ತುಟಿ ಅಂಚಿನ ಮೌನ ಕವಿತೆ

5

ಇಳಿ ಸಂಜೆಯ ತಿಳಿ ಬೆಳಕಲಿ
ನಿನ್ನ ಕಣ್ಣ ಕಾಂತಿಯೇ ನನಗೆ ಸ್ಪೂರ್ತಿಯು
ಪ್ರಾಸ ಮರೆತ ಪದ ಪುಂಜದಲಿ
ನಿನ್ನ ತುಟಿ ಅಂಚಿನ ಮೌನವೇ ಕವಿತೆಯು

ಬದುಕಿಗಷ್ಟು ಬಣ್ಣ ಕನಸಿಗಿನ್ನೂ ಕಣ್ಣ
ಹುಡುಕುತಲಿ ಅಲೆಯುತಲಿರುವೆ 
ಜಗವೆಲ್ಲ  ಬರಡಾಗಿ ನನ್ನೊಳಗೆ
ನೀನಿರೆ ಅನುದಿನ ಅಷ್ಟೇ ಸಾಕು

ನಿನಗಷ್ಟೆ ಬರೆದ ಸಾಲನು ನಿನ್ನ
ಕಿವಿ ಅಂಚೆಯಲಿ ಹಾಕುತಲಿರುವೆ 
ಲೋಕವೆಲ್ಲ ಕಿವುಡಾಗಿ ನಿನಗೊಬ್ಬಳಿಗೆ
ಕೇಳಬೇಕಿದೆ ಮನದ ಈ ಮಾತು

ಕಾಮತ್ ಕುಂಬ್ಳೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಇಳಿಸಂಜೆಯ ನಿಮ್ಮ ಈ ಹನಿಗವನ,
ಕದಡಿತು ಅಂತರಾಳದ ಮನ,
ನೆನಪಿಸಿತು ಹಳೆಯ ಒಂದು ಭಾವನಾ,
ಇದ ಬರೆದ ಕವಿ ನೀವೇ, ಧನ್ಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಬ್ಬಾರ್ ರೇ ನಿಮ್ಮದೇ ರೀತಿಯಲ್ಲಿ ಹನಿಗವನಿಸಿದ ರೀತಿ ಇಷ್ಟವಾಯಿತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾಮತರೇ, ನಮಗೆ ಕೇಳಲಿಲ್ಲ ನಿಮ್ಮ ಈ ಪಿಸುಮಾತು!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ನಾಗರಾಜ್ ರೇ ಹಮ್ ಅವಳಿಗೆ ಕೇಳಿದರೆ ಸಾಕು :P

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.