ್ಟು ಸಂತೋಷ ವಾಯಿತು. ತಮ್ಮ ಕ್ವಿಜ್ ನಲ್ಲಿ ನನಗೆ ಭಾಗವಹಿಸಿ ತಮ್ಮೊಡನೆ ನೇರವಾಗಿ ಮಾತನಾಡಲಾಗದಿದ್ದರೂ ನಮ್ಮ 'ಸಂಪದ' ಕೊಂಡಿಯ ಮುಖೇನ ಈ ಸಂದರ್ಭದಲ್ಲಿ ತಮ್ಮ ಬರಹಕ್ಕೆ ಪ್ರತಿಕ್ರಿಯಸಲು ಅವಕಾಶ ದೊರಕಿದ್ದಕ್ಕೆ ನನಗೆ ಹೆಮ್ಮೆ ಆಗುತ್ತಿದೆ.ಅದಕ್ಕಾಗಿ 'ಸಂಪದ' ನಿರ್ವಾಹಕರಿಗೆ ನನ್ನ ಕೃತಜ್ಞತೆಗಳು. ತಮ್ಮ ಈ ಕಾರ್ಯಕ್ರಮ ಇನ್ನಷ್ಟು ಸಾವಿರ ಸಂಖ್ಯೆಗೆ ಏರಲಿ ಎಂದು ಹಾರೈಸಿ ತಮಗೆ ಶುಭ ಕೋರುತ್ತೇನೆ. ವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾರ್ದಿಕ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಜನ್ಮದಿನದ ಶುಭಾಶಯಗಳನ್ನು ಫೇಸ್ ಬುಕ್ ನಲ್ಲಿ ಕೋರಿರುವೆ. ಇಲ್ಲೂ ಮತ್ತೊಮ್ಮೆ ಕೋರುತ್ತಿದ್ದೇನೆ. ನಿಮ್ಮ ಸಾಧನೆ ಎಲ್ಲರಿಗೂ ಪ್ರೇರಕವಾಗಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದಿಗರನ್ನು ಸೇರಿಸಿಕೊಂಡು ಒಂದು ಎಪಿಸೋಡ್ ಮಾಡಬಹುದು!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿನಾಗರಾಜರೆ, ಸಂಪದದಲ್ಲೇ ಒಂದು ಎಪಿಸೋಡು ಬರೆಯಬಹುದು. :) ಸಂಪದಿಗರಾದ ಗಣೇಶ, ....., ......ಯವರು ಭಾಗವಹಿಸಿ, ಒಂದೂಪುಸ್ತಕ ಗೆಲ್ಲದೇ, ಥಟ್ ಅಂತ ಹೇಳಿಯಲ್ಲಿ ಒಂದು ದಾಖಲೆ ಮಾಡಿರುವರು. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾ.ಸೋಮೇಶ್ವರ ಅವರೆ ಮೊದಲಿಗೆ ತಮಗೆ ಅಭಿನಂದನೆಗಳು ಈ ಸಾಧನೆಗಾಗಿ. ಸಹನೆಯಿಂದ, ಸರಳತೆಯಿಂದ, ಗುರಿಮುಟ್ಟುವಲ್ಲಿ ಯಶಸ್ವಿಯಾಗಿದ್ದೀರ. ಇತರರಿಗೆ ಇದು ಮಾರ್ಗದರ್ಶನ ಕೂಡ. ತಮ್ಮ ತಂಡಕ್ಕೂ ನನ್ನ ಅಭಿನಂದನೆಗಳು. ಮುಂದುವರೆಯಲಿ. ತಮ್ಮ ಸಂತಸವನ್ನು ನಮಗೂ ಹಂಚಿದ್ದಕ್ಕೆ ನಿಮಗೆ ಧನ್ಯವಾದಗಳು ‍ ರಾಮಮೋಹನ‌
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಭಿನಂದನೆಗಳು :) ನಾನು ಇಂಜಿನೇರಿಂಗ್ ಓದುತ್ತಿದ್ದಾಗ, ತಪ್ಪದೆ ನೋಡುತ್ತಿದ್ದ ಕಾರ್ಯಕ್ರಮವೆಂದರೆ ಇದೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾ.ಸೋಮೇಶ್ವರರಿಗೆ ಅಭಿನಂದನೆಗಳು ತಮ್ಮ ತಂಡಕ್ಕೂ ನನ್ನ ಅಭಿನಂದನೆಗಳು. ತಮ್ಮ ಸಂತಸವನ್ನು ನಮಗೂ ಹಂಚಿದ್ದಕ್ಕೆ ಧನ್ಯವಾದಗಳು ‍
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್ ಈ ಸಾಧನೆ ಕನ್ನಡಿಗರಿಗೆ ಹೆಮ್ಮೆಯ ವಿಷಯ, ಹೀಗೇ ಮುಂದುವರೆದು ನೀವು ಗಿನ್ನೆಸ್ ದಾಖಲೆಯನ್ನೂ ಸಾಧಿಸಿ ಎಂದು ಹಾರೈಸುವ‌ ನಿಮ್ಮ ಅಭಿಮಾನಿ ಮೊದ್ಮಣಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಾ| ನಾ. ಸೋಮೇಶ್ವರರಿಗೆ ಅಭಿನಂದನೆಗಳು. ಚ‌ಂದನವಾಹಿನಿಯಲ್ಲಿನ ನಿಮ್ಮ ಪ್ರಶ್ನೋತ್ತರ ಕಾರ್ಯಕ್ರಮ ನನಗೆ ಹೆಚ್ಚುಇಷ್ಟವೋ ಅಥವಾ ಸಂಪದದಲ್ಲಿ ಹಿಂದೆ ಬರುತ್ತಿದ್ದ ನಿಮ್ಮ ಬರಹಗಳು ಹೆಚ್ಚು ಇಷ್ಟವೋ ಎಂದು ಕೇಳಿದರೆ ನನಗೆ ಥಟ್ಟಂತ ಹೇಳಲು ಕಷ್ಟ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.