ತಿಳಿದೆ ನಾನು

4.5

ತಿಳಿದೆ ನಾನು

ಒಬ್ಬನೇ ಬಂದೆ ಒಬ್ಬನೇ ಹೋಗುವೆನೆಂದು

ತಿಳಿದೆ ನಾನು

ಕೆಲರು ಒಡನಿರುವರು ನಾನು ಬೇಕೆಂದಲ್ಲ 

ಅವರಿಗೆ ನಾನು ಬೇಕಿತ್ತೆಂದು

ತಿಳಿದೆ ನಾನು 

ಯಾರನ್ನು ಇಷ್ಟಪಡುವೆನೋ ಅವರಿಂದ

ದೂರಲ್ಪಡುವೆನೆಂದು

ತಿಳಿದೆ ನಾನು

ಪ್ರಿಯರ ಸಣ್ಣ ಸುಳ್ಳು ಹೃದಯ ಒಡೆಸೀತೆಂದು

ತಿಳಿದೆ ನಾನು

ಆಸರೆಯ ಭುಜವಿಲ್ಲದೆ ಅಳುವುದು ಕಷ್ಟವೆಂದು

ತಿಳಿದೆ ನಾನು

ಇರುವ ಪ್ರೀತಿಯನ್ನೆಲ್ಲಾ ಕಳೆದುಕೊಳ್ಳದೆ

ಸ್ವಂತಕ್ಕೂ ಸ್ವಲ್ಪ ಉಳಿಸಿಕೊಳ್ಳಬೇಕೆಂದು

ತಿಳಿದೆ ನಾನು

ಎಲ್ಲರೊಡನಿದ್ದರೂ ಒಂಟಿಯಾಗಿರುವೆನೆಂದು

ತಿಳಿದೆ ನಾನು

ಬದಲಾಗಬೇಕಾದ್ದು ನಾನೇ ಎಂದು

ತಿಳಿದೆ ನಾನು

ಬಯಸಿದಂತೆ ನಡೆಯುವುದು ಕಷ್ಟವೆಂದು

ತಿಳಿದೆ ನಾನು

ಬಹಿರಂಗ ಅಂತರಂಗವ ನುಂಗಿ ನೀಗೀತೆಂದು

ತಿಳಿದೆ ನಾನು

ಏಕಾಂತ ಮಾತ್ರ ನನ್ನತನವನುಳಿಸೀತೆಂದು

ತಿಳಿದೆ ನಾನು

ತಿಳಿದದ್ದು ಸ್ವಲ್ಪ ತಿಳಿಯದಿರುವುದು ಬಹಳವೆಂದು

ತಿಳಿದೆ ನಾನು 

. . . . . . . . . . . . . . . . . . . . . . . . . 

-ಕ.ವೆಂ.ನಾಗರಾಜ್.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (8 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾಗರಾಜರೆ ಪ್ರಥಮ ಬಾರಿಗೆ ನೀವು ಈ ರೀತಿ ವಿಷಾದ ತುಂಬಿದ ಕವನ ಬರೆದಿರುವುದು ಕಾಣುತ್ತಿರುವೆ. ಈ ಭಾವ ಕೇವಲ ಪದ್ಯರಚನೆಗಷ್ಟೆ ಸೀಮಿತವಾಗಿದೆಯಿಂದು ನಂಬುತ್ತೇನೆ. ನೀವು ಹಾಕಿರುವ ನಿಮ್ಮ ಚಿತ್ರವು ಕವನದ ಭಾವಕ್ಕೆ ಒಗ್ಗುತ್ತಿದೆ.ನೀವು ಹೇಳಿರುವದೆಲ್ಲ ನಿಜ ಆದರೆ ಸತ್ಯವೆಂದರೆ ಇಷ್ಟೆಲ್ಲ ಭಾವವಿದ್ದರು ಮೇಲ ಹಸನ್ಮುಖರಾಗಿ ಸಾದರಣವಾಗಿಯೆ ಕಾಣುವರನ್ನು ಪುರುಶೋತ್ತಮರೆಂದು ಕರೆಯುತ್ತಾರೆ ಅಲ್ಲವೆ. ಮನುಷ್ಯನ ಭಾವವು ಸದಾ ಕುಸುಮದಂತೆ ಕೋಮಲವಾಗಿರಬೇಕು ಹಾಗು ನಡೆ ನುಡಿ ನಿರ್ದಾರಗಳು ವರಜ್ರದಂತೆ ಕಠಿಣವಾಗಿರಬೇಕು ಅನ್ನುತ್ತದೆ ಸಂಸ್ಕ್ಱುತದ ಒಂದು ಶ್ಲೋಕ‌ ವಿಶ್ವಾಸಗಳೊಡನೆ ‍_ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಂದು ವಿಷಾದದ ಘಳಿಗೆಯಲ್ಲಿ ಮೂಡಿಬಂದ ಸಾಲುಗಳಿವು. ನೀವು ಹೇಳಿದಂತೆ ಹೊರಗೆ ವ್ಯಕ್ತಪಡಿಸದೆ ಇದ್ದ, ಆದರೆ ಒಳಗೇ ಇಟ್ಟುಕೊಳ್ಳಲಾಗದ ಭಾವವನ್ನು ಈರೀತಿ ಹೊರಹಾಕಿದ್ದೆನಷ್ಟೆ. ಚಿತ್ರ ಸಹ ಈಗಿನದ್ದಲ್ಲ. ಕಳೆದ ವರ್ಷ ನನ್ನ ಮಗಳು ನನ್ನ ಅರಿವಿಗೆ ಬರದೆ ತೆಗೆದದ್ದು. ಹೊಂದಿಕೆಯಾಗುವುದೆಂದು ಅನ್ನಿಸಿ ಇಲ್ಲಿ ಪ್ರಕಟಿಸಿದೆ. ನಿಮ್ಮ ಅನಿಸಿಕೆ ಮುದ ನೀಡಿದೆ, ಪಾರ್ಥರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿಗಳೆ, <<ತಿಳಿದದ್ದು ಸ್ವಲ್ಪ ತಿಳಿಯದಿರುವುದು ಬಹಳವೆಂದು ತಿಳಿದೆ ನಾನು>> ಈ ಸಾಲುಗಳು ನನಗೆ ಸಾಕ್ರೆಟಿಸ್‍ನ ಬಗ್ಗೆ ಪ್ರಚಲಿತವಿದ್ದ ಘಟನೆಯೊಂದನ್ನು ನೆನಪಿಸಿತು. ಗ್ರೀಸ್ ದೇಶದ ಬೆಟ್ಟದ ಮೇಲಿದ್ದ ದೇವತೆ ಆ ಊರಿನಲ್ಲಿ ಯಾರು ಹೆಚ್ಚು ತಿಳಿದವರು ಎಂದು ಪ್ರಶ್ನಿಸಿದಾಗ ಆ ದೇವತೆ ಎಲ್ಲರಿಗಿಂತ ಹೆಚ್ಚು ತಿಳಿದವನು ಸಾಕ್ರೆಟಿಸ್ ಎಂದಿತಂತೆ. ಆ ಕುರಿತಾಗಿ ಸಾಕ್ರೆಟಿಸನನ್ನು ವಿಚಾರಿಸಿದಾಗ ಅವನು ಹೇಳಿದ್ದು ನನಗೆ ಹೆಚ್ಚು ತಿಳಿಯದೆಂದು ತಿಳಿದಿದೆ ಎಂದನಂತೆ. ಆದ್ದರಿಂದ ಅವನೇ ಎಲ್ಲರಿಗಿಂತ ಹೆಚ್ಚಿನ ಜ್ಞಾನಿಯೆನ್ನುವುದು ನಿರ್ಧಾರಿತವಾಯಿತಂತೆ. ಹಿಂದೊಮ್ಮೆ ನಿಮ್ಮ ಲೇಖನವೊಂದಕ್ಕೆ ಪ್ರತಿಕ್ರಿಯಿಸುತ್ತಾ "ಗ್ರೇಟ್ ಮೈಂಡ್ಸ್ ಥಿಂಕ್ ಅಲೈಕ್" ಎಂದು ಬರೆದಿದ್ದೆ; ಅದನ್ನು ನೀವು ಮತ್ತೊಮ್ಮೆ ರುಜುವಾತು ಮಾಡಿದಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಹೊಗಳಿಕೆಯಿಂದ ನನಗೆ ಸಂಕೋಚವಾಯಿತು, ಶ್ರೀಧರರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿಗಳೆ, ಇದು ಖಂಡಿತವಾಗಿ ಹೊಗಳಿಕೆಯಲ್ಲ ಆದರೆ ವಾಸ್ತವ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಷಾದ ತುಂಬಿದ ವಾಸ್ತವತೆಯ ಎಲ್ಲರಿಗೂ ಅನ್ವಯಿಸುವ ಸಾಲುಗಳ ಕವನ ನಾಗರಾಜ್ ರವರೇ .....ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ, ಸತೀಶರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲರೊಡನಿದ್ದರೂ ಒಂಟಿಯಾಗಿರುವೆನೆಂದು ತಿಳಿದೆ ನಾನು ಬದಲಾಗಬೇಕಾದ್ದು ನಾನೇ ಎಂದು ತಿಳಿದೆ ನಾನು ಬಯಸಿದಂತೆ ನಡೆಯುವುದು ಕಷ್ಟವೆಂದು ತಿಳಿದೆ ನಾನು ಬಹಿರಂಗ ಅಂತರಂಗವ ನುಂಗಿ ನೀಗೀತೆಂದು ತಿಳಿದೆ ನಾನು ಏಕಾಂತ ಮಾತ್ರ ನನ್ನತನವನುಳಿಸೀತೆಂದು ತಿಳಿದೆ ನಾನು ತಿಳಿದದ್ದು ಸ್ವಲ್ಪ ತಿಳಿಯದಿರುವುದು ಬಹಳವೆಂದು ತಿಳಿದೆ ನಾನು ----------------------------------------------------- ನಿಮ್ಮ ಈ ಬರಹ ನನಗೂ ಅಚ್ಚರಿ ತರಿಸಿತು. ಹಿರಿಯರು ಇದ್ದಕಿದ್ದಂತೆ ಯಾಕೋ ವಿಷಾದ ಭಾವದಲಿ ಕವನ ರಚಿಸಿದರಲ್ಲ ಅಂತ... ಆಮೇಲೆ ನೀವು 'ಗುರುಗಳ' ಪ್ರತಿಕ್ರಿಯೆಗೆ ಮರು ಪ್ರತಿಕ್ರಿಯೆ ಕೊಟ್ಟಿದ್ದು ಓದಿ ಸಮಾಧಾನ ಆಯ್ತು... ಅದೆಲ್ಲದರ ಹೊರತಾಗಿ ಕವನ ಹಿಡಿಸಿತು.... ಯುಗಾದಿಯ ಮುಂಗಡ ಶುಭಾಶಯಗಳು ಶುಭವಾಗಲಿ ........
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

`ತಿಳಿವು ತುಂಬಿಹ, ತಿಳಿ ನುಡಿ` ದನ್ಯವಾದಗಳು ಮೂಢ ಕವಿಗಳೆ _ ರಾಮಮೋಹನ‌
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು, ರಾಮಮೋಹನರೇ. -ಮೂಢ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಯುತರೆ, ನಿಮ್ಮ ಕವನ ತುಂಬಾ ತುಂಬಾ ಹಿಡಿಸಿದೆ.ಬರೆದ ಎಲ್ಲ ಪಂಕ್ತಿಗಳು ಅದ್ಭುತವಾಗಿವೆ. ಏಕಾಂತ ಮಾತ್ರ ನನ್ನತನವನುಳಿಸೀತೆಂದು ತಿಳಿದೆ ನಾನು :))))))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು, ಪ್ರವೀಣ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.