ತುಂಟ ಕವನ: "ಕನ್ನಡತೀ...!"

3.333335

ಕರಾವಳಿಯ ಕನ್ಯೆಯರು

ಭಾವನೆಗಳು ಬರಿದಾದ ಬರಡು ಬೇತಾಳಗಳು.

ಮಲೆನಾಡ ಬೆಡಗಿಯರೋ ಅಬ್ಬ!

ಕುದಿವ ಹಂಡೆ,

ನವಭಾವಗಳು ಉಕ್ಕಿ ಹರಿವ

ಹುಚ್ಚುಹೊಳೆದಂಡೆ!

ಮಹಾರಾಜರ ಮೈ

ಸೂರಿನಲ್ಲಿ ಈಗ

ಮಹಾರಾಣಿಯರಾರೂ ಇಲ್ಲ.

ಹೆಜ್ಜೆಹೆಜ್ಜೆಗೆ ಎದುರು `ಸಿಕ್ಕು'

ವವರು ಈ ಗಳಿಗೆ ಮುದ್ದುಕೋಳಿಮರಿ,

ಮರುಗಳಿಗೆ ಉರಿಗಣ್ಣ ಹೆಮ್ಮಾರಿ!

ಇವರೊಡನೆ ಏಗಲು ಆ ಮಹಿಷಾಸುರನೇ ಸರಿ.

ಒಂದು ಕೇಜಿ ಹೆಣ್ತನ,

ಕಸು ಒಂದು ದೊಡ್ಡ ಕಪ್,

ಸಣ್ಣಗೆ ಹೆಚ್ಚಿದ ಎರಡು

ದೊಡ್ಡ ಸೈಜಿನ

ನಗೆಗಳು,

ಚಿಟಿಕೆ ಕೋಪ,

ಮುನಿಸು ರುಚಿಗೆ ತಕ್ಕಷ್ಟು;

ಶುದ್ಧ ರಿಫೈನ್ಡ್ ಲವಲವಿಕೆ

ಯಲ್ಲಿ ಹದಿನೆಂಟು ವರ್ಷ ಹದವಾಗಿ

ಹುರಿದರೆ ತುಂಬುತ್ತದೆ ಕಣ್ಣು

ಧಾರವಾಡದ ಹೆಣ್ಣು.

 ಧಾರವಾಡದ ಹೆಣ್ಣು

ದಾಳಿಂಬೆ ಹಣ್ಣು

ಜತೆಗಿದ್ದರೆ ಈ ಬದುಕು

ಓಹ್ ಅದೆಷ್ಟು ಚೆನ್ನು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕವನ ಮಜ ಕೊಟ್ಟಿತು!!!! ಧನ್ಯವಾದಗಳು ಬರೆದದಕ್ಕೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು, ಕವನವನ್ನು ಇಷ್ಟಪಟ್ಟಿದ್ದಕ್ಕೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<< ಧಾರವಾಡದ ಹೆಣ್ಣು ದಾಳಿಂಬೆ ಹಣ್ಣು ಜತೆಗಿದ್ದರೆ ಈ ಬದುಕು ಓಹ್ ಅದೆಷ್ಟು ಚೆನ್ನು!>> ಮಲೆನಾಡ ಹೆಣ್ಣ ಮೈ ಬಣ್ಣ, ಆ ನಡು ಸಣ್ಣ, ನಾ ಮನಸೋತೆನೇ ಚಿನ್ನಾಆಆಆ..................... ಈ ಹಾಡನ್ನು ಕೇಳಿಲ್ಲವೇ ಪ್ರೇಮಶೇಖರರೆ?? :-):-) ನಿಮಗಾಗಿ ಇಲ್ಲಿದೆ ಕೊ೦ಡಿ....! http://www.youtube.c...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓ ಅದು ಸಿನಿಮಾ ಹಾಡು ಸರ್. ಆ ಹಾಡನ್ನು ಹಾಡಿದವರೂ, ಹಾಡಿಸಿಕೊಂಡವರೂ ಮಲೆನಾಡಿಗರಾಗಿರಲಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಟ ಕವನದ ಕವಿಗಳೇ, ಕರಾವಳಿ ಕನ್ಯೆಯರು ಏಕೆ ಭಾವನೆಗಳು ಬರಿದಾದ ಬರಡು ಬೇತಾಳಗಳಂತೆ ತುಂಟ ಕಣ್ಣುಗಳಿಗೆ ಕಾಣುತ್ತಾರೆ ಎಂಬುದಕ್ಕೆ ಒಂದು ವಿವರಣೆ ಹೀಗಿರಲೂ ಬಹುದೇ ? ಕರಾವಳಿ ಪ್ರದೇಶ ಮೊದಲಿನಿಂದಲೂ ಯಕ್ಷಗಾನ, ನಾಟಕ, ಕಲೆ, ಇತ್ಯಾದಿಗಳಿಗೆ ಪ್ರಸಿದ್ಧ. ಹಳೆಯ ಸಿನೆಮಾಗಳ ಲೀಲಾವತಿ, ಜಯಮಾಲಾ, ಬಾಲಿವುಡ್ ನ ಲೀನಾ ಚಂದಾವರಕರ್, ಶಿಲ್ಪಾ ಶೆಟ್ಟಿ, ಐಶ್ವರ್ಯಾ ರೈ, ಇವರೆಲ್ಲ ಕರಾವಳಿ ಮೂಲದ ಹೆಸರಾಂತ ನಟಿಯರು. ಅಂದರೆ, ನಟನೆ ಎಂಬುದು ಇವರಿಗೆ ಸಹಜಸಿದ್ಧ; ಆದ್ದರಿಂದ ಭಾವನೆಗಳನ್ನು ಹೊಂದುವದರಲ್ಲಿ, ಭಾವನೆಗಳನ್ನು ಪ್ರದರ್ಶಿಸುವಲ್ಲಿ, ಭಾವನಾರಹಿತ ಮುಖವಾದ ಧರಿಸುವುದರಲ್ಲಿ ಪ್ರವೀಣರು. ಪ್ರೇಮವನ್ನರಸಿ,ಊರೂರು ಸುತ್ತುವ ತುಂಟ ತೋಳಗಳಿಂದ ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಇಲ್ಲಿನ ಕನ್ಯೆಯರು ಭಾವನಾಹೀನ ಮುಖವಾಡ ಧರಿಸುತ್ತಾರೆ ಎಂಬುವುದು ಸ್ಪಷ್ಟ. :-) :-) ಉಳಿದಂತೆ ಕವನ ನಿಜಕ್ಕೂ ತುಂಟವಾಗಿದೆ. ಧಾರವಾಡದ ಹೆಣ್ಣುಗಳು ಅಲ್ಲಿನ ದಪ್ಪ ಚರ್ಮದ ಎಮ್ಮೆಗಳ ಹಾಗೆಯೇ ಎಂದುಕೊಂಡಿದ್ದೆ. :-) ಇನ್ನೂ ಯಾಕ ಬರಲಿಲ್ಲ್ಲಾಂವಾ ಹುಬ್ಬಳ್ಳಿಯಾಂವಾ ಎಂದು ಬೇಂದ್ರೆಯವರ ಮೂಲಕ ಹಾಡಿದ್ದು ಧಾರವಾಡದ "ಯಲ್ಲಮ್ಮನ ಭಕ್ತೆ" ಯಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಹ್ಹಹ್ಹಾ! ವಿವರಣೆ ಚೆನ್ನಾಗಿದೆ. "ತುಂಟ ತೋಳಗಳು" ಪ್ರದಪ್ರಯೋಗ ಇಷ್ಟವಾಯಿತು. ಮತ್ತೆ, ನೀವು ಮಂಗಳೂರಿನವರು ಅಂತಲೂ ಗೊತ್ತಾಯ್ತು! ಈ ಶನಿವಾರ, ಭಾನುವಾರ ಆ ಕಡೆ ಬರ್ತಾ ಇದೀನಿ, (ಪ್ರೇಮವನ್ನರಸಿ ಅಲ್ಲ! "ನನ್ನರಸಿ" ಜತೆಯೇ ಇರುತ್ತಾರೆ :D)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್, ಧಾರವಾಡದ ಹೆಣ್ಣು ಮಗಳನ್ನು ಹೊಗಳಿದ್ರಿ ಒಕೆ. ಆದರೆ ಬೇರೆಯವರನ್ನು ಆಡಿಕೊಂಡಿದ್ದು ಯಾಕೆ? ಎಲ್ಲಾ ಹಣ್ಣುಗಳಿಗೂ / ಹೆಣ್ಣುಗಳಿಗೂ ಅದರದ್ದೇ / ಅವರದ್ದೇ ಆದ ಅಂದ, ಚೆಂದ, ವೈಶಿಷ್ಠತೆ ಎಲ್ಲವೂ ಇದೆ. ಅರಿತು ಜೊತೆಗೆ ನಡೆದರೆ ಎಲ್ಲರ ಬದುಕು ನಿಜವಾಗಿಯೂ ಚೆನ್ನು. ಏನಂತೀರಿ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಣ್ಣದೊಂದು ಅನುಮಾನ ;-) ನಿಮ್ಮಾಕೆ ಧಾರವಾಡದವರಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರ, ನಿಮ್ಮ ಪ್ರತಿಕ್ರಿಯೆ ಸರಿಯಾಗಿದೆ. ಎಲ್ಲಾ ವರ್ಗದ ಹೆಣ್ಣುಗಳಿಗೂ (ಬಯಲುಸೀಮೆ, ಮಲೆನಾಡು, ಕರಾವಳಿ) ಅವರದ್ದೇ ಆದ ವೈಶಿಷ್ಠತೆ ಇರುವುದಂತೂ ನಾ ಒಪ್ಪುವೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಮಲಾ ಅವರೇ, ನಾನೂ ಒಪ್ಪುವೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರ, ಯಾವ ಅನುಮಾನವೂ ಇಲ್ಲದೇ ರೈಟ್ ಅಂತೀನಿ :) ಮತ್ತೆ, ನಿಮ್ಮ ಎರಡನೇ ಕಮೆಂಟಿಗೆ- ಉತ್ತರ ನಾ ಹೇಳಲ್ಲಪ್ಪ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಯೊಬ್ಬ ಪ್ರೇಮಿಗೂ ಅವನ ಹುಡುಗಿ ಒಂಥರಾ ವಿಶೇಷ ಅನ್ನಿಸುವುದು ಸಾರ್ವತ್ರಿಕ ಮತ್ತು ಕಾರಣಗಳು ಕೌತುಕ. ನಿಮ್ಮೊಳಗಿನ ಭಾವವನ್ನು, ತುಂಬ ಚೆನ್ನಾಗಿ ಹಿಡಿದಿಟ್ಟಿರುವಿರಿ. ಥ್ಯಾಂಕ್ಸ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರೇಂ ಅವ್ರೆ- ಇದು ಒಂದು ತುಂಟ ಕವನವಾಗಿ ಈಸ್ಟ ಆಯ್ತು... ಅಲ್ಲಲ್ಲಿ ನೀವ್ ಉಪಯೋಗಿಸಿದ ಕೆಲ ಪದಗಳು ಸಾಲುಗಳು ಅವುಗಳ ಬಗೆಗಿನ ಸಂಪದಿಗರ ಅಸಮಾದಾನ ಪ್ರತಿಕ್ರಿಯೆ ( ಮಂಜ್ ಣ್ಣ ಮಾತು ಶ್ರೀಕರ್ ಅವ್ರ ವಿವರಣೆ) ಇಂಚರ ಅವ್ರ ಪ್ರಶ್ನೆ! ಎಳಾವೂ ಮುದ ನೀಡಿತು.. ನೀವು ಕವನಗಳನ್ನೂ ಕಥೆ ಕಾದಂಬರಿಯಸ್ತೆ ಸೊಗಸಾಗಿ ಅರ್ಥ ಪೂರ್ಣವಾಗಿ ವಿನೋದಾತ್ಮಕವಾಗಿ ಬರೆವಿರಿ.. ಶುಭವಾಗಲಿ.. ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.